Home
ಸುದ್ದಿಜಾಲ

ಐಫೋನ್‌ ಖರೀದಿ ಮಾಡಲು ಹೋಗಿ 29 ಲಕ್ಷ ಕಳೆದುಕೊಂಡ ವ್ಯಕ್ತಿ; ನೀವು ಎಚ್ಚರ!

ಐಫೋನ್‌ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಈಗಂತೂ ಹೋಳಿ ಹಿನ್ನೆಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಭರ್ಜರಿ ಆಫರ್‌ ಘೋಷಣೆ ಮಾಡಿವೆ. ಅದಾಗ್ಯೂ ಇಲ್ಲೋರ್ವರು ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಬರೋಬ್ಬರಿ 29 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಹೌದು, ದಿನನಿತ್ಯವೂ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ನಿದರ್ಶನ ಎಂಬಂತೆ ಈ ಘಟನೆ ಜರುಗಿದ್ದು, ಅದರಂತೆ ದೆಹಲಿ ಮೂಲದ ವ್ಯಕ್ತಿಯೋರ್ವರು 29 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಿದ್ರೆ, ಐಫೋನ್‌ ಖರೀದಿಯಲ್ಲಿ ಆದ ಮೋಸ ಏನು?, ಸೈಬರ್‌ ಅಪರಾಧಿಗಳು ಇವರಿಗೆ ಯಾವ ರೀತಿ ಮೋಸ ಮಾಡಿದ್ದಾರೆ, ನೀವು ಇಂತಹ ಘಟನೆಗಳಿಂದ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ ಖರೀದಿ ಮಾಡಲು ಹೋಗಿ 29 ಲಕ್ಷ ಕಳೆದುಕೊಂಡ ವ್ಯಕ್ತಿ; ನೀವು ಎಚ್ಚರ!

ದೆಹಲಿಯ ಘಿಟೋರ್ನಿಯಲ್ಲಿ ಜರುಗಿದ ಘಟನೆ

ಸಾಮಾನ್ಯವಾಗಿ ಐಫೋನ್ ಸಂಬಂಧದ ಮೋಸದ ಪ್ರಕರಣಗಳು ವಿದೇಶದಲ್ಲಿ ಹೆಚ್ಚು ವರದಿಯಾಗುತ್ತಿದ್ದವು. ಆದರೆ, ಈ ರೀತಿಯ ಪ್ರಕರಣ ಈಗ ಭಾರತದಲ್ಲೂ ಹೆಚ್ಚಾಗಿದೆ. ಅದರಲ್ಲೂ ರಾಷ್ಟ್ರ ರಾಜದಾನಿ ದೆಹಲಿಯ ಘಿಟೋರ್ನಿ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಐಫೋನ್‌ ಖರೀದಿ ಮಾಡಲು ಮುಂದಾದ ವ್ಯಕ್ತಿಗೆ ಅಪರಾಧಿಗಳು ಮೂರು ನಾಮ ಹಾಕಿದ್ದಾರೆ. ಇದರಿಂದ ನೊಂದ ವ್ಯಕ್ತಿ ದೂರು ದಾಖಲು ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ ಮೂಲಕ ಮೋಸ

ವಿಕಾಸ್ ಕಟಿಯಾರ್ ಎಂಬುವರು ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತಲ್ಲೀನವಾಗಿದ್ದಾಗ ಅವರು ಒಂದು ಪೋಸ್ಟ್‌ಅನ್ನು ಗಮನಿಸಿದ್ದಾರೆ. ಅದರಲ್ಲಿ ಐಫೋನ್‌ಗಳನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತಂತೆ. ಇದನ್ನು ನಂಬಿದ ವಿಕಾಸ್ ಕಟಿಯಾರ್ ಆ ಮೋಸದ ವೆಬ್‌ಸೈಟ್‌ ಜಾಲಾಡಲು ಮುಂದಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಇವರು ಈ ಪೋಸ್ಟ್‌ ಸತ್ಯದಿಂದ ಕೂಡಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಸಹ ಮುಂದಾಗಿದ್ದಾರೆ.

ಅದರಂತೆ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಆ ವೆಬ್‌ಸೈಟ್‌ ಬಗ್ಗೆ ಯಾರನ್ನೋ ವಿಚಾರಸಿದ್ದಾರೆ. ಆ ವೇಳೆ ಹೌದು, ಇದು ಅಸಲಿ ಎಂದು ತಿಳಿಸಿದ್ದರಿಂದಾಗಿ ಅದನ್ನು ನಂಬಿದ ಕಟಿಯಾರ್ ಐಫೋನ್‌ ಖರೀದಿ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಪರಾಧಿಗಳು ಹಾಕಿದ್ದ ಬಲೆಗೆ ಬಿದ್ದಂತಾಗಿದೆ. ಇದಾದ ನಂತರ ಫೆಬ್ರವರಿ 6, 2023 ರಂದು ಕಟಿಯಾರ್ ಅವರು ಐಫೋನ್ ಖರೀದಿಸುವ ಸಲುವಾಗಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ.

ಐಫೋನ್‌ ಖರೀದಿ ಮಾಡಲು ಹೋಗಿ 29 ಲಕ್ಷ ಕಳೆದುಕೊಂಡ ವ್ಯಕ್ತಿ; ನೀವು ಎಚ್ಚರ!

ಫೋನ್‌ ಮಾಡಿದ ವೇಳೆ ಅಪರಾಧಿಗಳು ಇವರನ್ನು ಮುಂಗಡ ಹಣವಾಗಿ 28,000 ರೂ. ಗಳನ್ನು ಪಾವತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ನಂಬಿದ ಕಟಿಯಾರ್‌ ಅಷ್ಟು ಹಣವನ್ನು ಪಾವತಿ ಮಾಡಿದ್ದಾರೆ. ಇದಾದ ನಂತರದಲ್ಲಿ ಆ ಅಪರಾಧಿಗಳ ಗುಂಪಿನಿಂದ ನಿರಂತರವಾಗಿ ಕರೆಗಳು ಬಂದಿವೆ. ಆ ವೇಳೆ ಕಸ್ಟಮ್ಸ್ ಮತ್ತು ಇತರ ತೆರಿಗೆಗಳನ್ನು ತೆರವುಗೊಳಿಸುವ ನೆಪದಲ್ಲಿ ಹೆಚ್ಚುವರಿ ಹಣವನ್ನು ಪೀಕಿದ್ದಾರೆ.

ಕಟಿಯಾರ್ ಅವರು ವಿವಿಧ ಖಾತೆಗಳಿಗೆ ಒಟ್ಟು 28,69,850 ರೂ. ಗಳನ್ನು ಪಾವತಿ ಮಾಡಿದ್ದಾರೆ. ಇಷ್ಟೆಲ್ಲಾ ಹಣ ಪಾವತಿ ಮಾಡಿದ ಮೇಲೆ ಇನ್ನೇನು ಐಫೋನ್‌ಗಳು ಬಂದು ತಮ್ಮ ಕೈ ಸೇರುತ್ತವೆ ಎಂದಿದ್ದ ಕಟಿಯಾರ್‌ಗೆ ತಾವು ಮೋಸ ಹೋಗಿದ್ದೇವೆ ಎಂಬುದು ಅರಿವಿಗೆ ಬಂದಿದೆ. ಈ ಸಂಬಂಧ ದೆಹಲಿಯ ನೈಋತ್ಯ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವ ಅವರು ತಮ್ಮ ಹಣ ಮತ್ತೆ ವಾಪಸ್‌ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಐಫೋನ್‌ ಖರೀದಿ ಮಾಡಲು ಹೋಗಿ 29 ಲಕ್ಷ ಕಳೆದುಕೊಂಡ ವ್ಯಕ್ತಿ; ನೀವು ಎಚ್ಚರ!

ನೀವು ಎಚ್ಚರ ವಹಿಸಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ನಕಲಿ ಕರೆಗಳ ಮೂಲಕ ಜನರಿಗೆ ಕಡಿಮೆ ದರದಲ್ಲಿ ಫೋನ್‌ಗಳು ಲಭ್ಯ ಎಂದು ಟೋಪಿ ಹಾಕುತ್ತಿದ್ದಾರೆ. ಇದು ಅಪ್ಪಟ ಸುಳ್ಳಾಗಿದ್ದು, ಯಾವುದೇ ಕಂಪೆನಿಗಳು ಸಹ ಈ ರೀತಿಯ ವಾಮಮಾರ್ಗದಲ್ಲಿ ತಮ್ಮ ಸ್ಮಾರ್ಟ್‌ಡಿವೈಸ್‌ಗಳನ್ನು ಮಾರಾಟ ಮಾಡಲು ಮುಂದಾಗುವುದಿಲ್ಲ. ಅದಕ್ಕೂ ಮಿಗಿಲಾಗಿ ನೀವು ಆಫರ್ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಆಯಾ ಕಂಪೆನಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Best Mobiles in India

English summary
A Delhi-based person lost 29 lakhs in his desire to buy an iPhone. He was tricked by Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+