ಆಧಾರ್ ಕಾರ್ಡ್ ಆಧಾರಿತ ಹಣ ಪಾವತಿ ಸಿಸ್ಟಮ್ ಶೀಘ್ರದಲ್ಲಿ: UIDAI
ಕ್ಯಾಶ್‌ಲೆಸ್ ಹಣ ವ್ಯವಹಾರಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುವ ಪ್ರಯತ್ನಕ್ಕೆ, ಶೀಘ್ರದಲ್ಲಿ 'ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)' 'ಆಂಡ್ರಾಯ್ಡ್ ಆಧಾರಿತ ಆಧಾರ್ ಪೇಮೆಂಟ್ ಸಿಸ್ಟಮ್' (AEPS) ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ.
ಕ್ಯಾಶ್‌ಲೆಸ್ ಹಣ ವ್ಯವಹಾರಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುವ ಪ್ರಯತ್ನಕ್ಕೆ, ಶೀಘ್ರದಲ್ಲಿ 'ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)' 'ಆಂಡ್ರಾಯ್ಡ್ ಆಧಾರಿತ ಆಧಾರ್ ಪೇಮೆಂಟ್ ಸಿಸ್ಟಮ್' (AEPS) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.

ಈ ಆಂಡ್ರಾಯ್ಡ್ ಆಧಾರಿತ ಆಧಾರ್ ಪೇಮೆಂಟ್ ಸಿಸ್ಟಮ್ ಅಪ್ಲಿಕೇಶನ್ ಅನ್ನು 'ಟಿಸಿಎಸ್' ಸಹಯೋಗದಲ್ಲಿ ಅಭಿವೃದ್ದಿಗೊಳಿಸಲಿದ್ದು, ಈ ಅಪ್ಲಿಕೇಶನ್ ಅನ್ನು ವ್ಯಾಪಾರಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. ವ್ಯಾಪಾರಿಗಳು ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಸ್ಮಾರ್ಟ್‌ಫೋನ್ ಹೊಂದಿರಬೇಕು ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಉಪಯೋಗಿಸಬೇಕು. ಯಾವುದೇ ಕಾರ್ಡ್ ಮತ್ತು ಪಿನ್ ನಂಬರ್ ಇಲ್ಲದೇ ಹಣ ವ್ಯವಹಾರ ಈ ಆಪ್ ಮೂಲಕ ನಡೆಯುತ್ತದೆ.

ಅಪ್ಲಿಕೇಶನ್ ಎಲ್ಲಾ ಬ್ಯಾಂಕ್‌ಗಳಿಗೆ
ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಿ ಅಪ್ಲಿಕೇಶನ್ ಹೊಂದಲು ಸಹಾಯ ಮಾಡುವ ಎಲ್ಲಾ ಬ್ಯಾಂಕ್‌ಗಳಿಗೆ ಈ ಅಪ್ಲಿಕೇಶನ್ ಲಭ್ಯವಾಗಲಿದೆ.
ಈ ಅಪ್ಲಿಕೇಶನ್ ಬಳಸುವ ನಿರ್ಧಾರವು ಡಿಜಿಟಲ್ ಪೇಮೆಂಟ್ ಅಳವಡಿಸಿಕೊಳ್ಳುವ ಮುಖ್ಯಮಂತ್ರಿಗಳ ಒಕ್ಕೂಟದ್ದಾಗಿದೆ.

ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸದನದ ವರದಿ
ಮುಖ್ಯಮಂತ್ರಿಗಳ ಒಕ್ಕೂಟ ಸದನದಲ್ಲಿ ಕೈಗೊಂಡ ತೀರ್ಮಾನದ ವರದಿಯನ್ನು, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಿದ್ದು, ಉತ್ತಮ ಬಳಕೆದಾರ ಸ್ನೇಹಿ USSD ಅಥವಾ *99# ಫೀಚರ್ ಮೊಬೈಲ್ ಫೋನ್‌ನಲ್ಲಿ ಬಳಸುವ USSD ಅನ್ನು ಕ್ಯಾಶ್‌ಲೆಸ್ ವ್ಯವಹಾರಕ್ಕಾಗಿ ಜಾರಿಗೊಳಿಸುವಂತೆ ಶಿಪಾರಸ್ಸು ಮಾಡಲಾಗಿದೆ.
ಮೊದಲ ಬಾರಿ ಉಬರ್ ನಲ್ಲಿ ಪಯಣಿಸುವಾಗ ಪೇಟಿಎಂ ಬಳಸಿ 100 ಪರ್ಸೆಂಟ್ ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ?
ಅಪ್‌ಗ್ರೇಡೆಡ್ ವರ್ಸನ್‌ನ USSD (Unstructured Supplementary Service Data) ಡಿಸೆಂಬರ್ 25 ಕ್ಕೆ ಜಾರಿಯಾಗುವ ಬಗ್ಗೆ ಹೇಳಲಾಗಿದೆ.

ಅಧಿಕೃತ ಮೂಲಗಳ ಹೇಳಿಕೆ ಪ್ರಕಾರ, ಎರಡನೇ ಮುಖ್ಯಮಂತ್ರಿಗಳ ಒಕ್ಕೂಟ ಸಭೆಯು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರವರ ನೇತೃತ್ವದಲ್ಲಿ ಶುಕ್ರವಾರ NITI Aayog ದಲ್ಲಿ ನಡೆದಿತ್ತು.
ನಾಯ್ಡು, NITI Aayog ಉಪಾಧ್ಯಕ್ಷರಾದ ಅರವಿಂದ್ ಪನಾಗರಿಯಾ ಜೊತೆಗೆ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಅಧಿಕಾರಿಗಳು, UIDAI ಮತ್ತು CMDs ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳ ಬ್ಯಾಂಕ್ ನಡುವೆ ಮುಂಬೈನಲ್ಲಿ ಗುರುವಾರ ನಡೆದ ಚರ್ಚೆಯ ನಂತರ ಸಭೆ ಕರೆಯಲಾಗಿತ್ತು.

ಸಮಿತಿಯು ಮುಖಾಮುಖಿ ನಗದು ವ್ಯವಹಾರಕ್ಕೆ ಡಿಜಿಟಲ್ ಹಣ ವ್ಯವಹಾರಕ್ಕೆ ಇತರೆ ಹಂತಗಳು ಬೇಕು ಎಂದು ಸೂಚಿಸಿದೆ. ಗ್ರಾಹಕರನ್ನು ತಿಳಿಯಲು(KYC) ಆಧಾರ್ ಸಂಖ್ಯೆಯನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಆರ್‌ಬಿಐ ಐರಿಸ್ ಸ್ಕ್ಯಾನರ್ ಮೂಲಕ ದೃಢೀಕರಣ ಮತ್ತು ಒನ್ ಟೈಮ್ ಪಾಸ್‌ವರ್ಡ್ ಅನ್ನು ಆಂಡ್ರಾಯ್ಡ್ ಆಧಾರಿತ ಆಧಾರ್ ಪೇಮೆಂಟ್ ಸಿಸ್ಟಮ್' (AEPS) ಅಪ್ಲಿಕೇಶನ್‌ಗೆ ನೀಡಬೇಕೆಂದು ಸಮಿತಿ ಹೇಳಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








