Home
ಸುದ್ದಿಜಾಲ

Aadhaar card ಬಳಕೆದಾರರೇ ಗಮನಿಸಿ, ಆನ್‌ಲೈನ್‌ನಲ್ಲಿನ ಈ ಸೇವೆಗಳ ಬಗ್ಗೆ ತಿಳಿದಿದೆಯಾ?

ಆಧಾರ್ (Aadhaar card) ಇಂದಿನ ದಿನಗಳಲ್ಲಿ ಬಹು ಅಗತ್ಯವಾದ ಗುರುತಿನ ಪುರಾವೆಯಾಗಿದೆ. ಈ ಕಾರ್ಡ್‌ ಮೂಲಕ ದೇಶದ ಜನರು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಆಧಾರ್ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಡುವೆ ಆಧಾರ್‌ ಕಾರ್ಡ್‌ ಅನ್ನು ಸಹ ಕಾಲಕಾಲಕ್ಕೆ ನವೀಕರಿಸುವುದು ಸಹ ಪ್ರಮುಖವಾದ ಕೆಲಸವಾಗಿದೆ.

ಹೌದು, ಆಧಾರ್‌ ಅನ್ನು ಬ್ಯಾಂಕ್, ಹಣಕಾಸು ಸೇವೆಗಳು, ಪಾಸ್‌ಪೋರ್ಟ್ ಮತ್ತು ಎಲ್ಲಾ ಸರ್ಕಾರಿ ಸೇವೆಗಳು ಸೇರಿದಂತೆ ಪ್ರಮುಖ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಕಾರಣಕ್ಕಾಗಿಯೇ ಆಧಾರ್‌ ನವೀಕರಣ ಅಗತ್ಯವಾಗಿದೆ. ಈ ವೇಳೆ ವಿಳಾಸ ಅಥವಾ ಫೋನ್ ಸಂಖ್ಯೆಯ ಯಾವುದೇ ಬದಲಾವಣೆಯನ್ನು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬೇಕಾಗುತ್ತದೆ. ಜೊತೆಗೆ ಭದ್ರತಾ ಕಾರಣಗಳಿಗಾಗಿ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ಬಯೋಮೆಟ್ರಿಕ್‌ಗಳನ್ನು ನವೀಕರಿಸಲು ಸಲಹೆ ನೀಡಲಾಗುತ್ತದೆ.

Aadhaarcardಬಳಕೆದಾರರೇ ಗಮನಿಸಿ,ಆನ್‌ಲೈನ್‌ನಲ್ಲಿನ ಈ ಸೇವೆಗಳ ಬಗ್ಗೆ ತಿಳಿದಿದೆಯಾ?

ಅದರಲ್ಲೂ ಕೆಲವು ಆಧಾರ್ ಸಂಬಂಧಿತ ಸೇವೆಗಳನ್ನು ಆನ್‌ಲೈನ್‌ ನಲ್ಲೇ (online) ಮಾಡಬಹುದಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್‌ನ ಆನ್‌ಲೈನ್ ನವೀಕರಣಕ್ಕಾಗಿ 50 ರೂ.ಗಳನ್ನು ನೀವು ಪಾವತಿ ಮಾಡಬೇಕು. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಆಧಾರ್‌ನಲ್ಲಿ ನೀವು ಪಡೆಯಬಹುದಾದ ಪ್ರಮುಖ ಸೇವೆಗಳು ಯಾವುವು ಎಂಬುದನ್ನು ನೋಡೋಣ.

* UIDAI ವೆಬ್‌ಸೈಟ್ ನಾಗರಿಕರು ತಮ್ಮ ಆಧಾರ್ ಕಾರ್ಡ್‌ಗಳಲ್ಲಿನ ವಿಳಾಸಗಳನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ. ಈ ವೇಳೆ ನಾಗರಿಕರಿಗೆ ಮಾನ್ಯವಾದ ವಿಳಾಸ ಪುರಾವೆ ಅಥವಾ ವಿಳಾಸ ದೃಢೀಕರಣ ಪತ್ರದ ಅಗತ್ಯವಿರುತ್ತದೆ. ಜೊತೆಗೆ ಆಧಾರ್‌ನಲ್ಲಿ ಮಾಡಿದ ಯಾವುದೇ ನವೀಕರಣ/ಬದಲಾವಣೆಯ ಸ್ಥಿತಿಯನ್ನು ಪರಿಶೀಲಿಸಲು ನಿಮಗೆ ಅವಕಾಶ ಇರುತ್ತದೆ. ಅಂದರೆ ನೀವು ಆಧಾರ್ ಸೇವಾ ಕೇಂದ್ರದಲ್ಲಿ ಮಾಡಿಸಿದ ಬದಲಾವಣೆಗಳು/ಅಪ್‌ಡೇಟ್‌ಗಳು ಕಾಣಿಸಿಕೊಳ್ಳುತ್ತವೆ.

* ನಿಮ್ಮ ಆಧಾರ್‌ನಲ್ಲಿ ನೀವು ಮಾಡಿದ ನವೀಕರಣಗಳ ವಿವರಗಳನ್ನು ನೀವು 'ಆಧಾರ್ ನವೀಕರಣ ಇತಿಹಾಸ'ಎಂಬ ಆಯ್ಕೆಯ ಮೂಲಕ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ನೀವು ಆನ್‌ಲೈನ್‌ನಲ್ಲಿ ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಬಹುದು, ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಪತ್ತೆ ಮಾಡಿಕೊಳ್ಳಬಹುದು ಹಾಗೂ ಆಧಾರ್ ಸೇವಾ ಕೇಂದ್ರಕ್ಕೆ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ..

* ಇಷ್ಟು ಮಾತ್ರವಲ್ಲದೆ ನೀವೇ ಆನ್‌ಲೈನ್‌ ಮೂಲಕ ನಿಮ್ಮ ಆಧಾರ್ ಕಾರ್ಡ್‌ನ ಸಿಂಧುತ್ವವನ್ನು ಪರಿಶೀಲಿಸಿಕೊಳ್ಳಬಹುದು. ಜೊತೆಗೆ ನಿಮ್ಮ ಆಧಾರ್ ಅಥವಾ ಅದಕ್ಕಿಂತ ಹೆಚ್ಚಿನ ದುರ್ಬಳಕೆಗೆ ಸಂಬಂಧಿಸಿದ ದೂರನ್ನು ವೆಬ್‌ಸೈಟ್‌ ಮೂಲಕ ದಾಖಲು ಮಾಡಿ ಪರಿಹಾರ ಪಡೆಯಬಹುದು. ಉಳಿದಂತೆ m-Aadhaar ವೆಬ್‌ಸೈಟ್‌ನಿಂದ ನಿಮ್ಮ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಬಹುದು.

* ಇನ್ನು m-Aadhaar ಸೇವೆ ಪಡೆಯಲು ಮೊಬೈಲ್‌ ಆಪ್‌ ಸಹ ನೀಡಲಾಗಿದ್ದು, ಇದರ ಮೂಲಕ ಆಧಾರ್ ಅನ್ನು ಪರಿಶೀಲಿಸುವುದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಇತ್ಯಾದಿಗಳಂತಹ ಕೆಲವು ಸೇವೆಗಳನ್ನು ಮೊಬೈಲ್‌ ನಂಬರ್‌ ಇಲ್ಲದೆ ಪಡೆಯಲು ಸಾಧ್ಯವಾಗುತ್ತದೆ. ಆದಾಗ್ಯೂ, m-Aadhaar ನಲ್ಲಿ ಪ್ರೊಫೈಲ್ ರಚಿಸಲು ನೋಂದಾಯಿತ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ. ಯಾಕೆಂದರೆ ಪ್ರೊಫೈಲ್ ರಚಿಸಲು ಓಟಿಪಿಯನ್ನು ನೋಂದಾಯಿತ ಮೊಬೈಲ್‌ಗೆ ಮಾತ್ರ ಕಳುಹಿಸಲಾಗುತ್ತದೆ. ಇದರೊಂದಿಗೆ ಹೆಚ್ಚಿನ ಸೇವೆ ಪಡೆದುಕೊಳ್ಳಬಹುದು.

Aadhaarcardಬಳಕೆದಾರರೇ ಗಮನಿಸಿ,ಆನ್‌ಲೈನ್‌ನಲ್ಲಿನ ಈ ಸೇವೆಗಳ ಬಗ್ಗೆ ತಿಳಿದಿದೆಯಾ?

* ಇಷ್ಟು ಮಾತ್ರವಲ್ಲದೆ ನೀವು ವೆಬ್‌ಸೈಟ್‌ ಮೂಲಕ ಡೌನ್‌ಲೋಡ್ ಮಾಡಿಕೊಂಡ ಆಧಾರ್‌ಗೆ ತನ್ನದೇ ಆದ ಪಾಸ್‌ವರ್ಕ್‌ ಆಯ್ಕೆ ಇರುತ್ತದೆ. ಅಂದರೆ ನಿಮ್ಮ ಹೆಸರು ಹಾಗೂ ಜನ್ಮ ದಿನಾಂಕವನ್ನು ಈ ವೇಳೆ ಎಂಟ್ರಿ ಮಾಡಿದರಷ್ಟೇ ಆಧಾರ್‌ ಓಪನ್‌ ಆಗುತ್ತದೆ. ಆದರೆ ಈಗ ನೀವು ಈ ಪಾಸ್‌ವರ್ಡ್‌ ಅನ್ನೂ ಸಹ ನಿಮಗೆ ಇಷ್ಟಬಂದ ಹಾಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಈ ನಡುವೆ ಆಧಾರ್ ಹಾಗೂ ವೋಟರ್ ಐಡಿಯನ್ನು ಲಿಂಕ್‌ ಮಾಡುವ ಪ್ರಕ್ರಿಯೆ ದೇಶದಲ್ಲಿ ಆರಂಭ ಆಗಿದೆ. ಆದರೆ ಇದು 'ಸ್ವಯಂಪ್ರೇರಿತ' ವಾಗಿದ್ದು, ಯಾವುದೇ ಕಡ್ಡಾಯದ ವಿಷಯವಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ವಿಷಯವನ್ನು ಈಗ ಸಂಸತ್ತಿನಲ್ಲಿ ಪುನರುಚ್ಚರಿಸಲಾಗಿದೆ. ಅಂದರೆ ಆಧಾರ್ ಕಾಯಿದೆ, 2016 ರ ಅಡಿಯಲ್ಲಿ ಆಧಾರ್ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡುವುದು ಕಡ್ಡಾಯವಲ್ಲ, ಆದರೆ ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯಿದೆ, 2021 ರ ಅಡಿಯಲ್ಲಿ ಸ್ವಯಂಪ್ರೇರಿತವಾಗಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳಿದೆ.

Best Mobiles in India

English summary
Aadhaar is used for important works including banking, financial services, passport and all government services and this is why Aadhaar renewal is necessary. Accordingly, here are the top ten services that you can do yourself online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+