Home
ಸುದ್ದಿಜಾಲ

ಈ ಲಿಂಕ್ ಕ್ಲಿಕ್‌ ಮಾಡಿದ್ದೇ ತಡ ಎಗರೋಯ್ತು ಲಕ್ಷ, ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸ್ಕ್ಯಾಮ್‌ಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಪೊಲೀಸರೇ ಹರಸಾಹಸ ಪಡುತ್ತಿದ್ದಾರೆ. ಮೋಸ ಮಾಡಲು ಸ್ಕ್ಯಾಮರ್‌ಗಳು ವಿವಿಧ ರೀತಿಯ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿಕೊಳ್ಳುತ್ತಿದ್ದು, ಈ ನಡುವೆ ಓರ್ವ ವ್ಯಕ್ತಿ ಒಂದು ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಹೌದು, ಸೋಶಿಯಲ್‌ ಸೈಟ್‌ನಲ್ಲಿ ಕಾಣಿಸಿಕೊಂಡ ಬಿಗ್ ಬಜಾರ್ ವಿಶೇಷ ರಿಯಾಯಿತಿಯ ಜಾಹೀರಾತನ್ನು(Big Bazaar Special Discount Advertisement) ಕ್ಲಿಕ್ ಮಾಡಿದ ವ್ಯಕ್ತಿ 1 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾನೆ. ಹಾಗಿದ್ದರೆ, ಈ ರೀತಿಯ ವಂಚನೆಯನ್ನು ಹೇಗೆ ಮಾಡಲಾಗುತ್ತಿದೆ?, ಇದರಿಂದ ಜನರು ಹೇಗೆ ಎಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಲಿಂಕ್ ಕ್ಲಿಕ್‌ ಮಾಡಿದ್ದೇ ತಡ ಎಗರೋಯ್ತು ಲಕ್ಷ, ಫೋನ್‌ ಬಳಕೆದಾರರೇ ಎಚ್ಚರ!

ಜಾಹೀರಾತು ಕ್ಲಿಕ್‌ ಮಾಡಿ ಹಣ ಕಳೆದುಕೊಂಡ ವ್ಯಕ್ತಿ: ಆನ್‌ಲೈನ್ ಶಾಪಿಂಗ್ (Online shopping) ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಅದರಲ್ಲೂ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು (E-commerce site) ಪ್ರೊಡಕ್ಟ್‌ಗಳನ್ನು ಇವುಗಳನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸ ಮಾಡುತ್ತವೆ. ಈ ನಡುವೆ ಅನೇಕ ಇ-ಕಾಮರ್ಸ್‌ ಸೈಟ್‌ಗಳು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತವೆ.

ಆದರೆ ಇದನ್ನೇ ದುರಪಯೋಗಪಡಿಸಿಕೊಂಡಿರುವ ಸ್ಕ್ಯಾಮರ್‌ ಗ್ರೂಪ್‌ ಒಂದು ಇದೇ ರೀತಿಯ ಜಾಹೀರಾತನ್ನು ಪ್ರಕಟಿಸಿದೆ. ಅದೂ ಸಹ ಬಿಗ್ ಬಜಾರ್ ಹೆಸರಿನಲ್ಲಿ. ಈ ಸಂಬಂಧ IANS ವರದಿ ಮಾಡಿದೆ. ದೆಹಲಿ ಮೂಲದ 28 ವರ್ಷದ ವ್ಯಕ್ತಿ ಜನಪ್ರಿಯ ಸ್ಟೋರ್ ಬಿಗ್ ಬಜಾರ್‌ ಹೆಸರಲ್ಲಿ ಜಾಹೀರಾತು ಒಂದನ್ನು ನೋಡಿದ್ದಾರೆ. ಶೇಕಡಾ 75 ರ ವಿಶೇಷ ರಿಯಾಯಿತಿಯನ್ನು ಅದರಲ್ಲಿ ಉಲ್ಲೇಖ ಮಾಡಲಾಗಿದೆ.

ಇದರಿಂದ ಪುಳಕಿತನಾದ ಆ ವ್ಯಕ್ತಿ ನಾಲ್ಕು ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ. ಆದರೆ ಅವು ಎಂದಿಗೂ ಆತನ ಅಡ್ರೆಸ್‌ಗೆ ತಲುಪಲೇ ಇಲ್ಲ. ಈ ವಸ್ತುಗಳನ್ನು ಖರೀದಿ ಮಾಡಲು ತಮ್ಮ ICICI ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಬಳಕೆ ಮಾಡಿದ್ದಾರೆ. ದುರಂತ ಏನೆಂದರೆ ಈ ವೇಳೆ ಅವರ ಡೆಬಿಟ್ ಕಾರ್ಡ್ ಅನ್ನು ಹ್ಯಾಕ್ ಮಾಡಲಾಗಿದ್ದು, ಸುಮಾರು 1 ಲಕ್ಷ ರೂ. ವಂಚನೆ ಮಾಡಲಾಗಿದೆ. ಈ ಸಂಬಂಧ ದೂರು ಅವರು ದೂರು ನೀಡಿದ್ದಾರೆ.

ನಕಲಿ ಜಾಹೀರಾತುಗಳಿಂದ ಎಚ್ಚರ: ಸೈಬರ್‌ ಅಪರಾಧಗಳು ಹೆಚ್ಚಾಗಲು ಕಾರಣ ಜನರು ಕಣ್ಣು ಮುಚ್ಚಿಕೊಂಡು ಏನನ್ನೇ ಆದರೂ ನಂಬುತ್ತಿರುವುದು. ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ವಿಚಾರಕ್ಕಾಗಿಯೇ ಹೆಚ್ಚು ಬಳಕೆ ಆಗುತ್ತಿದೆ. ಈ ಕಾರಣಕ್ಕೆ ಇಲ್ಲಿ ಕಾಣಿಸಿಕೊಳ್ಳುವ ಈ ರೀತಿಯ ಯಾವುದೇ ಜಾಹೀರಾತನ್ನು ಕ್ಲಿಕ್‌ ಮಾಡುವ ಮುನ್ನ ಅಥವಾ ಅವರನ್ನು ಸಂಪರ್ಕ ಮಾಡುವ ಮುನ್ನ ಹಲವು ಬಾರಿ ಯೋಚನೆ ಮಾಡಿ.

ಈ ಲಿಂಕ್ ಕ್ಲಿಕ್‌ ಮಾಡಿದ್ದೇ ತಡ ಎಗರೋಯ್ತು ಲಕ್ಷ, ಫೋನ್‌ ಬಳಕೆದಾರರೇ ಎಚ್ಚರ!

ಸ್ಕ್ಯಾಮರ್‌ಗಳು ಸದಾ ಕಾಲ ನಂಬಿಕೆಗೆ ಅರ್ಹರು ಎಂಬಂತೆಯೇ ನಟಿಸುತ್ತಾರೆ. ಈ ಮೂಲಕ ನೀವು ಮೋಸ ಹೋಗುವವರೆಗೂ ನಿಮಗೆ ಅರಿವಿಗೇ ಬರದಂತೆ ಇರುತ್ತಾರೆ. ಈ ಕಾರಣಕ್ಕೆ ಯಾವುದೇ ಆರ್ಥಿಕ ವ್ಯವಹಾರದಲ್ಲಿ ಸಣ್ಣ ಮೊತ್ತ ಪಾವತಿ ಮಾಡಬೇಕಿದ್ದರೂ ಸಹ ಹಲವು ಬಾರಿ ಯೋಚಿಸಿ. ಅದು ನಂಬಿಕೆಗೆ ಅರ್ಹ ಎಂದರೆ ಮಾತ್ರ ನಿಮ್ಮ ಬ್ಯಾಂಕ್ ವಿವರಗಳನ್ನು ಅವರಿಗೆ ನೀಡಿ ಅಥವಾ ಆನ್‌ಲೈನ್‌ ವಹಿವಾಟು ನಡೆಸಿ.

ಅದರಲ್ಲೂ ಈಗ ಕೆಲವು ಲಿಂಕ್‌ಗಳಲ್ಲಿ ಮಾಲ್‌ವೇರ್‌ (Malware)ಅನ್ನು ಇನ್‌ಸ್ಟಾಲ್‌ ಮಾಡುವ ಕೆಲಸವನ್ನು ಸ್ಕ್ಯಾಮರ್‌ಗಳು(Scammers) ಮಾಡುತ್ತಿದ್ದಾರೆ. ನೀವು ಈ ಲಿಂಕ್‌ ಕ್ಲಿಕ್‌ ಮಾಡಿದ ನಂತರ ನಿಮ್ಮ ಫೋನ್‌ ಅನ್ನು ಬೇರೆಯವರು ಕಂಟ್ರೋಲ್‌ ಮಾಡಲು ಅನುಕೂಲ ಮಾಡುವಂತೆ ಈ ಮಾಲ್‌ವೇರ್‌ಗಳನ್ನು ಅಭಿವೃದ್ಧಿಪಡಿಸಿರುತ್ತಾರೆ. ಹೀಗಾಗಿ ಯಾವುದೇ ಅನವಶ್ಯಕ ಹಾಗೂ ಅನಧೀಕೃತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.

Best Mobiles in India

English summary
A person who clicked on a Big Bazaar Special Discount advertisement on a social site lost more than 1 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+