ಬೆಂಗಳೂರಿಗರಿಗೆ 1 GBPS ವೇಗದಲ್ಲಿ ತಿಂಗಳಿಗೆ 2500 GB ಡೇಟಾ ಬಳಕೆಗೆ ನೀಡುತ್ತಿದೆ ಈ ಕಂಪನಿ..!
ಜಾಗತಿಕವಾಗಿ ಸದ್ದು ಮಾಡುತ್ತಿರುವ ಬೆಂಗಳೂರು ನಗರದಲ್ಲಿ ಹಲವು ಬ್ರಾಡ್‌ಬ್ಯಾಂಡ್ ಕಂಪನಿಗಳು ಸೇವೆಯನ್ನು ಆರಂಭಿಸಿದ್ದು, ಅತೀ ವೇಗದ ಇಂಟರ್ನೆಟ್ ಸೇವೆಯೊಂದಿಗೆ ಹೆಚ್ಚು ಡೇಟಾವನ್ನು ಬಳಕೆಗೆ ನೀಡುತ್ತಿವೆ ಇದೇ ಮಾದರಿಯಲ್ಲಿ ACT ಬೆಂಗಳೂರಿನಲ್ಲಿ 1 GBPS ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಿರುವ ACT, ಈ ಬಾರಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಪ್ರತಿ ತಿಂಗಳಿಗೆ 2 TB ಡೇಟಾವನ್ನು ನೀಡಲಿರುವ ಆಫರ್ ವೊಂದನ್ನು ಲಾಂಚ್ ಮಾಡಲಿದೆ. ಈ ಮೂಲಕ ಬಳಕೆದಾರರು ಮಿತಿ ಇಲ್ಲದೇ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಈ ಡೇಟಾ 1GBPS ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರಿಂದಾಗಿ ವೇಗದ ಸೇವೆಯೂ ಬಳಕೆದಾರರಿಗೆ ದೊರೆಯಲಿದೆ.
ಓದಿರಿ: ಜಿಯೋ ಕ್ರಿಕೆಟ್ ಗೋಲ್ಡ್ ಪಾಸ್: ಪಡೆಯುವುದು ಹೇಗೆ..?
ACT ರೂ.675 ನಿಂದ ಹಿಡಿದು ರೂ. 5999ರ ವರೆಗೂ ಮಾಸಿಕ ಪ್ಲಾನ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದರಲ್ಲಿ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ಪ್ಲಾನ್‌ಗಳಲ್ಲಿ ಡೇಟಾ ಮತ್ತು ವೇಗದ ವ್ಯತ್ಯಾಸವನ್ನು ಕಾಣಬಹುದಾಗಿದೆ.

ACT ತನ್ನ ಬಳಕೆದಾರರು IPL ಅನ್ನು ಇಂಟರ್ನೆಟ್ ಮೂಲಕವೇ ನೋಡಲಿ ಎನ್ನುವ ಕಾರಣಕ್ಕೆ ಈ ಪ್ಲಾನ್‌ಗಳನ್ನು ಘೊಷಣೆ ಮಾಡಿದೆ ಎನ್ನಲಾಗಿದೆ. ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸ ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದೆ ಎನ್ನಲಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ಹಲವು ಹೊಸ ಕಂಪನಿಗಳು ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಬಳಕೆದಾರರನ್ನು ಸೇಳೆಯುವುದು ಮತ್ತು ಇರುವವರನ್ನು ಉಳಿಸಿಕೊಳ್ಳುವುದು ಕಂಪನಿಗಳಿಗೆ ಮುಖ್ಯವಾಗಿದೆ. ಈ ಪ್ಲಾನ್‌ಗಳಿಂದ ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ನಷ್ಟವನ್ನು ಅನುಭವಿಸುತ್ತಿವೆ ಎನ್ನಲಾಗಿದೆ.


Click it and Unblock the Notifications








