Home
ಸುದ್ದಿಜಾಲ

Acer: ಏಸರ್ ವೆರೋ ಲೇಸರ್ ಪ್ರೊಜೆಕ್ಟರ್‌ಗಳು ಲಾಂಚ್!ಬೆಲೆ, ಫೀಚರ್ಸ್‌ ವಿವರ ಇಲ್ಲಿದೆ

ಏಸರ್‌ (Acer) ಎಂದಾಕ್ಷಣ ಲ್ಯಾಪ್‌ಟಾಪ್‌ ಕಣ್ಣ ಮುಂದೆ ಬರುತ್ತವೆ. ಅದರಲ್ಲೂ ಇತ್ತೀಚೆಗೆ ಏಸರ್‌ ಭಾರತದಲ್ಲಿ ಏಸರ್‌ ಪ್ಯೂರ್‌ ಎಂಬ ಪರಿಕಲ್ಪನೆಯನ್ನು ಆರಂಭ ಮಾಡಿದ್ದು, ಇದು ವಿವಿಧ ಗ್ಯಾಜೆಟ್‌ಗಳನ್ನು ಸೇಲ್‌ ಮಾಡಲಿದೆ. ಈ ಬೆಳವಣಿಗೆ ನಡುವೆ ಜಾಗತಿಕವಾಗಿ ಏಸರ್‌ ಎರಡು ಪ್ರೊಜೆಕ್ಟರ್‌ಗಳನ್ನು (Projector) ಲಾಂಚ್ ಮಾಡಿದೆ.

ಹೌದು, ಏಸರ್‌ ಇದೀಗ ಏಸರ್‌ HL6810 ಮತ್ತು ಏಸರ್‌ HL6810ATV ಪ್ರೊಜೆಕ್ಟರ್‌ಗಳನ್ನು (Acer HL6810 and Acer HL6810ATV projectors) ಲಾಂಚ್ ಮಾಡಿದ್ದು, ಇವು 4K UHD ರೆಸಲ್ಯೂಶನ್, HDR10 ಮತ್ತು 4000 ANSI ಲುಮೆನ್‌ಗಳನ್ನು ಬೆಂಬಲಿಸುತ್ತವೆ. ಹಾಗಿದ್ರೆ, ಇವುಗಳ ಇತರೆ ಫೀಚರ್ಸ್‌ ಏನು?, ಇವುಗಳ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏಸರ್ ವೆರೋ ಲೇಸರ್ ಪ್ರೊಜೆಕ್ಟರ್‌ಗಳು ಲಾಂಚ್!ಬೆಲೆ, ಫೀಚರ್ಸ್‌ ವಿವರ ಇಲ್ಲಿದೆ

ಏಸರ್‌ HL6810 ಮತ್ತು ಏಸರ್‌ HL6810ATV ಪ್ರೊಜೆಕ್ಟರ್‌: ಹೊಸ ಏಸರ್ ಪ್ರೊಜೆಕ್ಟರ್‌ಗಳು ಅದರ ಲೇಸರ್/ಎಲ್‌ಇಡಿ ಹೈಬ್ರಿಡ್ ಬೆಳಕಿನ ಮೂಲದಿಂದ 4000 ಎಎನ್‌ಎಸ್‌ಐ ಲುಮೆನ್‌ಗಳ ವರ್ಧಿತ ಪ್ರಖರತೆಯೊಂದಿಗೆ ನೀಡುತ್ತವೆ. ಹಾಗೆಯೇ 50,000:1 ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತವಿದ್ದು, HDR10/HLG ಹೊಂದಾಣಿಕೆಯಾಗುತ್ತದೆ ಮತ್ತು ವಿವಿಧ ರೀತಿಯ ಕಂಟೆಂಟ್‌ ಅನ್ನು ಸರಿಹೊಂದಿಸಲು ನಾಲ್ಕು ಮೋಡ್‌ಗಳ ಆಯ್ಕೆ ನೀಡಲಾಗಿದೆ. ಅಲ್ಲದೆ ದೊಡ್ಡ ವರ್ಣಪಟಲದ ಬಣ್ಣಗಳು ಮತ್ತು ಹೊಳಪಿನ ನಿಖರತೆಯನ್ನು ಉತ್ಪಾದಿಸಲಿದೆ.

HL6810ATV ಏಸರ್ ವಿಶೇಷ ಆಂಡ್ರಾಯ್ಡ್ ಟಿವಿ ಎಂಬೆಡೆಡ್ ಡಾಂಗಲ್ ವಿನ್ಯಾಸದೊಂದಿಗೆ ಬಂದಿದ್ದು, ಇದು ಬಳಕೆದಾರರಿಗೆ ಅವರ ಬೆರಳ ತುದಿಯಲ್ಲಿ ಸ್ಮಾರ್ಟ್ ಹೋಮ್ ಫೀಚರ್ಸ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ ನಂತಹ ಸ್ಟ್ರೀಮಿಂಗ್ ಆಪ್‌ಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಪ್ರೊಜೆಕ್ಟರ್ ಅನ್ನು ಧ್ವನಿ-ಸಕ್ರಿಯ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಕಂಟ್ರೋಲ್‌ ಮಾಡಬಹುದಾಗಿದೆ. ಅದರಲ್ಲೂ ರಿಮೋಟ್ ಅಥವಾ ಸ್ಮಾರ್ಟ್‌ಫೋನ್‌ ಮೂಲಕ ಇದನ್ನು ನಿಮ್ಮಿಷ್ಟಬಂದಂತೆ ನಿಯಂತ್ರಣ ಮಾಡಬಹುದು.

ಎರಡೂ ಪ್ರೊಜೆಕ್ಟರ್‌ಗಳು 30,000-ಗಂಟೆಗಳ ಜೀವಿತಾವಧಿಯೊಂದಿಗೆ ದೀರ್ಘಾವಧಿಯ ಬ್ರೈಟ್‌ನೆಸ್‌ ಸ್ಥಿರತೆಯನ್ನು ನೀಡುತ್ತವೆ ಎಂದು ಏಸರ್ ಹೇಳಿಕೊಂಡಿದೆ. ಅವುಗಳ ಹೈಬ್ರಿಡ್ ಬೆಳಕಿನ ಮೂಲವು 100 ಪ್ರತಿಶತ ಮರ್ಕ್ಯುರಿ-ಫ್ರೀ ಮುಕ್ತವಾಗಿದೆ ಮತ್ತು ಡಿವೈಸ್‌ಗಳು ತಮ್ಮ ಚಾಸಿಸ್‌ನಲ್ಲಿ ಪೋಸ್ಟ್-ಕನ್‌ಸ್ಯೂಮರ್ ಮರುಬಳಕೆಯ (PCR) ಪ್ಲಾಸ್ಟಿಕ್ ಅನ್ನು ಹೊಂದಿದ್ದು, ಪ್ಯಾಕೇಜಿಂಗ್‌ಗಾಗಿ ಮರುಬಳಕೆಯ ಪೇಪರ್‌ ಅನ್ನೂ ಸಹ ಬಳಕೆ ಮಾಡಲಾಗಿದೆ.

ಏಸರ್ ವೆರೋ ಲೇಸರ್ ಪ್ರೊಜೆಕ್ಟರ್‌ಗಳು ಲಾಂಚ್!ಬೆಲೆ, ಫೀಚರ್ಸ್‌ ವಿವರ ಇಲ್ಲಿದೆ

ಏಸರ್‌ HL6810ATV ಮತ್ತು HL6810A ಸಂಭಾವ್ಯ ಹಾನಿಯಿಂದ ರಕ್ಷಿಸಲು IP5X-ರೇಟೆಡ್ ಆಗಿವೆ. ಏಸರ್ ಬ್ಲೂಲೈಟ್ ಶೀಲ್ಡ್ ತಂತ್ರಜ್ಞಾನವಿದ್ದು, ಬಾಹ್ಯ ಸ್ಪೀಕರ್‌ಗಳು ಮತ್ತು ಆಂಪ್ಲಿಫೈಯರ್‌ಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಹೆಚ್‌ಡಿಎಮ್‌ಐ 2.0 ಪೋರ್ಟ್ ಇದೆ. ಪ್ರೊಜೆಕ್ಟರ್‌ಗಳು ಬ್ಲೂ-ರೇ 3D ಬೆಂಬಲವನ್ನು ನೀಡುತ್ತವೆ ಮತ್ತು ಪವರ್ ಸೇವಿಂಗ್ ಮೋಡ್ ಇದೆ. ಇದರ ಜೊತೆಗೆ ಇನ್‌ಸ್ಟಂಟ್-ಆನ್-ಆಫ್ ಫೀಚರ್ಸ್‌ಗಳು ವಿಭಿನ್ನ ಮೋಡ್‌ಗಳನ್ನು ಬಳಸುವಾಗ ಅಥವಾ ಐಡಲ್ ಆಗಿ ಬಿಟ್ಟಾಗ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲಿವೆ.

ಏಸರ್‌ HL6810 ಮತ್ತು ಏಸರ್‌ HL6810ATV ಪ್ರೊಜೆಕ್ಟರ್ ಬೆಲೆ ಹಾಗೂ ಲಭ್ಯತೆ: ಏಸರ್‌ ವೆರೋ HL6810ATV ಯು EUR 1,699 (ಅಂದಾಜು 1,53,400ರೂ.ಗಳು) ನಲ್ಲಿ ಪ್ರಾರಂಭವಾಗುತ್ತದೆ. ಹಾಗೂ ವೆರೋ HL6810 EUR 1,599 (ಸುಮಾರು 1,44,400 ರೂ.ಗಳ) ಬೆಲೆಯಲ್ಲಿ ಲಭ್ಯ ಇರಲಿದೆ. ಇವುಗಳನ್ನು ಆಗಸ್ಟ್‌ನಲ್ಲಿ EMEA ನಲ್ಲಿ ಖರೀದಿ ಮಾಡಬಹುದಾಗಿದ್ದು, ಆಯಾ ದೇಶಗಳಿಗೆ ಅನುಗುಣವಾಗಿ ನಿಖರವಾದ ಫೀಚರ್ಸ್, ಬೆಲೆಗಳು ಮತ್ತು ಲಭ್ಯತೆ ಬದಲಾಗುತ್ತದೆ ಎಂದು ಏಸರ್ ಹೇಳುತ್ತದೆ.

ಭಾರತದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಏಸರ್‌ಪ್ಯೂರ್: ಜಾಗತಿಕವಾಗಿ ತನ್ನ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಅನ್ನು ಅನಾವರಣಗೊಳಿಸಿದ ನಾಲ್ಕು ವರ್ಷಗಳ ನಂತರ, ಐಟಿ ಮತ್ತು ತಂತ್ರಜ್ಞಾನ ಪರಿಹಾರಗಳ ದೈತ್ಯ ಏಸರ್ ಗ್ರೂಪ್ ಅಂತಿಮವಾಗಿ ಭಾರತದಲ್ಲಿ ಏಸರ್‌ಪ್ಯೂರ್ ಅನ್ನು ಘೋಷಿಸಿದೆ. ಭಾರತವು ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಮತ್ತು ವಿಶೇಷ ಕಾರ್ಯತಂತ್ರದ ಅಗತ್ಯವಿರುವುದರಿಂದ ಇದು ಸಮಯ ತೆಗೆದುಕೊಂಡಿತು ಎಂದು ಏಸರ್ ಗ್ರೂಪ್‌ನ ಪ್ಯಾನ್-ಏಷ್ಯಾ ಪೆಸಿಫಿಕ್ ಕಾರ್ಯಾಚರಣೆಗಳ ಅಧ್ಯಕ್ಷ ಆಂಡ್ರ್ಯೂ ಹೌ ಹೇಳಿದ್ದಾರೆ. ಬೆಂಗಳೂರಿನಲ್ಲಿ ತನ್ನ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್‌ನ ಪ್ರಮುಖ ಉತ್ಪನ್ನವಾದ 65 ಇಂಚಿನ ಸ್ಮಾರ್ಟ್‌ಟಿವಿಯನ್ನು ಲಾಂಚ್ ಮಾಡುವಾಗ ಇದನ್ನು ಘೋ‍ಷಣೆ ಮಾಡಿದ್ದಾರೆ.

Best Mobiles in India

English summary
Acer has just launched the Acer HL6810 and Acer HL6810ATV projector, which support 4K UHD resolution, HDR10 and 4000 ANSI lumens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+