Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಿಂದ ಒನ್‌ಪ್ಲಸ್ ಫೋನ್ ಆರ್ಡರ್‌ ಮಾಡಿದ್ದವನಿಗೆ ಮಹಾ ವಂಚನೆ: ಮುಂದೇನಾಯ್ತು?

ಇತ್ತೀಚಿನ ದಿನಗಳಲ್ಲಿ ಯಾರೇ ಆದರೂ ಸಹ ಸ್ಮಾರ್ಟ್‌ಫೋನ್‌ ಹೊಂದಿರಬೇಕು ಎಂದು ಇಚ್ಚಿಸುತ್ತಾರೆ. ಅದರಲ್ಲೂ ಹೊಸದಾಗಿ ಲಾಂಚ್‌ ಆದ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಕೆಲವರು ಸದಾ ಹಾತೊರೆಯುತ್ತಿರುತ್ತಾರೆ. ಅದರಂತೆ ಇಲ್ಲೋರ್ವ ಯುವಕ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌(Flipkart) ಮೂಲಕ ಒನ್‌ಪ್ಲಸ್‌(OnePlus) ಫೋನ್‌ ಆರ್ಡರ್‌ ಮಾಡಿದ್ದು, ಫೋನ್‌ ಪಡೆದು ಮೋಸ ಹೋಗಿದ್ದಾನೆ.

ಹೌದು, ಅನೇಕ ಜನರು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ಸಾಲ ಮಾಡಿಯಾದರೂ ಹೊಸ ಫೋನ್‌ ಖರೀದಿ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಉಂಟು. ಈ ಫೋನ್‌ ಖರೀದಿ ವಿಚಾರದಲ್ಲಿ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂದರೆ ಕೊಚ್ಚಿಯ ಎಂ.ಕೆ.ಸತೀಶ್ ಎಂಬ ಯುವಕ ಫೋನ್‌ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಹಾಗಿದ್ರೆ, ಈತ ಮೋಸ ಹೋಗಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಫ್ಲಿಪ್‌ಕಾರ್ಟ್‌ನಿಂದ ಒನ್‌ಪ್ಲಸ್ ಫೋನ್ ಆರ್ಡರ್‌ ಮಾಡಿದ್ದವನಿಗೆ ಮಹಾ ವಂಚನೆ..

ಫ್ಲಿಪ್‌ಕಾರ್ಟ್‌ನಿಂದ ಫೋನ್‌ ಖರೀದಿಸಿದ ಯುವಕನಿಗೆ ಮೋಸ: ಸತೀಶ್ ಎಂಬ ಯುವಕ ಒನ್‌ಪ್ಲಸ್‌ ನ ಇತ್ತೀಚಿನ ಒನ್‌ಪ್ಲಸ್‌ 11 5G (OnePlus 11 5G) ಅನ್ನು ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿದ್ದಾನೆ. ಸೆಪ್ಟೆಂಬರ್ 1 ರಂದು ಫೋನ್ ಬುಕ್ ಮಾಡಲಾಗಿದ್ದು, ಡೆಲಿವರಿ ಶುಲ್ಕಗಳು ಮತ್ತು ಫೋನ್‌ನ ಬೆಲೆ ಸೇರಿದಂತೆ ಸುಮಾರು ಅರ್ಧ ಲಕ್ಷ ರೂ. ಅಂದರೆ 53,098ರೂ. ಪಾವತಿ ಮಾಡಿದ್ದಾನೆ. ಇದಾದ ನಂತರ ಅಂದರೆ ಸೆಪ್ಟೆಂಬರ್ 4 ರಂದು ಫೋನ್ ಡೆಲಿವರಿ ಆಗಿದೆ.

ಫೋನ್‌ ಯಾವಾಗ ಡೆಲಿವರಿ ಆಗುತ್ತದೆ ಎಂದು ಜಾತಕ ಪಕ್ಷಿಯ ಹಾಗೆ ಕಾದು ಕುಳಿತಿದ್ದ ಈ ಯುವಕನಿಗೆ ಫೋನ್ ಪಡೆದ ನಂತರ ಆಗಿದ್ದೇ ಬೇರೆ. ಆರಂಭದಲ್ಲಿ ಫೋನ್ ಆನ್ ಮಾಡಲು ಪ್ರಯತ್ನಿಸಿದರೆ ಸಾಧ್ಯವಾಗಲಿಲ್ಲ. ಕಡಿಮೆ ಚಾರ್ಜ್ ಇರಬಹುದೇನೋ ಅದಕ್ಕೆ ಫೋನ್‌ ಆನ್‌ ಆಗುತ್ತಿಲ್ಲ ಎಂದು ಭಾವಿಸಿ ಯುವಕ ಫೋನ್‌ ಅನ್ನು ಖುಷಿಯಲ್ಲಿ ಮನೆ ಒಳಗೆ ತಂದು ಚಾರ್ಜ್‌ಗೆ ಇಟ್ಟಿದ್ದಾನೆ.

ಈ ಫೋನ್ ಚಾರ್ಜ್ ಆದ ನಂತರವೂ ಆನ್ ಆಗಿಲ್ಲ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಫೋನ್‌ನ ಬ್ಯಾಟರಿ ಸ್ವಲ್ಪ ಊದಿಕೊಂಡಿರುವುದು ಮತ್ತು ಹಿಂಭಾಗದ ಫಲಕವು ಅಲುಗಾಡುತ್ತಿರುವುದು ತಿಳಿದಿದೆ. ನಂತರ ಮ್ಯಾನುಫ್ಯಾಕ್ಚರಿಂಗ್ ನ್ಯೂನತೆಯಿಂದ ಹೊಸ ಫೋನ್ ಆನ್ ಆಗದೇ ಇರಬಹುದು ಎಂದುಕೊಂಡು ಆ ಫೋನ್ ಅನ್ನು ಫ್ಲಿಪ್‌ಕಾರ್ಟ್‌ಗೆ ಹಿಂತಿರುಗಿಸಲು ಪ್ರಯತ್ನಿಸಿದರಾದೂ ಅದು ಸಾಧ್ಯವಾಗಿಲ್ಲ.

ಹತ್ತಿರದ ಒನ್‌ಪ್ಲಸ್ ಸೇವಾ ಕೇಂದ್ರವನ್ನು ಸಂಪರ್ಕಿಸಲು ಫ್ಲಿಪ್‌ಕಾರ್ಟ್ ಸೂಚನೆ ನೀಡಿದೆ. ಇದಕ್ಕೂ ಮೊದಲು ಒನ್ ಪ್ಲಸ್ ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದಾಗ ಸತೀಶ್ ಗೆ ತಾನು ದೊಡ್ಡ ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಒನ್‌ಪ್ಲಸ್‌ನ ಅಧಿಕೃತ ವಿತರಕರಲ್ಲ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಿದ ಉತ್ಪನ್ನಗಳಿಗೆ ವಾರಂಟಿ ಸಹ ಬರುವುದಿಲ್ಲ ಎಂದು ಒನ್‌ಪ್ಲಸ್ ಕಡೆಯಿಂದ ತಿಳಿಸಲಾಗಿದೆ.

ಸತೀಶ್ ಅವರು ಫ್ಲಿಪ್‌ಕಾರ್ಟ್‌ನಲ್ಲಿ 'ಟರ್ಸ್ಟ್' ಎಂಬ ಮಾರಾಟಗಾರರಿಂದ ಈ ಫೋನ್‌ ಅನ್ನು ಖರೀದಿ ಮಾಡಿದ್ದಾರೆ. ಕುತೂಹಲಕಾರಿ ವಿಷಯ ಏನೆಂದರೆ ಈ ಮಾರಾಟಗಾರನು 'ಫ್ಲಿಪ್‌ಕಾರ್ಟ್ ಅಶ್ಯೂರ್ಡ್ ಬ್ಯಾಡ್ಜ್' ಅನ್ನು ಹೊಂದಿದ್ದು, ಈ ಬ್ಯಾಡ್ಜ್‌ ಅನ್ನು ಇ-ಕಾಮರ್ಸ್ ದೈತ್ಯ ತನ್ನ ವಿಶ್ವಾಸಾರ್ಹ ವ್ಯಾಪಾರಿಗಳಿಗೆ ನೀಡಿದ ನಂಬಿಕೆಯ ಬ್ಯಾಡ್ಜ್‌ ಆಗಿದೆ. ಆದರೆ ಇದನ್ನು ಆ ವಂಚಕ ದುರುಪಯೋಗ ಮಾಡಿದ್ದಾನೆ.

ಹಾಗೆಯೇ ಕೊಚ್ಚಿಯ ಸೇವಾ ಕೇಂದ್ರದಿಂದ ಗುಜರಾತ್ ಮೂಲದ ವ್ಯಕ್ತಿಯ ಹೆಸರಿನಲ್ಲಿ ನೀಡಲಾದ ಸೇವಾ ಬಿಲ್ ನ ಪ್ರತಿಯನ್ನೂ ಸತೀಶ್ ಪಡೆದುಕೊಂಡಿದ್ದಾರೆ. ಫ್ಲಿಪ್‌ಕಾರ್ಟ್ ನೀಡಿದ ಇನ್‌ವಾಯ್ಸ್‌ನಲ್ಲಿರುವ IMEI ಸಂಖ್ಯೆಗೂ ಫೋನ್‌ನ IMEI ಸಂಖ್ಯೆಯೂ ಒಂದೇ ಆಗಿದ್ದು, ಇದು ಸತೀಸ್‌ಗೆ ಇನ್ನಷ್ಟು ಗೊಂದಲ ಹೆಚ್ಚಾಗುವಂತೆ ಮಾಡಿದೆ. ಜೊತೆಗೆ ಕೊಚ್ಚಿಯಲ್ಲಿರುವ ಸೇವಾ ಕೇಂದ್ರವು IMEI ಸಂಖ್ಯೆಯನ್ನು ಬಳಸಿಕೊಂಡು ಫೋನ್ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.

ವಿಚಿತ್ರ ರೀತಿಯಲ್ಲಿ ಮೋಸ ಹೋಗಿರುವ ಸತೀಶ್‌ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದರು. ಆದರೆ ಈ ಎಲ್ಲಾ ಘಟನೆ ಆದ ನಂತರ ಫ್ಲಿಪ್‌ಕಾರ್ಟ್ ಅಧಿಕಾರಿಗಳು ಸತೀಶ್ ಅವರನ್ನು ಸಂಪರ್ಕ ಮಾಡಿದ್ದು, ಫೋನ್ ವಾಪಸ್ ತೆಗೆದುಕೊಂಡು ಹಣವನ್ನು ಹಿಂದಿರುಗಿಸುವ ಭರವಸೆ ನೀಡಿದ್ದಾರೆ. ಈ ಮೂಲಕ ಹಲವಾರು ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಸಮಸ್ಯೆಗೆ ಫುಲ್‌ಸ್ಟಾಪ್‌ ಇಡಲಾಗಿದೆ.

ಫ್ಲಿಪ್‌ಕಾರ್ಟ್‌ನಿಂದ ಒನ್‌ಪ್ಲಸ್ ಫೋನ್ ಆರ್ಡರ್‌ ಮಾಡಿದ್ದವನಿಗೆ ಮಹಾ ವಂಚನೆ..

ಈ ರೀತಿಯ ವಂಚನೆ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಕಾರಣಕ್ಕೆ ದೊಡ್ಡ ಮೊತ್ತದ ಯಾವುದೇ ವಸ್ತುವನ್ನು ಖರೀದಿ ಮಾಡುವ ಮೊದಲು ಒಂದಲ್ಲ, ಹತ್ತು ಬಾರಿ ಆಲೋಚನೆ ಮಾಡಿ ಆ ನಂತರ ಖರೀದಿ ಮಾಡುವುದು ಒಳಿತು. ಅಷ್ಟೇ ಅಲ್ಲದೆ ಏನಾದರೂ ಕೊಂಚ ಅನುಮಾನ ನಿಮ್ಮಲ್ಲಿದ್ರೂ ಸಹ ನೀಡಲಾದ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ ಅಥವಾ ಇಮೇಲ್‌ ಮಾಡಿ ಮಾಹಿತಿ ಪಡೆದು ನಂತರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಈ ರೀತಿಯ ಸಮಸ್ಯೆಗಳಿಂದ ಪಾರಾಗಬಹುದು.

Best Mobiles in India

English summary
A young man named MK Satish from Kochi ordered a OnePlus phone on Flipkart and got cheated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+