ನಿಮ್ಮ ಫೋನಿನಲ್ಲಿ ಈ ವಾಲ್‌ಪೇಪರ್ ಇದ್ರೆ, ಕೂಡಲೇ ಡಿಲೀಟ್ ಮಾಡಿ!
ಬಹುತೇಕ ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಂಡ್ರಾಯ್ಡ್ ಓಎಸ್ ವ್ಯವಸ್ಥೆ ಇಷ್ಟವಾಗುತ್ತದೆ. ಅದರಲ್ಲಿಯೂ ಅವರ ಫೇವರೇಟ್ ಫೋನ್‌ಗಳ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯು ಸ್ಮಾರ್ಟ್‌ಫೋನ್‌ಗಳೇ ಫಸ್ಟ್ ಇರುತ್ತವೆ. ಆದ್ರೆ ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಅಚ್ಚರಿಪಡುವಂತಹ ಸಂಗತಿಯ ಟ್ವಿಟ್ಟ್‌ವೊಂದನ್ನು ಜನಪ್ರಿಯ ಟ್ವಿಟರ್ ಟೆಕ್ ಖಾತೆಯಾದ 'ಐಸ್ ಬ್ರಹ್ಮಾಂಡ' ಹೊರಹಾಕಿದೆ.
`WARNING!!!
— Ice universe (@UniverseIce) May 31, 2020
Never set this picture as wallpaper, especially for Samsung mobile phone users!
It will cause your phone to crash!
Don't try it!
If someone sends you this picture, please ignore it. pic.twitter.com/rVbozJdhkL
ಹೌದು, ಕೇವಲ ಒಂದು ನಿರ್ದಿಷ್ಟ್ ವಾಲ್‌ಪೇಪರ್ ಬಳಕೆದಾರರ ಆಂಡ್ರಾಯ್ಡ್ ಫೋನ್ ಅನ್ನು ಕ್ರ್ಯಾಶ್ ಮಾಡಲು ಕಾರಣವಾಗುತ್ತದೆ ಎಂದು ಇತ್ತೀಚಿಗೆ ಟ್ವಿಟ್ಟರ್ ಟೆಕ್ ಖಾತೆಯಾದ ಐಸ್ ಬ್ರಹ್ಮಾಂಡ ತನ್ನ ಟ್ವಿಟ್‌ನಲ್ಲಿ ಹೇಳಿದೆ. ಹಾಗೆಯೇ ಕ್ರ್ಯಾಶ್‌ಗೆ ಕಾರಣವಾಗುವ ವಾಲ್‌ಪೇಪರ್ ಅನ್ನು ಡೌನ್‌ಲೋಡ್ ಮಾಡದಿರಲು ಆಂಡ್ರಾಯ್ಡ್ ಬಳಕೆದಾರರಿಗೆ ಸೂಚಿಸಿದೆ. ಹಾಗದರೇ ಆ ವಾಲ್‌ಪೇಪರ್ ಯಾವುದು? ಯಾವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಕ್ರ್ಯಾಶ್‌ಗೆ ಕಾರಣವಾಗುತ್ತದೆ ಮತ್ತು ಆಂಡ್ರಾಯ್ಡ್ ಫೋನ್‌ಗಳಿಗೆ ಯಾಕೆ ಕ್ರ್ಯಾಶ್ ಮಾಡುತ್ತದೆ. ಎನ್ನುವ ಸಂಗತಿಗಳನ್ನು ತಿಳಿಯಲು ಮುಂದೆ ಓದರಿ

ಡೇಂಜರ್ ವಾಲ್‌ಪೇಪರ್
ಪರ್ವತಗಳು ಮತ್ತು ಮರಗಳಿಂದ ಆವೃತವಾಗಿರುವ ಶಾಂತಿಯುತವಾಗಿ ಕಾಣುವ ಸರೋವರ ಮತ್ತು ಶಾಂತಿಯುತ ಸೂರ್ಯಾಸ್ತದ ಬಣ್ಣವನ್ನು ಹೊಂದಿರುವ ಚಿತ್ರವೇ ಆಂಡ್ರಾಯ್ಡ್ ಫೋನ್ ಕ್ರ್ಯಾಶ್ ಮಾಡುತ್ತದೆ ಎಂದು ಐಸ್ ಬ್ರಹ್ಮಾಂಡ್ ಟ್ವಿಟ್‌ನಲ್ಲಿ ತಿಳಿಸಿದೆ.

ವಾಲ್‌ಪೇಪರ್ ಆಗಿ ಬಳಕೆಬೇಡ
ಆಂಡ್ರಾಯ್ಡ್ ಫೋನ್‌ಗಳ ಕ್ರ್ಯಾಶ್ ಮಾಡಲಿದೆ ಎನ್ನಲಾಗಿರುವ ಚಿತ್ರವನ್ನು ಆಂಡ್ರಾಯ್ಡ್ ಫೋನಿನ ವಾಲ್‌ಪೇಪರ್ ಆಗಿ ಬಳಕೆಮಾಡುವುದು ಸೂಕ್ತವಲ್ಲ ಎನ್ನಲಾಗಿದೆ. ಇದು ಫೋನ್ ಕಾರ್ಯನಿರ್ವಣೆಗೆ ಅಡ್ಡಿಪಡಿಸುತ್ತದೆ ಹಾಗೂ ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ.
ಆಂಡ್ರಾಯ್ಡ್ OS ಫೋನ್‌ಗಳಲ್ಲಿ ಮಾತ್ರ
ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಕೆಲವು ಸ್ಮಾರ್ಟ್‌ಫೋನ್‌ಗಳು ಈ ಚಿತ್ರವನ್ನು ಡೌನ್‌ಲೋಡ್ ಮಾಡುವುದರಿಂದ crashed/ಕ್ರ್ಯಾಶ್ ಆಗಿವೆ ಎಂದು ವರದಿಯಾಗಿದೆ.

ಈ ಫೋನ್‌ಗಳಲ್ಲಿ ಕ್ರ್ಯಾಶ್
ಒನ್‌ಪ್ಲಸ್ ಮತ್ತು ನೋಕಿಯಾ ಫೋನ್‌ಗಳ ಬಳಕೆದಾರರು ಹಾಗೂ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಮತ್ತು ಗೂಗಲ್‌ನ ಪಿಕ್ಸೆಲ್ ಫೋನ್‌ಗಳಲ್ಲಿ ಈ ವಾಲ್‌ಪೇಪರ್ ಆಂಡ್ರಾಯ್ಡ್ ಅನ್ನು ಕ್ರ್ಯಾಶ್ ಮಾಡುವುದು ಎಂದು ಕೆಲವು ಟೆಕ್ ಪೋರ್ಟಲ್‌ಗಳಲ್ಲಿ ದೂರಿದ್ದಾರೆ. ಆಂಡ್ರಾಯ್ಡ್ 10 ಓಎಸ್ ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿಯೂ ಕ್ರ್ಯಾಶ್ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ರ್ಯಾಶ್‌ಗೆ ಕಾರಣ ಏನು?
ಆಂಡ್ರಾಯ್ಡ್ ಓಎಸ್ ಸಿಸ್ಟಂ ಚಿತ್ರದ ಬಣ್ಣ ಜಾಗವನ್ನು ಪ್ರಕ್ರಿಯೆಗೊಳಿಸಲು (color space) ಹೆಣಗಾಡುತ್ತಿರುತ್ತವೆ. ಈ ದೋಷದ ಕಾರಣದಿಂದಾಗಿ ಆಂಡ್ರಾಯ್ಡ್ ಫೋನ್‌ಗಳ ಮೇಲೆ ಕ್ರ್ಯಾಶ್ ಪರಿಣಾಮ ಬೀರುತ್ತಿದೆ ಎಂದು ಡೆವಲಪರ್ ಟೆಕ್ ನ್ಯೂಸ್ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.

ಈ ಫೋನ್‌ಗಳಲ್ಲಿ ಕ್ರ್ಯಾಶ್ ಸಾಧ್ಯತೆ ಕಡಿಮೆ
ಹುವಾವೇ ಮೇಟ್ 20 ಪ್ರೊ ಮತ್ತು ಒನ್‌ಪ್ಲಸ್ ಕೆಲವು ಸ್ಮಾರ್ಟ್‌ಫೋನ್‌ಗಳಂತಹ ಡಿವೈಸ್‌ಗಳ ಕಾರ್ಯ ಪರಿಣಾಮ ಬೀರುವುದಿಲ್ಲ ಎಂದು ಜನಪ್ರಿಯ ಟೆಕ್ ಬ್ಲಾಗ್ ವರದಿ ಮಾಡಿದೆ.

ದೋಷ ಸರಿಪಡಿಸಲಿದೆ ಗೂಗಲ್
ನಿರ್ದಿಷ್ಟ ವಾಲ್‌ಪೇಪರ್‌ನಲ್ಲಿ ಆಂಡ್ರಾಯ್ಡ್ ಓಎಸ್ ಫೋನ್‌ಗಳ ಕ್ರ್ಯಾಶ್ ದೋಷವನ್ನು ಗೂಗಲ್ ಸಂಸ್ಥೆಯ ಸದ್ಯದಲ್ಲಿಯೇ ಸರಿಪಡಿಸುವ ಕಾರ್ಯನಿರ್ವಹಿಸಲಿದೆ ಎಂದು ಕೆಲವು ವರದಿಗಳು ಹೇಳಿವೆ.


Click it and Unblock the Notifications








