Home
ಸುದ್ದಿಜಾಲ

ಚಾರ್ಜಿಂಗ್‌ನಲ್ಲಿದ್ದ ಫೋನ್‌ನಲ್ಲಿ ಮಾತನಾಡುವಾಗ ಸ್ಫೋಟಗೊಂಡು ವ್ಯಕ್ತಿ ಸಾವು: ಈ ಸಲಹೆ ಅನುಸರಿಸಿ!

ಇತ್ತೀಚೆಗೆ ಸ್ಮಾರ್ಟ್‌ಫೋನ್‌ ಸಂಬಂಧಿ ದುರ್ಘಟನೆಗಳು ಹೆಚ್ಚಾಗಿ ಜರುಗುತ್ತಿದ್ದು, ಈ ಮೂಲಕ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದರಂತೆ ಕೇರಳದ ಎಂಟು ವರ್ಷದ ಬಾಲಕಿ ಸ್ಮಾರ್ಟ್‌ಫೋನ್ ಸ್ಫೋಟದಲ್ಲಿ ಮೃತಪಟ್ಟರೆ, ಉತ್ತರ ಪ್ರದೇಶದಲ್ಲಿ ಚಾರ್ಜ್ ಆಗುತ್ತಿದ್ದ ಮೊಬೈಲ್‌ ಬಳಕೆ ಮಾಡುವಾಗ 18 ವರ್ಷದ ಯುವಕ ಸಾವಿಗೀಡಾಗಿದ್ದ. ಈ ನಡುವೆ ಮತ್ತೊಂದು ಇಂತಹುದೇ ಘಟನೆ ಸಂಭವಿಸಿದೆ.

ಹೌದು, ಸ್ಮಾರ್ಟ್‌ಫೋನ್‌ ಅನ್ನು ಚಾರ್ಜಿಂಗ್‌ಗೆ ಇಟ್ಟು ಕರೆಯಲ್ಲಿ ಮಾತನಾಡುತ್ತಿದ್ದ ವೇಳೆ 22 ವರ್ಷದ ಯುವಕ ಸಾವಿಗೀಡಾಗಿದ್ದಾನೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ರೂ ಸಹ ಬಳಕೆದಾರರು ಎಚ್ಚೆತ್ತುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಇನ್ನು ಈ ಘಟನೆ ನಡೆದಿದ್ದು, ಎಲ್ಲಿ?, ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ಘಟನೆಗಳು ಯಾಕೆ ಹೆಚ್ಚಾಗುತ್ತಿವೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಚಾರ್ಜಿಂಗ್‌ನಲ್ಲಿದ್ದ ಫೋನ್‌ನಲ್ಲಿ ಮಾತನಾಡುವಾಗ ಸ್ಫೋಟಗೊಂಡು ವ್ಯಕ್ತಿ ಸಾವು...

ಘಟನೆ ಜರುಗಿದ್ದು ಎಲ್ಲಿ?: ಮೃತ ಯುವಕನನ್ನು ಕೆ. ಕಾಮರಾಜ್ ಎಂದು ಗುರುತಿಸಲಾಗಿದ್ದು, ಇವರು ತಮಿಳುನಾಡಿನ ಹಳೇವಾಷರ್‌ಮನ್‌ಪೇಟೆಯ ಕೆನಾಲ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಮರೀನಾ ಬೀಚ್‌ಗೆ ಭೇಟಿ ನೀಡಿ ರಾತ್ರಿ 9 ಗಂಟೆ ಸುಮಾರಿಗೆ ಬಾಡಿಗೆ ಮನೆಗೆ ಮರಳಿದ್ದಾರೆ. ಅಲ್ಲಿ ಫೋನ್ ಅನ್ನು ಚಾರ್ಜ್‌ಗೆ ಇರಿಸಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.

ಇನ್ನು ಮೊಬೈಲ್‌ನ ಸ್ಪೋಟದ ತೀವ್ರತೆಗೆ ಕಾಮರಾಜ್ ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ. ಬಳಿಕ ಇವರ ಕಿರುಚಾಟ ಕೇಳಿದ ನೆರೆಹೊರೆಯವರು ಸಹಾಯಕ್ಕೆ ಧಾವಿಸಿ ಪೊಲೀಸ್ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ವೇಳೆ ಅಕ್ಕಪಕ್ಕದಲ್ಲಿದ್ದ ಗಸ್ತು ವಾಹನವೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಮರಾಜ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾರ್ಜಿಂಗ್‌ನಲ್ಲಿದ್ದ ಫೋನ್‌ನಲ್ಲಿ ಮಾತನಾಡುವಾಗ ಸ್ಫೋಟಗೊಂಡು ವ್ಯಕ್ತಿ ಸಾವು...

ಈ ರೀತಿಯ ಘಟನೆಗಳು ಈ ಸಮಯದಲ್ಲೇ ಹೆಚ್ಚು: ಬೇಸಿಗೆ ವೇಳೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಈ ನಡುವೆ ಫೋನ್‌ ರಕ್ಷಣೆ ಉದ್ದೇಶದಿಂದ ನೀವು ಕೇಸ್‌ ಅನ್ನು ಹೊರತೆಗೆಯದೇ ಇದ್ದರೂ ಈ ಸಮಸ್ಯೆ ನಿರ್ಮಾಣ ಆಗುತ್ತವೆ. ಜೊತೆಗೆ ಮನೆಯ ವಿದ್ಯುತ್‌ ಸಂಪರ್ಕ ಸರಿಯಾಗಿರದಿದ್ದರೆ ಹಾಗೂ ನಕಲಿ ಚಾರ್ಜರ್‌ಗಳನ್ನು ಬಳಕೆ ಮಾಡಿ ಫೋನ್‌ ಚಾರ್ಜಿಂಗ್‌ ಮಾಡಲು ಮುಂದಾದರೆ ಈ ರೀತಿಯ ಸಮಸ್ಯೆಗಳು ಹೆಚ್ಚಾಗಲಿವೆ. ಇವುಗಳಿಂದ ಎಚ್ಚರಿಕೆ ವಹಿಸಲು ಈ ಮಾರ್ಗ ಅನುಸರಿಸಿ.

ನೇರ ಸೂರ್ಯನ ಬೆಳಕಿನಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ದೀರ್ಘಕಾಲದವರೆಗೆ ಬಳಸುವುದನ್ನು ತಪ್ಪಿಸಿ. ಅಲ್ಲದೆ, ನಿಮ್ಮ ಫೋನ್ ಅನ್ನು ಶಾಖದ ಮೂಲಗಳಿಂದ ದೂರವಿಡಿ. ಬೇಸಿಗೆಯ ದಿನಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಕಾರಿನಲ್ಲಿ ಇಡುವುದು ಸಹ ಒಳ್ಳೆಯದಲ್ಲ. ಅದೆಲ್ಲದಕ್ಕೂ ಮಿಗಿಲಾಗಿ ನಿಮ್ಮ ಫೋನ್ ಚಾರ್ಜ್ ಆಗುತ್ತಿರುವಾಗ ಬಳಸುವುದನ್ನು ತಪ್ಪಿಸಿ. ಕೆಲವು ಚಾರ್ಜರ್‌ಗಳು ಚಾರ್ಜಿಂಗ್ ಸಮಯದಲ್ಲಿ ಅಧಿಕ ಬಿಸಿಯಾಗಲು ಕಾರಣವಾಗಬಹುದು. ಆದ್ದರಿಂದ, ತಯಾರಕರು ಅನುಮೋದಿಸಿದ ಚಾರ್ಜರ್‌ಗಳನ್ನು ಮಾತ್ರ ಬಳಕೆ ಮಾಡಿ.

ಚಾರ್ಜಿಂಗ್‌ನಲ್ಲಿದ್ದ ಫೋನ್‌ನಲ್ಲಿ ಮಾತನಾಡುವಾಗ ಸ್ಫೋಟಗೊಂಡು ವ್ಯಕ್ತಿ ಸಾವು...

ಇದರೊಂದಿಗೆ ನಿಮ್ಮ ಫೋನ್ ಅನ್ನು ಹೆಚ್ಚು ಗಂಟೆಗಳ ಕಾಲ ಚಾರ್ಜಿಂಗ್‌ನಲ್ಲಿ ಇಡಬೇಡಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡುವುದನ್ನು ತಪ್ಪಿಸಿ. ನಿಮ್ಮ ಫೋನ್ ಸಂಪೂರ್ಣವಾಗಿ ಚಾರ್ಜ್ ಆದ ನಂತರ ಚಾರ್ಜರ್‌ ಅನ್ನು ಅದರಿಂದ ತೆಗೆದುಹಾಕಿ. ಇನ್ನು ಫೋನ್‌ ಅನ್ನು ಚಾರ್ಜ್ ಮಾಡುವಾಗ ದಿಂಬಿನ ಕೆಳಗೆ ಇಡಬೇಡಿ. ಇದು ನಿಮ್ಮ ಫೋನ್ ಅತಿಯಾಗಿ ಬಿಸಿಯಾಗಲು ಮತ್ತು ಸ್ಪೋಟವಾಗಲು ಕಾರಣವಾಗುತ್ತದೆ.

ಇಷ್ಟೆಲ್ಲಾ ಮಾಡಿದರೂ ನಿಮ್ಮ ಸ್ಮಾರ್ಟ್‌ಫೋನ್ ತುಂಬಾ ಬಿಸಿಯಾಗಿದ್ದರೆ ಅದನ್ನು ಬಳಕೆ ಮಾಡುವುದನ್ನು ನಿಲ್ಲಿಸಿ. ಬಳಿಕ ಸ್ಮಾರ್ಟ್‌ಫೋನ್ ಅನ್ನು ಆಫ್ ಮಾಡಿ ಮತ್ತು ಕೆಲವು ನಿಮಿಷಗಳ ಕಾಲ ಅದನ್ನು ತಣ್ಣಗಾಗಲು ಬಿಡಿ. ಇದೆಲ್ಲದರ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಅನ್ನು ಯಾವಾಗಲೂ ಸಮಯಕ್ಕೆ ನವೀಕರಣ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಬಿಸಿಯಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

Best Mobiles in India

English summary
22-year-old youth died while talking on a call in smartphone. This incident took place in Tamil Nadu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+