Home
ಸುದ್ದಿಜಾಲ

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ದುರ್ಬಲತೆ; ಸರ್ಕಾರದ ಗಂಭೀರ ಎಚ್ಚರಿಕೆ.. ಈಗಲೇ ಈ ಕೆಲಸ ಮಾಡಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ (Android smartphone) ಬಳಕೆದಾರರು ಆಗಾಗ್ಗೆ ವಿವಿಧ ರೀತಿಯಲ್ಲಿ ಸಮಸ್ಯೆಗೆ ಸಿಲುಕುತ್ತಲೇ ಇರುತ್ತಾರೆ. ಅದರಂತೆ ಈಗ ಸರ್ಕಾರ ಈ ಎಲ್ಲಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಹೌದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ದುರ್ಬಲತೆ ಪತ್ತೆ ಮಾಡಿದ್ದು, ಸರ್ಕಾರವು ಎಚ್ಚರಿಕೆ ನೀಡಿದೆ, ವೈಯಕ್ತಿಕ ಮಾಹಿತಿಯನ್ನು ಕದಿಯಲು ಹ್ಯಾಕರ್‌ಗಳಿಗೆ ಅವಕಾಶ ನೀಡಬಹುದು ಎಂದು ತಿಳಿಸಲಾಗಿದೆ. ಹಾಗಿದ್ರೆ, ಏನಿದು ದುರ್ಬಲತೆ?, ಇದರಿಂದ ಎಚ್ಚರಿಕೆ ವಹಿಸಿಕೊಳ್ಳುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ದುರ್ಬಲತೆ; ಸರ್ಕಾರದ ಗಂಭೀರ ಎಚ್ಚರಿಕೆ..

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಎಚ್ಚರಿಕೆ: ಭಾರತೀಯ ಸರ್ಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಬಹು ಆವೃತ್ತಿಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ದೋಷಗಳ ಬಗ್ಗೆ ಹೆಚ್ಚಿನ ತೀವ್ರತೆಯ ಎಚ್ಚರಿಕೆಯನ್ನು ನೀಡಿದೆ. ಸಿಇಆರ್‌ಟಿ-ಇನ್ ವಲ್ನರಬಿಲಿಟಿ ನೋಟ್ CIVN-2024-0161 ರಲ್ಲಿ ಗುರುತಿಸಲಾದ ಈ ದುರ್ಬಲತೆಗಳು, ಆಂಡ್ರಾಯ್ಡ್‌ ಬಳಕೆದಾರರ ಗೌಪ್ಯತೆ ಮತ್ತು ಡಿವೈಸ್‌ನ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂದು ತಿಳಿಸಿದೆ.

ಸಿಇಆರ್‌ಟಿ ಪ್ರಕಾರ ಫ್ಲ್ಯಾಗ್ ಮಾಡಲಾದ ದೋಷಗಳು ಆಂಡ್ರಾಯ್ಡ್ ಸಿಸ್ಟಮ್‌ನ ವಿವಿಧ ಘಟಕಗಳಲ್ಲಿ ಇರುತ್ತವೆಯಂತೆ. ಇದರಲ್ಲಿ ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ನವೀಕರಣಗಳು, ಕರ್ನಲ್, ಕರ್ನಲ್ ಎಲ್‌ಟಿಎಸ್, ಆರ್ಮ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಘಟಕಗಳು, ಕ್ವಾಲ್ಕಾಮ್ ಘಟಕಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳು ಸೇರಿವೆ.

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ದುರ್ಬಲತೆ; ಸರ್ಕಾರದ ಗಂಭೀರ ಎಚ್ಚರಿಕೆ..

ಈ ದೋಷದಿಂದ ಆಗುವ ಅಪಾಯವೇನು?: ನಿಮ್ಮ ಫೋನ್‌ಗಳಲ್ಲಿ ಈ ದುರ್ಬಲತೆ ಆಂಡ್ರಾಯ್ಡ್ ಬಳಕೆದಾರರಿಗೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಿಳಿಸಲಾಗಿದೆ. ಅಂದರೆ ಇದು ಲಾಗಿನ್ ರುಜುವಾತುಗಳು, ಹಣಕಾಸಿನ ಮಾಹಿತಿ, ಸಂಪರ್ಕಗಳು, ಮೆಸೆಜ್‌ಗಳು ಮತ್ತು ಬ್ರೌಸಿಂಗ್ ಇತಿಹಾಸದಂತಹ ವೈಯಕ್ತಿಕ ಡೇಟಾವನ್ನು ಕದಿಯುವ ಕೆಲಸ ಮಾಡಲಿದೆ. ಇದರ ಜೊತೆಗೆ ಹ್ಯಾಕರ್‌ಗಳು ಡಿವೈಸ್‌ನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಈ ದುರ್ಬಲತೆಗಳನ್ನು ಬಳಸಿಕೊಳ್ಳಬಹುದು.

ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್‌ ಮಾಡಲು ಬಳಕೆದಾರರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಇಚ್ಛೆಯಂತೆ ಡೇಟಾವನ್ನು ಕದಿಯಲು ಅವರಿಗೆ ಅವಕಾಶ ನೀಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಡಿವೈಸ್‌ನ ಕಾರ್ಯಚಟುವಟಿಕೆಯನ್ನು ಅಡ್ಡಿಪಡಿಸಲಿದೆ. ಕೆಟ್ಟ ಸನ್ನಿವೇಶದಲ್ಲಿ, ಈ ದೋಷಗಳನ್ನು ಬಳಸಿಕೊಳ್ಳುವುದು ಆಂಡ್ರಾಯ್ಡ್ ಡಿವೈಸ್‌ ಅನ್ನು ನಿಷ್ಪ್ರಯೋಜಕವಾಗಿಸಬಹುದು ಅಥವಾ ಸಿಸ್ಟಮ್ ಅನ್ನು ಶಾಶ್ವತವಾಗಿ ಹಾನಿಗೊಳಿಸಬಹುದು.

ಯಾವ ಆಂಡ್ರಾಯ್ಡ್‌ ಆವೃತ್ತಿಗಳ ಮೇಲೆ ಪರಿಣಾಮ ಬೀರುತ್ತವೆ?: ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಪ್ರಕಾರ ಈಗಾಗಲೇ ಬಳಕೆಯಲ್ಲಿರುವ ಹಲವಾರು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಈ ಸಮಸ್ಯೆ ಕಂಡುಬರಲಿದೆಯಂತೆ. ಅಂದರೆ ಆಂಡ್ರಾಯ್ಡ್ 12, ಆಂಡ್ರಾಯ್ಡ್ 12 ಎಲ್, ಆಂಡ್ರಾಯ್ಡ್ 13, ಆಂಡ್ರಾಯ್ಡ್ 14 ಓಎಸ್‌ನಲ್ಲಿ ರನ್‌ ಆಗುವ ಫೋನ್‌ಗಳು ಈ ಸಮಸ್ಯೆಗಳಿಗೆ ಸಿಲುಕಲಿವೆ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವು ಈ ಯಾವುದೇ ಆಂಡ್ರಾಯ್ಡ್‌ ಆವೃತ್ತಿಯನ್ನು ಬಳಸುತ್ತಿದ್ದರೆ, ನಿಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ದುರ್ಬಲತೆ; ಸರ್ಕಾರದ ಗಂಭೀರ ಎಚ್ಚರಿಕೆ..

ನಿಮ್ಮ ಡಿವೈಸ್‌ ಅನ್ನು ಹೇಗೆ ರಕ್ಷಿಸುವುದು?: ನಿಮ್ಮ ಡಿವೈಸ್‌ಗಳನ್ನು ರಕ್ಷಿಸಲು, ತಮ್ಮ ಸಾಫ್ಟ್‌ವೇರ್ ಅನ್ನು ತುರ್ತಾಗಿ ನವೀಕರಿಸಲು ಸರ್ಕಾರ ಬಳಕೆದಾರರನ್ನು ಒತ್ತಾಯಿಸಿದೆ. ಗಮನಾರ್ಹವಾಗಿ, ಗೂಗಲ್ ಈಗಾಗಲೇ ದೋಷಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನ ಹೊಸ ಆವೃತ್ತಿಗಳಲ್ಲಿನ ವರ್ಧನೆಗಳಿಂದ ಆಂಡ್ರಾಯ್ಡ್‌ ನಲ್ಲಿನ ಅನೇಕ ಸಮಸ್ಯೆಗಳ ದುರ್ಬಳಕೆಯು ಹೆಚ್ಚು ಕಷ್ಟಕರವಾಗಿದೆ. ಸಾಧ್ಯವಿರುವಲ್ಲಿ ಆಂಡ್ರಾಯ್ಡ್‌ ನ ಇತ್ತೀಚಿನ ಆವೃತ್ತಿಗೆ ನವೀಕರಿಸಲು ನಾವು ಎಲ್ಲಾ ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ ಎಂದು ಅಧಿಕೃತ ಪ್ಯಾಚ್ ಟಿಪ್ಪಣಿ ಬಿಡುಗಡೆಯಲ್ಲಿ ಗೂಗಲ್‌ ಹೇಳಿಕೆ ನೀಡಿದೆ. ಅದಾಗ್ಯೂ ನೀವು ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕಿದೆ, ಅವುಗಳು ಈ ಕೆಳಕಂಡಂತೆ ಇವೆ.

ಅನುಮಾನಾಸ್ಪದ ಆಪ್‌ಗಳ ಬಗ್ಗೆ ಎಚ್ಚರ: ಗೂಗಲ್‌ ಪ್ಲೇ ಸ್ಟೋರ್‌ ನಂತಹ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ. ವಿಶ್ವಾಸಾರ್ಹವಲ್ಲದ ವೆಬ್‌ಸೈಟ್‌ಗಳು ಅಥವಾ ಥರ್ಡ್-ಪಾರ್ಟಿ ಆಪ್ ಸ್ಟೋರ್‌ಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಈ ಆಪ್‌ಗಳು ದುರುದ್ದೇಶಪೂರಿತವಾಗಿರಬಹುದು ಮತ್ತು ನಿಮ್ಮ ಡಿವೈಸ್‌ನಲ್ಲಿ ದೋಷಗಳನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಅನುಮತಿಗಳನ್ನು ನೀಡುವಾದ ಎಚ್ಚರ: ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡುವಾದ ಅವರು ವಿನಂತಿಸುವ ಅನುಮತಿಗಳ ಬಗ್ಗೆ ಹೆಚ್ಚು ಗಮನಹರಿಸಿ. ಆಪ್‌ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡಿ. ನಿಮ್ಮ ಡಿವೈಸ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಆಪ್‌ಗಳಿಂದ ಅನಗತ್ಯ ಅನುಮತಿಗಳನ್ನು ಹಿಂತೆಗೆದುಕೊಳ್ಳಿ.

ಎರಡು-ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸಿ (2FA): 2FA ನಿಮ್ಮ ಆನ್‌ಲೈನ್ ಖಾತೆಗಳಿಗೆ ಭದ್ರತೆಯ ಹೆಚ್ಚುವರಿ ಲೇಯರ್‌ ಅನ್ನು ನೀಡುವ ಕೆಲಸ ಮಾಡುತ್ತದೆ. ಆಕ್ರಮಣಕಾರರು ನಿಮ್ಮ ಲಾಗಿನ್ ರುಜುವಾತುಗಳನ್ನು ಕದಿಯುತ್ತಿದ್ದರೂ ಸಹ ಪ್ರವೇಶವನ್ನು ಪಡೆಯುವುದು ಮಾತ್ರ ಕಷ್ಟಕರವಾಗಿಸುತ್ತದೆ. ಹೀಗಾಗಿ ಈ ಮೇಲೆ ತಿಳಿಸಿದ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಇನ್ನಷ್ಟು ಭದ್ರವಾಗಿ ನಿಮ್ಮ ಬಳಿ ಇರಿಸಿಕೊಳ್ಳಬಹುದಾಗಿದೆ.

Best Mobiles in India

English summary
A vulnerability has been found in Android smartphones. government has warned could allow hackers to steal personal information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+