Home
ಸುದ್ದಿಜಾಲ

ನೀವು ಏರ್‌ಟೆಲ್‌ ಗ್ರಾಹಕರೇ?.. ಹಾಗಿದ್ರೆ ಇನ್ಮುಂದೆ ದಿನವೂ 1.5GB ಅಲ್ಲ 2GB ಡೇಟಾ ಲಭ್ಯ!

ಏರ್‌ಟೆಲ್‌ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿದ್ದು, ಇತರೆ ಟೆಲಿಕಾಂ ಸಂಸ್ಥೆಗಳಾದ ಜಿಯೋ, ವೋಡಾಫೋನ್‌ ಹಾಗೂ ಬಿಎಸ್‌ಎನ್ಎಲ್‌ಗೆ ತನ್ನದೇ ಆದ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದೆ. ಈ ನಡುವೆ ಏರ್‌ಟೆಲ್‌ ತನ್ನ 299 ರೂ.ಗಳ ಡೇಟಾ ಆಫರ್ ನಲ್ಲಿ ಇನ್ನಷ್ಟು ಹೆಚ್ಚಿನ ಸೌಲಭ್ಯ ನೀಡಲು ಮುಂದಾಗಿದೆ.

ಹೌದು, ಏರ್‌ಟೆಲ್‌ನ 299 ರೂ.ಗಳ ಡೇಟಾ ಆಫರ್‌ನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅಷ್ಟೇ ಅಲ್ಲದೆ ಅನಿಯಮಿತ 5G ಸೌಲಭ್ಯ ಹಾಗೂ ಅಪೊಲೊ ಸದಸ್ಯತ್ವದಂತಹ ವಿವಿಧ ಪ್ರಯೋಜನಗಳನ್ನು ಸಹ ನೀಡಲಿದೆ. ಈ ಮೂಲಕ ಈ ವಿಶೇಷ ಪ್ಲ್ಯಾನ್‌ನಲ್ಲಿ ಬಳಕೆದಾರರು ಹಲವಾರು ಅನುಕೂಲ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಪ್ಲ್ಯಾನ್‌ನಲ್ಲಿ ಈಗ ಎಷ್ಟು ಡೇಟಾ ನೀಡಲಾಗುತ್ತಿದೆ?, ಮಾನ್ಯತೆ ದಿನಗಳು ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ಏರ್‌ಟೆಲ್‌ ಗ್ರಾಹಕರೇ?..ಹಾಗಿದ್ರೆ ಇನ್ಮುಂದೆ 1.5GB ಅಲ್ಲ 2GB ಡೇಟಾ ಲಭ್ಯ!

ಏರ್‌ಟೆಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್: ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಸ ಯೋಜನೆಗಳನ್ನು ಘೋಷಿಸುತ್ತಿವೆ. ಅಷ್ಟೇ ಅಲ್ಲದೆ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಟ್ವೀಕ್ ಮಾಡುತ್ತಾ ಬರುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಾಯ್ಸ್‌ ಕಾಲ್‌ ಹಾಗೂ ಎಸ್‌ಎಮ್‌ಎಎಸ್ ಗಿಂತ ಡೇಟಾಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಈ ಕಾರಣಕ್ಕೆ ಏರ್‌ಟೆಲ್‌ ಈ ಪ್ಲ್ಯಾನ್‌ನಲ್ಲಿ ಇನ್ನಷ್ಟು ಹೆಚ್ಚಿನ ಡೇಟಾ ನೀಡಲು ಮುಂದಾಗಿದೆ.

299ರೂ.ಗಳ ಪ್ಲ್ಯಾನ್‌ನಲ್ಲಿ 2GB ಡೇಟಾ: ಇತ್ತೀಚೆಗೆ ಓಟಿಟಿ ಮತ್ತು ಆನ್‌ಲೈನ್ ಗೇಮಿಂಗ್ ಬಳಕೆ ಹೆಚ್ಚಾಗಿದೆ. ಈ ಕಾರಣಕ್ಕೆ ಫೋನ್‌ನಲ್ಲಿ ಎಷ್ಟು ಡೇಟಾ ಇದ್ದರೂ ಸಾಲುವುದಿಲ್ಲ. ಹೀಗಾಗಿ, ಪ್ರಿಪೇಯ್ಡ್, ಪೋಸ್‌ಪೇಯ್ಡ್‌ ಮತ್ತು ಫೈಬರ್ ಯೋಜನೆಗಳು ಹೆಚ್ಚುವರಿ ಡೇಟಾ ಮತ್ತು ಓಟಿಟಿ ಚಂದಾದಾರಿಕೆ ಪ್ರಯೋಜನ ನೀಡಲಿದ್ದು , ಏರ್‌ಟೆಲ್‌ನ 299 ರೂ. ಪ್ಲ್ಯಾನ್‌ ಸಹ ಈ ರೀತಿಯ ಬಳಕೆದಾರರಿಗೆ ಯೋಗ್ಯವಾಗಿದೆ.

ಈ ಪ್ಲ್ಯಾನ್‌ನಲ್ಲಿ ಡೇಟಾ, ವಾಯ್ಸ್‌ ಕಾಲ್‌, ಎಸ್‌ಎಂಎಸ್ ಮತ್ತು ಏರ್‌ಟೆಲ್ ಥ್ಯಾಕ್ಸ್‌ ಸೌಲಭ್ಯ ಲಭ್ಯ ಇದೆ. ಅದಾಗ್ಯೂ ಈಗ ಈ ಪ್ಲ್ಯಾನ್‌ನಲ್ಲಿ ಹೆಚ್ಚಿನ ಸೌಲಭ್ಯ ನೀಡಲಾಗಿದ್ದು, 1.5GB ದೈನಂದಿನ ಡೇಟಾದ ಬದಲಿಗೆ ಇನ್ಮುಂದೆ ಗ್ರಾಹಕರು ನಿತ್ಯವೂ 2GB ಡೇಟಾಗೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಡೇಟಾ ಸೌಲಭ್ಯ ನೀಡಲಾಗಿದೆಯಾದರೂ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಈ ಮೂಲಕ ಈ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ವಾಯ್ಸ್‌ ಕರೆ , ದಿನಕ್ಕೆ 100 ಎಸ್‌ಎಮ್‌ಎಸ್‌ ಮತ್ತು 2GB ಡೇಟಾ ಪ್ರಯೋಜನ ಸಿಗಲಿದ್ದು, ಅಷ್ಟೇ ಅಲ್ಲದೆ ಈ 2GB ಯನ್ನು ಸಂಪೂರ್ಣವಾಗಿ ಬಳಕೆ ಮಾಡಿದರೂ ಸಹ ಇದು ಮುಗಿದ ಮೇಲೆ ಇಂಟರ್ನೆಟ್ ಸೇವೆಯು 64 ಕೆಬಿಪಿಎಸ್ ವೇಗದಲ್ಲಿ ಬಳಕೆದಾರರಿಗೆ ಲಭ್ಯ ಇರಲಿದೆ.

ಮೊದಲೇ ತಿಳಿಸಿದಂತೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದ್ದು.ಇದರೊಂದಿಗೆ ಏರ್‌ಟೆಲ್ 5G ಸೇವೆ ಸಹ ಲಭ್ಯ ಇರಲಿದೆ. ಈ ಮೂಲಕ ನೀವು 5G ಇರುವ ಪ್ರದೇಶಗಳಲ್ಲಿ ಇದ್ದರೆ ಅನಿಯಮಿತ 5G ಡೇಟಾ ಸೌಲಭ್ಯ ಪಡೆಯಬಹುದು. ಅದರೆ ನಿಮ್ಮ ದೈನಂದಿನ ಡೇಟಾ ಖಾಲಿಯಾದ ನಂತರವೇ ಈ ಡೇಟಾವನ್ನು ಬಳಕೆ ಮಾಡಬಹುದಾಗಿದೆ.

ಹೆಚ್ಚುವರಿಯಾಗಿ ಮೂರು ತಿಂಗಳ ಅಫೋಲೋ 24|7 ಸರ್ಕಲ್ ಸದಸ್ಯತ್ವವನ್ನು ನೀಡಲಾಗುತ್ತಿದ್ದು, ವಿಂಗ್‌ ಮ್ಯೂಸಿಕ್ ಮ್ಯೂಸಿಕ್‌ ಹಾಗೂ ಉಚಿತ ಹಲೋಟ್ಯೂನ್‌ ಕೊಡುಗೆಗಳನ್ನು ಸಹ ಪಡೆಯಬಹುದು. ಈ ಯೋಜನೆಯು 28 ದಿನಗಳ ಮಾನ್ಯತೆ ಹೊಂದಿದೆ. ಇನ್ನು, ಹೆಚ್ಚಿನ ವ್ಯಾಲಿಡಿಟಿಯನ್ನು ನೀವು ಬಯಸಿದರೆ 296ರೂ.ಗಳ ಇನ್ನೊಂದು ಪ್ರಿಪೇಯ್ಡ್ ಯೋಜನೆಯನ್ನು ಆಯ್ಕೆ ಮಾಡಬಹುದು.

ನೀವು ಏರ್‌ಟೆಲ್‌ ಗ್ರಾಹಕರೇ?..ಹಾಗಿದ್ರೆ ಇನ್ಮುಂದೆ 1.5GB ಅಲ್ಲ 2GB ಡೇಟಾ ಲಭ್ಯ!

ಏರ್‌ಟೆಲ್ ನ 296 ರೂ.ಗಳ ಪ್ಲ್ಯಾನ್‌ ನಲ್ಲಿ 30 ದಿನಗಳ ಮಾನ್ಯತೆ ಇರಲಿದ್ದು, ಒಟ್ಟು 25 GB ಡೇಟಾ ಆಯ್ಕೆ ನೀಡಲಾಗುತ್ತದೆ. ಜೊತೆಗೆ ಈ ಡೇಟಾಗೆ ಯಾವುದೇ ದೈನಂದಿನ ಮಿತಿಯಿಲ್ಲ. 30 ದಿನಗಳಲ್ಲಿ ಯಾವುದೇ ದಿನದಲ್ಲಿ ಬಳಕೆ ಮಾಡಬಹುದು. ಜೊತೆಗೆ, ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಆಯ್ಕೆ ನೀಡಲಾಗುತ್ತದೆ.

Best Mobiles in India

English summary
Additional data facility is provided in Airtel's Rs 299 plan. This means that instead of 1.5GB daily data in this offer, customers can avail 2GB daily data from now on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+