ಆಧಾರ್ ಕಾರ್ಡ್ ಅಪ್‌ಡೇಟ್..ಈ ಉಚಿತ ಅವಕಾಶ ಮತ್ತೆ ಸಿಗುತ್ತೋ ಇಲ್ವೋ!?
ಆಧಾರ್ ಕಾರ್ಡ್ ಪ್ರತಿ ಭಾರತೀಯ ಪ್ರಜೆಯ ಪ್ರಮುಖ ಗುರುತಿನ ಚೀಟಿ ಆಗಿದೆ. ಜನರು ತಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಕೆಲವು ಮಾಹಿತಿ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೀಗ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೇ ಸೆಪ್ಟೆಂಬರ್ 14 ರವರೆಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ಜನರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಗಳನ್ನು ಯಾವುದೇ ಶುಲ್ಕವನ್ನು ಪಾವತಿಸದೆ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬಹುದಾಗಿದೆ.

ಇನ್ನು ಯಾರಾದರೂ ತಮ್ಮ ಆಧಾರ್ ಕಾರ್ಡ್‌ನಲ್ಲಿ ತಮ್ಮ ಫೋಟೋ, ಐರಿಸ್ ಅಥವಾ ಇತರ ಬಯೋಮೆಟ್ರಿಕ್ ಮಾಹಿತಿಗಳನ್ನು ಅಪ್‌ಡೇಟ್ ಮಾಡಲು ಬಯಸಿದರೆ, ಅಂತಹವರು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಿರುತ್ತದೆ. ಅಲ್ಲದೇ ನಿಗದಿತ ಶುಲ್ಕವನ್ನು ಪಾವತಿಸ ಬೇಕಿರುತ್ತದೆ. ಏಕೆಂದರೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಲು ಫಿಂಗರ್‌ಪ್ರಿಂಟ್‌ಗಳು, ಐರಿಸ್ ಮತ್ತು ಇತರ ಕೆಲವು ಬಯೋಮೆಟ್ರಿಕ್ ಡೇಟಾ ಸ್ಕ್ಯಾನಿಂಗ್ ಅಗತ್ಯ ಇರುತ್ತದೆ.
ಹೀಗಾಗಿ ಇವುಗಳನ್ನು ದಾಖಲಾತಿ ಕೇಂದ್ರಗಳಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಮಷಿನ್‌ಗಳ ಮೂಲಕ ಮಾತ್ರ ಮಾಡಬಹುದಾಗಿದೆ. ಹೆಚ್ಚುವರಿಯಾಗಿ, ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಬಯೋಮೆಟ್ರಿಕ್ ಅಪ್‌ಡೇಟ್‌ಗೆ ಪರಿಶೀಲನೆಯ ಅಗತ್ಯವಿದೆ.
ಆಧಾರ್ ಕಾರ್ಡ್ ಅಪ್‌ಡೇಟ್ ಯಾಕೆ ಅಗತ್ಯ ?
ಆಧಾರ್ ಕಾರ್ಡ್ ಅಪ್‌ಡೇಟ್ ಯಾಕೆ ಮುಖ್ಯ ಎಂದು ಕೇಳಿದರೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭಾರತೀಯ ನಿವಾಸಿಗಳು ತಮ್ಮ ಆಧಾರ್ ಮಾಹಿತಿಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಅಪ್‌ಡೇಟ್ ಮಾಡುವುದು ಕಡ್ಡಾಯ ಮಾಡಿದೆ.
ಮದುವೆ ನಂತರ ಹೆಸರು ಮತ್ತು ವಿಳಾಸ ಮಾಹಿತಿ ಬದಲಾಯಿಸಲು ಕಾರಣವಾಗಬಹುದು. ಅಥವಾ ಬೇರೆ ಸ್ಥಳ/ ಊರಿನಲ್ಲಿ ವಾಸ ಸ್ಥಾನ ಬದಲಾಯಿಸಿದಾಗ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆ ಮಾಡಬೇಕಿರುತ್ತದೆ. ಅಲ್ಲದೇ ಕೆಲವೊಮ್ಮೆ ಮೊಬೈಲ್ ಸಂಖ್ಯೆ ಬದಲಾವಣೆ ಮಾಡುವ ಅಗತ್ಯ ಇರುತ್ತದೆ. ಹೀಗೆ ನಾನಾ ಕಾರಣಗಳಿಂದಾಗಿ ಅಪ್‌ಡೇಟ್ ಮಾಡುವ ಅನಿವಾರ್ಯತೆ ಇರುತ್ತದೆ.
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಈ ಕ್ರಮ ಅನುಸರಿಸಿ :
* ಅಧಿಕೃತ uidai.gov.in ನಲ್ಲಿ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ.
* ಮೈ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ಡ್ರಾಪ್-ಡೌನ್ ಮೆನುವಿನಲ್ಲಿ 'ಅಪ್‌ಡೇಟ್ ಯೂವರ್ ಆಧಾರ್' ಸೆಲೆಕ್ಟ್ ಮಾಡಿ.
* Update Aadhaar Details ಪೇಜ್‌ನಲ್ಲಿ, 'ಆಧಾರ್ ಅನ್ನು ಅಪ್‌ಡೇಟ್ ಮಾಡಲು ಮುಂದುವರಿಯಿರಿ' ಆಯ್ಕೆ ಕ್ಲಿಕ್ ಮಾಡಿ.
* ಬಳಿಕ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಚೆಕ್ ಕೋಡ್ ಅನ್ನು ನಮೂದಿಸಿ, ತದ ನಂತರ 'ಸೆಂಡ್ OTP' ಆಯ್ಕೆ ಸೆಲೆಕ್ಟ್ ಮಾಡಿ.
* ಆ ಬಳಿಕ ಸ್ವೀಕರಿಸಿದ OTP ಅನ್ನು ಎಂಟ್ರಿ ಮಾಡಿರಿ,
* ನಂತರ 'ಲಾಗಿನ್' ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ತದ ನಂತರ ನೀವು ಅಪ್‌ಡೇಟ್ ಬಯಸುವ demographic ಮಾಹಿತಿಗಳನ್ನು ಸೆಲೆಕ್ಟ್ ಮಾಡಿ ಮತ್ತು ಹೊಸ ಮಾಹಿತಿಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
* ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, 'Submit' ಆಯ್ಕೆ ಕ್ಲಿಕ್ ಮಾಡಿ.
* ಅಗತ್ಯವಿರುವ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು 'ಸಬ್‌ಮಿಟ್ ಅಪ್‌ಡೇಟ್ ರಿಕ್ವೆಸ್ಟ್' ಆಯ್ಕೆ ಕ್ಲಿಕ್ ಮಾಡಿ.
* ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಮ್‌ಎಸ್ ಮೂಲಕ ನೀವು ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ಪಡೆಯುತ್ತೀರಿ.
* ಟ್ರ್ಯಾಕಿಂಗ್‌ಗಾಗಿ ಪಡೆದಿರುವ URN ಕಾಯ್ದಿಟ್ಟುಕೊಳ್ಳಿ
* ಅಪ್‌ಡೇಟ್ ಸ್ಟೇಟಸ್ ಚೆಕ್ ಮಾಡಲು, myaadhaar.uidai.gov.in/ ಗೆ ಭೇಟಿ ನೀಡಿ
* 'ನೋಂದಣಿ ಮತ್ತು ಅಪ್‌ಡೇಟ್ ಸ್ಟೇಟಸ್ ಚೆಕ್ ಮಾಡಲು ಕ್ಲಿಕ್ ಮಾಡಿ.
* ಅಪ್‌ಡೇಟ್ ವಿನಂತಿಯನ್ನು ವೀಕ್ಷಿಸಲು ನಿಮ್ಮ URN ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಎಂಟ್ರಿ ಮಾಡಿರಿ.


Click it and Unblock the Notifications








