Home
ಸುದ್ದಿಜಾಲ

smartphone blast: ಇಯರ್ ಫೋನ್ ಹಾಕಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಫೋನ್ ಸ್ಫೋಟ! ಮಹಿಳೆ ಸಾವು...

ಸ್ಮಾರ್ಟ್‌ಫೋನ್‌ಗಳು (Smartphones) ಎಷ್ಟು ಉಪಯುಕ್ತವೋ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲಿಲ್ಲ ಎಂದರೆ ಅಷ್ಟೇ ಡೇಂಜರ್‌. ಯಾಕೆಂದರೆ ಸ್ಮಾರ್ಟ್‌ಫೋನ್‌ಗಳು ಆಗಾಗ್ಗೆ ಬ್ಲಾಸ್ಟ್‌ ಆಗುವ ವಿಷಯಗಳನ್ನು ನೀವು ಕೇಳಿರಬಹುದು. ಅದರಂತೆ ಇಲ್ಲೊಂದು ಘಟನೆ ನಡೆದಿದ್ದು, ಮಹಿಳೆ ಸಾವಿಗೀಡಾಗಿದ್ದಾರೆ.

ಹೌದು, ಹೆಲ್ಮೆಟ್ ಹಾಕದೆ ಇಯರ್ ಫೋನ್ ಹಾಕಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಫೋನ್ ಸ್ಫೋಟವಾಗಿ (smartphone blast) ಸಾವಿಗೀಡಾಗಿದ್ದಾರೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಹೇಗೆ?, ಈ ರೀತಿಯ ಘಟನೆಗಳು ಬೇಸಿಗೆ ಸಂದರ್ಭದಲ್ಲಿ ಯಾಕೆ ನಡೆಯುತ್ತವೆ?, ಫೋನ್‌ ಸ್ಫೋಟವಾಗುವ ಮುನ್ನ ಏನಾದರೂ ಮುನ್ಸೂಚನೆ ನೀಡಲಿದೆಯೇ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇಯರ್ ಫೋನ್ ಹಾಕಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಫೋನ್ ಸ್ಫೋಟ! ಮಹಿಳೆ ಸಾವು

ಫೋನ್‌ ಸ್ಫೋಟವಾಗಿ ಮಹಿಳೆ ಸಾವು: ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದಾದ ನಂತರದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬೈಕ್ ಮಹಿಳೆಯ ತಲೆಯ ಮೇಲೆ ಬಿದ್ದಿದೆ. ಪರಿಣಾಮವಾಗಿ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಮಹಿಳೆ ಹೆಲ್ಮೆಟ್ ಧರಿಸಿರಲಿಲ್ಲ.

ರಸ್ತೆ ಅಪಘಾತ ತಡೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಎಷ್ಟೇ ಹೇಳಿದರೂ ವಾಹನದಲ್ಲಿ ಸಂಚರಿಸುವವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ಮಹಿಳೆ ಹೆಲ್ಮೆಟ್‌ ಧರಿಸಿದ್ದರೆ ಪ್ರಾಣ ಉಳಿಯುತ್ತಿತ್ತೇನೋ. ಇದಕ್ಕೂ ಮೊದಲು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆ ಸಾವಿಗೀಡಾಗಿದ್ದಾರೆ. ಫರೂಕಾಬಾದ್ ಜಿಲ್ಲೆಯ ನೆಹ್ರಾರಿಯಾ ಗ್ರಾಮದ ಪೂಜಾ (28) ಸಾವಿಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಕಾನ್ಪುರ ರೈಲು ನಿಲ್ದಾಣದಿಂದ ಮುಂಬೈಗೆ ಹೋಗುತ್ತಿದ್ದರು.

ಇಯರ್ ಫೋನ್ ಹಾಕಿಕೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಫೋನ್ ಸ್ಫೋಟ! ಮಹಿಳೆ ಸಾವು

ಫೋನ್‌ಗಳು ಯಾಕೆ ಬ್ಲಾಸ್ಟ್‌ ಆಗಲಿವೆ ?: ಕೆಲವೊಮ್ಮೆ ಮಾತ್ರ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುತ್ತವೆ. ರಾತ್ರಿಯಿಡೀ ಚಾರ್ಜ್ ಮಾಡುವಾಗ ಐಫೋನ್ 4 ಸ್ಫೋಟವಾಗಿದ್ದು, ರೆಡ್ಮಿ ನೋಟ್ 5 ಪ್ರೊ ಸ್ಫೋಟಗೊಂಡು ಮಗು ಸಾವಿಗೀಡಾಗಿದ್ದು, ವಿಮಾನದಲ್ಲಿ ವ್ಯಕ್ತಿಯೊಬ್ಬರ ಫೋನ್ ಸ್ಫೋಟಗೊಂಡು ತುರ್ತು ಭೂಸ್ಪರ್ಶ ಮಾಡಿರುವ ಘಟನೆಗಳು ಇನ್ನೂ ಮಾಸಿಲ್ಲ. ಈ ನಡುವೆ ಈಗ ಈ ಘಟನೆ ವರದಿಯಾಗಿದೆ.

ಸ್ಮಾರ್ಟ್‌ಫೋನ್‌ಗೆ ಸ್ಫೋಟಗೊಳ್ಳಲು ಹಲವು ಕಾರಣಗಳಿವೆ. ಇದು ಯಾವಾಗಲೂ ಡಿವೈಸ್‌ನ ಬ್ಯಾಟರಿಗೆ ಸಂಬಂಧಿಸಿದೆ. ಆಧುನಿಕ ಡಿವೈಸ್‌ ಮೊಬೈಲ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ರನ್‌ ಆಗಲಿವೆ. ಇವು ರೀಚಾರ್ಜಬಲ್‌ ಆಗಿದ್ದು, ಧನಾತ್ಮಕ ಮತ್ತು ಋಣಾತ್ಮಕ ವಿದ್ಯುದ್ವಾರಗಳ ಸಮತೋಲನದಲ್ಲಿ ಏನಾದರೂ ತಪ್ಪಾದಾಗ, ಬ್ಯಾಟರಿಯ ಆಂತರಿಕ ಘಟಕಗಳಲ್ಲಿ ಸಮಸ್ಯೆ ಎದುರಾಗುತ್ತದೆ. ಇದು ಸ್ಫೋಟಕ್ಕೆ ಕಾರಣವಾಗುತ್ತದೆ.

ಇದರ ಜೊತೆಗೆ ಸಾಮಾನ್ಯ ಸಮಸ್ಯೆ ಎಂದರೆ ಅತಿಯಾದ ಶಾಖ. ಫೋನ್‌ಗೆ ಹೆಚ್ಚಿನ ಕೆಲಸ ಕೊಟ್ಟರೆ ಅದು ಫೋನ್‌ನ ಘಟಕಗಳ ರಾಸಾಯನಿಕ ಮೇಕ್ಅಪ್ ಅನ್ನು ಹಾಳುಮಾಡುತ್ತದೆ. ಥರ್ಮಲ್ ರನ್‌ಅವೇ ಎಂಬ ಸರಪಳಿ ಕ್ರಿಯೆಯು ಬ್ಯಾಟರಿಗೆ ಸಮಸ್ಯೆಯನ್ನು ಉಂಟುಮಾಡಬಹುದು ಮತ್ತು ಅಂತಿಮವಾಗಿ ಬೆಂಕಿ ಕಾಣಿಸಿಕೊಳ್ಳಬಹುದು ಅಥವಾ ಸ್ಫೋಟಿಸಬಹುದು.ಇದರ ಜೊತೆಗೆ ಭೌತಿಕ ಹಾನಿ ಅಂದರೆ ಫೋನ್‌ ಬೀಳುವುದು. ಇದರಿಂದ ಬ್ಯಾಟರಿಯ ಒಳಗಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಲಿದೆ. ಹೆಚ್ಚು ಹೊತ್ತು ಬಿಸಿಲಿನಲ್ಲಿ ಇಡುವುದು ಸಹ ಫೋನ್‌ ಈ ಸಮಸ್ಯೆ ಎದುರಿಸಲು ಕಾರಣವಾಗುತ್ತದೆ.

ಫೋನ್‌ ಬ್ಲಾಸ್ಟ್‌ ಆಗಬಹುದು ಅನ್ನೋದನ್ನು ಕಂಡುಕೊಳ್ಳುವುದು ಹೇಗೆ?: ನೀವು ಫೋನ್‌ನಿಂದ ಹಿಸ್ಸಿಂಗ್ ಅಥವಾ ಪಾಪಿಂಗ್ ಶಬ್ದಗಳನ್ನು ಕೇಳಿದರೆ ಅಥವಾ ಸುಡುವ ಪ್ಲಾಸ್ಟಿಕ್ ಅಥವಾ ರಾಸಾಯನಿಕದ ವಾಸನೆ ಬಂದರೆ ಅದು ಹಾನಿಗೊಳಗಾಗಬಹುದು ಮತ್ತು ಸ್ಫೋಟಗೊಳ್ಳುವ ಅಂಚಿನಲ್ಲಿದೆ ಎಂದು ಅರಿತುಕೊಳ್ಳಿ. ಅದೇ ರೀತಿ, ಡಿವೈಸ್‌ನಿಂದ ಬರುವ ಅತಿಯಾದ ಶಾಖವನ್ನು ಗಮನಿಸಿ, ವಿಶೇಷವಾಗಿ ಚಾರ್ಜ್ ಮಾಡುವಾಗ ಅದು ಬಿಸಿಯಾಗಿದ್ದರೆ, ತಕ್ಷಣವೇ ಅದನ್ನು ಅನ್‌ಪ್ಲಗ್‌ ಮಾಡಿ.

ದೊಡ್ಡ ಎಚ್ಚರಿಕೆಯ ಚಿಹ್ನೆ ಎಂದರೆ ಊದಿಕೊಂಡ ಬ್ಯಾಟರಿ. ಹಾನಿಗೊಳಗಾಗಿದ್ದರೆ ಅಥವಾ ಆಂತರಿಕ ಘಟಕಗಳು ಕ್ಷೀಣಿಸಿದರೆ ಈ ರೀತಿ ಆಗಲಿದೆ. ನಿಮ್ಮ ಡಿವೈಸ್‌ನ ಆಕಾರದಲ್ಲಿ ಚಾಚಿಕೊಂಡಿರುವ ಡಿಸ್‌ಪ್ಲೇ, ವಿಸ್ತರಿಸಿದ ಸೀಮ್ ಸೇರಿದಂತೆ ಏನಾದರೂ ಸಾಮಾನ್ಯವಾಗಿ ಇರುವಂತೆ ಇಲ್ಲ ಎಂದು ಕಂಡುಕೊಂಡರೆ ಇದೂ ಸಹ ಫೋನ್‌ ಸ್ಪೋಟಗೊಳ್ಳುವ ಮುನ್ಸೂಷನೆ ನೀಡಲಿದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇನ್ನು ಮುಂದೆ ಬ್ಯಾಟರಿಯನ್ನು ರಿಮೂವ್‌ ಮಾಡಲು ನಿಮಗೆ ಅನುಮತಿಸುವುದಿಲ್ಲ, ಆದ್ದರಿಂದ ನಿಮ್ಮ ಡಿವೈಸ್‌ ಬಗ್ಗೆ ನಿಮಗೆ ಕಾಳಜಿ ಇದ್ದರೆ. ಈ ಮೇಲೆ ತಿಳಿಸಿದ ಸಮಸ್ಯೆಗಳು ಏನಾದರೂ ಕಂಡುಬಂದರೆ ಅದನ್ನು ಆಫ್ ಮಾಡಿ ಮತ್ತು ತಕ್ಷಣವೇ ರಿಪೇರಿ ಮಾಡಿಸಿಕೊಳ್ಳಿ.

Best Mobiles in India

English summary
A woman who was riding a bike wearing earphones without wearing a helmet died after smartphone blast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+