Home
ಸುದ್ದಿಜಾಲ

Acer: ಭಾರತೀಯರಿಗೆ ಏಸರ್‌ನಿಂದ ಗುಡ್‌ ನ್ಯೂಸ್! ಇನ್ಮುಂದೆ ಇವೆಲ್ಲವೂ ಇಲ್ಲೇ ಲಭ್ಯ

ಏಸರ್‌ (Acer) ಎಂದಾಕ್ಷಣ ಲ್ಯಾಪ್‌ಟಾಪ್‌ಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಆದರೆ, ಇನ್ಮುಂದೆ ಲ್ಯಾಪ್‌ಟಾಪ್‌ ಮಾತ್ರವಲ್ಲದೆ ಇತರೆ ಗ್ರಾಹಕ ವಸ್ತುಗಳು ಸಹ ಭಾರತದಲ್ಲಿ ಕಮಾಲ್‌ ಮಾಡಲಿವೆ. ಯಾಕೆಂದರೆ ಏಸರ್‌ ಇದೀಗ ಏಸರ್‌ಪ್ಯೂರ್‌ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ (AcerPure consumer electronics brand) ಅನ್ನು ಪ್ರಾರಂಭಿಸಿದೆ.

ಹೌದು, ಏಸರ್ ಭಾರತದಲ್ಲಿ ಟಿವಿಗಳು, ವಾಟರ್ ಪ್ಯೂರಿಫೈಯರ್, ಏರ್ ಸರ್ಕ್ಯುಲೇಟರ್ ಫ್ಯಾನ್‌ಗಳನ್ನು ತನ್ನದೇ ಬ್ರ್ಯಾಂಡ್‌ ಅಡಿಯಲ್ಲಿ ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಏಸರ್‌ ಏಸರ್‌ಪ್ಯೂರ್‌ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಅನ್ನು ಆರಂಭ ಮಾಡಿದೆ. ಗಮನಿಸಬೇಕಾದ ವಿಷಯ ಏನೆಂದರೆ ಮೇಕ್ ಇನ್ ಇಂಡಿಯಾ (Make in India) ಡಿವೈಸ್‌ಗಳನ್ನು ಇಲ್ಲಿ ಕಾಣಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯೋಣ.

ಭಾರತೀಯರಿಗೆ ಏಸರ್‌ನಿಂದ ಗುಡ್‌ ನ್ಯೂಸ್! ಇನ್ಮುಂದೆ ಇವೆಲ್ಲವೂ ಇಲ್ಲೇ ಲಭ್ಯ

ಏಸರ್‌ಪ್ಯೂರ್‌: ಭಾರತದಲ್ಲಿ ಏಸರ್‌ಪ್ಯೂರ್‌ ಬ್ರಾಂಡ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಗೆ ಏಸರ್‌ ದೊಡ್ಡ ಕೊಡುಗೆ ನೀಡಲು ಮುಂದಾಗಿದೆ.ಈ ಮೂಲಕ ಏಸರ್‌ಪ್ಯೂರ್ ಇಂಡಿಯಾವು ನವೀನ ಮತ್ತು ಅತ್ಯಾಧುನಿಕತೆಯ ಶ್ರೇಣಿಯನ್ನು ಪರಿಚಯಿಸುವ ಮೂಲಕ ಉದ್ಯಮವನ್ನು ಪರಿವರ್ತಿಸಲು ಸಿದ್ಧವಾಗಿದೆ. ಭಾರತೀಯ ಗ್ರಾಹಕರ ವಿಶಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಇಲ್ಲಿ ಲಭ್ಯ ಇರಲಿವೆ.

ಇನ್ನು ಏಸರ್‌ಪ್ಯೂರ್‌ ಕೂಲ್ ಏರ್ ಪ್ಯೂರಿಫೈಯರ್‌ಗಳು ಶುದ್ಧ ಉಸಿರಾಟದ ಸೌಲಭ್ಯವನ್ನು ನೀಡಲಿವೆ. ಏಸರ್‌ಪ್ಯೂರ್ ಅಮೃತ್ ವಾಟರ್ ಪ್ಯೂರಿಫೈಯರ್‌ಗಳು ಕೇವಲ ಜಲಸಂಚಯನವಲ್ಲದೆ ಶುದ್ಧ ನೀರಿನ ಭರವಸೆ ನೀಡುತ್ತದೆ. ಇಷ್ಟೇ ಅಲ್ಲದೆ ವ್ಯಾಕ್ಯೂಮ್ ಕ್ಲೀನರ್‌ಗಳು ಶುದ್ಧ ಭಾವನೆಯ ಸಂವೇದನೆಗಳನ್ನು ಉಂಟು ಮಾಡುವ ಕೆಲಸ ಮಾಡುತ್ತವೆ. ಈ ಮೂಲಕ ಏಸರ್‌ಪ್ಯೂರ್‌ ಇಂಡಿಯಾ ವಿವೇಚನಾಶೀಲ ಭಾರತೀಯ ಮಾರುಕಟ್ಟೆಗೆ ಗ್ರಾಹಕ ಉಪಕರಣಗಳಲ್ಲಿ ಹೊಸ ಮಾನದಂಡವನ್ನು ನಿರ್ಮಾಣ ಮಾಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಭಾರತೀಯರಿಗೆ ಏಸರ್‌ನಿಂದ ಗುಡ್‌ ನ್ಯೂಸ್! ಇನ್ಮುಂದೆ ಇವೆಲ್ಲವೂ ಇಲ್ಲೇ ಲಭ್ಯ

ಇನ್ನು ಈ ಗ್ರಾಹಕ ವಸ್ತುಗಳ ಬಿಡುಗಡೆ ಸಮಾರಂಭದಲ್ಲಿ, ಏಸರ್‌ ಪ್ಯೂರ್‌ ತನ್ನ ಪ್ರಮುಖ ಉತ್ಪನ್ನವಾದ ಏಸರ್‌ ಪ್ಯೂರ್‌ ಟಿವಿ ಅನ್ನು ಲಾಂಚ್‌ ಮಾಡಿದೆ. ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ತಲ್ಲೀನಗೊಳಿಸುವ ವೀಕ್ಷಣೆಯ ಅನುಭವ ನೀಡಲಿದೆ. ಈ ಸ್ಮಾರ್ಟ್‌ಟಿವಿ 32, 43, 55, ಮತ್ತು 65 ಇಂಚಿನ ಒಟ್ಟು 4 ಗಾತ್ರಗಳಲ್ಲಿ ಲಭ್ಯ ಇದೆ. ಇದರ ಜತೆಗೆ
ವರ್ಧಿತ ಕಾಂಟ್ರಾಸ್ಟ್, ಡೀಪ್‌ ಬ್ಲ್ಯಾಕ್‌, ಮತ್ತು ಬೆರಗುಗೊಳಿಸುವ ಬ್ರೈಟ್‌ನೆಸ್‌ ಈ ಟಿವಿಯ ಆಕರ್ಷಕ ವಿಷಯಗಳಾಗಿವೆ.

ಹೆಚ್ಚುವರಿಯಾಗಿ, ಏಸರ್‌ ಪ್ಯೂರ್‌ ಏರ್ ಸರ್ಕ್ಯುಲೇಟರ್ ಸೇರಿದಂತೆ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯನ್ನು ಪ್ರದರ್ಶನ ಮಾಡಲಾಗಿದೆ. ಅಂದರೆ ಫ್ಯಾನ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಹ್ಯಾಂಡ್‌ಹೆಲ್ಡ್ ವ್ಯಾಕ್ಯೂಮ್ ಕ್ಲೀನರ್‌ಗಳು, ಎರಡು ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳು, ಹೇರ್ ಡ್ರೈಯರ್ ಮತ್ತು ಹೇರ್ ಸ್ಟೈಲರ್ ಅನ್ನು ಘೋಷಣೆ ಮಾಡಲಾಗಿದೆ ಮತ್ತು ರೆಫ್ರಿಜರೇಟರ್‌ಗಳು, ಏರ್ ಕಂಡೀಷನರ್‌ಗಳು ಸೇರಿದಂತೆ ಹಲವಾರು ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಏಸರ್‌ ತನ್ನ ಕೊಡುಗೆಗಳನ್ನು ವೈವಿಧ್ಯಗೊಳಿಸಲು ಯೋಜಿಸಿದೆ.

ಇದಿಷ್ಟೇ ಅಲ್ಲದೆ ವಾಷಿಂಗ್ ಮೆಷಿನ್‌ ವಿಭಾಗದಲ್ಲೂ ಏಸರ್‌ ತನ್ನ ಕೈಚಳಕ ತೋರಿಸಿದೆ. ಇನ್ನು ಈವೆಂಟ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಏಸರ್‌ ಪ್ಯೂರ್‌ ಮತ್ತು ಮೇಕ್-ಇನ್-ಇಂಡಿಯಾ ಪಾಲುದಾರಿಕೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯ ಭಾರತದ ಅನ್ವೇಷಣೆಯಲ್ಲಿ ಗಮನಾರ್ಹ ದಾಪುಗಾಲು ಇಡಲು ಏಸರ್‌ ಸಜ್ಜಾಗಿದೆ.

ಭಾರತೀಯರಿಗೆ ಏಸರ್‌ನಿಂದ ಗುಡ್‌ ನ್ಯೂಸ್! ಇನ್ಮುಂದೆ ಇವೆಲ್ಲವೂ ಇಲ್ಲೇ ಲಭ್ಯ

ಈ ಬಗ್ಗೆ ಪ್ಯಾನ್-ಏಷ್ಯಾ ಪೆಸಿಫಿಕ್ ಕಾರ್ಯಾಚರಣೆಗಳ ಅಧ್ಯಕ್ಷ ಆಂಡ್ರ್ಯೂ ಹೌ ಅವರು ಮಾತನಾಡಿ, ಏಸರ್ ಗ್ರೂಪ್‌ನಲ್ಲಿ ನಾವು ಭಾರತದಲ್ಲಿ ಏಸರ್‌ ಪ್ಯೂರ್‌ ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಭಾರತೀಯ ಮಾರುಕಟ್ಟೆಯು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಏಸರ್‌ ಪ್ಯೂರ್‌ ನ ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ತಾಂತ್ರಿಕ ಶ್ರೇಷ್ಠತೆ ಮತ್ತು ಸುಸ್ಥಿರತೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿದ್ದೇವೆ. ಭಾರತೀಯ ಗ್ರಾಹಕರ ವಿಕಸನದ ಅಗತ್ಯಗಳನ್ನು ಪೂರೈಸಲು ಉತ್ತಮ ಸ್ಥಾನದಲ್ಲಿದೆ. ನಾವು ಈ ಹೊಸ ಮಾರುಕಟ್ಟೆಗೆ ಮುನ್ನುಗ್ಗುತ್ತಿದ್ದಂತೆ, ನಮ್ಮ
ನಾವೀನ್ಯತೆಗೆ ಸಮರ್ಪಣೆ ಅಚಲವಾಗಿ ಉಳಿದಿದೆ ಎಂದಿದ್ದಾರೆ.

ಈ ಏಸರ್‌ ಪ್ಯೂರ್‌ ಡಿವೈಸ್‌ಗಳ ಬೆಲೆ ಮತ್ತು ಲಭ್ಯತೆ: ಏಸರ್‌ ಪ್ಯೂರ್‌ ಏರ್ ಪ್ಯೂರಿಫೈಯರ್‌ಗಳು 9990 ರೂ.ಗಳಿಂದ ಪ್ರಾರಂಭವಾಗುತ್ತವೆ ಮತ್ತು ಏಸರ್‌ ಪ್ಯೂರ್‌ ಕೊಜಿ ಏರ್ ಸರ್ಕ್ಯೂಲೇಟೋರ್ ಫ್ಯಾನ್ 7490ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಏಸರ್ ಆನ್‌ಲೈನ್ ಸ್ಟೋರ್, ಏಸರ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ಇತರ ಪ್ರಮುಖ ಆನ್‌ಲೈನ್‌ನಲ್ಲಿ ಖರೀದಿಸಲು ಇವುಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Acer has introduced TVs, water purifiers, air circulator fans in India under its own brand. Acer launches AcerPure consumer Electronics Brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+