Home
ಸುದ್ದಿಜಾಲ

ಬ್ಯಾಂಕ್‌ಗೆ ಫೋನ್‌ ಸಂಖ್ಯೆ ಲಿಂಕ್‌ ಮಾಡದಿದ್ದಕ್ಕೆ 57 ಲಕ್ಷ ಕಳೆದುಕೊಂಡ ವ್ಯಕ್ತಿ! ಅದೇಗೆ ಅಂತೀರಾ?

ದೇಶದಲ್ಲಿ ನಿತ್ಯವೂ ವಿವಿಧ ರೀತಿಯಲ್ಲಿ ಆನ್‌ಲೈನ್ ವಂಚನೆಗಳು (Online fraud) ವರದಿಯಾಗುತ್ತಲೇ ಇವೆ. ಇವೆಲ್ಲವೂ ಸಾಮಾನ್ಯ ನಾಗರಿಕರ ಬ್ಯಾಂಕ್‌ ಖಾಲಿಮಾಡುವ ವಂಚನೆಗಳಾಗಿವೆ. ಈ ನಡುವೆ ದೇಶದಲ್ಲಿ ಮತ್ತೊಂದು ರೀತಿಯ ಹಗರಣ ವರದಿಯಾಗಿದ್ದು, ಬ್ಯಾಂಕ್‌ ಖಾತೆ ಹೊಂದಿರುವವರು ಭಯಪಡುವಂತೆ ಆಗಿದೆ.

ಹೌದು, ಬ್ರಿಟನ್‌ನಲ್ಲಿರುವ ಭಾರತೀಯ ನಿವಾಸಿಗೆ 57 ಲಕ್ಷ ಹಣ ವಂಚನೆ ಮಾಡಲಾಗಿದೆ. ಹಳೆಯ ಸಿಮ್ ಸಂಪರ್ಕ ಕಡಿತಗೊಳಿಸಿದ ನಂತರ ಬ್ಯಾಂಕ್‌ನಲ್ಲಿ ಹೊಸ ಸಂಖ್ಯೆಯನ್ನು ನವೀಕರಿಸಲು ಮರೆತಿದ್ದರಿಂದ ವಂಚನೆಗೆ ಒಳಗಾಗಿದ್ದಾರೆ. ಹಾಗಿದ್ರೆ, ಏನಿದು ಹೊಸ ಸ್ಕ್ಯಾಮ್‌?, ಈ ಘಟನೆ ಹೇಗಾಯಿತು ಎಂಬ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಯಾಂಕ್‌ಗೆ ಫೋನ್‌ ಸಂಖ್ಯೆ ಲಿಂಕ್‌ ಮಾಡದಿದ್ದಕ್ಕೆ 57 ಲಕ್ಷ ಕಳೆದುಕೊಂಡ ವ್ಯಕ್ತಿ!

57 ಲಕ್ಷ ಹಣ ವಂಚನೆ: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ (HDFC Bank) ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸುಖಜಿತ್ ಸಿಂಗ್, ಬಿಹಾರದ ಲವ್ ಕುಮಾರ್, ಗಾಜಿಪುರದ ನೀಲೇಶ್ ಪಾಂಡೆ ಮತ್ತು ದೆಹಲಿಯ ಅಭಿಷೇಕ್ ಅವರನ್ನು ಈ ಘಟನೆ ಸಂಬಂಧ ಬಂಧನ ಮಾಡಲಾಗಿದೆ. ಇನ್ನು ರಮಣದೀಪ್ ಎಂ ಗ್ರೆವಾಲ್ ವಂಚನೆಗೆ ಒಳಗಾದ ವ್ಯಕ್ತಿ. ಪ್ರಸ್ತುತ ಅವರು ಯುಕೆ ನಲ್ಲಿ ವಾಸಿಸುತ್ತಿದ್ದಾರೆ. ವಂಚನೆ ಮಾಡಲು ಇವರ ಎನ್‌ಆರ್‌ಐ ಖಾತೆಯ ಹಳೆಯ ಫೋನ್ ಸಂಖ್ಯೆಯನ್ನು ಬಳಕೆ ಮಾಡಲಾಗಿದೆ.

ಈ ವಂಚನೆಯನ್ನು ಸಖತ್‌ ಆಗಿಯೇ ಪ್ಲ್ಯಾನ್‌ ಮಾಡಿಕೊಂಡು ಮಾಡಲಾಗಿದೆ. ಇದಕ್ಕಾಗಿ ಅನಿವಾಸಿ ಭಾರತೀಯರು(Non-Resident Indian), ಹಿರಿಯ ನಾಗರಿಕರು ಮತ್ತು ನಿಷ್ಕ್ರಿಯ ಖಾತೆದಾರರನ್ನು ಮೊದಲು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇದರ ಬೆನ್ನಲ್ಲೇ ಗ್ರೆವಾಲ್ ಅವರ ಬ್ಯಾಂಕ್ ಖಾತೆ ವಿವರ ಕಂಡುಬಂದಿದೆ. ಇದಾಗಿದ್ದೇ ತಡ ಈ ಖಾತೆಯಿಂದ ಹಣ ದೋಚಲು ಮಾಸ್ಟರ್‌ ಪ್ಲ್ಯಾನ್‌ ರೂಪಿಸಲಾಗಿದೆ.

ವಂಚಕರು ಗ್ರೆವಾಲ್ ಅವರ ಖಾತೆಗೆ ಲಿಂಕ್ ಆಗಿದ್ದ ಹಳೆಯ ಸಂಖ್ಯೆಯು ಯಾರ ಹೆಸರಲ್ಲಿ ಇದೆ ಎಂದು ಪತ್ತೆ ಮಾಡಿದ್ದಾರೆ. ವಂಚಕರು ಈ ಸಂಖ್ಯೆಗೆ ಸಂಪರ್ಕಿಸಿ ಕೆಲಸ ಕೊಡಿಸುವ ನೆಪದಲ್ಲಿ ಆತನಿಂದ ಗುರುತಿನ ದಾಖಲೆಗಳನ್ನು ಪಡೆದುಕೊಂಡು ಸಿಮ್‌ ಕಾರ್ಡ್‌ ಅನ್ನು ವರ್ಗಾಯಿಸಿಕೊಂಡಿದ್ದಾರೆ. ಇದಾದ ನಂತದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರಲ್ಲಿ ಓರ್ವ ಈ ಸಂಖ್ಯೆಯನ್ನು ಬಳಕೆ ಮಾಡಲು ಮುಂದಾಗಿದ್ದಾನೆ.

ನಂತರ ಈ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ಎನ್ ಆರ್ ಐ ಗ್ರಾಹಕರ ನೆಟ್ ಬ್ಯಾಂಕಿಂಗ್ ಅನ್ನು ತನ್ನ ಕಂಟ್ರೋಲ್‌ಗೆ ಪಡೆದುಕೊಂಡಿದ್ದಾರೆ. ಜೊತೆಗೆ ಹೊಸ ಇಮೇಲ್ ಐಡಿಯೊಂದಿಗೆ ಹೊಸ ಡೆಬಿಟ್ ಕಾರ್ಡ್ ಅನ್ನು ಸಹ ಆರ್ಡರ್ ಮಾಡಿದ್ದಾರೆ. ಬಳಿಕ ಎನ್ ಆರ್ ಐ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇನ್ನು ಹಣ ಕಾಣೆಯಾದ ಬಗ್ಗೆ ತಿಳಿದುಕೊಂಡ ಗ್ರೆವಾಲ್ ಪೊಲೀಸರಿಗೆ ದೂರು ನೀಡಿದ್ದಾರೆ

ಇದೇ ವೇಳೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಸುಮಾರು 17.35 ಲಕ್ಷ ರೂ. ಹಣ ಇರುವ ವಂಚಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಅವರ ವಶದಿಂದ ಒಂದು ಮ್ಯಾಕ್‌ಬುಕ್ ಏರ್, ನಾಲ್ಕು ಮೊಬೈಲ್ ಫೋನ್‌ಗಳು, ಮೂರು ಚೆಕ್ ಪುಸ್ತಕಗಳು ಮತ್ತು ಎಂಟು ಎಟಿಎಂ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬ್ಯಾಂಕ್‌ಗೆ ಫೋನ್‌ ಸಂಖ್ಯೆ ಲಿಂಕ್‌ ಮಾಡದಿದ್ದಕ್ಕೆ 57 ಲಕ್ಷ ಕಳೆದುಕೊಂಡ ವ್ಯಕ್ತಿ!

ಈ ಘಟನೆ ಬ್ಯಾಂಕ್‌ ಖಾತೆ ಹೊಂದಿರುವ ಅದೆಷ್ಟೋ ಜನರಲ್ಲಿ ಆಘಾತ ಉಂಟು ಮಾಡಿದೆ. ಈ ಹಗರಣದ ವಿಷಯ ಸ್ಕ್ಯಾಮರ್‌ಗಳು ಎಷ್ಟು ದಕ್ಷರು ಮತ್ತು ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ನೀವು ಎಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಮಗೆ ನೆನಪಿಗೆ ಬರುವಂತೆ ಮಾಡಿದೆ. ಮತ್ಯಾಕೆ ತಡ ನೀವು ಸಹ ಇದೇ ರೀತಿ ಹೊಸ ಫೋನ್‌ ನಂಬರ್‌ ಅನ್ನು ಲಿಂಕ್‌ ಮಾಡದೆ ಇದ್ದರೆ ಈ ಕ್ಷಣವೇ ಈ ಕೆಲಸ ಮಾಡಿಸಿಕೊಳ್ಳಿ. ಈ ಮೂಲಕ ಮುಂದಾಗುವ ಸಮಸ್ಯೆಗಳಿಂದ ಪಾರಾಗಿ.

Best Mobiles in India

English summary
57 lakh was defrauded to an Indian resident in Britain. He got scammed because he forgot to updae the new phone number in the bank after disconnecting the old SIM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+