Home
ಸುದ್ದಿಜಾಲ

Acer: ಈ ಏಸರ್‌ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 43% ರಿಯಾಯಿತಿ! 16GB ಸ್ಟೋರೇಜ್‌ ಆಯ್ಕೆ..

ಏಸರ್‌ (Acer) ಕೇವಲ ಲ್ಯಾಪ್‌ಟಾಪ್‌ಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ವಿವಿಧ ರೀತಿಯ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಟೆಕ್‌ ವಲಯದಲ್ಲಿ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಈ ಕಂಪೆನಿಯ ಸ್ಮಾರ್ಟ್‌ಟಿವಿಗಳು ವಿಶೇಷ ಫೀಚರ್ಸ್ ನೊಂದಿಗೆ ಆಕರ್ಷಕ ವಿನ್ಯಾಸ ಪಡೆದಿದ್ದು, ಭಾರೀ ಬೇಡಿಕೆ ಹೊಂದಿವೆ.

ಹೌದು, ಸ್ಮಾರ್ಟ್‌ಟಿವಿಗಳು ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಗಮನಸೆಳೆಯುತ್ತಿದ್ದು, ಈ ನಡುವೆ ಅತ್ಯಾಧುನಿಕ ಫೀಚರ್ಸ್‌ ಹೊಂದಿರುವ ಏಸರ್‌ನ ಸ್ಮಾರ್ಟ್‌ಟಿವಿಯೊಂದಕ್ಕೆ ದೊಡ್ಡ ಮಟ್ಟದ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಟಿವಿ 16GB ಸ್ಟೋರೇಜ್‌ ಆಯ್ಕೆ ಹಾಗೂ 30W ಸೌಂಡ್‌ ಔಟ್‌ಪುಟ್‌ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿ (Smart TV) ಆಫರ್ ಬೆಲೆ ವಿವರ ಹಾಗೂ ಇದರ ಪ್ರಮುಖ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ಏಸರ್‌ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 43% ರಿಯಾಯಿತಿ! 16GB ಸ್ಟೋರೇಜ್‌ ಆಯ್ಕೆ..

ಏಸರ್‌ ಸ್ಮಾರ್ಟ್‌ಟಿವಿಗೆ ಆಫರ್ ಮಾಹಿತಿ: ಏಸರ್ ಅಡ್ವಾನ್ಸಡ್‌ I ಸರಣಿ 102 cm ಫುಲ್‌ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್ ಗೂಗಲ್‌ ಟಿವಿ 2023 ಆವೃತ್ತಿ (Acer Advanced I Series 102 cm Full HD LED Smart Google TV 2023 Edition) ಗೆ ಇದೀಗ ಆಫರ್ ನೀಡಲಾಗಿದೆ. ಈ ಟಿವಿ 29,999 ರೂ.ಗಳ ಸಾಮಾನ್ಯ ದರ ಹೊಂದಿದ್ದು, ನೀವೀಗ ಇದನ್ನು ಕೇವಲ 16,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಯಾಕೆಂದರೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ ಈ ಫೋನ್‌ಗೆ 43% ರಿಯಾಯಿತಿ ಘೋಷಣೆ ಮಾಡಿದೆ. ಅದಾಗ್ಯೂ ನೀವು ಇತರೆ ಕೊಡುಗೆ ಮೂಲಕ ಇನ್ನೂ ಕಡಿಮೆ ಬೆಲೆಯಲ್ಲಿ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದು. ಈ ಸ್ಮಾರ್ಟ್‌ಟಿವಿ ಖರೀದಿ ಮಾಡುವಾಗ ಯುಪಿಐ ವ್ಯವಹಾರದ ಮೇಲೆ ಹೆಚ್ಚುವರಿ 1% ರಿಯಾಯಿತಿ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಈ ಏಸರ್‌ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 43% ರಿಯಾಯಿತಿ! 16GB ಸ್ಟೋರೇಜ್‌ ಆಯ್ಕೆ..

ಏಸರ್‌ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ಮಾಹಿತಿ: ಇನ್ನು ಈ ಸ್ಮಾರ್ಟ್‌ಟಿವಿ 40 ಇಂಚಿನ ಎಲ್‌ಇಡಿ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದು 1080 x 1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲ ಪಡೆದಿದೆ. ಇದರೊಂದಿಗೆ ಇಂಟೆಲಿಜೆಂಟ್ ಫ್ರೇಮ್ ಸ್ಟೆಬಿಲೈಸೇಶನ್ ಎಂಜಿನ್, 178 ಡಿಗ್ರಿ ವೀಕ್ಷಣೆ ಅನುಭವ, 60 Hz ರೇಟ್‌ ಆಯ್ಕೆ ಹೊಂದಿದ್ದು, ಉತ್ತಮ ವೀಕ್ಷಣೆ ಅನುಭವವನ್ನು ಈ ಮೂಲಕ ಪಡೆಯಬಹುದಾಗಿದೆ.

ಏಸರ್‌ ಸ್ಮಾರ್ಟ್‌ಟಿವಿ ಫೀಚರ್ಸ್‌: ಇನ್ನು ಈ ಸ್ಮಾರ್ಟ್‌ಟಿವಿಯ ಇತರೆ ಫೀಚರ್ಸ್‌ ಬಗ್ಗೆ ತಿಳಿಯುವುದಾದರೆ ಮಾಲಿ G31 MP2 ಗ್ರಾಫಿಕ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ನೆಟ್‌ಫ್ಲಿಕ್ಸ್, ಯೂಟ್ಯೂಬ್‌, ಡಿಸ್ನಿ+ಹಾಟ್‌ಸ್ಟಾರ್, ಪ್ರೈಮ್‌ ವಿಡಿಯೋಗಳನ್ನು ಬೆಂಬಲಿಸಲಿದೆ. ಇದು ಗೂಗಲ್‌ ಟಿವಿ ಆಗಿದ್ದು, ಸ್ಕ್ರೀನ್ ಮಿರರಿಂಗ್ ಸೌಲಭ್ಯವನ್ನೂ ಸಹ ಪಡೆಯಬಹುದಾಗಿದೆ.

ಇದರೊಂದಿಗೆ ಪೂರ್ವ ಸ್ಥಾಪಿತ ಬ್ರೌಸರ್ ಇದರಲ್ಲಿದ್ದು, ಇದರೊಂದಿಗೆ ಗೂಗಲ್ ಪ್ಲೇ ಸ್ಟೋರ್ ಅನ್ನೂ ಸಹ ಕಾಣಬಹುದು. ಇದರಿಂದ ನಿಮ್ಮಿಷ್ಟದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡು ಉತ್ತಮ ಸ್ಟ್ರೀಮಿಂಗ್‌ ಅನುಭವವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಸುಧಾರಿತ ಬ್ಲೂಟೂತ್‌ ಆವೃತ್ತಿ, ವೈ-ಫೈ ಆವೃತ್ತಿ ಹಾಗೂ ಇನ್ನಿತರೆ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಅಂದರೆ ಎರಡು ಹೆಚ್‌ಡಿಎಮ್‌ಐ ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಈ ಏಸರ್‌ ಸ್ಮಾರ್ಟ್‌ಟಿವಿಗೆ ಬರೋಬ್ಬರಿ 43% ರಿಯಾಯಿತಿ! 16GB ಸ್ಟೋರೇಜ್‌ ಆಯ್ಕೆ..

ಈ ಸ್ಮಾರ್ಟ್‌ಟಿವಿಯ ಆಡಿಯೋ ಫೀಚರ್ಸ್‌ ಬಗ್ಗೆ ತಿಳಿಯುವುದಾದರೆ ಎರಡು ಸ್ಪೀಕರ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ, 30 W ಸೌಂಡ್‌ ಔಟ್‌ ಪುಟ್‌ ನೀಡಲಿದೆ. ಅಲ್ಲದೆ ಸ್ಟೇಡಿಯಂ, ಸ್ಟಾಂಡರ್ಡ್‌, ಮೂವಿ, ಮ್ಯೂಸಿಕ್‌ ಹಾಗೂ ಸ್ಪೀಚ್‌ ಎಂಬ ವಿವಿಧ ಸೌಂಡ್‌ ಮೋಡ್‌ ಮೂಲಕ ನಿಮ್ಮಿಷ್ಟದ ವಿಡಿಯೋಗಳಲ್ಲಿ ಇನ್ನಷ್ಟು ವಿಶೇಷ ಅನುಭವ ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಟಿವಿಯಲ್ಲಿ ವೈಯಕ್ತಿಕ ಪ್ರೊಫೈಲ್‌ಗಳು ಮತ್ತು ವೈಯಕ್ತಿಕ ವೀಕ್ಷಣೆ ಲಿಸ್ಟ್‌ ಸೌಲಭ್ಯ ಪಡೆಯಬಹುದಾಗಿದೆ. ಅಲ್ಲದೆ ಈ ಟಿವಿಯನ್ನು ಕಂಟ್ರೋಲ್‌ ಮಾಡಲು ಉತ್ತಮವಾದ ಸ್ಮಾರ್ಟ್‌ ರಿಮೋಟ್‌ ಅನ್ನು ಹೊಂದಿದೆ. ಇದು ಮೀಸಲಾದ ಹಾಟ್ ಬಟನ್‌ಗಳನ್ನು ಪಡೆದಿದ್ದು, ಸರಳ ನ್ಯಾವಿಗೇಷನ್‌ಗಾಗಿ ಗೂಗಲ್‌ ಅಸಿಸ್ಟೆಂಟ್‌ ಸೌಲಭ್ಯವನ್ನೂ ಸಹ ಪಡೆದಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಟಿವಿ ಬೆಜೆಲ್-ಲೆಸ್ ವಿನ್ಯಾಸ ಪಡೆದಿದ್ದು, ಸಿನಿಮಾ ಥಿಯೇಟರ್‌ ಅನುಭವ ಸಿಗಲಿದೆ.

Best Mobiles in India

English summary
Acer Advanced I Series 102 cm Full HD LED Smart Google TV 2023 Edition SmartTV is available on Flipkart at an offer price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+