Home
ಸುದ್ದಿಜಾಲ

ನೀವು ವಾಟ್ಸಾಪ್‌ ಬಳಸುತ್ತೀರಾ ಹಾಗಿದ್ರೆ ಎಚ್ಚರ... 33 ವರ್ಷದ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 43 ಲಕ್ಷ!

ಆನ್‌ಲೈನ್ ಸ್ಕ್ಯಾಮ್‌ಗಳು (Online scams) ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ನಡುವೆ ವಾಟ್ಸಾಪ್‌(WhatsApp) ಮೂಲಕ ಓರ್ವ ವ್ಯಕ್ತಿ ಮೋಸ ಹೋಗಿದ್ದಾರೆ. ದುರಂತ ಏನೆಂದರೆ ಒಂದು ಎರಡು ಲಕ್ಷವಲ್ಲ ಬರೋಬ್ಬರಿ 43 ಲಕ್ಷ ರೂ. ಗಳನ್ನು ಮೋಸ ಮಾಡಲಾಗಿದೆ. ಈ ಘಟನೆ ಈಗ ವಾಟ್ಸಾಪ್‌ ಬಳಕೆದಾರರಿಗೆ ಆತಂಕ ಉಂಟು ಮಾಡಿದೆ.

ಹೌದು, ನವಿ ಮುಂಬೈನ ಕೋಪರ್ಖೈರಾನೆ ಮೂಲದ 33 ವರ್ಷದ ವ್ಯಕ್ತಿಯೊಬ್ಬರು ವಾಟ್ಸಾಪ್ ಆಧಾರಿತ ವಂಚನೆಗೆ ಬಲಿಯಾಗಿದ್ದಾರೆ. ದುಷ್ಕರ್ಮಿಗಳು ಆನ್‌ಲೈನ್ ಕಾರ್ಯಗಳ ಮೂಲಕ ಹೆಚ್ಚಿನ ಆದಾಯದ ಭರವಸೆಯೊಂದಿಗೆ ಇವರನ್ನು ಸಂಪರ್ಕ ಮಾಡಿದ್ದಾರೆ. ಹಾಗಿದ್ರೆ, ಇವರು ಮೋಸ ಹೋಗಿದ್ದು ಹೇಗೆ?, ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ವಾಟ್ಸಾಪ್‌ ಬಳಸುತ್ತೀರಾ ಹಾಗಿದ್ರೆ ಎಚ್ಚರ...

33 ವರ್ಷದ ವ್ಯಕ್ತಿಗೆ 43 ಲಕ್ಷ ರೂ.ವಂಚನೆ : ನವಿ ಮುಂಬೈನ ಕೋಪರ್ಖೈರಾನೆಮೂಲದ 33 ವರ್ಷದ ವ್ಯಕ್ತಿಯೊಬ್ಬರು ವಾಟ್ಸಾಪ್ ಆಧಾರಿತ ವಂಚನೆಗೆ ಬಲಿಯಾಗಿದ್ದಾರೆ. ವಂಚಕರು 43.45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಆನ್‌ಲೈನ್ ಕಾರ್ಯಗಳನ್ನು ಒಳಗೊಂಡ ಲಾಭದಾಯಕ ಅರೆಕಾಲಿಕ ಅವಕಾಶವನ್ನು ನೀಡುವುದಾಗಿ ಹೇಳಿಕೊಂಡ ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ಮೆಸೆಜ್‌ ಮೂಲಕವೇ ಈ ಮಹಾವಂಚನೆ ಮಾಡಲಾಗಿದೆ.

ಹೆಚ್ಚಿನ ಗಳಿಕೆಯ ಆಸೆಗೆ ಬಲಿಯಾದ ಈ ವ್ಯಕ್ತಿ ಸ್ಕ್ಯಾಮರ್‌ಗಳೊಂದಿಗೆ ಕೈಜೋಡಿಸಿದ್ದಾನೆ. ಹಾಗೆಯೇ ಇವರೊಂದಿಗೆ ಅಪಾಯಕಾರಿ ಪ್ರಯಾಣ ಸಹ ಆರಂಭಿಸಿದ್ದಾರೆ. ಈ ಮೂಲಕ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಷಣ ಮಾತ್ರದಲ್ಲಿ ಬೇರೆಯವರಿಗೆ ಒಪ್ಪಿಸಿದ್ದಾರೆ. ಇನ್ನು ಘಟನೆ ಸಂಬಂಧ ವಂಚಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿದೆ.

ಹೆಚ್ಚುತ್ತಿರುವ ಆನ್‌ಲೈನ್ ಟಾಸ್ಕ್‌: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಟಾಸ್ಕ್‌ ಮೂಲಕ ಹೆಚ್ಚಿನ ವಂಚನೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಸಂತ್ರಸ್ತರನ್ನು ಇದು ಆಕರ್ಷಿಸುತ್ತದೆ, ಆರಂಭದಲ್ಲಿ ಅವರ ನಂಬಿಕೆಯನ್ನು ಪಡೆಯಲು ಹೂಡಿಕೆ ಮಾಡಲಾದ ಹಣದೊಂದಿಗೆ ಹೆಚ್ಚಿನ ಹಣವನ್ನು ನೀಡಲಾಗುತ್ತದೆ. ಅದರಲ್ಲೂ ವಿಡಿಯೋಗಳನ್ನು ಲೈಕ್‌ ಮಾಡುವ ಮೂಲಕ ಈ ಸ್ಕ್ಯಾಮ್‌ ನಡೆಸಲಾಗುತ್ತದೆ.

ಇದಾದ ನಂತರದಲ್ಲಿ ಹಣ ಜಮೆ ಆಗುವುದನ್ನು ನೋಡಿ ಇನ್ನೂ ಹೆಚ್ಚಿನ ಹಣ ಗಳಿಸಬಹುದು ಎಂದುಕೊಂಡು ಇರೋ ಬರೋ ಹಣವನ್ನೆಲ್ಲಾ ಹೂಡಿಕೆ ಮಾಡಲು ಮುಂದಾಗಿರುತ್ತಾರೆ. ಸ್ಕ್ಯಾಮರ್‌ಗಳು ಈ ಕ್ಷಣಕ್ಕೆ ಕಾಯುತ್ತಿದ್ದು, ಹೂಡಿಕೆ ಮಾಡಿದ ಹಣವನ್ನೆಲ್ಲಾ ತಮ್ಮ ಖಾತೆಗೆ ಜಮಾ ಮಾಡಿಕೊಂಡು ಸದ್ದಿಲ್ಲದಂತೆ ಸೈಲೆಂಟ್ ಆಗಿ ಬಿಡುತ್ತಾರೆ. ಈ ಮೂಲಕ ಅವರ ಬ್ಯಾಂಕ್‌ ಅನ್ನು ಖಾಲಿ ಮಾಡಿ ಬರಿಗೈ ಮಾಡುವ ಸಾಮರ್ಥ್ಯ ಸ್ಕ್ಯಾಮರ್‌ಗಳಲ್ಲಿದೆ.

ದುರಂತ ಏನೆಂದರೆ ಇದೇ ರೀತಿಯ ಘಟನೆ ಕೆಲವು ದಿನಗಳ ಹಿಂದೆಯೂ ನಡೆದಿತ್ತು. ಅಂದರೆ 48 ವರ್ಷದ ಖಾರ್ಘರ್ ನಿವಾಸಿಯೊಬ್ಬರು ಇದೇ ರೀತಿಯ ವಂಚನೆಗೆ ಬಲಿಯಾಗಿ ಸುಮಾರು 18 ಲಕ್ಷ ಹಣ ಕಳೆದುಕೊಂಡಿದ್ದರು. ಅಂದರೆ ಇವರನ್ನೂ ಸಹ ಆರಂಭದಲ್ಲಿ ಮನವೊಲಿಸಿ ನಂತರ ಇರೋ ಬರೋ ಹಣವನ್ನೆಲ್ಲಾ ಪೀಕಲಾಗಿತ್ತು. ನವಿ ಮುಂಬೈ ಪೊಲೀಸರ ಸೈಬರ್ ಕ್ರೈಂ ವಿಭಾಗವು ಮೋಸ ಹೋದವರ ದೂರಿನ ಆಧಾರದ ಮೇಲೆ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ನೀವು ವಾಟ್ಸಾಪ್‌ ಬಳಸುತ್ತೀರಾ ಹಾಗಿದ್ರೆ ಎಚ್ಚರ...

ಇಷ್ಟೇ ಅಲ್ಲದೆ ಮುಂಬೈನ 66 ವರ್ಷದ ನಿವಾಸಿ ಕೂಡ ಆನ್‌ಲೈನ್ ಟಾಸ್ಕ ವಂಚನೆಗೆ ಬಲಿಯಾಗಿದ್ದಾರೆ. ಈ ಸಂಶಯಾಸ್ಪದ ಆನ್‌ಲೈನ್ ಚಟುವಟಿಕೆಗಳ ಮೂಲಕ ತನ್ನ ಆದಾಯವನ್ನು ಪೂರೈಸಲು ಪ್ರಯತ್ನಿಸುವಾಗ 17 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಆತಂಕಕಾರಿ ಪ್ರಕರಣಗಳು ಡಿಜಿಟಲ್ ಪ್ರಪಂಚದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಅದರಲ್ಲೂ ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಆಗಾಗ್ಗೆ ಈ ಸಂಬಂಧ ಎಚ್ಚರಿಕೆ ನೀಡುತ್ತಿದ್ದರು ಸಹ ಮೋಸದ ಪ್ರಕರಣ ಕಡಿಮೆ ಆಗುತ್ತಿಲ್ಲ.

Best Mobiles in India

English summary
A 33-year-old man from Koparkhairane, Navi Mumbai has fallen victim to a WhatsApp-based scam. Criminals have contacted them with promises of high income through online jobs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+