Home
ಸುದ್ದಿಜಾಲ

ಜಿಯೋ ಫೋನ್‌ಗಳಲ್ಲಿಯೂ ಆರೋಗ್ಯ ಸೇತು ಆಪ್ ಲಭ್ಯ!

ಡೆಡ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಮಾಡಿದೆ. ಅದರೊಂದಿಗೆ ಕೋವಿಡ್‌-19 ಟ್ರಾಕಿಂಗ್ ಮಾಡಲು ಆರೋಗ್ಯ ಸೇತು ಮೊಬೈಲ್ ಆಪ್‌ ಸಹ ಬಿಡುಗಡೆ ಮಾಡಿದೆ. ಜನರ ಹತ್ತಿರದಲ್ಲಿ ಕೋವಿಡ್‌ ಸೋಂಕಿತರು ಕಂಡುಬಂದರೇ ಆ ಬಗ್ಗೆ ಆರೋಗ್ಯ ಸೇತು ಆಪ್‌ ಬಳಕೆದಾರರಿಗೆ ಎಚ್ಚರಿಸುತ್ತದೆ. ಆರೋಗ್ಯ ಸೇತು ಆಪ್‌ ಅನ್ನು ಎಲ್ಲರೂ ಬಳಕೆ ಮಾಡಲು ಸರ್ಕಾರ ಸಹ ಸೂಚಿಸಲಾಗಿದ್ದು, ಈಗಾಗಲೇ ಅಧಿಕ ಮಿಲಿಯನ್ ಡೌನ್‌ಲೋಡ್ ಕಂಡಿದೆ. ಆದ್ರೆ ಇದೀಗ ಈ ಆಪ್‌ ಇನ್ನು ಜಿಯೋ ಫೋನ್ ಬಳಕೆದಾರರಿಗೂ ಲಭ್ಯವಾಗಿದೆ.

ಜಿಯೋ ಫೋನ್

ಹೌದು, ಜಿಯೋ ಫೋನ್ ಬಳಕೆದಾರರಿಗೂ ಈಗ ಆರೋಗ್ಯ ಸೇತು ಮೊಬೈಲ್ ಆಪ್‌ನ ವಿಭಿನ್ನ ಆವೃತ್ತಿಯ ಲಭ್ಯವಾಗಿದೆ. ರಾಯಟರ್ಸ್‌ ವರದಿಯಂತೆ ಸುಮಾರು 5 ಕೋಟಿ ಜಿಯೋ ಫೋನ್ ಬಳಕೆದಾರರಿಗಾಗಿ ಆರೋಗ್ಯ ಸೇತು ಆಪ್‌ ಭಿನ್ನ ಮಾದರಿಯಲ್ಲಿ ರೂಪಿಸಲಾಗಿದೆ. ಇನ್ನು ಏಪ್ರಿಲ್ 2 ರಂದು ಬಿಡುಗಡೆ ಮಾಡಲಾಗಿದ್ದು, ಕೇವಲ 41 ದಿನಗಳಲ್ಲಿ ಸುಮಾರು 10ಕೋಟಿ ಡೌನ್‌ಲೋಡ್ ಕಂಡಿದೆ.

ಸ್ಮಾರ್ಟ್‌ಫೋನ್

ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಸುಮಾರು 45 ರಿಂದ 50 ಕೋಟಿಗಳಷ್ಟಿದೆ. ಹಾಗೆಯೇ ಫೀಚರ್ ಫೋನ್‌ಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚಿದೆ. ಸುಮಾರು 11 ಕೋಟಿ ಜನರು ಜಿಯೋ ಫೋನ್ ಬಳಸುತ್ತಾರೆ. ಆದ್ದರಿಂದ, KaiOS ಆಪರೇಟಿಂಗ್ ಸಿಸ್ಟಮ್ ಬಳಸುವ ಜಿಯೋ ಫೋನ್‌ಗಳಿಗಾಗಿ, ಆರೋಗಾ ಸೇತು ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಇತ್ತೀಚಿಗೆ ಮೈಗೋವ್ ಇಂಡಿಯಾದ ಸಿಇಒ ಅಭಿಷೇಕ್ ಸಿಂಗ್ ಹೇಳಿದ್ದರು.

ಆಂಡ್ರಾಯ್ಡ್ ಓಎಸ್‌

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತವೆ. ಈಗಾಗಲೇ ಆಂಡ್ರಾಯ್ಡ್ ಓಎಸ್‌ನಲ್ಲಿ ಆರೋಗ್ಯ ಸೇತು ಆಪ್ ಲಭ್ಯವಿದೆ. ಆದರೆ ರಿಲಯನ್ಸ್ ಜಿಯೋ ಫೋನ್‌ಗಳು KaiOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಆಪರೇಟಿಂಗ್ ಸಿಸ್ಟಂಗೆ ಬೆಂಬಲ ಸೂಚಿಸುವಂತೆ ಆರೋಗ್ಯಾ ಸೇತು ಆಪ್‌ ಅನ್ನು ಭಿನ್ನ ಆವೃತ್ತಿಯಲ್ಲಿ ಪರಿಚಯಿಸಲು ಸರ್ಕಾರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಆರೋಗ್ಯಾ ಸೇತು

ಒಂದು ವೇಳೆ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ, ಆರೋಗ್ಯಾ ಸೇತು ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (IVRS)ನ ಟೋಲ್-ಫ್ರೀ ಸಂಖ್ಯೆಯನ್ನು 1921 ಬಳಸಬಹುದು. ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ. ಮಿಸ್ಡ್‌ ಕಾಲ್ ಮಾಡಿದ ಬಳಿಕ ಮರಳಿ ಕರೆ ಬರಲಿದ್ದು, ಆರೋಗ್ಯದ ಬಗ್ಗೆ ಸರಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸ ಮಾಹಿತಿಯನ್ನು ಆರೋಗ್ಯ ಸೇತು ಆಪ್‌ನ ಡೇಟಾಬೇಸ್‌ಗೆ ಸೇರಿಸಲಾಗುತ್ತದೆ.

Best Mobiles in India

English summary
The app has been downloaded by over 100 million in just 41 days after its launch during the lockdown in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+