Aadhaar Card ಬಳಕೆದಾರರೇ ಗಮನಿಸಿ, ಈ ಉಚಿತ ಸೇವೆ 14 ಸೆಪ್ಟೆಂಬರ್ 2023ಗೆ ಕೊನೆ!
ಆಧಾರ್ ಕಾರ್ಡ್ (Aadhaar Card) ಇಂದಿನ ದಿನಗಳಲ್ಲಿ ಅತ್ಯಗತ್ಯ ದಾಖಲೆಯಾಗಿದೆ. ಈ ಒಂದು ಕಾರ್ಡ್ ಇದ್ದರೆ ಸಾಕು ಯಾವುದೇ ಸರ್ಕಾರಿ ಅಥವಾ ಖಾಸಗಿ ಕೆಲಸಗಳು ತುಂಬಾ ಸುಲಭವಾಗಿ ಜರುಗುತ್ತವೆ. ಅದರಲ್ಲೂ ಕರ್ನಾಟಕದಲ್ಲಿನ ಗ್ಯಾರಂಟಿ ಯೋಜನೆಗಳಿಗೂ ಸಹ ಈ ಆಧಾರ್ ಕಡ್ಡಾಯವಾಗಿದ್ದು, ಈ ನಡುವೆ ದೇಶದ ಎಲ್ಲರೂ ಸಹ ಈ ಉಚಿತ ಸೇವೆ ಪಡೆದುಕೊಳ್ಳಬಹುದಾಗಿದೆ.
ಹೌದು, ದೇಶದ ಎಲ್ಲಾ ಜನರು ತಮ್ಮ ಆಧಾರ್ ಡೇಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನೋಂದಣಿ ದಿನಾಂಕದಿಂದ ಕನಿಷ್ಠ ಹತ್ತು ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ನವೀಕರಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸಲಹೆ ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಆಗಾಗ್ಗೆ ಏನಾದರೂ ಬದಲಾವಣೆ ಮಾಡಬೇಕಿದ್ದರೂ ಸಹ ಅದಕ್ಕೂ ಅನುಕೂಲ ಮಾಡಿಕೊಟ್ಟಿದೆ. ಈ ನಡುವೆ ನೀವು 14 ಸೆಪ್ಟೆಂಬರ್ 2023ರ ಒಳಗೆ ಈ ಉಚಿತ ಸೇವೆ ಪಡೆದುಕೊಳ್ಳಬಹುದು.

ಏನಿದು ಉಚಿತ ಸೇವೆ?: UIDAI ನ ಆಧಾರ್ ಕಾರ್ಡ್ ದಾಖಲೆಗಳ ಉಚಿತ ನವೀಕರಣದ (Free update) ದಿನಾಂಕ ಆಗಾಗ್ಗೆ ವಿಸ್ತರಣೆ ಆಗುತ್ತಲೇ ಇರುತ್ತದೆ. ಅಂದರೆ ಈ ಹಿಂದೆ ಜೂನ್ 14 ಕ್ಕೆ ಕೊನೆಯ ದಿನಾಂಕ ನಿಗದಿಯಾಗಿತ್ತು. ಇದನ್ನು ವಿಸ್ತರಣೆ ಮಾಡಲಾಗಿ 14 ಸೆಪ್ಟೆಂಬರ್ 2023 ಅನ್ನು ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ. ಈ ದಿನಾಂಕದ ಒಳಗೆ ಜನರು ಒಂದು ರೂ. ಸಹ ವ್ಯವಮಾಡದೆ ತಮ್ಮ ಆಧಾರ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಇನ್ನು ಈ ಉಚಿತ ಸೇವೆಯು ಮೈ-ಆಧಾರ್ ಪೋರ್ಟಲ್‌ನಲ್ಲಿ(My-Aadhaar Portal) ಪ್ರತ್ಯೇಕವಾಗಿ ಲಭ್ಯವಿದೆ. ಆದರೆ, ಇದನ್ನು ಬಳಕೆ ಮಾಡಲು ಬರುವುದಿಲ್ಲ ಅಥವಾ ಅನಕ್ಷರಸ್ತರು ಎಂದಾದರೆ ನೀವು ಭೌತಿಕ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಈ ಸೇವೆ ಪಡೆದುಕೊಳ್ಳಬಹುದು.ಆದರೆ, ಇದಕ್ಕಾಗಿ ನೀವು 50 ರೂ.ಗಳನ್ನು ಪಾವತಿ ಮಾಡಬೇಕಿದೆ. ಈ ಉಚಿತ ಸೇವೆಯಲ್ಲಿ ಆಧಾರ್ ಕಾರ್ಡ್‌ದಾರರು ಹೆಸರು, ಹುಟ್ಟಿದ ದಿನಾಂಕ, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಬದಲಾವಣೆ ಮಾಡಿಕೊಳ್ಳಬಹುದು. ಹಾಗಿದ್ರೆ, ಬನ್ನಿ ಆನ್‌ಲೈನ್‌ನಲ್ಲಿ ಹೇಗೆ ಅಪ್‌ಡೇಟ್ ಮಾಡುವುದು ನೋಡೋಣ.
ಹಂತ 1 : ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://myaadhaar.uidai.gov.in/ ನಲ್ಲಿ ಲಾಗಿನ್ ಮಾಡಬೇಕಿದೆ. ನಂತರ 'ಡಾಕ್ಯುಮೆಂಟ್ ಅಪ್‌ಡೇಟ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಬೇಕು. ಈ ವೇಳೆ ನಿಮ್ಮ ಅಸ್ತಿತ್ವದಲ್ಲಿರುವ ಸೇವೆಗಳ ವಿವರಗಳನ್ನು ಡಿಸ್‌ಪ್ಲೇ ಮಾಡಲಾಗುತ್ತದೆ.
ಹಂತ 2 : ಇದಾದ ನಂತರದಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್ಲಿಂಕ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕಿದೆ. ಇನ್ನು ಅಪ್ಲಿಕೇಶನ್ ಹಾಕುವ ಮುನ್ನವೇ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಮತ್ತು ಪಾವತಿ ಮಾಡಲು ಮುಂದುವರಿಯಿರಿ.
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ನಾಗರಿಕರಿಗೆ ಆಧಾರ್ ಸಂಖ್ಯೆಯು ವ್ಯಾಪಕವಾಗಿ ಗುರುತಿಸಲ್ಪಟ್ಟ ಗುರುತಿನ ಪುರಾವೆಯಾಗಿದೆ. ಆಧಾರ್ ಆಧಾರಿತ ಗುರುತನ್ನು ಸುಮಾರು 1,200 ಸರ್ಕಾರಿ ಉಪಕ್ರಮಗಳು ಮತ್ತು ಕಾರ್ಯಕ್ರಮಗಳಲ್ಲಿ ಸೇವಾ ವಿತರಣೆಗಾಗಿ ಬಳಕೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಫೆಡರಲ್ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ.
ಹೆಚ್ಚುವರಿಯಾಗಿ, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ಹಣಕಾಸು ಸಂಸ್ಥೆಗಳಂತಹ ಸೇವಾ ಪೂರೈಕೆದಾರರು ನೀಡುವ ಹಲವಾರು ಇತರ ಸೇವೆಗಳು ಸಹ ಆಧಾರ್ ಅನ್ನು ಸುಲಭವಾಗಿ ದೃಢೀಕರಿಸಲು ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ಡಿಜಿಟಲ್ ಆರ್ಥಿಕ ವ್ಯವಹಾರ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅಷ್ಟು ಮಾತ್ರವಲ್ಲದೆ ಯುಪಿಐ ಪಾವತಿ ವ್ಯವಸ್ಥೆಗೂ ಸಹ ಆಧಾರ್ ನಂಬರ್ ಬಳಕೆ ಮಾಡಿಕೊಳ್ಳಬಹುದು.

ಅದರಂತೆ ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳು, 2016 ರ ಅಡಿಯಲ್ಲಿ, ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಡೇಟಾದ ನಿಖರತೆಯನ್ನು ಕಾಪಾಡಿಕೊಳ್ಳಲು ದಾಖಲಾತಿ ದಿನಾಂಕದಿಂದ ಕನಿಷ್ಠ ಹತ್ತು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲಾತಿಗಳನ್ನು ನವೀಕರಿಸಲು ಅನುಮತಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರ ಹಾಗೂ ಮೋಸದ ವ್ಯವಹಾರಕ್ಕೆ ತಿಲಾಂಜಲಿ ಇಡಲಾಗುತ್ತಿದೆ.


Click it and Unblock the Notifications








