ಆಧಾರ್ ಇದ್ದರೇ ಮಾತ್ರ ರೈಲ್ವೆ ಟಿಕೇಟ್..! ಏನೀದು ಹೊಸ ನಿಯಮ..?

ಈಗ ರೈಲ್ವೆ ಟಿಕೇಟ್‌ ಬುಕ್ ಮಾಡಲು ಆಧಾರ್ ಕಡ್ಡಾಯ ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

|

ಕೇಂದ್ರ ಸರಕಾರವೂ ಆಧಾರ್‌ ಬಳಕೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಪ್ಯಾನ್‌ ಕಾರ್ಡ್‌, ರೇಷನ್ ಕಾರ್ಡ್‌ ಮುಂತಾದ ಎಲ್ಲಾ ಸರಕಾರಿ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯ ಮಾಡಿದ್ದು, ಈಗ ರೈಲ್ವೆ ಟಿಕೇಟ್‌ ಬುಕ್ ಮಾಡಲು ಆಧಾರ್ ಕಡ್ಡಾಯ ಮಾಡಲು ಮುಂದಾಗಿದೆ.

ಆಧಾರ್ ಇದ್ದರೇ ಮಾತ್ರ ರೈಲ್ವೆ ಟಿಕೇಟ್..! ಏನೀದು ಹೊಸ ನಿಯಮ..?

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಇನ್ನು ಮುಂದೆ ಆಧಾರ್‌ ಕಾರ್ಡ್ ಇದ್ದರೆ ಮಾತ್ರ ರೈಲ್ವೇ ಆನ್‌ಲೈನ್‌ ಮುಂಗಡ ಟಿಕೆಟ್‌ ಪಡೆಯ ಬಹುದಾಗಿದ್ದು, ಆಧಾರ್‌ ಬಳಕೆ ಕಡ್ಡಾಯಪಡಿಸಲು ರೈಲ್ವೇ ಸಚಿವಾಲಯ ಮುಂದಾಗಿದೆ.

ನಕಲಿ ಬುಕಿಂಗ್ ತಡೆಯಲು

ನಕಲಿ ಬುಕಿಂಗ್ ತಡೆಯಲು

ಹೆಚ್ಚು ಟಿಕೆಟ್‌ಗಳನ್ನು ಕಾಯ್ದಿರಿಸುವ ವೇಳೆ ನಡೆಯುವ ವಂಚನೆ ತಡೆಯಲು ಮತ್ತು ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸುವುದಕ್ಕೆ ತಡೆಯೊಡ್ಡಲು ಟಿಕೇಟ್ ಬ್ಲಾಕಿಂಗ್ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಆಧಾರ ಕಡ್ಡಾಯಗೊಳಿಸಲು ಮುಂದಾಗಿದೆ.

ರೈಲ್ವೆ ಟಿಕೆಟ್‌ಗೆ ಆಧಾರ್‌ ಜೋಡಣೆ

ರೈಲ್ವೆ ಟಿಕೆಟ್‌ಗೆ ಆಧಾರ್‌ ಜೋಡಣೆ

ಈ ಕುರಿತು ಮಾಹಿತಿ ನೀಡಿದ ರೈಲ್ವೇ ಸಚಿವ ಸುರೇಶ್‌ ಪ್ರಭು, 2017-18ರ ರೈಲ್ವೆ ವಾಣಿಜ್ಯ ಯೋಜನೆಯಲ್ಲಿ ರೈಲ್ವೆ ಟಿಕೆಟ್‌ಗೆ ಆಧಾರ್‌ ಜೋಡಣೆ ಕುರಿತು ಹೇಳಿದರು. ಇದಕ್ಕಾಗಿ ಮೇ ತಿಂಗಳ ಒಳಗಾಗಿ ಮೊಬೈಲ್‌ ಆಪ್ ಕೂಡ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ನಗದು ರಹಿತ ಟಿಕೆಟ್‌

ನಗದು ರಹಿತ ಟಿಕೆಟ್‌

ನಗದು ರಹಿತ ಟಿಕೆಟ್‌ ಪಡೆಯುವ ವ್ಯವಸ್ಥೆ ಉತ್ತೇಜಿಸುವ ಸಲುವಾಗಿ ದೇಶಾದ್ಯಂತ 1,000 ಸ್ವಯಂ ಚಾಲಿತ ಟಿಕೆಟ್‌ ವಿತರಣೆ ಯಂತ್ರ ಸ್ಥಾಪಿಸುವುದಾಗಿ ಮತ್ತು 6,000 ಪಾಯಿಂಟ್‌ ಆಫ್ ಸೇಲ್‌ ಮೆಷಿನ್‌ ಸ್ಥಾಪಿಸುವುದಾಗಿ ಹೇಳಿದ್ದಾರೆ.

Best Mobiles in India

Read more about:
English summary
Indian Railways announced on March 2, 2016, that they will be working to integrate the Aadhaar card with the online train ticket booking system. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X