ಹ್ಯಾವೆಲ್ಸ್ ನಿಂದ ಹೊಸ ಏರ್ ಪ್ಯೂರಿಫೈಯರ್ ಲಾಂಚ್‌; ಸ್ಪೇಸ್‌ಟೆಕ್‌ ತಂತ್ರಜ್ಞಾನ!

|

ಹ್ಯಾವೆಲ್ಸ್ ಭಾರತೀಯ ಬಹುರಾಷ್ಟ್ರೀಯ ವಿದ್ಯುತ್ ಉಪಕರಣಗಳ ಕಂಪೆನಿಯಾಗಿದೆ. ಅದರಂತೆ ಹಲವಾರು ರೀತಿಯ ಗ್ಯಾಜೆಟ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲೂ ಈ ಕಂಪೆನಿಯ ವಾಟರ್‌ ಪ್ಯೂರಿಫೈಯರ್, ಸ್ವಿಚ್‌ ಬೋರ್ಡ್‌, ಐರನ್‌ ಬಾಕ್ಸ್‌, ಫ್ಯಾನ್‌, ಮಿಕ್ಸರ್‌ ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ಹೊಸ ಏರ್ ಪ್ಯೂರಿಫೈಯರ್ ಅನ್ನು ಲಾಂಚ್‌ ಮಾಡಿದ್ದು, ಈ ಏರ್ ಪ್ಯೂರಿಫೈಯರ್ ಸ್ಪೇಸ್‌ಟೆಕ್ ಏರ್‌ ಶುದ್ಧೀಕರಣ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಲಿದೆ.

ಹ್ಯಾವೆಲ್ಸ್

ಹೌದು, ಹ್ಯಾವೆಲ್ಸ್ ಕಂಪೆನಿ ತನ್ನ ಮೊದಲ ಉತ್ಪನ್ನ ಏರ್ ಪ್ಯೂರಿಫೈಯರ್ ಅನ್ನು ಹ್ಯಾವೆಲ್ಸ್ ಸ್ಟುಡಿಯೋ ಮೂಲಕ ಲಾಂಚ್ ಮಾಡಲಾಗಿದೆ. ಅದರಂತೆ ಈ ಏರ್ ಪ್ಯೂರಿಫೈಯರ್ CO, TVOC, ಫಾರ್ಮಾಲ್ಡಿಹೈಡ್, SO2, NO2, O3, NH3 ಹಾಗೂ ಟೊಲುಯೆನ್ ಸೇರಿದಂತೆ ಇತರೆ ಅಪಾಯಕಾರಿ ಅನಿಲ ಮಾಲಿನ್ಯಕಾರಕಗಳನ್ನು ನಾಶ ಮಾಡುತ್ತದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಮೆಡಿಟೇಟ್ ಏರ್ ಪ್ಯೂರಿಫೈಯರ್ UV-C ಮತ್ತು UV-A ಲೈಟ್ಸ್‌ಜೊತೆಗೆ TiO2 (ಟೈಟಾನಿಯಂ ಡೈಆಕ್ಸೈಡ್) ಲೇಪಿತ ಪ್ಲೇಟ್‌ಗಳ ಆಯ್ಕೆ ಪಡೆದಿದ್ದು, ಇದು ಫೋಟೋ ಕ್ಯಾಟಲಿಟಿಕ್ ಆಕ್ಸಿಡೀಕರಣ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ. ಇದಿಷ್ಟೇ ಅಲ್ಲದೆ, ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುವ ಜೊತೆಗೆ ಯಾವುದೇ ಹಾನಿಕಾರಕ ಅನಿಲವನ್ನು ನಾಶ ಪಡಿಸುವ ಕೆಲಸ ಮಾಡುತ್ತದೆ.

ಆರು ಹಂತದಲ್ಲಿ ಶುದ್ಧೀಕರಣ

ಆರು ಹಂತದಲ್ಲಿ ಶುದ್ಧೀಕರಣ

ಈ ಏರ್ ಪ್ಯೂರಿಫೈಯರ್ ಪ್ರಮುಖವಾಗಿ ಆರು ಹಂತಗಳಲ್ಲಿ ಗಾಳಿಯನ್ನು ಶುದ್ಧ ಮಾಡುತ್ತದೆ. ಅದರಲ್ಲಿ ಪ್ರಮುಖವಾಗಿರುವ ಪ್ರಿ-ಫಿಲ್ಟರೇಶನ್ ಹಂತವು ಇಂಟಿಗ್ರೇಟೆಡ್ ಫಿಲ್ಟರ್‌ಗಳನ್ನು ಬಳಸಿಕೊಂಡು ಗಾಳಿಯನ್ನು ಶುದ್ಧಗೊಳಿಸುತ್ತದೆ. ಎರಡನೇ ಹಂತದಲ್ಲಿ ತರಂಗಾಂತರದ ಬೆಳಕಿಗೆ ಗಾಳಿಯನ್ನು ಒಡ್ಡುವ ಮೂಲಕ ವೈರಸ್‌ಗಳು /ಬ್ಯಾಕ್ಟೀರಿಯಾ ಮತ್ತು ಅಪಾಯಕಾರಿ ಅನಿಲಗಳನ್ನು ನಾಶಪಡಿಸುತ್ತದೆ.

ಫೋಟೋ-ಕ್ಯಾಟಲಿಟಿಕ್

ಇನ್ನು ಮತ್ತೊಂದು ಹಂತ ಎಂದರೆ ಫೋಟೋ-ಕ್ಯಾಟಲಿಟಿಕ್ ಆಕ್ಸಿಡೇಷನ್. ಇದರಲ್ಲಿ ಬಾಹ್ಯಾಕಾಶ ನಿಲ್ದಾಣಗಳಲ್ಲಿ ಬಳಸಲಾಗುವ ಶುದ್ಧೀಕರಣ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಇದರಲ್ಲಿ ಇರುವ ಸ್ಟ್ರಾಂಷಿಯಂ, ಪಲ್ಲಾಡಿಯಮ್ ಮತ್ತು ನ್ಯಾನೊ-ಸಿಲ್ವರ್‌ ರೋಗಕಾರಕಗಳನ್ನು ಹೆಚ್ಚು ವೇಗವಾಗಿ ಕ್ಷೀಣಿಸುವಂತೆ ಮಾಡುತ್ತದೆ. ಇದರೊಂದಿಗೆ ಫಾರ್ಮಾಲ್ಡಿಹೈಡ್, ಓಝೋನ್‌ಗೆ ದಕ್ಕೆ ಉಂಟುಮಾಡುವ ಅಪಾಯಕಾರಿ ಅನಿಲಗನ್ನೂ ಸಹ ಇದು ನಾಶ ಮಾಡಲಿದ್ದು , ಈ ಏರ್ ಪ್ಯೂರಿಫೈಯರ್ ಹೊಂದಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಮಹತ್ವದ್ದಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ

ವಾಯು ಗುಣಮಟ್ಟ ಸೂಚ್ಯಂಕ

ಇನ್ನುಳಿದಂತೆ ವಾಯು ಗುಣಮಟ್ಟ ಸೂಚ್ಯಂಕದ (AQI) ಮಾನಿಟರ್‌ನಲ್ಲಿ ಪವರ್‌, ಮೋಡ್ ಹಾಗೂ ಟಾಗಲ್‌ಗಾಗಿ ಮೂರು ಕೆಪ್ಯಾಸಿಟಿವ್ ಟಚ್ ಬಟನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಗಾಳಿಯ ಗುಣಮಟ್ಟ, ಬ್ಯಾಟರಿ ಬಾಳಿಕೆ ಮತ್ತು ಫ್ಯಾನ್ ವೇಗದಂತಹ ನಿಯತಾಂಕಗಳನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ಜೊತೆಗೆ ಮಾನಿಟರ್‌ನಲ್ಲಿ ನೈಜ-ಸಮಯದ ಗಾಳಿಯ ಗುಣಮಟ್ಟವನ್ನು ತಿಳಿಸುತ್ತದೆ.

ಅಲೆಕ್ಸಾ ಹಾಗೂ ಗೂಗಲ್ ಹೋಮ್

ಅಲೆಕ್ಸಾ ಹಾಗೂ ಗೂಗಲ್ ಹೋಮ್

ಇದರ ಜೊತೆಗೆ ಆಪ್‌ನಲ್ಲಿ ಮುನ್ಸೂಚಕ ವಿಶ್ಲೇಷಣೆ, ದೈನಂದಿನ ಬಳಕೆಗಾಗಿ ವೇಳಾಪಟ್ಟಿ, ಸ್ವಯಂಚಾಲಿತ ಆನ್/ಆಫ್, ವೈರ್‌ಲೆಸ್ ಚಾರ್ಜಿಂಗ್, 360- ಡಿಗ್ರಿ ಶುದ್ಧೀಕರಣ, ಫಿಲ್ಟರ್ ಲೈಫ್ ಸೂಚನೆ ಮತ್ತು ನೋಟಿಫಿಕೇಶನ್, IoT, ಅಲೆಕ್ಸಾ ಹಾಗೂ ಗೂಗಲ್ ಹೋಮ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ಉಂಟಾಗಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಹ್ಯಾವೆಲ್ಸ್‌ನ ಪ್ರೀಮಿಯಂ ಶ್ರೇಣಿಯ ಏರ್ ಪ್ಯೂರಿಫೈಯರ್ ಇದಾಗಿದ್ದು, ಇದರ ಮೂಲಕ ಬೆಲೆ 64,900ರೂ. ಗಳಾಗಿದೆ. ಆದರೆ, ಅಮೆಜಾನ್‌ ನಲ್ಲಿ ಖರೀದಿ ಮಾಡಿದರೆ 54,999ರೂ.ಗಳಿಗೆ ಈ ಏರ್ ಪ್ಯೂರಿಫೈಯರ್ ನಿಮಗೆ ಲಭ್ಯವಾಗಲಿದೆ. ಇದರ ಜೊತೆಗೆ ಹಾಗೆಯೇ RBL ಸೆರಿದಂತೆ ಅಯ್ದ ಬ್ಯಾಂಕ್ ಕಾರ್ಡ್‌ಗಳ ಪಾವತಿಯ ಮೇಲೆ 1,500 ರೂ. ಗಳ ಇನ್‌ಸ್ಟಂಟ್‌ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತದೆ.

Best Mobiles in India

English summary
Havells is an Indian multinational electrical appliance company. Meanwhile, it has launched a new air purifier with different features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X