Home
ಸುದ್ದಿಜಾಲ

ಒಂದೇ ತಿಂಗಳಿಗೆ 1 ಕೋಟಿ ಕಳೆದುಕೊಂಡ ಟೆಕ್ಕಿ, ಮ್ಯಾಟ್ರಿಮೋನಿಯಲ್ ಸೈಟ್‌ ಬಳಸೋ ಮುನ್ನ ಎಚ್ಚರ

ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಫುಲ್‌ಸ್ಟಾಪ್‌ ಇಡಲು ಸಾಧ್ಯವೇ ಇಲ್ಲವೆಂಬಂತೆ ಆಗಿದೆ. ನಿತ್ಯವೂ ಜನರು ಒಂದಲ್ಲಾ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ. ಜೊತೆಗೆ ಈ ಸಂಬಂಧ ದೂರು ದಾಖಲಾಗುತ್ತಲೇ ಇವೆ. ಆದರೆ, ಈ ಸ್ಕ್ಯಾಮರ್‌ಗಳು ಮಾತ್ರ ಹೊಸ ಹೊಸ ರೀತಿಯಲ್ಲಿ ಜನರನ್ನು ವಂಚಿಸುವುದನ್ನು ಮುಂದುವರೆಸಿದ್ದಾರೆ. ಇದರ ಭಾಗವಾಗಿಯೇ ಈಗ ಸಾಫ್ಟ್‌ವೇರ್ ಇಂಜಿನಿಯರ್ ಒಂದು ತಿಂಗಳಲ್ಲಿ 1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಹೌದು, ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯಿಂದ ಅಹಮದಾಬಾದ್ ಸಾಫ್ಟ್‌ವೇರ್ ಇಂಜಿನಿಯರ್ ಮೋಸಹೋಗಿದ್ದು, ಈ ಮೂಲಕ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಏನಿದು ಘಟನೆ?, ಇವರಿಗೆ ಹೇಗೆ ವಂಚನೆ ಮಾಡಲಾಯಿತು?, ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

1 ಕೋಟಿ ಕಳೆದುಕೊಂಡ ಟೆಕ್ಕಿ, ಮ್ಯಾಟ್ರಿಮೋನಿಯಲ್ ಸೈಟ್‌ ಬಳಸೋ ಮುನ್ನ ಎಚ್ಚರ

ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ ವಂಚನೆ: ಅಹಮದಾಬಾದ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾದ ಮಹಿಳೆ ಮೋಸ ಮಾಡಿದ್ದಾಳೆ. ಅದರಂತೆ ಆಕೆ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ತಿಳಿಸಿದ್ದು, ಈ ಮೂಲಕ ಸುಮಾರು 1 ಕೋಟಿ ರೂ. ವಂಚನೆ ಮಾಡಲಾಗಿದೆ. ಇದರಿಂದಾಗಿ ಈಗ ಟೆಕ್ಕಿ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಗಾಂಧಿನಗರದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಇಂಜಿನಿಯರ್ ಶನಿವಾರ ಅಂದರೆ ಸೆಪ್ಟೆಂಬರ್ 9 ರಂದು ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸಿದ್ದು, ಈ ಸಂಬಂಧ ತಾವು ಹೇಗೆ ಮೋಸ ಹೋಗಿದ್ದೇವೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಟೈಮ್ಸ್‌ ಆಫ್‌ ಇಂಡಿಯಾ ಸಹ ವರದಿ ಮಾಡಿದೆ. ಇದರ ಪ್ರಕಾರ ಮೋಸ ಹೋದ ವ್ಯಕ್ತಿಯ ಹೆಸರು ಕುಲದೀಪ್ ಪಟೇಲ್. ಇವರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಅದಿತಿ ಎಂಬ ಮಹಿಳೆಯನ್ನು ಭೇಟಿಯಾಗಿದ್ದರ ಬಗ್ಗೆ ಎಫ್‌ಐಆರ್‌ ಉಲ್ಲೇಖ ಮಾಡಿದ್ದಾರೆ.

ಇನ್ನು ಅವರು ನೀಡಿದ ಮಾಹಿತಿ, ಅದಿತಿ ತಾನು ಯುಕೆಯಲ್ಲಿ ಆಮದು ಮತ್ತು ರಫ್ತು ವ್ಯವಹಾರವನ್ನು ಹೊಂದಿದ್ದೇನೆ ಮತ್ತು ಉತ್ತಮವಾಗಿ ಸಂಪಾದನೆ ಮಾಡಲು 'ಬನೊಕಾಯಿನ್' ನಲ್ಲಿ ಹೂಡಿಕೆ ಮಾಡಬೇಕು ಎಂದು ನನಗೆ ತಿಳಿಸಿದಳು. ಆಕೆಯ ಮೇಲೆ ನಂಬಿಕೆಯಿಟ್ಟು ನಾನು ಸಮ್ಮತಿಸಿದೆ. ಜೊತೆಗೆ ಬನೊಕಾಯಿನ್‌ನ ಗ್ರಾಹಕ ಪ್ರತಿನಿಧಿಯೊಂದಿಗೂ ಈ ಸಂಬಂಧ ಮಾತನಾಡಲಾಯಿತು ಎಂದು ಹೇಳಿದ್ದಾರೆ.

ಇನ್ನು ಪಟೇಲ್‌ ಅವರು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಉತ್ತಮ ಆದಾಯವನ್ನು ಪಡೆಯುವ ಭರವಸೆಯಲ್ಲಿ ಇದ್ದರಂತೆ. ಅಂದರೆ ಆರಂಭದಲ್ಲಿ ಅವರು ಹೂಡಿಕೆ ಮಾಡಿದ ಮೊದಲ 1 ಲಕ್ಷಕ್ಕೆ ಅವರ ಕ್ರಿಪ್ಟೋ ಖಾತೆಯು 78 USDT (US ಡಾಲರ್ ಟೆಥರ್) ಲಾಭವನ್ನು ತೋರಿಸಿತು. ನಂತರ ಅವರು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಇದಾದ ನಂತರ ಒಟ್ಟಾರೆಯಾಗಿ ಪಟೇಲ್ 18 ವಹಿವಾಟುಗಳಲ್ಲಿ 1.34 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಜುಲೈ 20 ಮತ್ತು ಆಗಸ್ಟ್ 31 ರ ನಡುವೆ ಎಲ್ಲಾ ವ್ಯವಹಾರಗಳನ್ನು ನಡೆಸಲಾಗಿದ್ದು, ಸೆಪ್ಟೆಂಬರ್ 3 ರಂದು ಪಟೇಲ್ ತನ್ನ ಖಾತೆಯಿಂದ 2.59 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಮುಂದಾದಾಗ ಅವರ ಖಾತೆ ಸ್ಥಗಿತವಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಪಟೇಲ್ ಅವರು ಮೊದಲು ಮಾತನಾಡಿದ್ದ ಕಸ್ಟಮರ್ ಕೇರ್ ಪ್ರತಿನಿಧಿಯನ್ನು ಸಂಪರ್ಕಿಸಿದರು. ನಂತರ ಅವರ ಖಾತೆಯನ್ನು ಡಿ-ಫ್ರೀಜ್ ಮಾಡಲು ಹೆಚ್ಚುವರಿ 35 ಲಕ್ಷ ರೂಪಾಯಿ ಹೂಡಿಕೆ ಮಾಡಲು ತಿಳಿಸಲಾಯಿತು. ಪಟೇಲ್ ಅದಿತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಪಟೇಲ್‌ ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಿದ್ದಾರೆ.

ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ?: ಇಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ಉತ್ತಮ ಮಾರ್ಗವೆಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾವುದೇ ಅಪರಿಚಿತರನ್ನು ನಂಬದೇ ಅವರಿಗೆ ನೀಡದಿರುವುದು. ಅದರಲ್ಲೂ ನಿಮ್ಮ ಹೂಡಿಕೆಯಲ್ಲಿ ನಿಮಗೆ ಸಹಾಯ ಮಾಡಲು ಅರ್ಹರಾಗಿರುವ ಸಾಕಷ್ಟು ವಿಶ್ವಾಸಾರ್ಹ ಹಣಕಾಸು ಹೂಡಿಕೆದಾರರು ಸಿಗಲಿದ್ದಾರೆ. ಹೀಗಾಗಿ ನೀವು ಯಾರ್ಯಾರನ್ನೋ ನಂಬಿ ಹಣ ಹೂಡಿಕೆ ಮಾಡುವ ಮುನ್ನ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿ.

1 ಕೋಟಿ ಕಳೆದುಕೊಂಡ ಟೆಕ್ಕಿ, ಮ್ಯಾಟ್ರಿಮೋನಿಯಲ್ ಸೈಟ್‌ ಬಳಸೋ ಮುನ್ನ ಎಚ್ಚರ

ಜೊತೆಗೆ ನೀವು ಯಾವ ಹೂಡಿಕೆಗಳೊಂದಿಗೆ ಮುಂದುವರಿಯಬೇಕು ಎಂಬುದರ ಕುರಿತು ನಿಮಗೆ ಖಚಿತವಿಲ್ಲದಿದ್ದರೆ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ಆಪ್‌ಗಳ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವ ಅದೆಷ್ಟೋ ಘಟನೆಗಳು ನಡೆಯುತ್ತಿವೆ. ಆದ್ದರಿಂದ, ನೀವು ಅಂತಹ ಆಪ್‌ಗಳಲ್ಲಿ ಪರಿಚಿತರಾದ ಯಾರನ್ನಾದರೂ ನಂಬಲು ಬಯಸಿದರೆ ಹಲವಾರು ಬಾರಿ ಆಲೋಚನೆ ಮಾಡಿ.

Best Mobiles in India

English summary
An Ahmedabad software engineer was duped by a woman he met on a matrimonial site and lost more than Rs 1 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+