Acer: ಏಸರ್ ನೈಟ್ರೋ V 16 ಲ್ಯಾಪ್‌ಟಾಪ್ ಲಾಂಚ್: ಗೇಮರ್‌ಗಳಿಗೆ ಉತ್ತಮ ಆಯ್ಕೆ! ಬೆಲೆ ಎಷ್ಟು?
ಏಸರ್ (Acer) ತನ್ನದೇ ಆದ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡುವ ಮೂಲಕ ಗ್ರಾಹಕರಿಗೆ ವಿಶೇಷವಾದ ಪ್ರಯೋಜನ ನೀಡುತ್ತಾ ಬರುತ್ತಿದೆ. ಈ ನಡುವೆ ಏಸರ್ ಹೊಸ ಲ್ಯಾಪ್‌ಟಾಪ್ (Laptop) ಅನ್ನು ಅನಾವರಣ ಮಾಡಿದ್ದು, ಇದು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ.
ಹೌದು, ಏಸರ್ ನೈಟ್ರೋ V 16 ಲ್ಯಾಪ್‌ಟಾಪ್ (Acer Nitro V 16 Laptop) ಅನ್ನು ಅನಾವರಣ ಮಾಡಲಾಗಿದೆ. ಈ ಲ್ಯಾಪ್‌ಟಾಪ್ ರೈಜೆನ್ 8040 ಸೀರಿಸ್ ಪ್ರೊಸೆಸರ್(Ryzen 8040 Series CPU) ಬಲ ಪಡೆದುಕೊಂಡಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಉತ್ತಮ ಗ್ರಾಫಿಕ್ ಬೆಂಬಲ ಹಾಗೂ 2 TB ವರೆಗಿನ ಸ್ಟೋರೇಜ್ ಆಯ್ಕೆ ಇದಕ್ಕೆ ಇನ್ನಷ್ಟು ಶಕ್ತಿ ನೀಡಿದೆ. ಹಾಗಿದ್ರೆ, ಈ ಹೊಸ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏಸರ್ ನೈಟ್ರೋ V 16: ಏಸರ್ ತನ್ನ ಇತ್ತೀಚಿನ ಗೇಮಿಂಗ್ ಲ್ಯಾಪ್‌ಟಾಪ್ ಏಸರ್ ನೈಟ್ರೋ V 16 ಅನ್ನು ಬಹಿರಂಗಪಡಿಸಿದೆ. ಇದು ಸಮಕಾಲೀನ ಫೀಚರ್ಸ್‌ನೊಂದಿಗೆ ಸಮತೋಲಿತ ಡಿವೈಸ್ ಅನ್ನು ಬಳಕೆ ಮಾಡುವ ಗೇಮರುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಏಸರ್ ನೈಟ್ರೋ V15 (Acer Nitro V15)ದ ಉತ್ತರಾಧಿಕಾರಿಯಾಗಿದೆ. ಇದನ್ನು ಸೆಪ್ಟೆಂಬರ್ 2023 ರಲ್ಲಿ ಇಂಟೆಲ್ ಸಿಪಿಯು ನೊಂದಿಗೆ ಘೋಷಣೆ ಮಾಡಲಾಗಿತ್ತು.
ಏಸರ್ ನೈಟ್ರೋ V 16 ಡಿಸ್‌ಪ್ಲೇ ವಿವರ: ಈ ವಿಶೇಷ ಲ್ಯಾಪ್‌ಟಾಪ್ 16 ಇಂಚಿನ WQXGA ಹಾಗೂ WUXGA ಎರಡು ಆಯ್ಕೆಯಲ್ಲಿ ಈ ಲ್ಯಾಪ್‌ಟಾಪ್ ಕಂಡುಬಂದಿದೆ. ಇದು 165 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, ಈ ಮೂಲಕ ಗೆಮಿಂಗ್‌ನಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದು. ಇದರ ಆಕಾರ ಅನುಪಾತ 16:10 ಇದ್ದು, ಪ್ರತಿಕ್ರಿಯೆ ಸಮಯ 3 ms ಆಗಿದೆ. ಇದರಿಂದಾಗಿ ಯಾವುದೇ ಕಾರ್ಯಗಳನ್ನು ಸಹ ಸರಳವಾಗಿ ಮಾಡಬಹುದಾಗಿದೆ.

ಏಸರ್ ನೈಟ್ರೋ V 16 ಪ್ರೊಸೆಸರ್ ಮಾಹಿತಿ: ಇದು AMD ರೈಜೆನ್ 7 8845HS ಪ್ರೊಸೆಸರ್‌ಗಳೊಂದಿಗೆ ಝೆನ್ 4 ಕೋರ್ ಆರ್ಕಿಟೆಕ್ಚರ್ ಅನ್ನು ಹೊಂದಿದ್ದು, ಈ ಮೂಲಕ ವಿಶ್ವಾಸಾರ್ಹ ವೇಗವನ್ನು ನೀಡುತ್ತದೆ. ಜೊತೆಗೆ ಸ್ಮಾರ್ಟ್ ಬ್ಯಾಟರಿ ಆಪ್ಟಿಮೈಸೇಶನ್ ಆಯ್ಕೆ ಸಹ ಇದ್ದು, ಮೂರನೇ ತಲೆಮಾರಿನ ಪವರ್ ಮ್ಯಾನೇಜ್‌ಮೆಂಟ್ ಫೀಚರ್ಸ್ ಮೂಲಕ (PMF) ವಿಸ್ತೃತ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಹಾಗೆಯೇ ಎನ್ವಿಡಿಯಾ ಜಿಫೋರ್ಸ್ RTX ಜಿಪಿಯು ಬಲ ಪಡೆದಿದ್ದು, 32 GB DDR55600 RAM ಹಾಗೂ 2 TB PCIe ಜನ್ 4 SSD ಇಂಟರ್ ಸ್ಟೋರೇಜ್ ಆಯ್ಕೆ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುವ ಕೆಲಸ ಮಾಡುತ್ತದೆ.
ಹಾಗೆಯೇ ಈ ಡಿವೈಸ್ ಡ್ಯುಯಲ್ ಫ್ಯಾನ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಡಿಟಿಎಸ್ ಎಕ್ಸ್ ಏಸರ್ ಪ್ಯೂರಿಫೈಡ್ ವ್ಯೂ ಮತ್ತು ಏಸರ್ ಪ್ಯೂರಿಫೈಡ್ ವಾಯ್ಸ್ 2.0 ಸ್ಪೀಕರ್ ಆಯ್ಕೆ, ವೈ-ಫೈ 6E , ಯುಎಸ್ ಬಿ 4 ಟೈಪ್ ಸಿ, 2x ಯುಎಸ್‌ಬಿ 3 ಪೋರ್ಟ್‌ಗಳು, 1x ಹೆಚ್‌ಡಿಎಮ್‌ಐ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಯನ್ನು ಈ ಲ್ಯಾಪ್‌ಟಾಪ್ ಹೊಂದಿದೆ. ಇದರೊಂದಿಗೆ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ.

ಏಸರ್ ನೈಟ್ರೋ V 16 ಲ್ಯಾಪ್‌ಟಾಪ್ ಬೆಲೆ ಮತ್ತು ಲಭ್ಯತೆ: ಈ ಲ್ಯಾಪ್‌ಟಾಪ್ ತಕ್ಷಣಕ್ಕೆ ಲಭ್ಯ ಇಲ್ಲ. ಅಂದರೆ ಮಾರ್ಚ್ 2024 ರಲ್ಲಿ ಉತ್ತರ ಅಮೇರಿಕಾದಲ್ಲಿ ಮಾತ್ರ ಲಭ್ಯವಿರುತ್ತದೆ. ಜೊತೆಗೆ ಇದರ ಬೆಲೆ USD 999.99 (ಭಾರತೀಯ ರೂ.ಗಳಲ್ಲಿ 83,375), ಮತ್ತು ಏಪ್ರಿಲ್ 2024 ರಲ್ಲಿ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ EUR 1199 ರಿಂದ ಪ್ರಾರಂಭವಾಗುವ ಬೆಲೆಯೊಂದಿಗೆ ಇದು ಲಭ್ಯ ಇರಲಿದೆ.


Click it and Unblock the Notifications








