ಜಿಯೋ ಕ್ರಿಕೆಟ್ ಗೋಲ್ಡ್ ಪಾಸ್: ಪಡೆಯುವುದು ಹೇಗೆ..?

ದೇಶಿಯ ಮಾರುಕಟ್ಟೆಯಲ್ಲಿ IPL ಹವಾ ಜೋರಾಗಿದೆ. ಈ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳ ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಹೊಸ ಆಫರ್ ಗಳು, ಹೆಚ್ಚಿನ ಡೇಟಾ ಸೇರಿದಂತೆ ಹಲವು ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಟೆಲಿಕಾಂ ದೈತ್ಯ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಕ್ರಿಕೆಟ್ ಗೋಲ್ಡ್ ಪಾಸ್ ಆಫರ್ ವೊಂದನ್ನು ಲಾಂಚ್ ಮಾಡಿದೆ. ಈ ಮೂಲಕ ಬಳಕೆದಾರರಿಗೆ IPL ನೋಡುವ ಅನುಭವನ್ನು ಹೆಚ್ಚು ಮಾಡಲಿದೆ.

ಈ ಬಾರಿ ಐಪಿಎಲ್ ಅನ್ನು ಟಿವಿಯಿಂದ ಸ್ಮಾರ್ಟ್‌ಫೋನ್‌ಗೆ ವರ್ಗಾಹಿಸಲು ಮುಂದಾಗಿರುವ ಜಿಯೋ, ತನ್ನ ಬಳಕೆದಾರರಿಗೆ ರೂ.251 ಪ್ಲಾನ್ ಘೋಷಣೆ ಮಾಡಿದೆ. ಇದಕ್ಕೆ ಜಿಯೋ ಕ್ರಿಕೆಟ್ ಗೋಲ್ಡ್ ಪಾಸ್ ಎಂದು ನಾಮಕರಣವನ್ನು ಮಾಡಿದ್ದು, ಇಡೀ IPL ಟೂರ್ನಿ ಮುಗಿಯುವ ವರೆಗೂ ಡೇಟಾವನ್ನು ನೀಡುವ ಆಫರ್ ಇದಾಗಿದೆ.
ಓದಿರಿ: IPL ಬೆಟ್ಟಿಂಗ್ ಆಡದೇ ಕಾಸು ಮಾಡಿ: ಇಲ್ಲಿದೇ ಆಪ್‌ಗಳ ವಿವರ..!

ಕ್ರಿಕೆಟ್ ಗೋಲ್ಡ್ ಪಾಸ್:
ರೂ.251 ಪ್ಲಾನ್‌ನಲ್ಲಿ ಬಳಕೆದಾರರಿಗೆ ಜಿಯೋ 102GB ಡೇಟಾವನ್ನು ನೀಡಲಿದೆ. ಇದು 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೇ 100 SMS ಅನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ಪಡೆಯುವುದು ಹೇಗೆ?
ಜಿಯೋ ವೆಬ್ ಸೈಟಿನಲ್ಲಿ ನೀವು ಈ ಆಪರ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಜಿಯೋ ವೆಬ್ ಸೈಟಿಗೆ ಭೇಟಿ ನೀಡಬೇಕಾಗಿದೆ. ಅಲ್ಲದೇ ಮೈ ಜಿಯೋ ಆಪ್ ನಲ್ಲಿ ಯೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಆಪ್ ಡೌನ್‌ಲೋಡ್ ಮಾಡಬೇಕು:
ಇದಾದ ನಂತರ ಜಿಯೋ ಟಿವಿ ಆಪ್ ಮತ್ತು ಹಾಟ್ ಸ್ಟಾರ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಜಿಯೋ ಟಿವಿ ಆಪ್ ಡೌನ್‌ಲೋಡ್ ಮಾಡಿಕೊಂಡ ನಂತರ ಜಿಯೋ ಆಪ್‌ನ ಮೂಲಕ ಮ್ಯಾಚ್ ನೋಡಬಹುದಾಗಿದೆ.

ಗೇಮ್ ಆಡಬಹುದಾಗಿದೆ:
ಇದಲ್ಲದೇ ಜಿಯೋ ಆಪ್ ಮೂಲಕ ನೀವು ಬಹುಮಾನಗಳನ್ನು ಗೆಲ್ಲಬಹುದಾಗಿದ್ದು, ಮ್ಯಾಚ್ ನೋಡವ ಸಂದರ್ಭದಲ್ಲಿ ಸ್ಕೋರ್ ಊಹಿಸುವ ಮೂಲಕ ನೀವು ಹೆಚ್ಚಿನ ಪ್ರಮಾಣದ ಡೇಟಾವನ್ನು, ಗಿಫ್ಟ್ ಗಳನ್ನು ಗೆಲ್ಲಬಹುದಾಗಿದೆ.


Click it and Unblock the Notifications








