ACT ಫೈಬರ್‌ನೆಟ್‌ನಿಂದ 6 ತಿಂಗಳ ಹೆಚ್ಚುವರಿ ಸೇವೆ ಉಚಿತ!

|

ಭಾರತೀಯ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ವಲಯದಲ್ಲಿ ಇದೀಗ ಹಲವು ನೂತನ ಕಂಪನಿಗಳ ಪ್ರವೇಶದಿಂದಾಗಿ ಪ್ಲ್ಯಾನ್‌ಗಳ ಬೆಲೆಯಲ್ಲಿ ಪೈಪೋಟಿ ಶುರುವಾಗಿದ್ದು, ಇನ್ನು ಜಿಯೋ ಗಿಗಾಫೈಬರ್ ಎಂಟ್ರಿಯಿಂದ ದರಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ. ಈ ನಡುವೆ ACT ಫೈಬರ್‌ನೆಟ್‌ ಗ್ರಾಹಕರನ್ನು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು 6 ತಿಂಗಳ ಕಾಲ ಉಚಿತ ಚಂದಾದಾರಿಕೆ ನೀಡಲು ಮುಂದಾಗಿದೆ.

ACT ಫೈಬರ್‌ನೆಟ್‌ನಿಂದ 6 ತಿಂಗಳ ಹೆಚ್ಚುವರಿ ಸೇವೆ ಉಚಿತ!

ಹೌದು, ACT ಫೈಬರ್‌ನೆಟ್‌ ಈಗಾಗಲೇ 5.5 ತಿಂಗಳ ಶಾರ್ಟ್‌ ಟರ್ಮ್ ಪ್ಲ್ಯಾನ್‌ ಅಡ್ವಾನ್ಸ್‌ ಪಾವತಿಯ ಮೇಲೆ ಹೆಚ್ಚುವರಿ 15 ದಿನಗಳ ಸೇವೆಯನ್ನು ನೀಡುತ್ತಿದೆ. ಅದೇ ರೀತಿ ಈಗ 18ತಿಂಗಳ ಚಂದಾದಾರಿಕೆಯ ಮೇಲೆ ಹೆಚ್ಚುವರಿ 6 ತಿಂಗಳ ಅವಧಿಯ ಉಚಿತ ಸೇವೆಯನ್ನು ನೀಡಲು ಕಂಪನಿಯು ನಿರ್ಧರಿಸಿದೆ. ಹಾಗೆಯೇ 10 ತಿಂಗಳ ಮತ್ತು 12 ತಿಂಗಳ ಪ್ಲ್ಯಾನ್‌ಗಳ ಮೇಲೂ 2 ತಿಂಗಳ ಹೆಚ್ಚುವರಿ ಸೇವೆ ನೀಡು ಪ್ಲ್ಯಾನ್‌ಗಳನ್ನು ರೂಪಿಸಿದೆ.

ACT ಫೈಬರ್‌ನೆಟ್‌ನಿಂದ 6 ತಿಂಗಳ ಹೆಚ್ಚುವರಿ ಸೇವೆ ಉಚಿತ!

ACT ಫೈಬರ್‌ನೆಟ್‌ A-Max 675ರ, A-Max 1050, A-Max 1299, ಮತ್ತು ಇನ್‌ಕ್ರೆಡಿಬಲ್ 1999 ಪ್ಲ್ಯಾನ್‌ಗಳು ಜನಪ್ರಿಯವಾಗಿವೆ. ಆದ್ರೆ ಪ್ಲ್ಯಾನ್‌ಗಳು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತವೆ ಹಾಗೂ ಪ್ಲ್ಯಾನ್‌ಗಳ ಬೆಲೆಯು ಸಹ ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗಿರುತ್ತದೆ. ಹಾಗಾದರೇ ACT ಫೈಬರ್‌ನೆಟ್‌ ಹೆಚ್ಚುವರಿ ಸೇವೆಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!ಓದಿರಿ : ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

ಎಕ್ಸ್‌ಟ್ರಾ ಸರ್ವಿಸ್

ಎಕ್ಸ್‌ಟ್ರಾ ಸರ್ವಿಸ್

ACT ಫೈಬರ್‌ನೆಟ್‌ ಗ್ರಾಹಕರಿಗೆ ಹೆಚ್ಚುವರಿ ಅವಧಿಯಲ್ಲಿ ಸರ್ವಿಸ್ ನೀಡುವ ಸಲುವಾಗಿ ತನ್ನ ಪ್ಲ್ಯಾನ್‌ಗಳನ್ನು ಮೊಡಿಫೈ ಮಾಡಿಕೊಂಡಿದೆ. 18 ತಿಂಗಳ ಪ್ಲ್ಯಾನ್‌ ಮೇಲೆ 6 ತಿಂಗಳ ಎಕ್ಸ್‌ಟ್ರಾ, 10 ತಿಂಗಳ 12 ತಿಂಗಳ ಮೇಲೆ 2 ತಿಂಗಳ ಹೆಚ್ಚುವರಿ ಸೇವೆಯನ್ನು ಮುಂದುವರಿಸಲಿದೆ. ಮತ್ತು ಈಗಾಗಲೇ 5.5 ತಿಂಗಳಿಗೆ 15 ದಿನಗಳ ಕಾಲ ಹೆಚ್ಚುವರಿ ಸೇವೆಯನ್ನು ನೀಡುತ್ತಿದೆ.

ಹೆಚ್ಚುವರಿ 6 ತಿಂಗಳ ಸೇವೆ

ಹೆಚ್ಚುವರಿ 6 ತಿಂಗಳ ಸೇವೆ

ಒಟ್ಟು 24 ತಿಂಗಳ ಪ್ಲ್ಯಾನಿನ‌ ಅವಧಿಯಲ್ಲಿ ಗ್ರಾಹಕರು ಹೆಚ್ಚುವರಿ 6 ತಿಂಗಳ ಅವಧಿಗೆ ACT ಫೈಬರ್‌ನೆಟ್‌ ಸೇವೆಯನ್ನು ದೊರೆಯಲಿದೆ. ಕೇವಲ 18 ತಿಂಗಳ ಪ್ಲ್ಯಾನ್‌ ಮೊತ್ತವನ್ನು ಮುಂಗಡವಾಗಿ ತುಂಬಬೇಕು. ಹಾಗೂ ಮುಂದಿನ 6 ತಿಂಗಳು ಕಾಲ ಹೆಚ್ಚುವರಿಯಾಗಿ ಲಭ್ಯವಾಗಲಿದೆ. ACT ಫೈಬರ್‌ನ ಇಂಟರ್ನೆಟ್‌ ಸ್ಪೀಡ್‌ನಲ್ಲಿ ಸಹ ಹೆಚ್ಚಾಗಿದೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!

ಹೆಚ್ಚುವರಿ 2 ತಿಂಗಳ ಸೇವೆ

ಹೆಚ್ಚುವರಿ 2 ತಿಂಗಳ ಸೇವೆ

ACT ಫೈಬರ್‌ 18ತಿಂಗಳ ಪ್ಲ್ಯಾನ್‌ ಒಮ್ಮೆಲೇ ಪಾವತಿ ದುಬಾರಿ ಎನಿಸಿದರೇ, ಅದಕ್ಕೆ ಬದಲಾಗಿ 10 ತಿಂಗಳ ಮತ್ತು 12 ತಿಂಗಳುಗಳ ಅಡ್ವಾನ್ಸ್‌ ಪ್ಲ್ಯಾನ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಎರಡು ಪ್ಲ್ಯಾನ್‌ಗಳಲ್ಲಿ ಯಾವುದೇ ಪ್ಲ್ಯಾನ್‌ ತೆಗೆದುಕೊಂಡರು ಗ್ರಾಹಕರಿಗೆ ಹೆಚ್ಚುವರಿಯಾಗಿ 2 ತಿಂಗಳ ಸೇವೆ ದೊರೆಯಲಿದೆ.

ಓದಿರಿ : ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?ಓದಿರಿ : ಕಳೆದುಹೋದ ಫೋನ್‌ ಹುಡುಕಲು 'ಗೂಗಲ್‌' ಸಹಾಯ ಮಾಡಲಿದೆ!.ಹೇಗೆ ಗೊತ್ತಾ?

ಹೆಚ್ಚುವರಿ ಸೇವೆಯ ಪ್ಲ್ಯಾನ್‌ಗಳು

ಹೆಚ್ಚುವರಿ ಸೇವೆಯ ಪ್ಲ್ಯಾನ್‌ಗಳು

ACT ಫೈಬರ್‌ನೆಟ್‌ A-Max 675ರ, A-Max 1050, A-Max 1299, ಮತ್ತು ಇನ್‌ಕ್ರೆಡಿಬಲ್ 1999 ಪ್ಲ್ಯಾನ್‌ಗಳಿಗೆ ಹೆಚ್ಚುವರಿ ದಿನಗಳು ಲಭ್ಯವಾಗಲಿವೆ. ಆದರೆ ಪ್ಲ್ಯಾನ್‌ಗಳ ಬೆಲೆಯು ನಗರದಿಂದ ಇತರೆ ನಗರ ಪ್ರದೇಶಗಳಿಗೆ ಬೇರೆ ಬೇರೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ACT ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ಓದಿರಿ : ಐಫೋನ್‌ ಫೋಟೊಗ್ರಫಿ ಸ್ಪರ್ಧೆ!..ಭಾರತಕ್ಕೆ ಒಲಿದ ಫಸ್ಟ್‌ ಪ್ರೈಜ್‌!ಓದಿರಿ : ಐಫೋನ್‌ ಫೋಟೊಗ್ರಫಿ ಸ್ಪರ್ಧೆ!..ಭಾರತಕ್ಕೆ ಒಲಿದ ಫಸ್ಟ್‌ ಪ್ರೈಜ್‌!

Best Mobiles in India

English summary
For a short-term advance rental plan, subscribers can avail a minimum of 15 free days from ACT. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X