Home
ಸುದ್ದಿಜಾಲ

ಗೂಗಲ್ ಮ್ಯಾಪ್‌ ನಂಬಿ ಸಂಚಾರ ಮಾಡಿದವ ಸಾವು: ಟೆಕ್‌ ದೈತ್ಯನ ವಿರುದ್ಧ ದೂರು ದಾಖಲು

ತಂತ್ರಜ್ಞಾನ ಇಂದಿನ ದಿನಗಳಲ್ಲಿ ಎಷ್ಟೆಲ್ಲಾ ಅಗತ್ಯ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಿಕೊಡುತ್ತಾ ಬರುತ್ತಿದೆಯೋ ಅದೇ ರೀತಿ ಕೆಲವು ಕೆಡಕುಗಳು ಸಹ ಇದರಿಂದ ಆಗಿತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೋರ್ವ ವ್ಯಕ್ತಿ ಗೂಗಲ್‌ ಮ್ಯಾಪ್‌‌ (Google Map) ನೀಡಿದ ಮಾರ್ಗದಲ್ಲಿ ಸಂಚರಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ಹೌದು, ಗೂಗಲ್‌ ಮ್ಯಾಪ್‌ ಸಂಬಂಧ ಈಗಾಗಲೇ ಸಾಕಷ್ಟು ಅಪಸ್ವರಗಳು ಕೇಳಿಬರುತ್ತಲೇ ಇವೆ. ಅಂದರೆ ದಾರಿ ಇಲ್ಲದಿದ್ದರೂ ಅಲ್ಲಿ ಮಾರ್ಗ ತೋರಿಸೋದು ಅಥವಾ ಆ ದಾರಿ ಉತ್ತಮವಾಗಿದೆಯಾ ಹಾಳಾಗಿದೆಯಾ ಎಂಬುದನ್ನು ಲೆಕ್ಕಿಸದೆ ಆ ದಾರಿಯ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತದೆ. ಈ ಆರೋಪಗಳು ಸತ್ಯ ಎನ್ನುವಂತೆ ಇಲ್ಲೊಂದು ದುರ್ಘಟನೆ ನಡೆದೇ ಹೋಗಿದೆ. ಇದರಿಂದಾಗಿ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ. ಹಾಗಿದ್ರೆ, ಏನಿದು ಘಟನೆ?, ಗೂಗಲ್‌ ಮ್ಯಾಪ್ಸ್‌ ನಂಬಿ ಸಾವಿಗೀಡಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಮ್ಯಾಪ್‌ ನಂಬಿ ಸಂಚಾರ ಮಾಡಿದವ ಸಾವು: ಟೆಕ್‌ ದೈತ್ಯನ ವಿರುದ್ಧ ದೂರು ದಾಖಲು

ಗೂಗಲ್ ಮ್ಯಾಪ್‌ ನಂಬಿ ಪ್ರಾಣ ಕಳೆದುಕೊಂಡ ಪ್ರಯಾಣಿಕ: ಗೂಗಲ್ ನಕ್ಷೆ ಅನುಸರಿಕೊಂಡು ಪ್ರಯಾಣ ಮಾಡುವಾಗ ಉತ್ತರ ಕೆರೊಲಿನಾದಲ್ಲಿ ವ್ಯಕ್ತಿಯೋರ್ವ ಸಾವಿಗೀಡಾಗಿದ್ದಾನೆ. ಈ ವ್ಯಕ್ತಿಯ ಕುಟುಂಬವು ಈಗ ಟೆಕ್ ದೈತ್ಯನ ವಿರುದ್ಧ ಮೊಕದ್ದಮೆ ದಾಖಲು ಮಾಡಿದೆ. ಜೊತೆಗೆ ಈ ಆಪ್‌ ಕುಸಿದ ಸೇತುವೆ ಮೇಲೆ ಸಂಚಾರ ಮಾಡಲು ನಿರ್ದೇಶಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಈ ದುರ್ಘಟನೆ ನಡೆದಿದೆ. ಈ ಮೂಲಕ ಗೂಗಲ್ ಮ್ಯಾಪ್ಸ್‌ ನ್ಯಾವಿಗೇಷನ್ ಆಪ್‌ನ ನಿಖರತೆಯ ಬಗ್ಗೆ ಎಲ್ಲರಲ್ಲೂ ಕಳವಳ ಉಂಟು ಮಾಡಿದೆ. ಯಾಕೆಂದರೆ ಈ ಈ ಅಪಘಾತದಲ್ಲಿ ವೈದ್ಯಕೀಯ ಡಿವೈಸ್‌ಗಳ ಮಾರಾಟಗಾರ ಮತ್ತು ಯುಎಸ್ ನೌಕಾಪಡೆಯ ಅನುಭವಿ ಫಿಲಿಪ್ ಪ್ಯಾಕ್ಸನ್ ಅವರ ಜೀವವೇ ಹೋಗಿದೆ. ಮಳೆ ಬರುತ್ತಿದ್ದ ಸಮಯದಲ್ಲಿ ರಾತ್ರಿ ತನ್ನ ಮಗಳ ಒಂಬತ್ತನೇ ಹುಟ್ಟುಹಬ್ಬದ ಪಾರ್ಟಿಯಿಂದ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಎರಡು ಮಕ್ಕಳ ತಂದೆಯಾಗಿರುವ ಫಿಲಿಪ್ ಪ್ಯಾಕ್ಸನ್ ತನ್ನ ಮಗಳ ವಿಶೇಷ ದಿನವನ್ನು ಸ್ನೇಹಿತರ ಮನೆಯಲ್ಲಿ ಆಚರಿಸಿದ್ದರು. ಈ ಸಮಾರಂಭದ ನಂತರ ಫಿಲಿಪ್ ಎಲ್ಲರನ್ನೂ ಮನೆಗೆ ಕಳುಹಿಸಿ, ಪಾರ್ಟಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಜೋಡಿಸುವ ಹಾಗೂ ಸ್ಥಳವನ್ನು ಸ್ವಚ್ಛ ಮಾಡುವ ಕೆಲಸ ಮಾಡಲು ಉಳಿದುಕೊಂಡಿದ್ದಾರೆ. ಈ ಕೆಲಸ ಆದ ಮೇಲೆ ಮರಳಿ ಮನೆಗೆ ತೆರಳಲು
ಫಿಲಿಪ್ ಪ್ಯಾಕ್ಸನ್ ಅವರು ಮುಂದಾಗಿದ್ದಾರೆ.

ಈ ವೇಳೆ ಅವರು ತಮ್ಮ ಮನೆಗೆ ಹೋಗಲು ಗೂಗಲ್‌ ಮ್ಯಾಪ್ಸ್‌ ಬಳಕೆ ಮಾಡಿಕೊಂಡಿದ್ದಾರೆ. ದುರದೃಷ್ಟಕರ ಸಂಗತಿ ಏನೆಂದರೆ ಈ ಗೂಗಲ್‌ ಮ್ಯಾಪ್‌ ತೋರಿದ ಮಾರ್ಗ ಅವರ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ. ಅಂದರೆ ಅಪಾಯಕಾರಿ ರಸ್ತೆಯ ಬಗ್ಗೆ ಆಪ್‌ ಯಾವುದೇ ಮಾಹಿತಿಯನ್ನು ನೀಡುವ ಫೀಚರ್ಸ್ ಹೊಂದಿಲ್ಲ. ಅಷ್ಟೇ ಅಲ್ಲದೆ ಅಲ್ಲಿ ಯಾವುದೇ ಬ್ಯಾರಿಕೇಡ್ ಸಹ ಇರಲಿಲ್ಲ. ಅದಾಗ್ಯೂ ಕುಸಿದ ಸೇತುವೆಯ ಮೇಲೆ ಸಂಚಾರ ಮಾಡಲು ಗೂಗಲ್‌ ನಿರ್ದೇಶಿಸಿದೆ.

ಅದರಂತೆ ಮುಂದೆ ಸಾಗಿದ ಫಿಲಿಪ್ ಜೀಪ್ ಗ್ಲಾಡಿಯೇಟರ್ ಸೇತುವೆಯಿಂದ 20 ಅಡಿಗಳಷ್ಟು ಕೆಳಗೆ ಮುಳುಗಿದೆ. ಈ ದುರಂತ ನಡೆದ ಬಳಿಕ ಫಿಲಿಪ್ ಅವರ ಪತ್ನಿ ಅಲಿಸಿಯಾ ಪ್ಯಾಕ್ಸನ್ ಗೂಗಲ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಗೂಗಲ್ ಮ್ಯಾಪ್‌ ಅಪಾಯಕಾರಿ ಸೇತುವೆಯ ಮೇಲೆ ಚಾಲಕರನ್ನು ವರ್ಷಗಳಿಂದ ಮಾರ್ಗದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಇಲ್ಲಿನ ಸ್ಥಳೀಯರು ಈ ಸೇತುವೆ ಬಗ್ಗೆ ಹಲವಾರು ಬಾರಿ ಗೂಗಲ್‌ ಮ್ಯಾಪ್‌ಗೆ ವರದಿ ಮಾಡಿದ್ದಾರಂತೆ ಅದಾಗ್ಯೂ ಅದನ್ನು ಗೂಗಲ್‌ ಮ್ಯಾಪ್‌ನಲ್ಲಿ ಪ್ರದರ್ಶಿಸಿಲ್ಲ.

ದುರಂತ ಏನೆಂದರೆ ಫಿಲಿಪ್ ಪ್ಯಾಕ್ಸನ್ ಅವರ ಮರಣದ ನಂತರವೂ ಗೂಗಲ್ ಮ್ಯಾಪ್‌ ಕುಸಿದ ಸೇತುವೆಯ ದಾರಿಯನ್ನೇ ತೋರಿಸುತ್ತಿದೆಯಂತೆ. ಈ ಮೂಲಕ ಗೂಗಲ್‌ ಮ್ಯಾಪ್‌ ಬಳಕೆದಾರರಲ್ಲಿ ನಿಖರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾವಿಗೇಷನ್ ಆಪ್‌ನ ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೂಲಕ ಆಪ್‌ ಬಳಕೆ ಮಾಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಒಳಗಾಗುವಂತೆ ಆಗಿದೆ.

ಗೂಗಲ್ ಮ್ಯಾಪ್‌ ನಂಬಿ ಸಂಚಾರ ಮಾಡಿದವ ಸಾವು: ಟೆಕ್‌ ದೈತ್ಯನ ವಿರುದ್ಧ ದೂರು ದಾಖಲು

ಗೂಗಲ್ ವಕ್ತಾರ ಜೋಸ್ ಕ್ಯಾಸ್ಟನೆಡಾ ಅವರು ಪ್ಯಾಕ್ಸನ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಗೂಗಲ್ ಮ್ಯಾಪ್‌ನಲ್ಲಿ ನಿಖರವಾದ ರೂಟಿಂಗ್ ಮಾಹಿತಿಯನ್ನು ಒದಗಿಸುವುದು ಕಂಪನಿಯ ಪ್ರಾಥಮಿಕ ಗುರಿಯಾಗಿದೆ ಎಂದು ತಿಳಿಸಿದ್ದು, ಮೊಕದ್ದಮೆಯನ್ನು ಸಕ್ರಿಯವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಈ ರೀತಿಯ ದುರಂತಗಳನ್ನು ತಡೆಗಟ್ಟಲು ಸುರಕ್ಷತಾ ಕಾಳಜಿಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Best Mobiles in India

English summary
A man has died in North Carolina while following a Google Maps. The man's family has now filed a lawsuit against the tech giant Google.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+