AC Bedsheet: ಏರ್ ಕೂಲರ್, ಎಸಿ ಬಗ್ಗೆ ನಿಮಗೆ ಗೊತ್ತಿರಬಹುದು, ಎಸಿ ಬೆಡ್‌ಶೀಟ್ ಬಗ್ಗೆ ಗೊತ್ತಾ!?
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಎಸಿ, ಫ್ಯಾನ್ ಹಾಗೂ ಏರ್‌ಕೂಲರ್‌ಗೆ ಭಾರೀ ಬೇಡಿಕೆ ಇರುತ್ತದೆ. ಈ ನಡುವೆ ಹಲವು ಬ್ರ್ಯಾಂಡ್‌ಗಳು ತಮ್ಮದೇ ಆದ ವಿಶೇಷ ಫೀಚರ್ಸ್ ನೀಡುವ ಮೂಲಕ ಇವುಗಳನ್ನು ಅನಾವರಣ ಮಾಡುತ್ತವೆ. ಅದಾಗ್ಯೂ ಎಲ್ಲರಿಗೂ ಸಹ ಎಸಿ ಖರೀದಿ ಮಾಡಲು ಅಥವಾ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಆ ರೀತಿಯ ಜನರು ಎಸಿ ಬೆಡ್‌ಶೀಟ್(AC Bedsheet) ಖರೀದಿ ಮಾಡಬಹುದು.
ಹೌದು, ಎಸಿ ಬಗ್ಗೆ ಗೊತ್ತು, ಏನಿದು ಎಸಿ ಬೆಡ್‌ಶೀಟ್ ಎಂದು ಗೊಂದಲಕ್ಕೆ ಒಳಗಾಗಬೇಡಿ. ಈ ಬೆಡ್‌ಶೀಟ್‌ಗಳು ಈಗಾಗಲೇ ಆನ್‌ಲೈನ್‌ನಲ್ಲಿ ಭಾರೀ ಪ್ರಸಿದ್ಧಿ ಪಡೆದಿಕೊಂಡಿವೆ. ಪ್ರಮುಖ ಕಂಪೆನಿಗಳು ಇವುಗಳನ್ನು ವಿವಿಧ ರೀತಿಯ ಸೈಜ್‌ನಲ್ಲಿ ಹಾಗೂ ಹೊಸ ಹೊಸ ಫೀಚರ್ಸ್‌ಗಳೊಂದಿಗೆ ಮಾರಾಟ ಮಾಡುತ್ತಿವೆ. ಹಾಗಿದ್ರೆ, ಬನ್ನಿ ಈ ಎಸಿ ಬೆಡ್‌ಶೀಟ್ ಹೇಗೆ ಕೆಲಸ ಮಾಡುತ್ತದೆ. ಇವುಗಳ ಬೆಲೆ ಎಷ್ಟು ಎಂಬಿತ್ಯಾದಿ ಆಶ್ಚರ್ಯಕರ ಮಾಹಿತಿಯನ್ನು ತಿಳಿಯೋಣ.

ಏನಿದು ಎಸಿ ಬೆಡ್?: ಎಸಿ ಬೆಡ್ ಎಂಬುವುದು ಇಂಟಿಗ್ರೇಟೆಡ್ ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಹಾಸಿಗೆಯಾಗಿದೆ. ಇವು ಇನ್‌ಬಿಲ್ಟ್ ಗಾಳಿಯ ದ್ವಾರಗಳು ಮತ್ತು ತಂಪಾಗಿಸುವ ಕಾರ್ಯವಿಧಾನಗಳನ್ನು ಹೊಂದಿದ್ದು, ಈ ಮೂಲಕ ಹಾಸಿಗೆಯ ಸುತ್ತಲೂ ತಂಪಾದ ಗಾಳಿಯನ್ನು ಪ್ರಸಾರ ಮಾಡಲಾಗುತ್ತದೆ. ಇದರಿಂದಾಗಿ ಬಳಕೆದಾರರು ಉತ್ತಮ ನಿದ್ದೆಯನ್ನು ಮಾಡಬಹುದಾಗಿದೆ.
ಈ ಬೆಡ್ ಶೀಟ್‌ನಲ್ಲಿ ಏರ್ ಕಂಡಿಷನರ್ ಮತ್ತು ಏರ್ ಕೂಲರ್‌ನಲ್ಲಿ ನೀಡಿರುವಂತೆ ಗಾಳಿಯನ್ನು ತಂಪು ಮಾಡಲು ಫ್ಯಾನ್‌ಗಳನ್ನು ಒದಗಿಸಲಾಗಿಲ್ಲ. ಬದಲಾಗಿ ಇವುಗಳಲ್ಲಿ ಜೆಲ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಈ ಜೆಲ್ ತಂತ್ರಜ್ಞಾನದ ಬಳಕೆಯಿಂದಾಗಿ ಈ ಹಾಸಿಗೆ ತಂಪಾಗಲಿದ್ದು, ಅಗತ್ಯಕ್ಕೆ ತಕ್ಕಂತೆ ಹೊಂದಿಗೆ ಮಾಡಿಕೊಳ್ಳಬಹುದು. ಬೇಸಿಗೆಯಲ್ಲಿ ಈ ರೀತಿಯ ಬೆಡ್‌ಶೀಟ್‌ಗಳಿಗೆ ಹೆಚ್ಚಿನ ಬೇಡಿಕೆ ಸಹ ನಿರ್ಮಾಣ ಆಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ?: ಮೊದಲೇ ತಿಳಿಸಿದಂತೆ ಈ ಬೆಡ್‌ಶೀಟ್ ಕೂಲಿಂಗ್ ಜೆಲ್ ಮ್ಯಾಟ್ರೆಸ್ ಆಗಿದ್ದು, ಒಮ್ಮೆ ಈ ಹಾಸಿಗೆಗೆ ನೀಡಲಾದ ವೈರ್ ಅನ್ನು ಪ್ಲಸ್ ಮಾಡಿದ ನಂತರ ಹಾಸಿಗೆಯ ಮೇಲೆ ಮೇಲೆ ಇರುವ ಶೀಟ್ ತಂಪಾಗುತ್ತದೆ. ಈ ವೇಳೆ ಏರ್‌ಕೂಲರ್‌ನಂತೆ ಯಾವುದೇ ಶಬ್ದವನ್ನು ಮಾಡುವುದಿಲ್ಲ ಅಥವಾ ಕಂಪಿಸುವುದಿಲ್ಲ. ಈ ಮೂಲಕ ನಿಮ್ಮ ನಿದ್ದೆಗೆ ಯಾವುದೇ ಭಂಗವನ್ನು ಇದು ಉಂಟುಮಾಡುವುದಿಲ್ಲ. ಜೊತೆಗೆ ಈ ಕೂಲಿಂಗ್ ಬೆಡ್‌ಶೀಟ್ ಮೇಲೆ ನಿಮ್ಮ ಸಾಮಾನ್ಯ ಬೆಡ್‌ಶೀಟ್ ಹಾಕಬಹುದು.

ಅದಾಗ್ಯೂ ಕೆಲವು ವಿಷಯಗಳನ್ನು ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬೆಡ್‌ಶೀಟ್ ಕೊಳೆಯಾದಾಗ ಅಥವಾ ಒದ್ದೆಯಾದ ಬಟ್ಟೆಯ ಬದಲಿಗೆ, ಒಣ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಬೇಕಿದೆ. ಇನ್ನು ಫ್ಯಾನ್ ಹಾಕಿಕೊಂಡು ಮಲಗುವ ಅಭ್ಯಾಸವಿರುವವರಿಗೆ ಈ ಬೆಡ್‌ಶೀಟ್ ಅತ್ಯುತ್ತಮ ಆಯ್ಕೆಯಾಗಿದ್ದು, ಅವರು ಈ ಬೆಡ್‌ಶೀಟ್ ಅನ್ನು ಪ್ರತಿದಿನ ಅಂದರೆ ಯಾವುದೇ ಕಾಲದಲ್ಲೂ ಸಹ ಬಳಕೆ ಮಾಡಬಹುದು.
ಎಸಿ ಬೆಡ್‌ಶೀಟ್ ಬೆಲೆ ವಿವರ: ಹೆಚ್ಚುತ್ತಿರುವ ವಿದ್ಯುತ್ ಬಿಲ್‌ನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೀವೂ ಉತ್ತಮ ಡಿವೈಸ್ ಅನ್ನು ಹುಡುಕುತ್ತಿದ್ದರೆ. ಅದರಲ್ಲೂ ಎಸಿ ಹಾಗೂ ಫ್ಯಾನ್‌ಗೆ ಮುಕ್ತಿ ಹಾಡಬೇಕು ಎಂದುಕೊಂಡಿದ್ದರೆ ಈ ಕೋಲ್ಡ್ ಬೆಡ್ ಶೀಟ್ ಅನ್ನು ನೀವು ಖರೀದಿ ಮಾಡಬಹುದು. ಯಾಕೆಂದರೆ ಇವು ಆನ್‌ಲೈನ್‌ನಲ್ಲಿ ಕೇವಲ 500 ರಿಂದ 1000ರೂ.ಗಳಿಗೆ ಲಭ್ಯ ಆಗುತ್ತಿವೆ. ಜೊತೆಗೆ ಎಸಿಗಿಂತ ಉತ್ತಮ ಅನುಭವವನ್ನು ನೀಡುತ್ತವೆ.

ಈ ಬೆಡ್‌ಶೀಟ್ ಗಳನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಕೆಲವು ಬೆಡ್‌ಶೀಟ್‌ಗಳಿಗೆ ಈ ವೇಳೆ ಬ್ಯಾಂಕ್ ಆಫರ್ ಸಹ ನೀಡಲಾಗಿದ್ದು, ಆಫರ್ ಬೆಲೆಗಿಂತ ಕಡಿಮೆ ಬೆಲೆಗೆ ಈ ಎಸಿ ಬೆಡ್‌ಶೀಟ್‌ಗಳನ್ನು ಕೊಂಡುಕೊಳ್ಳಬಹುದು.


Click it and Unblock the Notifications








