Home
ಸುದ್ದಿಜಾಲ

ಕಿಡ್ನಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರೆ ಈ ಡಿವೈಸ್‌ ಅಗತ್ಯ, 100ರೂ.ಗಳ ಆಸುಪಾಸಿನಲ್ಲಿ ಲಭ್ಯ!

ಇಂದಿನ ದಿನಗಳಲ್ಲಿ ಹಲವಾರು ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವಾರು ಕಾಣಗಳು ಇರಬಹುದು. ಆದರೆ, ಪ್ರಮುಖವಾಗಿ ನೀರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುಡಿಯುವ ನೀರು ಅಶುದ್ಧವಾಗಿದ್ದರೆ, ಅದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ನೀರಿನಿಂದ ಉಂಟಾಗುವ ರೋಗಗಳಲ್ಲಿ ಮೂತ್ರಪಿಂಡ ವೈಫಲ್ಯವೂ ಒಂದು.

ಹೌದು, ಇತ್ತೀಚಿನ ದಿನಗಳಲ್ಲಿ ಕಿಡ್ನಿ ವೈಫಲ್ಯದಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ಕಿಡ್ನಿ ರೋಗಿ ಆಗಲು ಬಯಸದಿದ್ದರೆ, ಅಗತ್ಯವಾಗಿ ಶುದ್ಧ ನೀರನ್ನು ಕುಡಿಯಲೇಬೇಕು. ನೀರು ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇವುಗಳು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೆ, ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ. ಹಾಗಿದ್ರೆ, ಖನಿಜಗಳು ಸರಿಯಾಗಿವೆ ಎಂದು ಕಂಡುಕೊಳ್ಳುವುದು ಹೇಗೆ?, ಯಾವೆಲ್ಲಾ ಡಿವೈಸ್‌ಗಳು ಆಫರ್‌ ಬೆಲೆಗೆ ಲಭ್ಯ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಿಡ್ನಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರೆ ಈ ಡಿವೈಸ್‌ ಅಗತ್ಯ..

ನೀರಿನಿಂದ ಕಿಡ್ನಿ ಸಮಸ್ಯೆ: ಅನೇಕ ಜನರು ಬೋರ್‌ನಿಂದ ನೀರು ಕುಡಿಯುತ್ತಾರೆ. ಬೋರ್ ನೀರು ನಮ್ಮ ಕಿಡ್ನಿಗೆ ಹಾನಿ ಮಾಡುವ ಅಂಶಗಳನ್ನು ಹೊಂದಿರುತ್ತದೆ. ಏಕೆಂದರೆ ವಿವಿಧ ಪ್ರದೇಶಗಳಲ್ಲಿ ವಿವಿಧ ಖನಿಜಗಳು ಅಂತರ್ಜಲದಲ್ಲಿ ಇರಲಿದ್ದು, ಇವು ಸೋಡಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಪರಿಣಾಮ ಇದನ್ನು ನೇರವಾಗಿ ಅಂದರೆ ಬಿಸಿ ಮಾಡದೆ ಅಥವಾ ಫಿಲ್ಟರ್‌ ಮಾಡದೆ ಕುಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಟಿಡಿಎಸ್ ಮೀಟರ್: ಇಂದಿನ ದಿನಗಳಲ್ಲಿ ಅನೇಕ ಮನೆಗಳಲ್ಲಿ ಆರ್‌ಓ ವಾಟರ್ ಪ್ಯೂರಿಫೈಯರ್ಗಳನ್ನು ಬಳಕೆ ಮಾಡಲಾಗುತ್ತದೆ. ಇದು ಉಪ್ಪು ನೀರನ್ನು ಶುದ್ಧೀಕರಿಸುತ್ತದೆ ಜೊತೆಗೆ ನೀರನ್ನು ಸಿಹಿಗೊಳಿಸುತ್ತದೆ. ಅದಾಗ್ಯೂ ನಿಮ್ಮ ಮನೆಯಲ್ಲಿನ ಕುಡಿಯುವ ನೀರನ್ನು ಟಿಡಿಎಸ್ ಮೀಟರ್ ಮೂಲಕ ಪರೀಕ್ಷಿಸುವುದು ಅಗತ್ಯವಾಗಿದೆ. ಈ ವೇಳೆ 300 mg ನಿಂದ 600 mg ರೇಟಿಂಗ್‌ ಇದ್ದರೆ ನಿಮ್ಮ ಆರ್‌ಓ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದರ್ಥ.

ಟಿಡಿಎಸ್ ಮೀಟರ್ ಬೆಲೆ ಎಷ್ಟು?: ಟಿಡಿಎಸ್ ಮೀಟರ್ ಗಳು ಆನ್‌ಲೈನ್‌ನಲ್ಲಿ ಲಭ್ಯ ಇವೆ. ಪ್ರತಿ ಬ್ರ್ಯಾಂಡ್‌ನ ಡಿವೈಸ್‌ ಬೇರೆ ಬೇರೆ ಬೆಲೆ ಹೊಂದಿವೆಯಾದರೂ 99ರೂ.ಗಳಿಂದ ಆರಂಭ ಆಗುತ್ತದೆ. ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಹೊರತುಪಡಿಸಿ ನೀವು ನಿಮ್ಮ ಹತ್ತಿರದ ಮಾರುಕಟ್ಟೆಯಲ್ಲಿರುವ ಮೆಡಿಕಲ್ ಸ್ಟೋರ್ ಅಥವಾ ಹಾರ್ಡ್‌ವೇರ್ ಸ್ಟೋರ್‌ನಿಂದಲೂ ಇದನ್ನು ಖರೀದಿ ಮಾಡಬಹುದು. ಹಾಗಿದ್ರೆ, ಆನ್‌ಲೈನ್‌ನಲ್ಲಿ ಲಭ್ಯ ಇರುವ ಡಿವೈಸ್‌ಗಳ ಬೆಲೆ ಎಷ್ಟು ಅನ್ನೋದನ್ನು ನೋಡೋಣ ಬನ್ನಿ.

ಥೆಮಿಸ್ಟೊ TH-TDS10 ಡಿಜಿಟಲ್ TDS ಮೀಟರ್: ಈ ಡಿವೈಸ್‌ ಅಮೆಜಾನ್‌ನಲ್ಲಿ 136ರೂ.ಗಳ ಬೆಲೆ ಹೊಂದಿದೆ. ಹೆಚ್ಚಿನ ನಿಖರತೆಯ ಮಾಹಿತಿ ಪಡೆಯಲು, ಪ್ರೀಮಿಯಂ ಗುಣಮಟ್ಟದ ಟೈಟಾನಿಯಂ ಮಿಶ್ರಲೋಹದಿಂದ ನಿರ್ಮಾಣ ಆಗಿದೆ. ಬ್ಯಾಟರಿಗಳನ್ನು ಸಂರಕ್ಷಿಸಲು ನೀವು ಇದನ್ನು ಯಾವಾಗ ಬಳಕೆ ಮಾಡುವುದಿಲ್ಲವೋ ಆಗ ಅಂದರೆ 5 ನಿಮಿಷಗಳ ನಂತರ ವಿದ್ಯುತ್ ವಾಹಕತೆಯ ಮೀಟರ್ ಆಟೋಮ್ಯಾಟಿಕ್‌ ಆಗಿ ಸ್ಥಗಿತಗೊಳ್ಳುತ್ತದೆ. ಅಕ್ವೇರಿಯಂ, ಪೂಲ್ ಅಥವಾ ಯಾವುದೇ ನೀರಿನ ಮೂಲಗಳನ್ನು ಈ ಮೂಲಕ ಪರೀಕ್ಷೆ ಮಾಡಬಹುದು.

ಜಿಇ ಫಿಲ್ಟರೇಶನ್ ಟಿಡಿಎಸ್ ಮೀಟರ್: ಇದನ್ನು ನೀವು 268 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಅತ್ಯುತ್ತಮ ರಿಸಲ್ಟ್‌ ನೀಡುವ ಡಿವೈಸ್‌ ಆಗಿದ್ದು, ಬ್ಯಾಟರಿ ಆಯ್ಕೆ ಮೂಲ ಕೆಲಸ ಮಾಡುವ ಈ ಡಿವೈಸ್‌ ಎಲ್‌ಸಿಡಿ ಸ್ಕ್ರೀನ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೂರು ವಿವಿಧ ಆಯ್ಕೆಯ ಕೀ ಬಟನ್‌ ಹೊಂದಿದ್ದು, ಈ ಮೂಲಕ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕೆ ಪ್ರೊಟೆಕ್ಟ್‌ ಕ್ಯಾಪ್‌ ಆಯ್ಕೆ ಸಹ ಇದೆ.

ಕಿಡ್ನಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರೆ ಈ ಡಿವೈಸ್‌ ಅಗತ್ಯ..

ಅಯೋನಿಕ್ಸ್ 3-ಇನ್-1 TDS ಮೀಟರ್: ಈ ಒಂದೇ ಡಿವೈಸ್‌ ಬರೋಬ್ಬರಿ ಮೂರು ಕಾರ್ಯ ಮಾಡಲಿದೆ. ಇದು ಸಹ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಅಗತ್ಯ ಮಾಹಿತಿ ನೀಡಲಿದ್ದು, ಮೂರು ಕೀ ಬಟನ್‌ ಆಯ್ಕೆ ಪಡೆದುಕೊಂಡಿದೆ. ಇನ್ನು ಇದರ ಸಾಮಾನ್ಯ ದರ 999ರೂ.ಗಳಾಗಿದ್ದು, ಅಮೆಜಾನ್‌ನಲ್ಲಿ ಇದಕ್ಕೆ 70% ಡಿಸ್ಕೌಂಟ್‌ ನೀಡಲಾಗಿದೆ. ಈ ಮೂಲಕ ನೀವು 299ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Nowadays the number of people dying due to kidney failure is increasing. If you don't want to become a kidney patient, you must drink pure water. Water contains many minerals. If these are not in the right amount, your kidneys will be damaged. For this TDS meter can be used to detect water purity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+