ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಲು ವಿಮಾನವನ್ನೇ ಪತನ ಮಾಡಿದ ಭೂಪ: ಮುಂದಾಗಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿಕೊಳ್ಳುವ ಉದ್ದೇಶದಿಂದ ಹಲವಾರು ಯುವಕ-ಯುವತಿಯರು ತಮ್ಮದೇ ಆದ ರೀತಿಯಲ್ಲಿ ಏನನ್ನಾದರೂ ವಿಭಿನ್ನವಾಗಿ ಮಾಡುತ್ತಿರುತ್ತಾರೆ. ಇದಕ್ಕಾಗಿ ಫೇಸ್‌ಬುಕ್,ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಬಳಕೆ ಮಾಡುತ್ತಾರೆ. ಅದರಂತೆ ಇಲ್ಲೋರ್ವ ವ್ಯಕ್ತಿ ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆ ಪಡೆಯಲು ಹೋಗಿ ಈಗ 20 ವರ್ಷ ಜೈಲಿನಲ್ಲಿ ಇರುವಂತೆ ಆಗಿದೆ.
ಹೌದು, ಯೂಟ್ಯೂಬ್ ಕ್ರಿಯೇಟರ್ ಓರ್ವ ತನ್ನ ಚಾನಲ್‌ನಲ್ಲಿ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುವ ಉದ್ದೇಶದಿಂದಾಗಿ ವಿಮಾನವನ್ನೇ ಪತನಗೊಳಿಸಿದ್ದಾನೆ. ಈ ಮೂಲಕ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ವಿಮಾನ ಪತನ ಆದರೂ ಈತ ಬದುಕಿದ್ದು ಹೇಗೆ?, ಈ ಕುಕೃತ್ಯವನ್ನು ಹೇಗೆ ಮಾಡಲಾಗಿದೆ?, ತನಿಖಾಧಿಕಾರಿಗಳ ತನಿಖೆಯ ದಾರಿ ತಪ್ಪಿಸಲು ಈತ ಮಾಡಿದ್ದು ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಜನರು ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ. ಪೈಲಟ್ ಆಗಿದ್ದ ಈ ವ್ಯಕ್ತಿ ಸಹ ಅದೇ ಕೆಲಸ ಮಾಡಿದ್ದಾನೆ. ಈತ ತನ್ನ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಿದ್ದಾನೆ. ಆದರೆ, ಆತ ಮಾತ್ರ ಬದುಕುಳಿದಿದ್ದಾನೆ. ಇಡೀ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು, ಯೂಟ್ಯೂಬ್‌ನಲ್ಲಿ ವೀಕ್ಷಣೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರೂ ಇನ್ನು ಮುಂದಿನ ಜೀವನ ಮಾತ್ರ ಈತನಿಗೆ ಬಹಳ ಕಷ್ಟವಾಗಲಿದೆ.
ಕ್ಯಾಲಿಫೋರ್ನಿಯಾದ ಲೊಂಪೊಕ್‌ನ ಟ್ರೆವರ್ ಡೇನಿಯಲ್ ಜಾಕೋಬ್ ಎಂಬುವರು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಪ್ರಸ್ತುತ, ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಜಾಕೋಬ್ ಅವರ ಖಾಸಗಿ ಪೈಲಟ್ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದು, ವಿಮಾನವನ್ನು ಪತನಗೊಳಿಸಿದ ನಂತರ ಯುಟ್ಯೂಬರ್ ಜಾಕೋಬ್ ಅವಶೇಷಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು FAA ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಮಾನ ಅಪಘಾತದ ವಿಡಿಯೋವನ್ನು ಪೋಸ್ಟ್ ಮಾಡುವಾಗ ಶೀರ್ಷಿಕೆಯಲ್ಲಿ, ನಾನು ನನ್ನ ವಿಮಾನವನ್ನು ಕ್ರ್ಯಾಶ್ ಮಾಡುತ್ತೇನೆ ಎಂದು ಬರೆದಿದ್ದಾರೆ. ಇನ್ನು ಜೇಕಬ್ ವಿಮಾನದೊಳಗೆ ಕ್ಯಾಮರಾ ಇಟ್ಟು ವಿಮಾನಕ್ಕೆ ಈಗ ಪತನ ಆಗುತ್ತದೆ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ನಂತರ ಅವರು ಪ್ಯಾರಾಚೂಟ್ ಬಳಕೆ ಮಾಡಿಕೊಂಡು ವಿಮಾನದಿಂದ ಜಿಗಿದಿದ್ದಾರೆ.

ಈ ವೇಳೆ ಅವರು ಕೈಯಲ್ಲಿ ಸೆಲ್ಫಿ ಸ್ಟಿಕ್ ಕೂಡ ಹಿಡಿದುಕೊಂಡಿರುವುದನ್ನು ಗಮನಿಸಬಹುದು. ಅಂದರೆ ಅಷ್ಟು ಎತ್ತರದಿಂದ ಬೀಳುತ್ತಿದ್ದರೂ ಸಹ ಯಾವುದೇ ಭಯ ಇಲ್ಲದೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಜೊತೆಗೆ ಈ ವಿಡಿಯೋದಲ್ಲಿ ವಿಮಾನ ಅಪಘಾತವಾದಾಗ ಹೇಗೆ ರಕ್ಷಿಸಿಕೊಳ್ಳುವುದು ಎಂದು ತಿಳಿಸಿದ್ದಾರೆ. ಇನ್ನು ಜೇಕಬ್ ನೆಲಕ್ಕೆ ಇಳಿದೊಡನೆ ಅಂತಿಮವಾಗಿ ವಿಮಾನವು ಪತನಗೊಳ್ಳುವುದನ್ನು ಕಾಣಬಹುದು. ಈ ಮೂಲಕ ಇದೊಂದು ಭಯಾನಕ ವಿಡಿಯೋವಾಗಿ ಪರಿಗಣಿಸಬಹುದಾಗಿದೆ.
ಈ ವಿಡಿಯೋದಲ್ಲಿ ಕಂಡುಬರುವ ಪ್ರಮುಖ ವಿಷಯ ಏನೆಂದರೆ ವಿಮಾನ ಅಪಘಾತದ ಸಮಯದಲ್ಲಿ ಜೇಕಬ್ ಕ್ಯಾಮೆರಾದಲ್ಲಿ ತನ್ನನ್ನು ತಾನೇ ರೆಕಾರ್ಡ್ ಮಾಡುವಾಗ ಪ್ಯಾರಾಚೂಟ್‌ನೊಂದಿಗೆ ಈಗಾಗಲೇ ಸಿದ್ಧನಾಗಿರುತ್ತಾನೆ ಮತ್ತು ಅವನು ಜಿಗಿದ ನಂತರವೂ ಕ್ಯಾಮೆರಾದಲ್ಲಿ ತನ್ನನ್ನು ತೋರಿಸುತ್ತಾನೆ. ಹಾಗಾಗಿ ಈ ವಿಡಿಯೋ ನೋಡಿದ ಯಾರಿಗೇ ಆದರೂ ಈ ಘಟನೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆ ಎಂದು ತೋರುತ್ತದೆ.
ಇಷ್ಟೆಲ್ಲಾ ಮಾಡಿದಾಗೂ ಜಾಕೋಬ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಯಾವುದೇ ಸಂಪರ್ಕವನ್ನು ಪಡೆದುಕೊಂಡಿಲ್ಲ. ಜೊತೆಗೆ ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ವಿಮಾನದ ಅವಶೇಷಗಳನ್ನು ಧ್ವಂಸ ಮಾಡಿದ್ದಾಗಿಯೂ ಜಾಕೋಬ್ ಒಪ್ಪಿಕೊಂಡಿದ್ದಾರೆ ಎಂದು ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಅವರಿಗೆ ಇನ್ಮುಂದೆ ಯಾರೂ ಈ ರೀತಿಯ ಕುಕೃತ್ಯ ಎಸಗಬಾರದು ಎಂಬಂತೆ ದೀರ್ಘ ವರ್ಷಗಳ ಕಾಲ ಶಿಕ್ಷೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಜನರು ತಮ್ಮ ಮೌಲ್ಯಗಳು ಅಥವಾ ನಂಬಿಕೆಗಳಿಗೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಕೆಲವೊಮ್ಮೆ ಹೆಚ್ಚಿನ ಫಾಲೋವರ್ಸ್‌ಗಳನ್ನು ಪಡೆಯಲು ಹುಚ್ಚುತನದ ಕೆಲಸಗಳನ್ನು ಮಾಡಲು ಈ ರೀತಿಯ ಘಟನೆಗಳು ಪ್ರಚೋದಿಸಬಹುದು. ಆದರೆ, ನಿಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುವುದು ಖಂಡಿತಾ ಸರಿಯಲ್ಲ. ಜೊತೆಗೆ ಹಾಗೆಯೆ ಈಗಾಗಲೇ ನಿಮ್ಮನ್ನು ಫಾಲೋ ಮಾಡುತ್ತಿರುವವರಿಗೆ ಉತ್ತಮ ಸಂದೇಶ ನೀಡಬೇಕು ಎಂದರೆ ನೀವು ಉತ್ತಮ ಕಂಟೆಂಟ್ ಅನ್ನು ಮಾತ್ರ ನೀಡಿ.


Click it and Unblock the Notifications








