ACT ಫೈಬರ್‌ನೆಟ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ಈಗ ಕ್ಯಾಶ್‌ಬ್ಯಾಕ್‌!

|

ಜನಪ್ರಿಯ ಇಂಟರ್ನೆಟ್ ಪೊರೈಕೆದಾರ ಸಂಸ್ಥೆಗಳಲ್ಲಿ ಒಂದಾದ ACT ಫೈಬರ್‌ ನೆಟ್‌ ಈಗಾಗಲೇ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಈ ಸಂಸ್ಥೆಯು ಸದ್ಯ ದೀಪಾವಳಿ ಹಬ್ಬದ ಅಂಗವಾಗಿ ಇನ್‌ಸ್ಟಂಟ್‌ ಕ್ಯಾಶ್‌ಬ್ಯಾಕ್‌ ಆಫರ್‌ ಘೋಷಿಸಿದೆ. ಈ ವಿಶೇಷ ಕೊಡುಗೆಯು ACT ಫೈಬರ್‌ ಲಭ್ಯವಿರುವ ಎಲ್ಲ ನಗರಗಳಲ್ಲಿಯೂ ಲಭ್ಯವಿದ್ದು, ಸೀಮಿತ ಅವಧಿಯ ವರೆಗೆ ಮಾತ್ರ ಇರಲಿದೆ.

ಫೈಬರ್‌

ಹೌದು, ACT ಫೈಬರ್‌ ಸಂಸ್ಥೆಯು ಇದೀಗ 100ರೂ. ಕ್ಯಾಶ್‌ಬ್ಯಾಕ್‌ ಘೋಷಣೆ ಮಾಡಿದೆ. ಈ ಕೊಡುಗೆ 100 Mbps ಮತ್ತು ಮೇಲಿನ ಕೆಲವು ಆಯ್ದ ಯೋಜನೆಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಗ್ರಾಹಕರು ಸಂಸ್ಥೆಯ 100 ರೂ.ಗಳ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಪಡೆಯಲು ACT100 ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇನ್ನು ಈ ಕೊಡುಗೆಯು ಇದೇ ಅಕ್ಟೋಬರ್ 10 ರಿಂದ ಅಕ್ಟೋಬರ್ 20 ರ ನಡುವೆ ಲಭ್ಯವಿರಲಿದೆ ಎಂದು ಕಂಪನಿಯು ತಿಳಿಸಿದೆ.

ಬೆಂಗಳೂರು

ACT ಫೈಬರ್ನೆಟ್ ಪ್ರಸ್ತುತ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಅಹಮದಾಬಾದ್, ಕೊಯಮತ್ತೂರು, ಎಲೂರು, ಗುಂಟೂರು, ಜೈಪುರ, ಕಾಕಿನಾಡ, ಲಕ್ನೋ, ಮಧುರೈ, ನೆಲ್ಲೂರು, ರಾಜಮಂಡ್ರಿ, ತಿರುಪತಿ, ವಿಜಯವಾಡ, ವಿಶಾಖಪಟ್ಟಣಂ ಮತ್ತು ವಾರಂಗಲ್ನಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಹಾಗೆಯೇ ACT ತನ್ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ AHA ಸ್ಟ್ರೀಮಿಂಗ್ ಸೇವೆಗೆ ಚಂದಾದಾರರಾಗಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಫೈಬರ್‌ನೆಟ್‌

ACT ಫೈಬರ್‌ನೆಟ್‌ ಹಾಗೆಯೇ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಗಳನ್ನು ಹೊಂದಿದ್ದು, 100 Mbps ವೇಗದ ಆರಂಭಿಕ ಪ್ಲ್ಯಾನ್ 799ರೂ.ಗಳಾಗಿದೆ (ದೆಹಲಿಯಲ್ಲಿ). ಇದೇ ಪ್ಲ್ಯಾನ್‌ ಹೈದ್ರಾಬಾದನಲ್ಲಿ ಟಾಕ್ಸ್‌ ಹೊರತುಪಡಿಸಿ 1,075ರೂ. ಆಗಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯವು ದೊರೆಯಲಿದ್ದು, ನಿಗದಿತ ಡೇಟಾ ಬಳಕೆ ಮುಗಿತ ಬಳಿಕ FUP ವೇಗದ ಮಿತಿಯು 5 Mbps ಸಾಮರ್ಥ್ಯದಲ್ಲಿರಲಿದೆ.

ಬೆಂಗಳೂರಿನಲ್ಲಿ

ACT ಫೈಬರ್‌ನೆಟ್‌ ಬೆಂಗಳೂರಿನಲ್ಲಿ 200 Mbps ವೇಗದ ಯೋಜನೆಯ ದರವು 1185ರೂ. ಆಗಿದ್ದು, 1500GB ಡೇಟಾ ಸೌಲಭ್ಯ ಪಡೆದಿದೆ. ಅದೇ ರೀತಿ 300 Mbps ವೇಗದ ಯೋಜನೆಯ ದರವು 1999ರೂ. ಆಗಿದ್ದು, 3000GB ಡೇಟಾ ಸೌಲಭ್ಯ ಪಡೆದಿದೆ. 5500GB ಡೇಟಾ ಪ್ರಯೋಜನದ ಯೋಜನೆಯ ತಿಂಗಳಬೆಲೆಯು 5999ರೂ. ಆಗಿದೆ.

Most Read Articles
Best Mobiles in India

English summary
ACT Fibernet has reintroduced Rs 100 instant cashback offer on 100 Mbps & above broadband plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X