Home
ಸುದ್ದಿಜಾಲ

Robot: ವ್ಯಕ್ತಿಯನ್ನು ಕ್ರೂರವಾಗಿ ಕೊಂದುಹಾಕಿದ ರೋಬೋಟ್! ಇದಕ್ಕೆ ಯಾಕಿಷ್ಟು ಕೋಪ?, ಸಮಸ್ಯೆ ಆಗಿದ್ದೆಲ್ಲಿ?

ತಂತ್ರಜ್ಞಾನ (Technology) ಬಳಕೆ ವ್ಯಾಪಕವಾಗುತ್ತಿದ್ದಂತೆ ಹಾಗೂ ಹೊಸ ಹೊಸ ಅನ್ವೇಷಣೆ ಹೆಚ್ಚಾಗುತ್ತಿದ್ದಂತೆ ಮಾನವ ತನ್ನ ಅಸ್ತಿತ್ವದ ಬಗ್ಗೆ ಆಲೋಚನೆ ಮಾಡುವ ಕಾಲ ಸನ್ನಿಹಿತವಾಗಿದೆ. ಅಂದರೆ ಯಾವುದೇ ಸಮಸ್ಯೆ ಇಲ್ಲದೆ ವಾಸ ಮಾಡುವುದು ಎಲ್ಲಿ ಎಂಬ ಚಿಂತೆ ಈಗ ಕಾಡುವಂತೆ ಆಗಿದೆ. ಈ ಪೀಠಿಕೆ ಯಾಕೆ ಅಂದ್ರೆ ಇಲ್ಲೊಂದು ರೋಬೋಟ್‌ ಮನುಷ್ಯನನ್ನೇ ಕೊಂದು ಹಾಕಿದೆ.

ಹೌದು, ರೋಬೋಟ್ (Robot) ಎಂದಾಕ್ಷಣ ಹೊಸ ಅನ್ವೇಷಣೆಗೆ ಹಿಡಿದ ಕನ್ನಡಿಯಂತೆ ಎಂದು ಬಣ್ಣಿಸಲಾಗುತ್ತಿತ್ತು. ಆದರೆ, ಈ ಅನ್ವೇಷಣೆಗಳೇ ಮಾನವರಿಗೆ ಮಾರಕವಾಗುವುದಲ್ಲಿ ಯಾವುದೇ ಸಂಶಯ ಇಲ್ಲ ಎಂಬಂತೆ ಈ ಘಟನೆ ನಡೆದುಹೋಗಿದೆ. ಈ ಮೂಲಕ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಹಾಗಿದ್ರೆ, ಏನಿದು ಘಟನೆ?, ಯಾಕೆ ಈ ರೋಬೋಟ್ ಮಾನವನ್ನು ಕೊಂದು ಹಾಕಿದೆ?, ಮುಂದಿನ ದಿನಗಳಲ್ಲಿ ಈ ರೋಬೋಟ್‌ ಬಳಕೆ ಎಷ್ಟು ಸರಿ ಅಥವಾ ಬಳಕೆ ಮಾಡಲೇಬಾರದೋ ಎಂಬ ಮಾಹಿತಿ ಇಲ್ಲಿದೆ ನೋಡಿ.

ವ್ಯಕ್ತಿಯನ್ನು ಕ್ರೂರವಾಗಿ ಕೊಂದುಹಾಕಿದ ರೋಬೋಟ್!

ವ್ಯಕ್ತಿಯನ್ನು ಕೊಂದ ರೋಬೋಟ್‌: ಇತ್ತೀಚೆಗಂತೂ ಮುಂದುವರೆದ ಹಲವಾರು ಕಂಪೆನಿಗಳು ಕೆಲಸಕ್ಕಾಗಿ ರೋಬೋಟ್‌ ಬಳಕೆ ಮಾಡಿಕೊಳ್ಳುತ್ತಿವೆ. ಇವು ಮಾನವ ನಿರ್ಮಿತ ಡಿವೈಸ್‌ಗಳಾದರೂ ಮಾನವನನ್ನೇ ಕೊಲ್ಲುವ ಮಟ್ಟಕ್ಕೆ ತಲುಪುತ್ತವೆ ಎಂದರೆ ಮುಂದಿನ ದಿನಗಳಲ್ಲಿ ಇವುಗಳ ಬಳಕೆ ಬಗ್ಗೆ ಯೋಚನೆ ಮಾಡುವಂತ ಪರಿಸ್ಥಿತಿ ಬಂದೊದಗಿದೆ. ಯಾಕೆಂದರೆ ಈ ರೋಬೋಟ್‌ ತರಕಾರಿ ಪೆಟ್ಟಿ ಎಂದು ತಪ್ಪಾಗಿ ಭಾವಿಸಿ ಕೆಲಸಗಾರನನ್ನು ಕ್ರೂರವಾಗಿ ಕೊಂದುಹಾಕಿದೆ.

ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆ ನಂತರ ಎಲ್ಲಾ ಕಡೆ ದೊಡ್ಡ ಸಂಚಲನವೇ ಉಂಟಾಗಿದೆ. ರೊಬೊಟಿಕ್ಸ್ ಕಂಪನಿಯ ಉದ್ಯೋಗಿಗಳು ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನ ವಿತರಣಾ ಕೇಂದ್ರದಲ್ಲಿ ರೋಬೋಟ್‌ನ ಸೆನ್ಸರ್‌ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಲ್ಲಿನ ಸುದ್ದಿ ಸಂಸ್ಥೆಗಳ ಪ್ರಕಾರ ಮೆಣಸಿನಕಾಯಿಯ ಪೆಟ್ಟಿಗೆಗಳನ್ನು ರೋಬೋಟ್ ತನ್ನ ತೋಳುಗಳಿಂದ ಎತ್ತಿಕೊಂಡು ಪ್ಯಾಲೆಟ್‌ಗಳ ಮೇಲೆ ಇರಿಸುವ ಕೆಲಸ ಮಾಡುತ್ತಿತ್ತು. ಆದರೆ, ಈ ಬಾರಿ ಅದು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆಯಂತೆ. ಅಂದರೆ ಪೆಟ್ಟಿಗೆಯ ಬದಲಿಗೆ ವ್ಯಕ್ತಿಯನ್ನು ಎತ್ತಿಕೊಂಡು ಕನ್ವೇಯರ್ ಬೆಲ್ಟ್ನಲ್ಲಿ ಇರಿಸಿದೆ. ಇದರಿಂದ ಆತನ ಮುಖ ಮತ್ತು ಎದೆ ಭಾಗ ನಜ್ಜುಗುಜ್ಜಾಗಿದೆ.

ವ್ಯಕ್ತಿಯನ್ನು ಕ್ರೂರವಾಗಿ ಕೊಂದುಹಾಕಿದ ರೋಬೋಟ್!

ಗಾಯಗೊಂಡ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡ ಪರಿಣಾಮ ಆತ ಸಾವಿಗೀಡಾಗಿದ್ದಾನೆ. ಸಾವಿಗೀಡಾದ 40 ವರ್ಷದ ಉದ್ಯೋಗಿ ಪೆಪ್ಪರ್ ಸ್ಕ್ರೂಟಿನಿ ಪ್ಲಾಂಟ್‌ನಲ್ಲಿ ಸೆನ್ಸರ್ ಅನ್ನು ಪರಿಶೀಲಿಸುತ್ತಿದ್ದ. ಈ ಘಟನೆಯ ನಂತರ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಈ ಘಟಕದ ಮಾಲೀಕತ್ವದ ರಫ್ತು ಕೃಷಿ ಸಂಕೀರ್ಣದ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದ ರೊಬೊಟಿಕ್ಸ್ ತಜ್ಞ ಕ್ರಿಸ್ಟೋಫರ್ ಅಟ್ಕೆಸನ್, ರೋಬೋಟ್‌ಗಳು ಸೀಮಿತ ಇಂದ್ರಿಯಗಳನ್ನು ಹೊಂದಿರಲಿವೆ. ಆದ್ದರಿಂದ ಅವುಗಳ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವುಗಳಿಗೆ ಸೀಮಿತ ಅರಿವು ಮಾತ್ರ ಇರಲಿದೆ ಎಂದು ಹೇಳಿದ್ದಾರೆ. ಅಂದರೆ, ಅದಕ್ಕೆ ಜೀವ ಇರುವ ವಸ್ತುಗಳು ಯಾವುವು?, ಜೀವ ಇಲ್ಲದಿರುವ ವಸ್ತುಗಳು ಯಾವುದು ಎಂಬುದನ್ನು ಕಂಡುಕೊಳ್ಳಲು ಕಷ್ಟವಾಗಿದೆ.

ಇನ್ನು ಈ ವರ್ಷದ ಮೇ ಆರಂಭದಲ್ಲಿ ದಕ್ಷಿಣ ಕೊರಿಯಾದಲ್ಲಿ ರೋಬೋಟ್ ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕದಲ್ಲೂ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಅಮೆರಿಕನ್ ಜರ್ನಲ್ ಆಫ್ ಇಂಡಸ್ಟ್ರಿಯಲ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ 1992 ಮತ್ತು 2017 ರ ನಡುವೆ ಯುಎಸ್‌ನಲ್ಲಿ ಕೈಗಾರಿಕಾ ರೋಬೋಟ್‌ಗಳಿಂದ ಕನಿಷ್ಠ 41 ಜನರು ಸಾವಿಗೀಡಾಗಿದ್ದಾರಂತೆ.

ವ್ಯಕ್ತಿಯನ್ನು ಕ್ರೂರವಾಗಿ ಕೊಂದುಹಾಕಿದ ರೋಬೋಟ್!

ರೋಬೋಟ್ ಬಳಕೆ ಸಮಸ್ಯೆಯೇ?: ರೋಬೋಟ್‌ಗಳು ಅಪರೂಪವಾಗಿ ತಪ್ಪುಗಳನ್ನು ಮಾಡುತ್ತವೆ. ಆದರೆ ಮಾನವ ಕೆಲಸಗಾರರಿಗಿಂತ ಹೆಚ್ಚು ನಿಖರವಾಗಿರುತ್ತವೆ. ಅವು ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಕೆಲಸ ಮಾಡುತ್ತವೆ. ಜೊತೆಗೆ ಮಾನವ ದೋಷದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ, ರೋಬೋಟ್‌ಗಳು ತುಂಬಾ ದುಬಾರಿಯಾಗಿರುತ್ತವೆ. ಆರಂಭಿಕ ವೆಚ್ಚ, ನಿರ್ವಹಣೆ, ಹೆಚ್ಚುವರಿ ಘಟಕಗಳ ಅಗತ್ಯತೆ ಮತ್ತು ಕಾರ್ಯವನ್ನು ಮಾಡಲು ಪ್ರೋಗ್ರಾಮ್ ಮಾಡಬೇಕಾದ ವಿಷಯಗಳು ಪ್ರಮುಖವಾಗಿವೆ. ಸರಿಯಾದ ರೀತಿಯಲ್ಲಿ ಪ್ರೋಗ್ರಾಮ್ ಮಾಡಲಿಲ್ಲ ಎಂದರೆ ಇಲ್ಲಿ ಆದ ಘಟನೆಗಳು ಮತ್ತೇ ಮರುಕಳಿಸುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.

ಇದರೊಂದಿಗೆ ಎಲ್ಲಾ ಕಡೆ ರೋಬೋಟ್‌ ಬಳಕೆ ಮಾಡಿದ್ರೆ ಕಾರ್ಮಿಕ ವಿಭಾಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾದರೂ, ರೋಬೋಟ್‌ಗಳು ಮತ್ತು ಯಾಂತ್ರೀಕೃತಗೊಂಡವು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಟೆಕ್ ವಲಯದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತವೆ. ಇದು ಒಟ್ಟು ದೇಶೀಯ ಉತ್ಪನ್ನದ ಹೆಚ್ಚಳಕ್ಕೆ ಕಾರಣವಾಗಬಹುದು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ಇವುಗಳನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕಿದೆ.

Best Mobiles in India

English summary
A robot killed a man at an agricultural produce distribution center in South Gyeongsang Province, South Korea.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+