ರೂ.1,130 ದರದಲ್ಲಿ ಆಕಾಶ್‌-2 ಟ್ಯಾಬ್ಲೆಟ್‌ ಖರೀದಿಸಿ

Posted By: Vijeth

ರೂ.1,130 ದರದಲ್ಲಿ ಆಕಾಶ್‌-2 ಟ್ಯಾಬ್ಲೆಟ್‌ ಖರೀದಿಸಿ

ಭಾರತೀಯ ಗ್ರಾಹಕರುಗಳಿಗೆ ದೀಪಾವಳಿ ಹಬ್ಬದ ವಿಶೇಷ ಕೊಡುಗೆ ಎಂಬಂತೆ ಬಹು ನಿರೀಕ್ಷಿತ ಆಕಾಶ್‌-2 ಟ್ಯಾಬ್ಲೆಟ್‌ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೊದಲು ಆಕಾಶ್‌ ಟ್ಯಾಬ್ಲೆಟ್‌ ಸಿದ್ಧಪಡಿಸಿದ್ದಂತಹ ಬ್ರಿಟನ್‌ ಮೂಲದ ತಯಾರಿಕಾ ಸಂಸ್ಥೆಯಾದ ಡೇಟಾವಿಂಟ್‌ ಸಂಸ್ಥೆಯೇ ಆಕಾಶ-2 ಟ್ಯಾಬ್ಲೆಟ್‌ ಸಿದ್ಧಪಡಿಸಿದ್ದು ಭಾರತದ ನೂತನ ರಾಷ್ಟ್ರಪತಿಗಳಾದ ಪ್ರಣಬ್‌ ಮುಖರ್ಜಿ ಭಾನುವಾರ ಆಕಾಶ್‌-2 ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದಾರೆ.

ಪಿಟಿಐನ ವರದಿಗಳ ಪ್ರಕಾರ ನೂತನ ಆಕಾಶ್‌-2 ರೂ.1,130 ಮುಖ ಬೆಲೆಯಲ್ಲಿ ವಿದ್ಯಾರ್ಥಿ ಗಳಿಗೆ ದೊರೆಯಲಿದ್ದು, ಅಲ್ಲದೆ ಭಾರತದಲ್ಲಿನ ಎಲ್ಲಾ ಎಂಜಿನಿಯರಿಗ್‌ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಖರೀದಿಸಲು ಲಭ್ಯವಾಗುವಂತೆ ವಿಶೇಷ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿವೆ.

ಅಂದಹಾಗೆ ನೂತನ ಆಕಾಶ್‌-2 ಟ್ಯಾಬ್ಲೆಟ್‌ನ ವಿಶೇಷತೆ ಕುರಿತಾಗಿ ಹೇಳುವುದಾದರೆ 7 ಇಂಚಿನ ಮಲ್ಟಿ-ಟಚ್‌ ಸಾಮರ್ತ್ಯದ ದರ್ಶಕದೊಂದಿಗೆ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದ್ದು, 1GHz ARM ಕಾರ್ಟೆಕ್ಸ್‌ ಎ8 ಪ್ರೊಸೆಸರ್‌, 512ಎಂಬಿ RAM, 4ಜಿಬಿ ಆಂತರಿಕ ಸ್ಟೋರೇಜ್‌, ಮುಂಬದಿಯ ಕ್ಯಾಮೆರಾ, ವೈ-ಫೈ ಕನೆಕ್ಟಿವಿಟಿ ಸೇರಿದಂತೆ 3,000 mAh ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 3 ಗಂಟೆಗಳ ಬ್ಯಾಕಪ್‌ ನೀಡುತ್ತದೆ. ಅಂದಹಾಗೆ ಆಕಾಶ್‌-2 ಟ್ಯಾಬ್ಲೆಟ್‌ನಲ್ಲಿ ಆಂಡ್ರಾಯ್ಡ್‌ 4.0.3 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಡೇಟಾವಿಂಡ್‌ ಸಂಸ್ಥೆ ಸಿದ್ಧ ಪಡಿಸಿರುವ ನೂತನ ಟ್ಯಾಬ್ಲೆಟ್‌ ಅನ್ನು ಭಾರತೀಯ ಸರ್ಕಾರ ರೂ. 2,263 ದರದಲ್ಲಿ ಸಂಸ್ಥೆಯಿಂದ ಖರೀದಿಸಿದ್ದು ಶೇಕಡ 50% ರಿಯಾಯಿತಿಯೊಂದಿಗೆ ವಿದ್ಯಾರ್ಥಿಗಳಿಗೆ ರೂ. 1,130 ದರದಲ್ಲಿ ಲಭ್ಯವಾಗುವಂತೆ ಮಾಡಿದೆ ಎಂದು ಡೇಟಾವಿಂಡ್‌ ಸಂಸ್ಥೆಯ ಮುಖ್ಯಸ್ಥರಾದ ಸುನೀತ್‌ ಟುಲಿ ತಿಳಿಸಿದ್ದಾರೆ.

ಇದಲ್ಲದೆ ಭಾರತೀಯ ಸರ್ಕಾರವು ರಾಜ್ಯಸರ್ಕಾರಗಳನ್ನು ಸಹ ನೂತನ ಟ್ಯಾಬ್ಲೆಟ್‌ನ ಮೆಲೆ ರಿಯಾಯಿತಿ ನೀಡುವಂತೆ ಮಾತುಕತೆ ನಡೆಸಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್‌ಗಳು ಲಭ್ಯವಾಗುವಂತೆ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಂದಹಾಗೆ ಡೇಟಾವಿಂಡ್‌ ಸಂಸ್ಥೆಯು ನೂತನ ಆಕಾಶ್‌-2 ಟ್ಯಾಬ್ಲೆಟ್‌ ಅನ್ನು ಇತರೆ ಗ್ರಾಹಕರುಗಳಿಗಾಗಿ ಯುಬಿಸ್ಲೇಟ್‌ 7ಸಿಐ ಹೆಸರಿನಲ್ಲಿ ರೂ. 4,499 ದರದಲ್ಲಿ ಬಿಡುಗಡೆ ಮಾಡಿದ್ದು, ಡೇಟಾವಿಂಡ್‌ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಮೂಲಕ ಖರೀದಿಸ ಬಹುದಾಗಿದೆ.

ನೂತನ ಆಕಾಶ್‌-2 ಟ್ಯಾಬ್ಲೆಟ್‌ ಕುರಿತಾಗಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ನಮಗೆ ತಿಳಿಸಿ.

Read In English...

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Please Wait while comments are loading...
Opinion Poll

Social Counting