125cc ಸ್ಕೂಟರ್‌ಗೆ ಟಾಂಗ್ ನೀಡುವಂತಿದೆ ಏಸರ್‌ನ ಈ ಹೊಸ EV ಬೈಕ್!
ತೈವಾನ್ ಮೂಲದ ದೈತ್ಯ ಟೆಕ್ ಸಂಸ್ಥೆ ಏಸರ್( Acer ) ಲ್ಯಾಪ್‌ಟಾಪ್ ಹಾಗೂ ಇತರೆ ಟೆಕ್ ಉತ್ಪನ್ನಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಹೊಸ ಹೆಜ್ಜೆ ಇಟ್ಟಿರುವ ಏಸರ್ ನೂತನವಾಗಿ ಎಲೆಕ್ಟ್ರಿಕ್ ಸ್ಕೂಟರ್ (EV) ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.
ಹೌದು, ಏಸರ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನೂತನ ಏಸರ್ MUVI 125 4G ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ EV ಇಂಡಿಯಾ ಎಕ್ಸ್‌ಪೋ 2023 ನಲ್ಲಿ ಏಸರ್ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಇ-ಬೈಕ್ ಹಗುರವಾದ ವಿನ್ಯಾಸ ಪಡೆದಿದ್ದು, ಗಂಟೆಗೆ 60km/h ಗರಿಷ್ಠ ವೇಗವನ್ನು ಹೊಂದಿದೆ.

ಏಸರ್ MUVI 125 4G ಎಲೆಕ್ಟ್ರಿಕ್ ಬೈಕ್ ಸೊಬಗು, ದಕ್ಷತೆ ಮತ್ತು ಪರಿಸರ ಸ್ನೇಹಪರತೆಯನ್ನು ಬಯಸುವ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಅತ್ಯಾಧುನಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಅಂದಹಾಗೆ ಭಾರತದ ಪ್ರಮುಖ EV ತಯಾರಕರಾದ eBikeGo ಸಹಯೋಗದೊಂದಿಗೆ ತಯಾರಾಗುತ್ತದೆ. ಏಸರ್ MUVI 125 4G ಬೈಕ್ ಅನ್ನು ದೀಪಾವಳಿಯ ಹಬ್ಬದ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಏಸರ್ MUVI 125 4G ಪ್ರಮುಖ ಫೀಚರ್ಸ್ ಹೀಗಿವೆ :
ಏಸರ್ ಸಂಸ್ಥೆಯ MUVI 125 4G ಎಲೆಕ್ಟ್ರಿಕ್ ಬೈಕ್ ಬದಲಾಯಿಸಬಹುದಾದ ಬ್ಯಾಟರಿ ವಿನ್ಯಾಸವನ್ನು ಪಡೆದಿದ್ದು, ದೃಢವಾದ ಮತ್ತು ಹಗುರವಾದ ಚಾಸಿಸ್ ಪಡೆದುಕೊಂಡಿದೆ. ಈ ಬೈಕ್ 16 ಇಂಚಿನ ವೀಲ್ ಹೊಂದಿದ್ದು, ಡೇಟಾ-ಚಾಲಿತ ವಿನ್ಯಾಸ ಹಾಗೂ ಗ್ರಾಹಕೀಯಗೊಳಿಸಬಹುದಾದ ಆಯ್ಕೆಗಳನ್ನು ಪಡೆದುಕೊಂಡಿದೆ.
ಏಸರ್‌ನ ಈ ಎಲೆಕ್ಟ್ರಿಕ್ ಬೈಕ್ ಗಂಟೆಗೆ 60km/h ಗರಿಷ್ಠ ವೇಗ ಪಡೆದಿದ್ದು, 80km ವ್ಯಾಪ್ತಿಯನ್ನು ಒದಗಿಸುವ ಈ ಹೊಸ ಎಲೆಕ್ಟ್ರಿಕ್ ಬೈಕ್ ಆಕರ್ಷಕ ಲುಕ್ ಪಡೆದಿದೆ. ಕೇವಲ 83kg ತೂಕ ಪಡೆದಿರುವ MUVI 125 4G ಬೈಕ್ ಸಾಂಪ್ರದಾಯಿಕ 125cc ಸ್ಕೂಟರ್‌ಗೆ ಸಮಾನವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಏಸರ್ ಬ್ರ್ಯಾಂಡ್‌ನ ಮೊದಲ ಇ-ಬೈಕ್ ಇದಾಗಿದ್ದು, eBikeGo ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ತಯಾರಾಗುತ್ತದೆ.
LCD ಡಿಸ್‌ಪ್ಲೇ ಇದೆ :
ಏಸರ್‌ನ MUVI 125 4G ಇ-ಬೈಕ್ ಟೆಕ್ ಒಳಗೊಂಡಿರುವ ಬೈಕ್ ಆಗಿದ್ದು, ಬಳಕೆದಾರರು ಆಂಡ್ರಾಯ್ಡ್ ಅಥವಾ ಐಓಎಸ್ ಮೂಲಕ ತಮ್ಮ ಸ್ಮಾರ್ಟ್‌ಫೋನ್ ಅನ್ನು ಕನೆಕ್ಟ್ ಕೂಡಾ ಮಾಡಬಹುದಾಗಿದೆ. ಅಂದಹಾಗೆ ಈ ಎಲೆಕ್ಟ್ರಿಕ್ ಬೈಕ್ ಬ್ಲೂಟೂತ್ ಸಪೋರ್ಟ್ ಪಡೆದ 4 ಇಂಚಿನ LCD ಡಿಸ್‌ಪ್ಲೇಯನ್ನು ಸಹ ಒಳಗೊಂಡಿದೆ.
ಏಸರ್‌ನ MUVI 125 4G ಇ-ಬೈಕ್ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಇದನ್ನು ಯುರೋಪಿಯನ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಮುಖ್ಯವಾಗಿ ಈ ಬೈಕ್ ಕಿರಿದಾದ ಬೀದಿಗಳು ಮತ್ತು ವಿವಿಧ ಭೂ ಪ್ರದೇಶಗಳ ಮೂಲಕ ತಡೆರಹಿತ ಸಂಚಾರ ಮಾಡಲು ಪೂರಕ ಎನಿಸುತ್ತದೆ.
ಏಸರ್‌ನ ನೂತನ ಬೈಕ್ ಎರಡು ಎಕ್ಸ್‌ಚೇಂಜ್ ಮಾಡಬಹುದಾದ ಬ್ಯಾಟರಿಗಳನ್ನು ಹೊಂದಿದೆ. ಬದಲಾಯಿಸಬಹುದಾದ ಬ್ಯಾಟರಿಗಳು ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳಿಂದ ಬದಲಾಯಿಸಬಹುದಾದ ಬ್ಯಾಟರಿ ಆಗಿವೆ. ಈ ಎಲೆಕ್ಟ್ರಿಕ್ ಬೈಕ್‌ನ ವೀಲ್ 16 ಇಂಚಿನ ರಚನೆ ಪಡೆದಿದ್ದು, ಇದರ ಜೊತೆಗೆ ಏಸರ್ 'ಡೇಟಾ-ಚಾಲಿತ ವಿನ್ಯಾಸ' ಆಯ್ಕೆಗಳನ್ನು ಪಡೆದುಕೊಂಡಿದೆ. ಬ್ಯಾಟರಿ ಬ್ಯಾಕ್‌ಅಪ್ ಉತ್ತಮವಾಗಿದ್ದು, ಸವಾರರು ಒಂದು ಬ್ಯಾಟರಿ ಅನ್ನು ಬಳಕೆ ಮಾಡುವ ಆಯ್ಕೆ ಸಹ ಪಡೆದಿದೆ.


Click it and Unblock the Notifications








