Aadhaar: ಇನ್ಮುಂದೆ ಹೊಸ ಆಧಾರ್ ಕಾರ್ಡ್ ಪಡೆಯುವುದು ಸುಲಭದ ಮಾತಲ್ಲ! 180 ದಿನ ಕಾಯಬೇಕು?
ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ. ಈ ಮೂಲಕ ಸರ್ಕಾರದ ಅಥವಾ ಇತರೆ ಯಾವುದೇ ಸಂಸ್ಥೆಯ ವ್ಯವಹಾರಗಳನ್ನು ಸುಲಭವಾಗಿ ನಡೆಸಬಹುದಾಗಿದೆ. ಜೊತೆಗೆ ಇದನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಶಾಕಿಂಗ್ ವರದಿಯೊಂದು ಹೊರಬಿದ್ದಿದೆ.
ಹೌದು, ಆಧಾರ್ ಕಾರ್ಡ್ ಸಂಬಂಧ ಜನರು ಶಾಕ್ ಆಗುವ ಸುದ್ದಿ ಹೊರಬಿದ್ದಿದೆ. ಅದುವೇ ಇನ್ಮುಂದೆ ಆಧಾರ್ ಕಾರ್ಡ್ ಪಡೆದುಕೊಳ್ಳಲು ಬರೋಬ್ಬರಿ 180 ದಿನಗಳು ಕಾಯಬೇಕು ಎನ್ನುವುದು. ಹಾಗಿದ್ರೆ, ಏನಿದು ಹೊಸ ರೂಲ್ಸ್?, ಭಾರತ ಸರ್ಕಾರ ಯಾಕೆ ಈ ನಿರ್ಧಾರ ಮಾಡುತ್ತಿದೆ?, ಇಷ್ಟು ದಿನಗಳ ಅಗತ್ಯತೆ ಯಾಕಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಧಾರ್ ಕಾರ್ಡ್ ಪಡೆಯಲು 180 ದಿನ ಬೇಕು: ಈ ಮೊದಲು ಭಾರತ ಸರ್ಕಾರ ಕೆಲವು ಪ್ರಮುಖ ದಾಖಲೆಗಳನ್ನು ಪಡೆಯಲು ಹಲವು ದಿನಗಳು ಕಾಯಬೇಕಿತ್ತು. ಅದೇ ನಿಯಮ ಈಗ ಆಧಾರ್ ಕಾರ್ಡ್‌ಗೂ ಅನ್ವಯ ಆಗಲಿದೆ ಎನ್ನಲಾಗಿದೆ. ಅದರಂತೆ ಆಧಾರ್ ಕಾರ್ಡ್ ಸಂಬಂಧ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಆಧಾರ್ ಪಡೆಯಲು ಆರು ತಿಂಗಳು ಅಂದರೆ ಸುಮಾರು 180 ತಿಂಗಳು ಕಾಯಬೇಕು ಎನ್ನಲಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಎಲ್ಲಾ ರೀತಿಯ ಡೇಟಾವನ್ನು UIDAI ಪರಿಶೀಲನೆಗೆ ಒಳಪಡಿಸುತ್ತದಂತೆ.
ಇನ್ನು ಆಧಾರ್ ಕಾರ್ಡ್‌ಗಾಗಿ ದೇಶದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದ್ದು, ಪಾಸ್ ಪೋರ್ಟ್ ವೆರಿಫಿಕೇಶನ್ ಮಾಡಿದಂತೆ ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ಪ್ರಮುಖವಾಗಿ ಎಸ್‌ಡಿಎಂ ಮಟ್ಟದ ಅಧಿಕಾರಿಗಳಿಂದ ಅನುಮತಿ ಪಡೆದಾಗ ಮಾತ್ರ ಆಧಾರ್ ಕಾರ್ಡ್‌ಗಾಗಿ ಪರಿಶೀಲನೆಯನ್ನು ಪರಿಗಣಿಸಲಾಗುವುದು ಎಂದು ತಿಳಿದುಬಂದಿದೆ. ಇದರ ನಂತರವೇ ಆಧಾರ್ ನೀಡಲಾಗುವುದು. ಸದ್ಯಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಈ ಹೊಸ ವ್ಯವಸ್ಥೆ ಉತ್ತರ ಪ್ರದೇಶದಲ್ಲಿ ಜಾರಿಯಾಗಿದೆ.

ಈ ಹೊಸ ಪ್ರಕ್ರಿಯೆಯು ಯಾರಿಗೆ ಅನ್ವಯಿಸುತ್ತದೆ?: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಹೊಸ ಸೂಚನೆಗಳ ಪ್ರಕಾರ 18 ವರ್ಷ ತುಂಬಿದವರಿಗೆ ಮಾತ್ರ ಈ ಪ್ರಕ್ರಿಯೆ ಅನ್ವಯವಾಗಲಿದೆ. ಆಧಾರ್ ಕಾರ್ಡ್ ಮಾಡಿದ ನಂತರ, ಅವರು ಸಾಮಾನ್ಯ ಪ್ರಕ್ರಿಯೆಯ ಪ್ರಕಾರ ಎಲ್ಲಾ ರೀತಿಯ ನವೀಕರಣಗಳನ್ನು ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಆಧಾರ್ ಕಾರ್ಡ್ ಇರುವ ಜನರು ಈ ಹೊಸ ವ್ಯವಸ್ಥೆಯನ್ನು ಅನುಸರಿಸಬೇಕಾಗಿಲ್ಲ.
ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ: ಸೂಚನೆಗಳ ಪ್ರಕಾರ, ಅರ್ಜಿಯ ಭೌತಿಕ ಪರಿಶೀಲನೆಗಾಗಿ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉಪವಿಭಾಗ ಮಟ್ಟದಲ್ಲಿ ಎಸ್‌ಡಿಎಂ ಅವರನ್ನು ನಾಮನಿರ್ದೇಶನ ಮಾಡುತ್ತದೆ. ಈ ನಿಯೋಜಿತ ಅಧಿಕಾರಿಗಳಿಂದ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಕಾರ್ಡ್‌ಗಳನ್ನು ನೀಡಲಾಗುತ್ತದೆ.
ಆರು ತಿಂಗಳ ಅವಧಿಯನ್ನು ತೆಗೆದುಕೊಳ್ಳಬಹುದು: ಆಧಾರ್ ಕಾರ್ಡ್ ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಹೊಸ ಆಧಾರ್ ನೀಡಲು ಆರು ತಿಂಗಳು ಅಂದರೆ ಸುಮಾರು 180 ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಯಾಕೆಂದರೆ ವ್ಯಕ್ತಿಯು ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ನಂತರ ಎಲ್ಲಾ ರೀತಿಯ ಡೇಟಾವನ್ನು UIDAI ಪರಿಶೀಲನೆ ಒಳಪಡಿಸುತ್ತದೆ. ಇದರ ನಂತರ ಅರ್ಜಿಯನ್ನು ಸರ್ವೀಸ್ ಪ್ಲಸ್ ಪೋರ್ಟಲ್‌ಗೆ ಕಳುಹಿಸಲಾಗುತ್ತದೆ. ಪೋರ್ಟಲ್‌ನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು SDM ಪರಿಶೀಲಿಸುತ್ತದೆ. ಪರಿಶೀಲನೆಯ ಸಮಯದಲ್ಲಿ ದಾಖಲೆಗಳು ಅಥವಾ ಮಾಹಿತಿಯು ತಪ್ಪಾಗಿದ್ದರೆ ಅಥವಾ ಅನುಮಾನಾಸ್ಪದವಾಗಿ ಕಂಡುಬಂದರೆ, ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಭೌತಿಕ ಪರಿಶೀಲನೆಯನ್ನೂ ಮಾಡಲಾಗುತ್ತದೆ: ದೇಶದಲ್ಲಿ ಆಧಾರ್ ಕಾರ್ಡ್ ವಂಚನೆಗಳನ್ನು ತಡೆಯುವುದು ಈ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಹಿಂದಿನ ಪ್ರಮುಖ ಉದ್ದೇಶವಾಗಿದ್ದು, ದೈಹಿಕ ಪರಿಶೀಲನೆಗಾಗಿ ವ್ಯಕ್ತಿಯು ಸ್ಥಳದಲ್ಲಿ ಹಾಜರಿರುವುದು ಕಡ್ಡಾಯವಾಗಿದೆ. ಅನೇಕ ಜನರು ಈಗಾಗಲೇ ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಿ ತಮ್ಮ ಗುರುತನ್ನು ಸುಲಭವಾಗಿ ಮರೆಮಾಚುವ ಮೂಲಕ ಅಪರಾಧಗಳನ್ನು ಮಾಡುವುದು ಹೆಚ್ಚಾಗುತ್ತಿರುವ ಪರಿಣಾಮ ಈ ನಿಯಮ ಕಡ್ಡಾಯಗೊಳಿಸಲಾಗುತ್ತಿದೆ.


Click it and Unblock the Notifications








