Home
ಸುದ್ದಿಜಾಲ

ಆಧಾರ್ ಜೊತೆಗೆ ಪ್ಯಾನ್ ಜೋಡಣೆ ಗಡುವು ಮತ್ತೆ ವಿಸ್ತರಣೆ!

ಕೊರೊನಾ ವೈರಸ್‌ ಹರಡದಂತೆ ತಡೆಯಲು ಸರ್ಕಾರ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಆಧಾರ್ ಜೊತೆಗೆ ಪ್ಯಾನ್ ಜೋಡಣೆ ಮಾಡಲು ವಿಧಿಸಿದ್ದ ಗಡುವನ್ನು ಇದೇ ಜೂನ್ 30ಕ್ಕೆ ವಿಸ್ತರಿಸಲಾಗಿದೆ ಹಾಗೂ ಜಿಎಸ್‌ಟಿ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಅವಧಿಗೂ ಕಾಲಾವಕಾಶ ನೀಡಿದೆ ಎಂದು (ಮಾ.24) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಡಿಸೆಂಬರ್ 31, 2019

ಇದೇ ಡಿಸೆಂಬರ್ 31, 2019ರ ಒಳಗಾಗಿ ಆಧಾರ್‌ ಕಾರ್ಡ್‌ ( ಆಧಾರ್-ನಂಬರ್) ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಮಾಡಲು ಹಣಕಾಸು ಸಚಿವಾಲಯವು ಗಡವು ನೀಡಿತ್ತು. ಆದರೆ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಕೊರೊನಾ ವೈರಸ್‌ ಹರಡದಂತೆ ತಡೆಯಲು ಸದ್ಯ ದೇಶದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಇದೆ. ಹೀಗಾಗಿ ಆಧಾರ್ - ಪ್ಯಾನ್ ಜೋಡಣೆ ಅವಧಿಯನ್ನು ಇದೇ ಜೂನ್ 30, 2020ಕ್ಕೆ ವಿಸ್ತರಿಸಲಾಗಿದೆ.

ಜೂನ್ 30, 2020

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇದು ಮೂರನೇ ಬಾರಿ ಅವಧಿ ವಿಸ್ತರಣೆ ಆಗುತ್ತಿದ್ದು, ಈ ಮೊದಲು ಸೆಪ್ಟೆಂಬರ್ 30 ರ ಗಡುವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಿಸಿತ್ತು. ನಂತರ ಮಾರ್ಚ್ 31 2020ರ ವರೆಗೂ ವಿಸ್ತರಿಸಲಾಗಿತ್ತು ಈಗ ಜೂನ್ 30, 2020ಕ್ಕೆ ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನು ಲಿಂಕ್ ಮಾಡುವುದು ಹೇಗೆ? ಎನ್ನುವ ಕುರಿತು ತಿಳಿಯಲು ಮುಂದೆ ಓದಿರಿ.

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು:

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು:

ಒಂದು ವೇಳೆ ನೀವು ಆದಾಯ ತೆರಿಗೆಯನ್ನು ಸಲ್ಲಿಸುತ್ತಿದ್ದು ಈಗಾಗಲೇ ಆಧಾರ್ ನಂಬರ್ ನ್ನು ಐಟಿಆರ್ ನಲ್ಲಿ ನೀಡಿದ್ದರೆ ಪಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಆದಾಯ ತೆರಿಗೆ ಇಲಾಖೆಯು ಈ ಎರಡೂ ಐಡಿಗಳಲ್ಲಿರುವ ಮಾಹಿತಿಗಳು ಸಮವಾಗಿದ್ದಲ್ಲಿ ಈಗಾಗಲೇ ಅದನ್ನು ಲಿಂಕ್ ಮಾಡಿರುವ ಸಾಧ್ಯತೆ ಇದೆ. ಆಧಾರ್ ಮತ್ತು ಪಾನ್ ಲಿಂಕ್ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವುದಕ್ಕಾಗಿ ನೀವು ಇ-ಫೈಲಿಂಗ್ ವೆಬ್ ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ.

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು:

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು:

ಒಂದು ವೇಳೆ ನೀವು ಇ-ಫೈಲಿಂಗ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳದೇ ಇರುವ ವ್ಯಕ್ತಿಗಳಾಗಿದ್ದರೆ ಅಥವಾ ಮೇಲಿನ ವಿಧಾನದಲ್ಲಿ ಹೋಗಲು ಇಚ್ಛಿಸದೇ ಇದ್ದಲ್ಲಿ 'Link Aadhaar' ಟ್ಯಾಬ್ ನ್ನು ಕ್ಲಿಕ್ಕಿಸಬಹುದು. ಎಡಭಾಗದಲ್ಲಿ ಕ್ವಿಕ್ ಲೈನ್ಸ್ ನ ಅಡಿಯಲ್ಲಿರುವ ಮೊದಲ ಲಿಂಕ್ ಇದಾಗಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನೀವು ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಪಾನ್ ನಂಬರ್, ಆಧಾರ್ ನಂಬರ್ , ಆಧಾರ್ ಕಾರ್ಡ್ ನಲ್ಲಿ ನಮೂದಿಸಿದಂತೆಯೇ ನಿಮ್ಮ ಹೆಸರು, ಒಂದು ವೇಳೆ ವರ್ಷವನ್ನು ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ್ದರೆ ಅದನ್ನು ಕೂಡ ಲಿಂಕ್ ಮಾಡುವ ಮೂಲಕ ನೀವು ಎಂಟರ್ ಮಾಡಬೇಕಾಗುತ್ತದೆ. ನಂತರ ಇಮೇಜ್ ನಲ್ಲಿ ಕಾಣುವ ಕ್ಯಾಪ್ಚಾ ಎಂಟರ್ ಮಾಡಿ. ನೋಟದಲ್ಲಿ ಸಮಸ್ಯೆ ಇರುವವರು ಓಟಿಪಿ ಪಡೆದು ಕೂಡ ಮಾಡಬಹುದು. ಕೊನೆಯದಾಗಿ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ಕಿಸಿ. ಪಾನ್ ಮತ್ತು ಆಧಾರ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಆಗಿರುವ ಬಗ್ಗೆ ನಿಮಗೆ ಸಂದೇಶ ಲಭ್ಯವಾಗುತ್ತದೆ.

ಲಿಂಕ್ ಮಾಡಿ

ಲಿಂಕ್ ಮಾಡಿ

ಈ ವರೆಗೂ ನೀವು ನಿಮ್ಮ ಪ್ಯಾನ್‌ ಮತ್ತು ಆಧಾರ್ ನ್ನು ಲಿಂಕ್ ಮಾಡಿಲ್ಲದೇ ಇದ್ದಲ್ಲಿ ಇದೇ ಜೂನ್ 30, 2020 ಒಳಗೆ ಲಿಂಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಈಗಾಗಲೇ ಎರಡ್ಮೂರು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ.

Best Mobiles in India

English summary
Aadhaar card and PAN card has now been extended till June 30.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+