Home
ಸುದ್ದಿಜಾಲ

ಆಧಾರ್ ದೃಢೀಕರಣದಲ್ಲಿ ಹೊಸ ದಾಖಲೆ; 1,96 ಶತಕೋಟಿ ವಹಿವಾಟು

ಆಧಾರ್‌ ಇಂದು ಅತ್ಯಗತ್ಯ ದಾಖಲೆಯಾಗಿದ್ದು, ಈ ಮೂಲಕ ಸರ್ಕಾರದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ನಡುವೆ ಆಧಾರ್‌ ನಲ್ಲಿ ಭದ್ರತಾ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ. ಈ ನಡುವೆ ಆಧಾರ್‌ ದೃಢೀಕರಣ ವಹಿವಾಟಿನಲ್ಲಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಲಾಗಿದೆ.

ಹೌದು, ಆಧಾರ್ ಹೊಂದಿರುವವರು ಏಪ್ರಿಲ್ 2023 ರಲ್ಲಿ 1.96 ಶತಕೋಟಿ ಆಧಾರ್‌ ದೃಢೀಕರಣ ವಹಿವಾಟುಗಳನ್ನು ಮಾಡಿದ್ದಾರೆ ಎಂದು ವರದರಿಯಾಗಿದೆ. ಅಂದರೆ ಏಪ್ರಿಲ್ 2022ಕ್ಕೆ ಹೋಲಿಕೆ ಮಾಡಿಕೊಂಡರೆ 19.3 ಶೇಕಡಾಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಈ ವಹಿವಾಟು ಪ್ರಕ್ರಿಯೆ ಜರುಗಿದೆ. ಈ ಬದಲಾವಣೆಯು ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ ಮತ್ತು ಭಾರತದಲ್ಲಿ ಆಧಾರ್‌ನ ಹೆಚ್ಚಿನ ಬಳಕೆಯನ್ನು ಸೂಚಿಸುತ್ತದೆ. ಹಾಗಿದ್ರೆ, ಬನ್ನಿ ಆಧಾರ್‌‌ ದೃಢೀಕರಣ ವಹಿವಾಟುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಆಧಾರ್ ದೃಢೀಕರಣದಲ್ಲಿ ಹೊಸ ದಾಖಲೆ; 1,96 ಶತಕೋಟಿ ವಹಿವಾಟು

ಆಧಾರ್‌ ಮೂಲಕ ವಹಿವಾಟು: ಆಧಾರ್ ಬಳಕೆದಾರರು ಏಪ್ರಿಲ್ 2023 ರಲ್ಲಿ1.96 ಶತಕೋಟಿ ದೃಢೀಕರಣ ವಹಿವಾಟುಗಳನ್ನು ಕಾರ್ಯಗತಗೊಳಿಸಿದ್ದಾರೆ. ಈ ಹೆಚ್ಚಿನ ದೃಢೀಕರಣ ವಹಿವಾಟು ಸಂಖ್ಯೆಗಳನ್ನು ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ಮಾಡಲಾಗಿದ್ದರೂ ಸಹ ಡೆಮೊಗ್ರಾಫಿಕ್ ಹಾಗೂ ಓಟಿಪಿ ಆಧಾರಿತ ದೃಢೀಕರಣಗಳಗಳನ್ನು ಅನುಸರಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮಾಹಿತಿ ನೀಡಿದೆ.

ಹಾಗೆಯೇ ಮುಖದ ದೃಢೀಕರಣವು ಸುಲಭವಾದ ಸೇವೆಯನ್ನು ನೀಡಲು ಎಲ್ಲಾ ವಲಯಗಳಾದ್ಯಂತ ಉತ್ತಮ ಬಳಕೆಗೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನುಳಿದಂತೆ ವಯಸ್ಕರಲ್ಲಿ ಆಧಾರ್ ಸ್ಯಾಚುರೇಶನ್ ಸಾರ್ವತ್ರಿಕವಾಗಿ ಮುಂದುವರೆದಿದೆ. ಹಾಗೆಯೇ ಎಲ್ಲಾ ವಯೋಮಾನದವರಲ್ಲಿ ಸ್ಯಾಚುರೇಶನ್ ಮಟ್ಟವು ಈಗ 94.8 ಪ್ರತಿಶತಕ್ಕೆ ಏರಿದ್ದು, ಇದು ಆಧಾರ್‌ನ ತಲುಪುವಿಕೆ ಮತ್ತು ಅಳವಡಿಕೆಯನ್ನು ಸೂಚಿಸುತ್ತದೆ ಎಂದು ತಿಳಿಸಲಾಗಿದೆ. ಈ ನಡುವೆ ಏಪ್ರಿಲ್ ತಿಂಗಳಿನಲ್ಲಿ 15.44 ಮಿಲಿಯನ್‌ಗಿಂತಲೂ ಹೆಚ್ಚು ಆಧಾರ್‌ಗಳನ್ನು ನವೀಕರಿಸಲಾಗಿದೆಯಂತೆ.

ಆಧಾರ್ ದೃಢೀಕರಣದಲ್ಲಿ ಹೊಸ ದಾಖಲೆ; 1,96 ಶತಕೋಟಿ ವಹಿವಾಟು

ಆಧಾರ್ ಇ-ಕೆವೈಸಿ ಸೇವೆ: ಇದರೊಂದಿಗೆ ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್-ಅಲ್ಲದ ಹಣಕಾಸು ಸೇವೆಗಳಿಗೆ ಪಾರದರ್ಶಕ ಮತ್ತು ಸುಧಾರಿತ ಗ್ರಾಹಕರ ಅನುಭವವನ್ನು ನೀಡುವ ಮೂಲಕ ಬಳಕೆದಾರರ ವ್ಯವಹಾರವನ್ನು ಸುಲಭಗೊಳಿಸುತ್ತಿದೆ. ಈ ನಡುವೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ವಿಭಾಗದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದ್ದು, ಏಪ್ರಿಲ್ 2023 ರಲ್ಲಿ AePS ಮತ್ತು ಮೈಕ್ರೋ ಎಟಿಎಮ್‌ ಗಳ ನೆಟ್‌ವರ್ಕ್ ಮೂಲಕ 200.6 ಮಿಲಿಯನ್‌ಗಿಂತಲೂ ಹೆಚ್ಚು ಮೈಲ್ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲಾಗಿದೆಯಂತೆ.

ಇನ್ನುಳಿದಂತೆ ಏಪ್ರಿಲ್‌ನಲ್ಲಿಯೇ 250.5 ಮಿಲಿಯನ್‌ಗಿಂತಲೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದ್ದು, ಈ ಇ-ಕೆವೈಸಿ ವ್ಯವಸ್ಥೆ ಹಣಕಾಸು ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಇತರ ಸಂಸ್ಥೆಗಳ ಗ್ರಾಹಕರ ಸ್ವಾಧೀನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಜೊತೆಗೆ ಏಪ್ರಿಲ್ 2023 ರ ಅಂತ್ಯದ ವೇಳೆಗೆ, ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಚಿತ ಸಂಖ್ಯೆ 14.95 ಬಿಲಿಯನ್ ದಾಟಿದೆ.

ಆಧಾರ್ ದೃಢೀಕರಣ ವಹಿವಾಟು ಎಂದರೇನು?: ಆಧಾರ್ ದೃಢೀಕರಣ ವಹಿವಾಟುಗಳು ಭಾರತದಲ್ಲಿ ಆಧಾರ್ ವ್ಯವಸ್ಥೆಯನ್ನು ಬಳಸಿಕೊಂಡು ವ್ಯಕ್ತಿಯ ಗುರುತನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸುತ್ತವೆ. ಆಧಾರ್ ದೃಢೀಕರಣವು ವ್ಯಕ್ತಿಯ ಆಧಾರ್ ಸಂಖ್ಯೆಗೆ ಸಂಬಂಧಿಸಿದ ಜನಸಂಖ್ಯಾ(ಡೆಮೊಗ್ರಾಫಿಕ್) ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಜನಸಂಖ್ಯಾ ಮಾಹಿತಿಯು ಹೆಸರು, ಜನ್ಮ ದಿನಾಂಕ ಮತ್ತು ವಿಳಾಸದಂತಹ ವಿವರಗಳನ್ನು ಒಳಗೊಂಡಿರುತ್ತದೆ, ಬಯೋಮೆಟ್ರಿಕ್ ಮಾಹಿತಿಯು ಸಾಮಾನ್ಯವಾಗಿ ಫಿಂಗರ್‌ಪ್ರಿಂಟ್‌ಗಳು ಮತ್ತು ಐರಿಸ್ ಸ್ಕ್ಯಾನ್‌ಗಳನ್ನು ಒಳಗೊಂಡಿರುತ್ತದೆ.

ಆಧಾರ್ ದೃಢೀಕರಣದಲ್ಲಿ ಹೊಸ ದಾಖಲೆ; 1,96 ಶತಕೋಟಿ ವಹಿವಾಟು

ಒಬ್ಬ ವ್ಯಕ್ತಿಯು ಆಧಾರ್ ಬಳಸಿ ತಮ್ಮ ಗುರುತನ್ನು ದೃಢೀಕರಿಸಲು ಬಯಸಿದಾಗ, ಅವರು ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುತ್ತಾರೆ ಮತ್ತು ಅಗತ್ಯ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗುತ್ತಾರೆ. ಯುಐಡಿಎಐ ನಿರ್ವಹಿಸುವ ಆಧಾರ್ ಡೇಟಾಬೇಸ್‌ಗೆ ಸಂಪರ್ಕಿಸುವ ಸುರಕ್ಷಿತ ಆನ್‌ಲೈನ್ ವ್ಯವಸ್ಥೆಯ ಮೂಲಕ ದೃಢೀಕರಣ ವಹಿವಾಟನ್ನುಈ ಮೂಲಕ ಕೈಗೊಳ್ಳಲಾಗುತ್ತದೆ. ಜೊತೆಗೆ ಆ ವ್ಯಕ್ತಿಯ ಗುರುತು ಸರಿಯಾಗಿದೆಯೇ ಎಂದು ನಿರ್ಧರಿಸಲು ಸಿಸ್ಟಮ್ ಒದಗಿಸಿದ ಮಾಹಿತಿಯನ್ನು ಡೇಟಾಬೇಸ್‌ನಲ್ಲಿನ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ನೋಡಲಾಗುತ್ತದೆ.

ಆಧಾರ್ ದೃಢೀಕರಣ ವಹಿವಾಟುಗಳು ಸರ್ಕಾರಿ ಸೇವೆಗಳನ್ನು ಪ್ರವೇಶಿಸುವುದು, ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಸಬ್ಸಿಡಿಗಳನ್ನು ಪಡೆಯುವುದು, ಉದ್ಯೋಗ ಪ್ರಕ್ರಿಯೆಗಳ ಸಮಯದಲ್ಲಿ ಗುರುತನ್ನು ಪರಿಶೀಲಿಸುವುದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಸೇವೆಗಳನ್ನು ನೀಡಲಿದೆ.

Best Mobiles in India

English summary
Aadhaar holders done 1.96 billion authentication transactions in April 2023. This is a jump of more than 19.3 percent over April 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+