Home
ಸುದ್ದಿಜಾಲ

ಆಧಾರ್ ನೊಂದಿಗೆ ಪ್ಯಾನ್‌ ಕಾರ್ಡ್‌ ಲಿಂಕ್ ಗಡವು ವಿಸ್ತರಣೆ!

ಇದೇ ಡಿಸೆಂಬರ್ 31, 2019ರ ಒಳಗಾಗಿ ಆಧಾರ್‌ ಕಾರ್ಡ್‌ ( ಆಧಾರ್-ನಂಬರ್) ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಮಾಡಲು ಹಣಕಾಸು ಸಚಿವಾಲಯವು ಗಡವು ನೀಡಿತ್ತು. ಆದರೆ ಇದೀಗ ಹಣಕಾಸು ಸಚಿವಾಲಯವು ಈ ಅವಧಿಯನ್ನು ವಿಸ್ತರಿಸಿದ್ದು, ಮಾರ್ಚ್ 31, 2020ರ ವರೆಗೂ ಕಾಲಾವಕಾಶ ನೀಡಿದೆ.

ಆಧಾರ್

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇದು ಎರಡನೇ ಬಾರಿ ಅವಧಿ ವಿಸ್ತರಣೆ ಆಗುತ್ತಿದ್ದು, ಈ ಮೊದಲು ಸೆಪ್ಟೆಂಬರ್ 30 ರ ಗಡುವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಿಸಿತ್ತು. ಈಗ ಮಾರ್ಚ್ 31 2020ರ ವರೆಗೂ ವಿಸ್ತರಿಸಿದೆ. ಹಾಗಾದ್ರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನು ಲಿಂಕ್ ಮಾಡುವುದು ಹೇಗೆ? ಎನ್ನುವ ಕುರಿತು ತಿಳಿಯಲು ಮುಂದೆ ಓದಿರಿ.

ಇ-ಫೈಲಿಂಗ್ ಪೋರ್ಟಲ್

ಇ-ಫೈಲಿಂಗ್ ಪೋರ್ಟಲ್

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು:
ಒಂದು ವೇಳೆ ನೀವು ಆದಾಯ ತೆರಿಗೆಯನ್ನು ಸಲ್ಲಿಸುತ್ತಿದ್ದು ಈಗಾಗಲೇ ಆಧಾರ್ ನಂಬರ್ ನ್ನು ಐಟಿಆರ್ ನಲ್ಲಿ ನೀಡಿದ್ದರೆ ಪಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಆದಾಯ ತೆರಿಗೆ ಇಲಾಖೆಯು ಈ ಎರಡೂ ಐಡಿಗಳಲ್ಲಿರುವ ಮಾಹಿತಿಗಳು ಸಮವಾಗಿದ್ದಲ್ಲಿ ಈಗಾಗಲೇ ಅದನ್ನು ಲಿಂಕ್ ಮಾಡಿರುವ ಸಾಧ್ಯತೆ ಇದೆ.

ಆಧಾರ್ ಮತ್ತು ಪಾನ್ ಲಿಂಕ್ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವುದಕ್ಕಾಗಿ ನೀವು ಇ-ಫೈಲಿಂಗ್ ವೆಬ್ ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ.

Link Aadhaar

Link Aadhaar

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು:
ಒಂದು ವೇಳೆ ನೀವು ಇ-ಫೈಲಿಂಗ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳದೇ ಇರುವ ವ್ಯಕ್ತಿಗಳಾಗಿದ್ದರೆ ಅಥವಾ ಮೇಲಿನ ವಿಧಾನದಲ್ಲಿ ಹೋಗಲು ಇಚ್ಛಿಸದೇ ಇದ್ದಲ್ಲಿ 'Link Aadhaar' ಟ್ಯಾಬ್ ನ್ನು ಕ್ಲಿಕ್ಕಿಸಬಹುದು. ಎಡಭಾಗದಲ್ಲಿ ಕ್ವಿಕ್ ಲೈನ್ಸ್ ನ ಅಡಿಯಲ್ಲಿರುವ ಮೊದಲ ಲಿಂಕ್ ಇದಾಗಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನೀವು ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಪಾನ್ ನಂಬರ್, ಆಧಾರ್ ನಂಬರ್ , ಆಧಾರ್ ಕಾರ್ಡ್ ನಲ್ಲಿ ನಮೂದಿಸಿದಂತೆಯೇ ನಿಮ್ಮ ಹೆಸರು, ಒಂದು ವೇಳೆ ವರ್ಷವನ್ನು ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ್ದರೆ ಅದನ್ನು ಕೂಡ ಲಿಂಕ್ ಮಾಡುವ ಮೂಲಕ ನೀವು ಎಂಟರ್ ಮಾಡಬೇಕಾಗುತ್ತದೆ. ನಂತರ ಇಮೇಜ್ ನಲ್ಲಿ ಕಾಣುವ ಕ್ಯಾಪ್ಚಾ ಎಂಟರ್ ಮಾಡಿ. ನೋಟದಲ್ಲಿ ಸಮಸ್ಯೆ ಇರುವವರು ಓಟಿಪಿ ಪಡೆದು ಕೂಡ ಮಾಡಬಹುದು. ಕೊನೆಯದಾಗಿ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ಕಿಸಿ. ಪಾನ್ ಮತ್ತು ಆಧಾರ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಆಗಿರುವ ಬಗ್ಗೆ ನಿಮಗೆ ಸಂದೇಶ ಲಭ್ಯವಾಗುತ್ತದೆ.

ಲಿಂಕ್ ಯಾಕೆ ಮಾಡಿಕೊಳ್ಳಬೇಕು?

ಲಿಂಕ್ ಯಾಕೆ ಮಾಡಿಕೊಳ್ಳಬೇಕು?

ಒಂದು ವೇಳೆ ನೀವು ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವುದಾದರೆ ಎರಡೂ ಐಡಿಗಳು ಕೂಡ ಅಗತ್ಯವಾಗಿ ಬೇಕಾಗುತ್ತದೆ. ಅಂದರೆ ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಆದಾಯ ತೆರಿಗೆಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದು ಈ ಹಣಕಾಸು ವರ್ಷದಿಂದಲೇ 2019-20 ರಿಂದಲೇ ಆರಂಭವಾಗುತ್ತದೆ. ಕೆಲವು ನಿರ್ಧಿಷ್ಟ ಕೇಸ್ ಗಳನ್ನು ಹೊರತು ಪಡಿಸಿದರೆ 2019-20 ಹಣಕಾಸು ವರ್ಷದಿಂದ ಆದಾರ್ ಮತ್ತು ಪಾನ್ ಲಿಂಕ್ ಆಗಿದ್ದರೆ ಮಾತ್ರವೇ ತೆರಿಗೆ ಮರುಪಾವತಿ ಸಾಧ್ಯವಾಗುತ್ತದೆ.

ಪಾನ್ ಕಡ್ಡಾಯವಾಗಿರುವ ಸ್ಥಳಗಳಲ್ಲಿ ಒಂದು ವೇಳೆ ಆಧಾರ್ ಉಲ್ಲೇಖಿಸುವುದನ್ನು ಪರಿಗಣಿಸಿದರೆ ಇವೆರಡರ ಲಿಂಕ್ ಅಗತ್ಯವಾಗಿರುತ್ತದೆ. ಲಿಂಕ್ ಆಗದೇ ಇದ್ದಾಗ ನೀವು ಸೆಕೆಂಡ್ ಪಾನ್ ನ್ನು ನೀಡಿದ್ದೇ ಆದಲ್ಲಿ ಅದು ಕಾನೂನು ಬಾಹಿರವಾಗುತ್ತದೆ.2019 ರ ಬಜೆಟ್ ನಲ್ಲಿ ಪಾನ್ ಕಡ್ಡಾಯವಾಗಿರುವ ಕಡೆಗಳಲ್ಲಿ ಆಧಾರ್ ಕಾರ್ಡ್ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅದು ಎರಡೂ ಐಡಿಗಳು ಲಿಂಕ್ ಆಗಿದ್ದಾಗ ಮಾತ್ರವೇ ಕಾನೂನು ರೀತಿಯಾಗಿರುತ್ತದೆ.

ಲಿಂಕ್ ಮಾಡಿ

ಲಿಂಕ್ ಮಾಡಿ

ಅಗಸ್ಟ್ ಅಂತ್ಯದಲ್ಲಿ ಸಿಬಿಡಿಟಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪಾನ್ ಇಲ್ಲದ ವ್ಯಕ್ತಿಗಳು ತಮ್ಮ ಹಣಕಾಸು ವ್ಯವಹಾರಕ್ಕಾಗಿ ಆಧಾರ್ ಕಾರ್ಡ್ ನೀಡಿದ್ದಲ್ಲಿ ಇಲಾಖೆಯು ಅದನ್ನು ಆಟೋ ಅಪ್ಲಿಕೇಷನ್ ಎಂದು ಪರಿಗಣಿಸುತ್ತದೆ ಮತ್ತು ವ್ಯಕ್ತಿಗೆ ಅದನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ವಿಸ್ತರಿಸಿದ ಅವಧಿಯಲ್ಲಿ ನೀವು ಆಧಾರ್ ಮತ್ತು ಪಾನ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಸದ್ಯ ಇರುವ ನಿಯಮದ ಪ್ರಕಾರ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಹಾಗಾಗಿ ಒಂದು ವೇಳೆ ಇದುವರೆಗೂ ನೀವು ಪಾನ್ ಮತ್ತು ಆಧಾರ್ ನ್ನು ಲಿಂಕ್ ಮಾಡಿಲ್ಲದೇ ಇದ್ದಲ್ಲಿ ಕೂಡಲೇ ಮಾರ್ಚ್‌ 31, 2020ರ ಒಳಗೆ ಲಿಂಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

Best Mobiles in India

English summary
The earlier deadline for linking Aadhaar with PAN was December 31, 2019, and it is now extended by three months. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+