Home
ಸುದ್ದಿಜಾಲ

ಭಾರತದ ಚಿತ್ತ ಸೂರ್ಯನತ್ತ... ಆದಿತ್ಯ-L1 ಮಿಷನ್ ಸೆಪ್ಟೆಂಬರ್ ಮೊದಲ ವಾರದಲ್ಲೇ ಲಾಂಚ್‌!

ಭಾರತೀಯ ಬಾಹ್ಯಾಕಾಶ ಸಂಶೋಧನೆ ವಿಚಾರದಲ್ಲಿ ಇತ್ತೀಚಿಗೆ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡುತ್ತಿದೆ. ಈ ನಡುವೆ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದ್ದು, ಇದೀಗ ಮತ್ತೊಂದು ದಾಪುಗಾಲು ಇಟ್ಟಿರುವ ಇಸ್ರೋ ಆದಿತ್ಯ-L1(Aditya-L1) ಮಿಷನ್ ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಸಜ್ಜಾಗಿದೆ.

ಹೌದು, ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3 ರ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ನಂತರ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೂರ್ಯನ ಕಡೆ ಕಣ್ಣಾಯಿಸಿದೆ. ದೇಶದ ಮೊದಲ ಸೌರ ಮಿಷನ್ ಆದಿತ್ಯ-L1 ಲಾಂಚ್‌ ಆಗಲು ಸಿದ್ಧವಾಗಿದೆ ಎಂದು ತಿಳಿಸಲಾಗಿದೆ. ಹಾಗಿದ್ರೆ, ಏನಿದು ಆದಿತ್ಯ-ಎಲ್ 1 ?, ಇದು ಸೂರ್ಯನಲ್ಲಿ ಏನೆಲ್ಲಾ ಪತ್ತೆ ಮಾಡಲಿದೆ, ಇಸ್ರೋ ಅಧ್ಯಕ್ಷರು ಹೇಳಿದ್ದೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಭಾರತದ ಚಿತ್ತ ಸೂರ್ಯನತ್ತ...ಆದಿತ್ಯ-L1 ಮಿಷನ್ ಸೆಪ್ಟೆಂಬರ್ ಮೊದಲ ವಾರದಲ್ಲೇ ಲಾಂಚ್

ಸೂರ್ಯನತ್ತ ಭಾರತದ ಚಿತ್ತ...: ಮುಂದಿನ ಬಾಹ್ಯಾಕಾಶ ಸಂಶೋಧನೆ ಹಿನ್ನೆಲೆ ಸೂರ್ಯನತ್ತ(Sun) ಕೇಂದ್ರೀಕರಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್ ಸೋಮನಾಥ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಮೊದಲ ಸೌರ ಮಿಷನ್ ಆದಿತ್ಯ-L1 ಈಗ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್‌ ಆಗಲಿದೆ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ.

ಈ ಆದಿತ್ಯ L1 ಉಪಗ್ರಹ ಸಿದ್ಧವಾಗಿದ್ದು, ಇದು ಈಗಾಗಲೇ ಶ್ರೀಹರಿಕೋಟಾ ತಲುಪಿದೆ ಹಾಗೂ ಪಿಎಸ್‌ಎಲ್‌ವಿಗೆ(PSLV) ಸಂಪರ್ಕ ಹೊಂದಿದ್ದು, ಇಸ್ರೋ ಮತ್ತು ದೇಶದ ಮುಂದಿನ ಗುರಿ ಅದರ ಲಾಂಚ್‌ ಆಗಿದೆ. ಎರಡು ದಿನಗಳಲ್ಲಿ ಲಾಂಚ್‌ನ ನಿಖರ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಲಾಂಚ್‌ ನಂತರ, ಅದು ದೀರ್ಘವೃತ್ತದ ಕಕ್ಷೆಗೆ ಹೋಗುತ್ತದೆ. ಇದು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾಗಿದೆ. ಆದಿತ್ಯ-L1, ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ತನ್ನನ್ನು ತಾನು ಇರಿಸಿಕೊಳ್ಳುವ ಮೂಲಕ ಸೂರ್ಯನ ವರ್ತನೆಯ ಬಗ್ಗೆ ಅಭೂತಪೂರ್ವ ಮಾಹಿತಿಯನ್ನು ನೀಡುವ ಗುರಿಯನ್ನು ಹೊಂದಿದೆ.

ಈ ಸೂರ್ಯನ ಮಧ್ಯಭಾಗದ ಸ್ಥಳ ಅಧ್ಯಯನಕ್ಕೆ ಆಯಕಟ್ಟಿನ ಪ್ರದೇಶವಾಗಿದ್ದು, ಆದಿತ್ಯ-L1 ಗೆ ಗ್ರಹಣಗಳು ಅಥವಾ ನಿಗೂಢತೆಯಿಂದ ಅಡಚಣೆಯಾಗದಂತೆ ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದಂತೆ. ಈ ಮೂಲಕ ವಿಜ್ಞಾನಿಗಳು ಸೌರ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಹಾಗೂ ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವವನ್ನು ತಿಳಿದುಕೊಳ್ಳಲು ಸಹಾಯಕವಾಗಲಿದೆ ಎನ್ನಲಾಗಿದೆ.

ಇನ್ನು ಈ ಬಾಹ್ಯಾಕಾಶ ನೌಕೆಯು ಸೂರ್ಯನ ವಿವಿಧ ಪದರಗಳನ್ನು, ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್‌ನಿಂದ ಹೊರಗಿನ ಪದರವಾದ ಕರೋನದವರೆಗೆ ಸೂಕ್ಷ್ಮವಾಗಿ ಪರಿಶೀಲಿಸಲು ವಿನ್ಯಾಸಗೊಳಿಸಲಾದ ಏಳು ಸುಧಾರಿತ ಪೇಲೋಡ್‌ಗಳನ್ನು ಹೊಂದಿದೆ. ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್‌ಗಳು, ಸೌರ ಜ್ವಾಲೆಗಳು ಮತ್ತು ಹೆಚ್ಚಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾದ ಡೇಟಾವನ್ನು ಸೆರೆಹಿಡಿಯಲು ಈ ಪೇಲೋಡ್‌ಗಳು ವಿದ್ಯುತ್ಕಾಂತೀಯ, ಕಣ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತವಂತೆ.

ಭಾರತದ ಚಿತ್ತ ಸೂರ್ಯನತ್ತ...ಆದಿತ್ಯ-L1 ಮಿಷನ್ ಸೆಪ್ಟೆಂಬರ್ ಮೊದಲ ವಾರದಲ್ಲೇ ಲಾಂಚ್

ಹಾಗೆಯೇ ಈ ಆದಿತ್ಯ-L1 ರ ಮಿಷನ್‌ನ ಅತ್ಯಂತ ರೋಮಾಂಚಕಾರಿ ವಿಷಯ ಏನೆಂದರೆ ಸೂರ್ಯನನ್ನು ವಾಂಟೇಜ್ ಪಾಯಿಂಟ್‌ನಿಂದ ನೇರವಾಗಿ ವೀಕ್ಷಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ. ಇದು ಸೂರ್ಯನ ಸ್ಪಷ್ಟ ಅವಲೋಕನಗಳನ್ನು ಸೆರೆಹಿಡಿಯಲು ನಾಲ್ಕು ಪೇಲೋಡ್‌ಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ, ಉಳಿದ ಮೂರು ಪೇಲೋಡ್‌ಗಳು ಈ ಲಾಗ್ರೇಂಜ್ ಪಾಯಿಂಟ್‌ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಸ್ಥಳದ ಅಧ್ಯಯನಗಳನ್ನು ನಡೆಸುತ್ತವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಈ ನಡುವೆ ಚಂದ್ರಯಾನ- 3 ನೌಕೆಯು ತನ್ನ ಮೊದಲ ವೈಜ್ಞಾನಿಕ ಡೇಟಾವನ್ನು ಭೂಮಿಗೆ ರವಾನಿಸಿದೆ. ವಿಕ್ರಮ್ ಲ್ಯಾಂಡರ್‌ನ ಥರ್ಮಲ್ ಪ್ರೋಬ್ ಪೇಲೋಡ್, ಚಂದ್ರನ ಮೇಲ್ಮೈನಲ್ಲಿನ ನೆಲದ ಸಮೀಪದ ಹಾಗೂ ಆಳದ ಭಾಗದಲ್ಲಿ ಎಷ್ಟು ಉಷ್ಣಾಂಶ ಇದೆ ಹಾಗೂ ಇದು ಯಾವ ರೀತಿ ಏರಿಳಿಕೆ ಆಗಲಿದೆ ಎಂಬುದನ್ನು ತಿಳಿಸಿಕೊಟ್ಟಿದೆ. ಹಾಗೆಯೇ ಚಂದ್ರನ ಮೇಲೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲಾ ಪೇಲೋಡ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ.

Best Mobiles in India

English summary
After successfully landing the Chandrayaan-3 lander in the South Pole region, the Indian Space Research Organization (ISRO) is now eyeing the sun. It has been informed that the country's first solar mission Aditya-L1 is ready for launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+