ಕೇವಲ 13 ದಿನಗಳಲ್ಲಿ ದಾಖಲೆ ಬರೆದ 'ಆರೋಗ್ಯ ಸೇತು' ಆಪ್‌!

|

ಕೊರೊನಾ ವೈರಸ್‌ ಸಾಂಕ್ರಾಮಿಕದ ಕುರಿತಾಗಿ ಜನರಿಗೆ ಮಾಹಿತಿ ಹಾಗೂ ಕೋವಿಡ್‌-19 ಸೋಂಕಿತರನ್ನು ಟ್ರಾಕ್ ಮಾಡಲು ಸರ್ಕಾರ ಇತ್ತೀಚಿಗಷ್ಟೆ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಆರೋಗ್ಯ ಸೇತು ಆಪ್‌ ಡೌನ್‌ಲೋಡ್‌ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಆಗಿದ್ದು, ಕೇವಲ 13 ದಿನಗಳಲ್ಲಿ 50 ಮಿಲಿಯನ್‌ ಬಳಕೆದಾರರನ್ನು ತಲುಪುವ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ.

ಲೊಕೇಶನ್

ಜಿಪಿಎಸ್‌ ಲೊಕೇಶನ್ ಹಾಗೂ ಬ್ಲೂಟೂತ್ ಆಧಾರಿತವಾಗಿ ಕಾರ್ಯನಿರ್ವಹಿಸುವ ಆರೋಗ್ಯ ಸೇತು ಅಪ್ಲಿಕೇಶನ್ ಈಗ 50 ಮಿಲಿಯನ್‌ ಗಡಿದಾಟಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಇದೇ ಏಪ್ರಿಲ್ 2 ರಂದು ಬಿಡುಗಡೆ ಆಗಿದ್ದ ಆರೋಗ್ಯ ಆಪ್‌, ಏಪ್ರಿಲ್ 13ರ ವೇಳೆಗೆ 50 ಮಿಲಿಯನ್ ಬಳಕೆದಾರರನ್ನು ತಲುಪುವ ಮೂಲಕ ಹೊಸ ರೇಕಾರ್ಡ್‌ ಹುಟ್ಟುಹಾಕಿದೆ. ಜನಪ್ರಿಯ ಪೋಕ್ಮನ್ ಗೋ ಗೇಮ್ 19 ದಿನಗಳಲ್ಲಿ 50 ಮಿಲಿಯನ್ ಬಳಕೆದಾರರನ್ನು ತಲುಪಿತ್ತು. ಆ ದಾಖಲೆಯನ್ನು ಅಳಿಸಿಹಾಕಿದೆ.

ಮೋದಿ ಮಾತು ಪ್ಲಸ್‌ ಪಾಯಿಂಟ್ ಆಯ್ತು

ಮೋದಿ ಮಾತು ಪ್ಲಸ್‌ ಪಾಯಿಂಟ್ ಆಯ್ತು

ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಲು ಹೇಳಿದರು. ಆ ದಿನವೇ 11 ಮಿಲಿಯನ್ ಬಳಕೆದಾರರು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಂಡಿರುವುದು ವಿಶೇಷ. ಮೋದಿ ಅವರ ಮಾತು ಆಪ್ ಡೌನ್‌ಲೋಡ್ ಕಾಣಲು ಪ್ಲಸ್‌ ಪಾಯಿಂಟ್‌ ಆಗಿದೆ ಎನ್ನಲಾಗಿದೆ.

ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್‌

ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್‌

ಆರೋಗ್ಯ ಸೇತು ಆಪ್ ಮೊಬೈಲ್‌ ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್‌ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೆ. ಈ ಆಪ್‌ ಬಳಕೆ ಮಾಡುವ ಬಳಕೆದಾರರ ಸ್ಥಳದ ಸುತ್ತಮುತ್ತ ಕೋವಿಡ್-19 ಸೋಂಕಿತರು ಬಂದರೇ ಹಾಗೂ ಬಳಕೆದಾರರು ಸೋಂಕು ಹೆಚ್ಚು ಇರುವ ಪ್ರದೇಶದಲ್ಲಿದ್ದರೆ ಅಲರ್ಟ್‌ ಮಾಹಿತಿ ನೀಡುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್ ಓಎಸ್‌ ಬಳಕೆದಾರರಿಬ್ಬರೂ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗಾದರೆ ಈ ಆಪ್ ಬಳಕೆ ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಆರೋಗ್ಯ ಸೇತು ಆಪ್ ಇನ್‌ಸ್ಟಾಲ್‌ ಬಗ್ಗೆ ಮಾಹಿತಿ

ಹಂತ 1: ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಂತ 2: ಡೌನ್‌ಲೋಡ್ ಆದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮಗೆ ಅನುಕೂಲಕರವಾದ ಭಾಷೆಯನ್ನು ಆರಿಸಿ.
ಹಂತ 3: ಆ ನಂತರ ಅಲ್ಲಿನ ಕೇಳಲಾಗುವ ಹಂತಗಳನ್ನು ಅನುಸರಿಸಿ, ಅಪ್ಲಿಕೇಶನ್ ಬೇಡುವ ಅನುಮತಿಯನ್ನು ಒಪ್ಪಿರಿ.
ಹಂತ 4: ನಂತರ ನಿಮ್ಮ ಸ್ಮಾರ್ಟ್‌ಫೋನ್ ಲೊಕೇಶನ್ ಮತ್ತು ಬ್ಲೂಟೂತ್ ಆನ್‌ ಇರುವಂತೆ ನೋಡಿಕೊಳ್ಳಿ.(ಜಿಪಿಎಸ್ ಮತ್ತು ಬ್ಲೂಟೂತ್ ಅಗತ್ಯ)
ಹಂತ 5: ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ. OTP ಬರುತ್ತದೆ ಅದನ್ನು ನಮೂದಿಸಿ.
ಹಂತ 6: ಆ ನಂತರ ನಿಮ್ಮ ಲಿಂಗ, ಪೂರ್ಣ ಹೆಸರು, ವಯಸ್ಸು, ವೃತ್ತಿಯಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಕಳೆದ 30 ದಿನಗಳಲ್ಲಿ ನೀವು ವಿದೇಶ ಪ್ರಯಾಣ ಮಾಡಿರುವ ಬಗ್ಗೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಸ್ವ-ಮೌಲ್ಯಮಾಪನ ಪರೀಕ್ಷೆ) ಈ ಹಂತಗಳನ್ನು ಪೂರ್ಣಗೊಳಿಸಿ. ಈ ಆಯ್ಕೆಯನ್ನು(ಸ್ವ-ಮೌಲ್ಯಮಾಪನ ಪರೀಕ್ಷೆ)ನೀವು ನಂತರದಲ್ಲಿಯೂ ಪೂರ್ಣಗೊಳಿಸಬಹುದು.
ಹಂತ 7: ಬಳಕೆದಾರರು ತೆಗೆದುಕೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೂ ಕೊರೊನಾ ವಿರುದ್ಧ ಹೋರಾಟಕ್ಕೆ ಆಸಕ್ತರು PM CARES ಖಾತೆಗೆ ದೇಣಿಗೆ/ದಾನ ಮಾಡಬಹುದಾದ ಸೂಚಿಸುತ್ತದೆ.

Best Mobiles in India

English summary
Aarogya Setu app took fewer days than Pokemon Go to reach 50 million users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X