Home
ಸುದ್ದಿಜಾಲ

ಪಡಿತರ ಚೀಟಿ ಹೊಂದಿರುವವರಿಗೆ ಗುಡ್‌ನ್ಯೂಸ್‌!..ಇಲ್ಲಿದೆ ಮಾಹಿತಿ!

ನ್ಯಾಯಬೆಲೆ ಕೇಂದ್ರಗಳಿಂದ ರಿಯಾಯಿತಿಯಲ್ಲಿ ಪಡಿತರವನ್ನು ಪಡೆಯಲು ಭಾರತೀಯ ನಾಗರಿಕರಿಗೆ, ಪಡಿತರ ಚೀಟಿಯು (Ration Card) ಗುರುತಿನ ಪ್ರಮುಖ ಭಾಗವಾಗಿದೆ. ಇದೀಗ ರೇಷನ್ ಕಾರ್ಡ್ ಹೊಂದಿರುವ ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ತಿಳಿಸಿದೆ. ರೇಷನ್‌ ಕಾರ್ಡ್‌ ಜೊತೆಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಿದೆ.

ಹೌದು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರವು ಮಾರ್ಚ್ 31, 2023 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ. ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಸರ್ಕಾರದ ಯೋಜನೆಯು ನಕಲಿ ಮತ್ತು ನಕಲಿ ಕಾರ್ಡ್‌ಗಳನ್ನು ಪತ್ತೆ ಮಾಡುವ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನೆರವು ಮಾಡುತ್ತದೆ.

ಪಡಿತರ ಚೀಟಿ ಹೊಂದಿರುವವರಿಗೆ ಗುಡ್‌ನ್ಯೂಸ್‌!..ಇಲ್ಲಿದೆ ಮಾಹಿತಿ!

- ನಿಮ್ಮ ರಾಜ್ಯದ PDS ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ (ಪ್ರತಿ ರಾಜ್ಯವು ತನ್ನದೇ ಆದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್ ಅನ್ನು ಹೊಂದಿದೆ).
- ಸಕ್ರಿಯ ಕಾರ್ಡ್‌ಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಆಯ್ಕೆಯನ್ನು ಆಯ್ಕೆಮಾಡಿ.
- ಮೊದಲು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು
- ನಂತರ ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿ.
- continue/submit ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈ ಸಮಯದಲ್ಲಿ ನಿಮ್ಮ ನೊಂದಾಯಿತ ಮೊಬೈಲ್‌ಗೆ ಕಳುಹಿಸಲಾದ ಓಟಿಪಿ ಅನ್ನು ನಮೂದಿಸಿ.
- ಪ್ರಕ್ರಿಯೆಯು ಪೂರ್ಣಗೊಂಡಾಗ ನಿಮಗೆ ತಿಳಿಸುವ ಎಸ್‌ಎಮ್‌ಎಸ್‌ ಅನ್ನು ಕಳುಹಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಅವಕಾಶ: ಜನರು ಪಡಿತರ ಲಭ್ಯ ಆಗದಿದ್ದರೆ, ಅಧಿಕೃತ ವೆಬ್‌ಸೈಟ್ ಮತ್ತು ಇ-ಮೇಲ್ ಮೂಲಕ ಆನ್‌ಲೈನ್‌ನಲ್ಲಿಯೂ ದೂರು ನೀಡಬಹುದು. ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆಯನ್ನೂ ಸಹ ಬಳಕೆ ಮಾಡಬಹುದು. ಇ-ಮೇಲ್ ಮೂಲಕ ಸಹ ದೂರು ನೀಡಲು ಅವಕಾಶ ಇದೆ. ಇದರಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯೊಂದಿಗೆ ನೀವು ಪಡಿತರ ಡಿಪೋದ ಹೆಸರನ್ನು ಸಹ ನಮೂದಿಸಬೇಕಾಗುತ್ತದೆ.

ಟೋಲ್-ಫ್ರೀ ಸಹಾಯವಾಣಿ ಮೂಲಕ ಸಹ ದೂರು ಸಲ್ಲಿಸಬಹುದು: ಸಲಹೆ ಮತ್ತು ದೂರು ಸಲ್ಲಿಸಲು ಜನರು 1800-425-9339 ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೇ ಅಧಿಕೃತ ಜಿಲ್ಲಾ/ತಾಲೂಕ್ ಕಚೇರಿಯ ವಿಳಾಸಕ್ಕೆ ಹೋಗಿಯೂ ದೂರು ನೀಡಬಹುದು.

ಪಡಿತರ ಚೀಟಿ ಹೊಂದಿರುವವರಿಗೆ ಗುಡ್‌ನ್ಯೂಸ್‌!..ಇಲ್ಲಿದೆ ಮಾಹಿತಿ!

ಇ-ಮೇಲ್ ಮೂಲಕವೂ ದೂರು ನೀಡಬಹುದು: ಪಡಿತರ ಪಡೆಯುವಲ್ಲಿ ಸಮಸ್ಯೆ ಆದಾಗ ಜನರು ಇ ಮೇಲ್‌ ಮೂಲಕ ಸಹ ದೂರು ಸಲ್ಲಿಸಬಹುದು. ಪ್ರತಿ ರಾಜ್ಯಗಳು ಪ್ರತ್ಯೇಕ ಇ-ಮೇಲ್ ವಿಳಾಸ ಹೊಂದಿವೆ. ಕರ್ನಾಟಕ ಪಡಿತರ ಚೀಟಿ ಹೊಂದಿರುವ ಜನರು [email protected] ನಲ್ಲಿ ಮೇಲ್ ಅನ್ನು ಡ್ರಾಪ್ ಮಾಡಬಹುದು. ಅಲ್ಲದೇ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.

ಆನ್‌ಲೈನ್‌ ಮೂಲಕ ಪಡಿತರ ಚೀಟಿ ತಿದ್ದುಪಡಿಗೆ ಈ ಹಂತಗಳನ್ನು ಅನುಸರಿಸಿ:
ಹಂತ 1: ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗುವುದು https://ahara.kar.nic.in/home.aspx
ಹಂತ 2: ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳು ಆಯ್ಕೆ ಕಾಣುವಿರಿ. ಅಲ್ಲಿ ತಿದ್ದುಪಡಿಗೆ ವಿನಂತಿ ಆಯ್ಕೆ ಕಾಣಿಸುತ್ತದೆ.
ಹಂತ 3: ನಂತರ ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ಪೇಜ್ ತೆರೆಯುತ್ತದೆ.
ಹಂತ 4: ಅಲ್ಲಿನ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವುದು.

ಹಂತ 5: ಆ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡುವುದು.
ಹಂತ 6: ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್‌ಮೀಟ್) ಸಲ್ಲಿಸ ಮಾಡುವುದು.
ಹಂತ 7: ಫಾರ್ಮ್ ಅನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ.
ಹಂತ 8: ನೋಂದಣಿ ಸಂಖ್ಯೆ ಮೂಲಕ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.
ಹಂತ 9: ನೀಡಲಾದ ಎಲ್ಲ ದಾಖಲಾತಿ ಸರಿಯಾಗಿದ್ದರೆ ಮನೆಗೆ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ.

Best Mobiles in India

English summary
Govt Extends Deadline To Link Aadhaar With Ration Card Till June 30. step-by-step guide on how to link online. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+