Home
ಸುದ್ದಿಜಾಲ

ಆಧಾರ್ ಕಾರ್ಡ್‌ ಬಳಕೆದಾರರೇ ಗಮನಿಸಿ... ಇದು ನಿಮಗೆ ಕೊನೇ ಅವಕಾಶ ಆಗಿರಬಹುದು!

ಆಧಾರ್ ಕಾರ್ಡ್‌ ಇಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಅಗತ್ಯ ದಾಖಲೆಯಾಗಿದೆ. ಅದರಲ್ಲೂ ಬ್ಯಾಂಕಿಂಗ್‌ ವ್ಯವಹಾರ ಹಾಗೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್‌ ಅತ್ಯಗತ್ಯ ದಾಖಲೆಯಾಗಿದ್ದು, ಈ ನಡುವೆ ಆಧಾರ್‌ ಪ್ರಾಧಿಕಾರ ಆಗಾಗ್ಗೆ ಉಚಿತ ಆಧಾರ್‌ ತಿದ್ದುಪಡಿಗೆ ದಿನಾಂಕ ವಿಸ್ತರಣೆ ಮಾಡಿಕೊಂಡು ಬರುತ್ತಲೇ ಇದೆ.

ಹೌದು, ನಮ್ಮ ದೈನಂದಿನ ಖಾಸಗಿ ಹಾಗೂ ಸರ್ಕಾರಿ ಕೆಲಸಗಳಿಗೆ ಪೂರಕ ದಾಖಲೆ ಅಂದರೆ ಅದು ಆಧಾರ್‌ ಕಾರ್ಡ್. ಆಧಾರ್‌ ಕಾರ್ಡ್‌ ಮೂಲಕ ನೀವು ಸರ್ಕಾರ ಯೋಜನೆಗಳನ್ನು ಪಡೆದುಕೊಳ್ಳಬಹುದು ಅಥವಾ ಇನ್ನಿತರೆ ಯಾವುದೇ ಅಗತ್ಯ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ವೇಳೆ ಆಧಾರ್‌ ನಲ್ಲಿ ಸಣ್ಣ ತಪ್ಪಾಗಿದ್ದರೂ ಸಹ ಅಧಿಕಾರಿಗಳು ನಿಮ್ಮ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಾರೆ. ಪರಿಣಾಮ ನೀವು ಆಧಾರ್‌ ಅನ್ನು ತಿದ್ದುಪಡಿ ಮಾಡುವುದು ಅಗತ್ಯವಾದ ಕೆಲಸವಾಗಿದೆ.

ಆಧಾರ್ ಕಾರ್ಡ್‌ ಬಳಕೆದಾರರೇ ಗಮನಿಸಿ... ಇದು ನಿಮಗೆ ಕೊನೇ ಅವಕಾಶ ಆಗಿರಬಹುದು!

ಆಧಾರ್‌ ತಿದ್ದುಪಡಿಗೆ ಡಿಸೆಂಬರ್ 14 ಕೊನೇ ದಿನ : ಆಧಾರ್ ಕಾರ್ಡ್ ಉಚಿತ ಆನ್‌ಲೈನ್ ಅಪ್‌ಡೇಟ್‌ಗಳ ಗಡುವನ್ನು ಡಿಸೆಂಬರ್ 14, 2023 ರವರೆಗೆ ವಿಸ್ತರಣೆ ಮಾಡಿ ಈ ಹಿಂದೆ ಆದೇಶ ನೀಡಲಾಗಿದೆ. ಈ ಮೂಲಕ ಈವರೆಗೆ ಯಾರೆಲ್ಲಾ ತಪ್ಪಾದ ಆಧಾರ್‌ ಕಾರ್ಡ್‌ ಹೊಂದಿದ್ದಾರೋ ಅಥವಾ ವಿಳಾಸ ಬದಲಿಸಿದ್ದಾರೋ ಅವರಿಗೆಲ್ಲಾ ಅನುಕೂಲ ಆಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಆಧಾರ್‌ ಕಾರ್ಡ್‌ ಅನ್ನು ಎಲ್ಲಾ ವಲಯಗಳಲ್ಲೂ ಬಳಕೆ ಮಾಡಬಹುದಾಗಿದೆ.

ಇನ್ನು ಆಧಾರ್ ಆನ್‌ಲೈನ್‌ ಅಪ್‌ಡೇಟ್‌ ಪ್ರಕ್ರಿಯೆ ಬಹಳ ಸುಲಭವಾಗಿದೆ. ಇದಕ್ಕಾಗಿ ನಿಮ್ಮ ಬಳಿ ಲ್ಯಾಪ್‌ಟಾಪ್‌ ಇದ್ದರೆ ಸಾಕು. ಜೊತೆಗೆ ಈ ವೆಬ್‌ಸೈಟ್‌ನಲ್ಲಿ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ. ಇದಕ್ಕಾಗಿ ನೀವು ಪೂರ್ವದಲ್ಲಿಯೇ ಸ್ಕ್ಯಾನ್‌ ಮಾಡಿ ಇಟ್ಟುಕೊಂಡಿರಬೇಕು. ವಿಷಯ ಏನೆಂದರೆ ನೀವೇ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಕೊಂಡರೆ ಉಚಿತವಾಗಿರಲಿದೆ. ಆದರೆ ನೀವು ನಿಮ್ಮ ಸಮೀಪದ ಸೈಬರ್‌ ಸೆಂಟರ್‌ಗಳಿಗೆ ಹೋಗಿ ಮಾಡಿಸುತ್ತೇವೆ ಎಂದರೆ ಕನಿಷ್ಠ ಹಣ ಪಾವತಿ ಮಾಡಬೇಕಾಗುತ್ತದೆ.

ಈ ವರ್ಷದ ಆರಂಭದಲ್ಲಿ, UIDAI ಕಡೆಯಿಂದ ಆಧಾರ್ ಕಾರ್ಡ್‌ನಲ್ಲಿನ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ಅವಕಾಶ ಮಾಡಿಕೊಟ್ಟಿತ್ತು. ಆರಂಭದಲ್ಲಿ, ಉಚಿತ ಅಪ್‌ಡೇಟ್‌ನ ಗಡುವನ್ನು ಜೂನ್ 14 ಕ್ಕೆ ನಿಗದಿಪಡಿಸಲಾಗಿತ್ತು. ತರುವಾಯ, ಸರ್ಕಾರವು ಈ ಗಡುವನ್ನು ಸೆಪ್ಟೆಂಬರ್ 14 ಕ್ಕೆ ವಿಸ್ತರಿಸಿತು ಆದರೂ ಸಹ ಇನ್ನೂ ಹಲವಾರು ಜನರು ಆಧಾರ್‌ ಅಪ್‌ಡೇಟ್‌ ಮಾಡಿಸಿಕೊಳ್ಳಬೇಕಾಗಿದ್ದರಿಂದ ಮತ್ತೇ ಮುಂದೂಡಲಾಯಿತು.

ಯಾರೆಲ್ಲಾ ಆಧಾರ್ ನವೀಕರಿಸಬೇಕು?: ಆಧಾರ್‌ ಕಾರ್ಡ್‌ ಪಡೆದು ಹತ್ತು ವರ್ಷ ಮೇಲ್ಪಟ್ಟವರು ಆಧಾರ್‌ ನವೀಕರಣ ಮಾಡಿಸಬೇಕಿದೆ. ಹಾಗೆಯೇ ವಿಳಾಸ ಬದಲಾಯಿಸಿದ್ದರೆ, ಹೆಸರು ಬದಲಾಯಿಸಿದ್ದರೆ, ಮದುವೆ ಆಗಿದ್ದರೆ ಈ ಅಪ್‌ಡೇಟ್‌ ಅನಿವಾರ್ಯ ಆಗಿದೆ. ಅಷ್ಟೇ ಅಲ್ಲದೆ ಫೋಟೋ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು ಎಂದರೆ, ಪಿವಿಸಿ ಕಾರ್ಡ್‌ ಬೇಕೆಂದರೂ ನೀವು ಮನವಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಆಧಾರ್ ವಿವರಗಳನ್ನು ನವೀಕರಿಸುವುದು ಹೇಗೆ?
-ನೀವೇ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಬೇಕು ಎಂದರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ UIDAI ನ ಅಧಿಕೃತ ವೆಬ್‌ಸೈಟ್ ಆಗಿರುವ https://myaadhaar.uidai.gov.in ಗೆ ಭೇಟಿ ನೀಡಬೇಕಿದೆ.
-ನಂತರದಲ್ಲಿ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಬಳಸಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಪ್ರಕ್ರಿಯೆಯನ್ನು ದೃಢೀಕರಿಸಲು ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು OTP ಕಳುಹಿಸಲಾಗುತ್ತದೆ. ಅದನ್ನು ಅಗತ್ಯ ಜಾಗದಲ್ಲಿ ಭರ್ತಿ ಮಾಡಿ.

ಆಧಾರ್ ಕಾರ್ಡ್‌ ಬಳಕೆದಾರರೇ ಗಮನಿಸಿ... ಇದು ನಿಮಗೆ ಕೊನೇ ಅವಕಾಶ ಆಗಿರಬಹುದು!

-ಇಷ್ಟೆಲ್ಲಾ ಆದಮೇಲೆ ಡಾಕ್ಯುಮೆಂಟ್ ನವೀಕರಣ ವಿಭಾಗಕ್ಕೆ ಹೋಗಿ ಮತ್ತು ಏನನ್ನು ಬದಲಾವಣೆ ಮಾಡಲು ಇಚ್ಚಿಸಿದ್ದೀರೋ ಆ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಬಳಿಕ ಡ್ರಾಪ್-ಡೌನ್ ಪಟ್ಟಿಯಿಂದ ಸೂಕ್ತವಾದ ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆಮಾಡಿ.
- ನಾವು ನಿಮಗೆ ಮೊದಲೇ ತಿಳಿಸಿದ್ದೆವು. ಅದೇನೆಂದರೆ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ ಎಂದು. ಈ ವೇಳೆ ಆ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರದಲ್ಲಿ ಸಲ್ಲಿಸು ಅಥವಾ ಸಬ್‌ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್ ವಿನಂತಿಯ ಸ್ಟೇಟಸ್‌ ಅನ್ನು ಟ್ರ್ಯಾಕ್ ಮಾಡಲು ಸೇವಾ ವಿನಂತಿ ಸಂಖ್ಯೆ (SRN) ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
Aadhaar is an essential document especially for banking business and Karnataka government guarantee schemes, meanwhile Aadhaar authority has again given good news to the people of the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+