Subscribe to Gizbot

500ರೂ.ಗೆ ಆಧಾರ್ ಮಾಹಿತಿ ಲೀಕ್!?..ಸುರಕ್ಷಿತೆ ಬಗ್ಗೆ ಯುಐಡಿಎಐ ಹೇಳಿದ್ದು ಹೀಗೆ!!

Written By:

ಪೇಟಿಎಂ ಮೂಲಕ 500 ಪಾವತಿಯಾಗಿ ಕೆಲವೇ ಕ್ಷಣಗಳಲ್ಲಿ ಅನಾಮಿಕ ಮಾರಾಟಗಾರರಿಂದ ಆಧಾರ್ ಮಾಹಿತಿ ಸಿಕ್ಕಿದೆ ಎಂಬ ದಿ ಟ್ರಿಬ್ಯೂನ್ ತನಿಖಾ ವರದಿ ಬಗ್ಗೆ ಯುಐಡಿಎಐ ಪ್ರತಿಕ್ರಿಯಿಸಿದೆ.! ಆಧಾರ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಯುಐಡಿಎಐ ಮಾಧ್ಯಮಗಳಿಗೆ ತಿಳಿಸಿದೆ.!!

ಆಧಾರ್ ಮಾಹಿತಿ ಹೊಂದಿರುವ ಪೋರ್ಟಲ್‌ನ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಲಿಂಕ್ ಅನ್ನು 500ರೂ.ಗೆ ಮಾರುತ್ತಿದ್ದಾರೆ.! ಆ ಪೋರ್ಟಲ್‌ನಲ್ಲಿ ಯಾವುದೇ ಆಧಾರ್ ಸಂಖ್ಯೆ ಟೈಪಿಸಿ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಫೋಟೊ ಸೇರಿ ಸಂಪೂರ್ಣ ಮಾಹಿತಿ ಪಡೆಯಬಹುದು ಎಂಬ ವರದಿ ಅಂಶಗಳನ್ನು ಯುಐಡಿಎಐ ಸಂಪೂರ್ಣವಾಗಿ ಅಲ್ಲಗಳೆದಿದೆ.!!

500ರೂ.ಗೆ ಆಧಾರ್ ಮಾಹಿತಿ ಲೀಕ್!?..ಸುರಕ್ಷಿತೆ ಬಗ್ಗೆ ಯುಐಡಿಎಐ ಹೇಳಿದ್ದು ಹೀಗೆ!!

ನಿಯಮ ಉಲ್ಲಂಘಿಸಿ ಆಧಾರ್ ಮಾಹಿತಿ ಸಂಗ್ರಹ ನಡೆದಿಲ್ಲ, ಯುಐಡಿಎಐನ ಪ್ರಧಾನ ನಿರ್ದೇಶಕರು ಹಾಗೂ ನನ್ನನ್ನು ಹೊರತುಪಡಿಸಿ ಇನ್ನಾರಿಗೂ ಅಧಿಕೃತ ಪೋರ್ಟಲ್‌ಗೆ ಲಾಗಿನ್‌ ಆಗಲು ಸಾಧ್ಯವಿಲ್ಲ ಎಂದು ಯುಐಡಿಎಐ ಪ್ರಾದೇಶಿಕ ಕೇಂದ್ರದ ಹೆಚ್ಚುವರಿ ನಿರ್ದೇಶಕ ಸಂಜಯ್‌ ಜಿಂದಾಲ್‌ ಅವರು ಹೇಳಿದ್ದಾರೆ.!!

500ರೂ.ಗೆ ಆಧಾರ್ ಮಾಹಿತಿ ಲೀಕ್!?..ಸುರಕ್ಷಿತೆ ಬಗ್ಗೆ ಯುಐಡಿಎಐ ಹೇಳಿದ್ದು ಹೀಗೆ!!

ಸಿಮ್ ಕಾರ್ಡ್‌, ಬ್ಯಾಂಕ್‌ ಖಾತೆ ಸೇರಿ ಬಹುತೇಕ ಖಾಸಾಗಿ ಸೇವೆಗಳಲ್ಲಿಯೂ ಆಧಾರ್ ಮಾಹಿತಿ ಕಡ್ಡಾಯವಾಗಿರುವುದರಿಂದ ಮಾಹಿತಿ ಸೋರಿಕೆಯಿಂದ ದುರುಪಯೋಗ ಸಾಧ್ಯತೆ ಇದೆ. ಆದರೆ, ಯುಐಡಿಎಐ ಹೇಳುವಂತೆ ಆಧಾರ್ ಮಾಹಿತಿ ಸಂಪೂರ್ಣವಾಗಿ ರಕ್ಷಿತವಾಗಿದೆ. ಲೋಪದೋಷಗಳಿರಲು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಓದಿರಿ: ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!

English summary
UIDAI moments ago confirmed that Aadhaar data is safe. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot