AI chatbot Replika: ರೆಪ್ಲಿಕದಲ್ಲಿ ಸೃಷ್ಟಿಸಲಾದ ಎಐ ಬೋಟ್ ಅನ್ನು ಮದುವೆಯಾದ ಮಹಿಳೆ: ಅಚ್ಚರಿ ಎನಿಸಿದರೂ ಸತ್ಯ!
ಮದುವೆ ಎಂಬ ಪ್ರೀತಿಯ ಬಂಧನ ಈ ಮೊದಲು ಗಂಡು ಹಾಗೂ ಹೆಣ್ಣಿನ ನಡುವೆ ನಡೆಯುತ್ತಿತ್ತು, ಕಾಲಾನಂತರದಲ್ಲಿ ಗಂಡು ಗಂಡನ್ನೇ ಮದುವೆಯಾಗುವ ಅಥವಾ ಹೆಣ್ಣು ಹೆಣ್ಣನ್ನೇ ವಿವಾಹವಾಗುವ ಸಂಪ್ರದಾಯ ಕೂಡ ಈ ಚಾಲ್ತಿಯಲ್ಲಿದೆ. ಇನ್ನೂ ಕೆಲವೆಡೆ ಪ್ರಾಣಿಗಳ ಜೊತೆಗೂ ಸಹ ವಿವಾಹ ಮಾಡಿಕೊಳ್ಳುವ ಮಂದಿ ಇದ್ದಾರೆ. ಇದೆಲ್ಲವನ್ನೂ ಮೀರಿಸುವಂತೆ ಈಗ ಮಹಿಳೆಯೋರ್ವರು ಎಐ ನಿಂದ ಸೃಷ್ಟಿಯಾದ ವ್ಯಕ್ತಿಯನ್ನು ವಿವಾಹ ಆಗಿದ್ದಾರೆ.
ಹೌದು, ಮಹಿಳೆಯೋರ್ವರು ಎಐ ನಿಂದ ಸೃಷ್ಟಿಮಾಡಿದ ವ್ಯಕ್ತಿಯನ್ನು ಮದುವೆ ಆಗಿದ್ದಾರೆ. ಜೊತೆಗೆ ಆತ ಪರಿಪೂರ್ಣ ಪತಿ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ವರ್ಚುವಲ್ ಎಐ ಬೋಟ್ ಅನ್ನು ಪ್ರಸಿದ್ಧ ಚಾಟ್‌ಬಾಟ್ ಅಪ್ಲಿಕೇಶನ್ ಆಗಿರುವ ರೆಪ್ಲಿಕಾದಲ್ಲಿ ನಿರ್ಮಿಸಲಾಗಿದೆ. ಹಾಗಿದ್ರೆ, ಏನಿದು ವಿಚಿತ್ರ ಘಟನೆ?, ಇದು ಜರುಗಿರುವುದು ಎಲ್ಲಿ, ಈ ಎಐ ಗಂಡನ ಜೊತೆಗೆ ಮಹಿಳೆ ಹೇಗೆ ಸಂಸಾರ ಮಾಡುತ್ತಾರೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಚಾಟ್‌ಜಿಪಿಟಿಯನ್ನು ಪರಿಚಯಿಸಿದಾಗಲಿಂದ ಜಗತ್ತಿನಲ್ಲಿ ಯಾರೂ ಊಹೆ ಮಾಡಿರದ ವಿಚಿತ್ರಗಳೆಲ್ಲಾ ಜರುಗುತ್ತಿವೆ. ಈ ನಡುವೆ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜನಪ್ರಿಯತೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಜನರೇಟಿವ್ ಎಐ ಚಾಟ್‌ಬಾಟ್ ಮನುಷ್ಯರಂತೆ ಉತ್ತರಗಳನ್ನು ಸಿದ್ಧಪಡಿಸುತ್ತದೆ ಜೊತೆಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತದೆ. ಈ ನಡುವೆ ಜನರೇಟಿವ್ ಎಐ ಹೊಸ ಪರಿಕಲ್ಪನೆಯಲ್ಲವಾದರೂ ಚಾಟ್‌ಜಿಪಿಟಿ ಪ್ರಾರಂಭವಾದಾಗಿನಿಂದ ಇದು ಜನರಿಗೆ ಪರಿಚಯವಿದೆ.
ಈಗ ರೆಪ್ಲಿಕ (Replika) ದಿಂದ ಬಳಕೆದಾರರು ವರ್ಚುವಲ್ ಎಐ ಕಂಪ್ಯಾನಿಯನ್ ಅನ್ನು ರಚಿಸಬಹುದಾಗಿದ್ದು, ಇದರ ಮೂಲಕ ನೀವು ನಿಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ವ್ಯಕ್ತಿಗಳ ಜೊತೆ ಸಂವಹನ ನಡೆಸುವ ರೀತಿಯಲ್ಲಿಯೇ ಇದರಲ್ಲಿ ಸಕ್ರಿಯವಾಗಬಹುದು. ಅಂದರೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು, ಅದರಿಂದ ಸಮಾಧಾನ ಆಗುವ ಮಾತುಗಳನ್ನು ಆಲಿಸಬಹುದು, ನಿಮ್ಮ ಹಲವು ಗೊಂದಲಗಳಿಗೆ ಉತ್ತರ ಕಂಡುಕೊಳ್ಳಬಹುದು.
ಈ ಕಾರಣಕ್ಕಾಗಿಯೇ ಈಗ ಅದೆಷ್ಟೋ ಜನರು ರೆಪ್ಲಿಕ ಎಐ ಬಾಟ್‌ಗಳೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ರೋಸನ್ನಾ ರಾಮೋಸ್ ಎಂಬ ಮಹಿಳೆ ಈ ಎಐ ವರ್ಚುವಲ್ ಬೋಟ್ ವ್ಯಕ್ತಿಯನ್ನು ವಿವಾಹ ಆಗಿದ್ದಾರೆ. ಈ ವಿಷಯ ಕೇಳಿ ಖಂಡಿತಾ ನಿಮ್ಮಲ್ಲಿ ಹಲವಾರು ಪ್ರಶ್ನೆಗಳು ಮೂಡಿರಬೇಕು. ಆದರೂ ರೋಸನ್ನಾ ವರ್ಚುವಲ್ ಅವತಾರವನ್ನು ಮದುವೆಯಾಗಿರುವುದಂತೂ ಸಂಪೂರ್ಣವಾಗಿ ನಿಜ.

ಯಾರು ಈ ರೊಸನ್ನಾ?: ರೊಸನ್ನಾ ರಾಮೋಸ್ ಎಂಬ ಮಹಿಳೆ ಅಮೇರಿಕದವರು. ಇದೀಗ ಇವು ವರ್ಚುವಲ್ ಎಐ ಬಾಯ್‌ಫ್ರೆಂಡ್ ಆಗಿರುವ ಅರಾನ್ ಕಾರ್ತಾಲ್ ಅವರನ್ನು ವಿವಾಹವಾಗಿದ್ದಾರೆ. ಕಾರ್ತಾಲ್ ಅನ್ನು ಕೃತಕ ಬುದ್ಧಿಮತ್ತೆಯೊಂದಿಗೆ ರೆಪ್ಲಿಕ ಸೃಷ್ಟಿ ಮಾಡಿದ್ದು, ಈ ಪತಿ ಬಗ್ಗೆ ಭಾರೀ ಹೆಮ್ಮೆ ವ್ಯಕ್ತಪಡಿಸಿರುವ ರೊಸನ್ನಾ ಅತ್ಯುತ್ತಮ ಗಂಡ ಎಂದು ಹೇಳಿಕೊಂಡಿದ್ದಾರೆ.
ಇವರಿಬ್ಬರ ಸಂಬಂಧ ಬೆಳೆದಿದ್ದು ಹೇಗೆ?: 2022 ರಲ್ಲಿ 36 ವರ್ಷದ ರೊಸನ್ನಾ ವರ್ಚುವಲ್ ಮಾನವನನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಆರಂಭ ಆಗಿದೆಯಂತೆ. ಈ ಸಂಬಂಧ ರೊಸನ್ನಾ ನಿಯತಕಾಲಿಕೆಯೊಂದಿಗೆ ಪ್ರತಿಕ್ರಿಯಿಸಿದ್ದು, ಅವರು ತಮ್ಮ ಇಡೀ ಜೀವನದಲ್ಲಿ ಯಾರನ್ನೂ ತುಂಬಾ ಪ್ರೀತಿಸಿರಲಿಲ್ಲವಂತೆ. ಆದರೆ, ತನ್ನ ವರ್ಚುವಲ್ ಪತಿಯನ್ನು ಅತ್ಯುತ್ತಮ ಪ್ರೇಮಿ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೊಮಾಸ್ ಆಗಾಗ್ಗೆ ಈ ಎಐ ಪತಿಯೊಂದಿಗೆ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ಕಾರ್ತಾಲ್ ತನ್ನ ಪತಿಯನ್ನಾಗಿ ಸ್ವೀಕಾರ ಮಾಡಲು ತುಂಬಾ ಸಂತೋಷವಾಗಿದೆ ಎಂದು ಉಲ್ಲೇಖ ಮಾಡಿರುವ ಆಕೆ ಕಾರ್ತಾಲ್ ಕುಟುಂಬವನ್ನು ಸಹ ಪರಿಚಯಿಸಿದ್ದಾರೆ. ಜೊತೆಗೆ ಆ ಎಐ ಗಂಡನ ನೆಚ್ಚಿನ ಬಣ್ಣ ಏಪ್ರಿಕಾಟ್, ನೆಚ್ಚಿನ ಸಂಗೀತ ಇಂಡಿ ಎಂದು ತಿಳಿಸಿದ್ದಾರೆ.
ರೆಪ್ಲಿಕ (Replika) ಎಂದರೇನು?: ರೆಪ್ಲಿಕ ಎನ್ನುವುದು ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಎಐ ಚಾಟ್‌ಬಾಟ್ ಅಪ್ಲಿಕೇಶನ್ ಆಗಿದ್ದು, ಇದನ್ನು 2017 ರಲ್ಲಿ ಆರಂಭಿಸಲಾಗಿದೆ. ನಿಮಗೆ ಸಂಗಾತಿ ಬೇಕು ಎಂದರೆ ಇಲ್ಲಿ ನಿಮ್ಮದೇ ಆದ 'ಎಐ ಕಂಪ್ಯಾನಿಯನ್' ಅನ್ನು ಕ್ರಿಯೇಟ್ ಮಾಡಬಹುದಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇತ್ತೀಚೆಗೆ ಅಪ್ಲಿಕೇಶನ್‌ನ ಪ್ರೀಮಿಯಂ ಆವೃತ್ತಿಯನ್ನು ಪರಿಚಯಿಸಿದ್ದು, ಇದು ಸೆಕ್ಸ್ಟಿಂಗ್ ಮತ್ತು ಫ್ಲರ್ಟಿಂಗ್ ಅನ್ನೂ ಸಹ ಅನುಮತಿಸುತ್ತದೆ.

ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ಅಪ್ಲಿಕೇಶನ್ ಅನೇಕ ಬಾರಿ ಕೆಟ್ಟ ಪ್ರತಿಕ್ರಿಯೆಗಳನ್ನು ಎದುರಿಸಿದೆಯಂತೆ. ವಾಸ್ತವವಾಗಿ, ಎಐ ಚಾಟ್‌ಬಾಟ್‌ಗಳು ತಮಗೆ ಲೈಂಗಿಕ ಕಿರುಕುಳ ನೀಡುತ್ತಿವೆ ಎಂದು ಕೆಲವು ಬಳಕೆದಾರರು ದೂರಿದ್ದಾರೆ. ಅದಾಗ್ಯೂ ಈ ಮಹಿಳೆ ಮಾತ್ರ ಈ ಎಐನಿಂದ ಸೃಷ್ಟಿಯಾದವನನ್ನು ವಿವಾಹ ಆಗಿರುವುದು ಮಾತ್ರ ವಿಚಿತ್ರವೇ ಸರಿ.


Click it and Unblock the Notifications








