ಮೊದಲ ಬಾರಿ ಉಬರ್ ನಲ್ಲಿ ಪಯಣಿಸುವಾಗ ಪೇಟಿಎಂ ಬಳಸಿ 100 ಪರ್ಸೆಂಟ್ ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ?

|

500 ಮತ್ತು 1000 ರುಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ದೇಶದೆಲ್ಲೆಡೆ ಒಂದು ರೀತಿಯ ಗೊಂದಲದ ವಾತಾವರಣವಿದೆ. ಬ್ಯಾಂಕುಗಳು ತೆಗೆದುಕೊಳ್ಳಬಹುದಾದ ಹಣವನ್ನು ಮಿತಿಗೊಳಿಸಿಬಿಟ್ಟಿದೆ, ಬದಲಿಯಾಗಿ ಹಲವು ಸುಲಭ ಮಾರ್ಗಗಳಿಂದ ಹಣ ಪಾವತಿಸಬಹುದು.

ಮೊದಲ ಬಾರಿ ಉಬರ್ ನಲ್ಲಿ ಪಯಣಿಸುವಾಗ ಪೇಟಿಎಂ ಬಳಸಿ 100 ಪರ್ಸೆಂಟ್ ಕ್ಯಾಷ್ ಬ್ಯಾಕ್

ಬ್ಯಾಂಕುಗಳು ಮತ್ತು ಎಟಿಎಂಗಳು ಹೊಸ ಕರೆನ್ಸಿಯ ಒತ್ತಡವನ್ನು ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಬಹಳಷ್ಟು ಗ್ರಾಹಕರು ಮೊಬೈಲ್ ವ್ಯಾಲೆಟ್ ಸೇವೆಗಳನ್ನು ಉಪಯೋಗಿಸಲು ಪ್ರಾರಂಭಿಸಿಬಿಟ್ಟಿದ್ದಾರೆ.

ಓದಿರಿ: ಇನ್ನು ಆಪಲ್ ಐಫೋನ್ ಖರೀದಿಸುವ ಗೀಳು ಬಿಡಿ!! ಯಾಕೆ ಗೊತ್ತಾ?

ಪೇಟಿಎಂ ಅನ್ನು ಬಹಳಷ್ಟು ಆನ್ ಲೈನ್ ವ್ಯವಹಾರಕ್ಕೆ ಬಳಸಬಹುದು, ಸ್ಥಳೀಯ ಅಂಗಡಿಗಳಲ್ಲೂ ಪೇಟಿಎಂನ ಅಸ್ತಿತ್ವ ಹೆಚ್ಚಿದೆ. ಭಾರತದಲ್ಲಿ ಅತಿ ಹೆಚ್ಚು ಬಳಸಲಾಗುತ್ತಿರುವ ವ್ಯಾಲೆಟ್ ಪೇಟಿಎಂ. ಜೊತೆಗೆ ವಿವಿಧ ಕ್ಯಾಷ್ ಬ್ಯಾಕ್ ಆ್ಯಪ್ ಗಳಿಗೆ ಹೋಲಿಸಿದರೆ ಪೇಟಿಎಂ ಕೊಡುವ ಕೊಡುಗೆಗಳು ಉತ್ತಮವಾಗಿರುತ್ತವೆ, ಹಾಗಾಗಿ ಪೇಟಿಎಂ ನಂಬರ್ 1 ಸ್ಥಾನದಲ್ಲಿದೆ.

ಮೊದಲ ಬಾರಿ ಉಬರ್ ನಲ್ಲಿ ಪಯಣಿಸುವಾಗ ಪೇಟಿಎಂ ಬಳಸಿ 100 ಪರ್ಸೆಂಟ್ ಕ್ಯಾಷ್ ಬ್ಯಾಕ್

ಈಗ ನೀವು ಪೇಟಿಎಂನಿಂದ ಮತ್ತೊಂದು ಕೊಡುಗೆಯನ್ನು ಪಡೆಯಬಹುದು, ಇದಕ್ಕಿಂತ ಉತ್ತಮವಾದದ್ದಿರಲು ಸಾಧ್ಯವೇ?! ಹೊಸ ಕೊಡುಗೆಯ ಪ್ರಕಾರ ಉಬರ್ ನಲ್ಲಿ ಮೊದಲ ಬಾರಿಗೆ ಪಯಣಿಸುವಾಗ ಪೇಟಿಎಂನಿಂದ ಮೊತ್ತ ಪಾವತಿಸಿದರೆ 200 ರುಪಾಯಿಯವರೆಗೆ 100 ಪರ್ಸೆಂಟ್ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದು.

ಓದಿರಿ: ಮೊಝಿಲ್ಲಾದ ಹೊಸ ಫೈರ್ ಫಾಕ್ಸ್ ಫೋಕಸ್ ಬ್ರೌಸರ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಈ ಕೊಡುಗೆಯನ್ನು ನೀವು ಪಡೆದುಕೊಳ್ಳಲು ಇಚ್ಛಿಸಿದರೆ, ಪೇಟಿಎಂ ಮೂಲಕ ಉಬರ್ ನಲ್ಲಿ ಪಾವತಿಸುವುದು ಹೇಗೆ ಎಂದು ತಿಳಿಯಲು ಕೆಳಗಿನ ವಿವರಗಳನ್ನು ನೋಡಿ.

1. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಬರ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಿ.

2. ಇನ್ಸ್ಟಾಲ್ ಮಾಡಿಕೊಂಡು ತಂತ್ರಾಂಶವನ್ನು ತೆರೆಯಿರಿ.

3. ಉಬರ್ ತಂತ್ರಾಂಶದ ಮೇಲೆ ಕ್ಲಿಕ್ಕಿಸಿ, ಪೇಮೆಂಟ್ ಆಯ್ಕೆಗೆ ಹೋಗಿ.

4. ಪೇಟಿಎಂ ವ್ಯಾಲೆಟ್ ಅನ್ನು ಆಯ್ಕೆ ಮಾಡಿ.

5. ಪೇಟಿಎಂನಲ್ಲಿ ಹಣವಿಲ್ಲದೇ ಇದ್ದರೆ 200 ರುಪಾಯಿ ಅಥವಾ ಹೆಚ್ಚು ಹಣವನ್ನು ಹಾಕಿ.

6. ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಾಕಿ, ಪೇ ನೌ ಟ್ಯಾಬ್ ನ ಮೇಲೆ ಕ್ಲಿಕ್ಕಿಸಿ.

7. ನಿಮ್ಮ ಮೊಬೈಲಿಗೆ ಬಂದ ಒಟಿಪಿಯನ್ನು ಹಾಕಿ.

8. ಉಬರ್ ಪ್ರಯಾಣವನ್ನು ಆನಂದಿಸಲು ನಿಮ್ಮ ಪಿಕ್ ಅಪ್ ಸ್ಥಳ ಮತ್ತು ನೀವು ಹೋಗಬೇಕಿರುವ ಸ್ಥಳವನ್ನು ನಮೂದಿಸಿ.

ಮೊದಲ ಬಾರಿ ಉಬರ್ ನಲ್ಲಿ ಪಯಣಿಸುವಾಗ ಪೇಟಿಎಂ ಬಳಸಿ 100 ಪರ್ಸೆಂಟ್ ಕ್ಯಾಷ್ ಬ್ಯಾಕ್

ಅಷ್ಟೇ! ನಿಮ್ಮ ಪ್ರಯಾಣ ಮುಗಿದ ಮೇಲೆ ಪೇಟಿಎಂ ವ್ಯಾಲೆಟ್ ಮೂಲಕ ಹಣ ಪಾವತಿಸಿ, 24 ಘಂಟೆಗಳ ಒಳಗೆ 100ಪರ್ಸೆಂಟ್ ಕ್ಯಾಷ್ ಬ್ಯಾಕ್ ನಿಮ್ಮ ಪೇಟಿಎಂ ವ್ಯಾಲೆಟ್ ಗೆ ಬರುತ್ತದೆ.

ನಿಯಮಗಳು:

1. ಈ ಕೊಡುಗೆಯು ಪೇಟಿಎಂ ವ್ಯಾಲೆಟ್ ಬಳಸಿ ಉಬರ್ ನಲ್ಲಿ ಮೊದಲ ಬಾರಿಗೆ ಪಯಣಿಸುತ್ತಿರುವವರಿಗೆ ಮಾತ್ರ ಅನ್ವಯ.

2. ಉಬರ್ ನಲ್ಲಿ ಪಯಣಿಸಿ ಪೇಟಿಎಂ ವ್ಯಾಲೆಟ್ ನಿಂದ ಹಣ ತೆತ್ತರೆ ಮಾತ್ರ 100ಪರ್ಸೆಂಟ್ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ.

3. ಇದು ಸೀಮಿತ ಅವಧಿಯ ಕೊಡುಗೆ, ಯಾವಾಗ ಬೇಕಿದ್ದರೂ ನಿಂತು ಬಿಡಬಹುದು.

4. ಯಾವಾಗ ಬೇಕಿದ್ದರೂ ಕೊಡುಗೆಯನ್ನು ನಿಲ್ಲಿಸುವ ಹಕ್ಕು/ಬದಲಿಸುವ ಹಕ್ಕು ಪೇಟಿಎಂನದ್ದಾಗಿರುತ್ತದೆ.

5. ಬಳಕೆದಾರರ ಬಳಿ ಪೇಟಿಎಂ ಖಾತೆ ಇರದೇ ಇದ್ದಲ್ಲಿ ಪೇಟಿಎಂ.ಕಾಂಗೆ ಭೇಟಿ ಕೊಟ್ಟು ಹೊಸ ಖಾತೆ ತೆರೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Get 100% cashback on your first Uber ride using Paytm.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X