Home
ಸುದ್ದಿಜಾಲ

Valentine's Day: ಪ್ರೇಮ ಪತ್ರ ಬರೆಯಲು AI ಬಳಕೆಗೆ ಮುಂದಾದ ವಯಸ್ಕರು: ಅಧ್ಯಯನ

ಪ್ರೇಮಿಗಳ ದಿನಕ್ಕೆ (Valentine's Day) ಈಗಾಗಲೇ ಸಾಕಷ್ಟು ಜನರು ವಿವಿಧ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದಾರೆ. ಈ ಪ್ರೇಮಿಗಳ ದಿನ ಅಂದಾಕ್ಷಣ ಕವಿತೆಗಳು ಅಥವಾ ಪ್ರೇಮ ಪತ್ರಗಳು ಮುಖ್ಯ ಪಾತ್ರವಹಿಸುತ್ತವೆ. ತನ್ನ ಸಂಗಾತಿಯನ್ನು ಹೇಗಾದರೂ ಮಾಡಿ ಮನವೊಲಿಸಿ ಅವರ ಹೃದಯ ಗೆಲ್ಲಬೇಕು ಎಂದು ವಿವಿಧ ರೀತಿಯಲ್ಲಿ ವರ್ಣನೆ ಮಾಡಿ ಬರೆಯಲಾಗುತ್ತದೆ.

ಹೌದು, ಪ್ರೇಮಿಗಳಿಗೂ ಪ್ರೇಮ ಪತ್ರಕ್ಕೂ (love letter) ದೊಡ್ಡ ಸಂಬಂಧ ಇದೆ. ಪ್ರೇಮ ಪತ್ರದಲ್ಲಿ ವರ್ಣನೆ ಮಾಡಲಾದ ವಿಷಯಗಳಿಗೆ ಮನಸೋತು ಪ್ರೀತಿಯಲ್ಲಿ ಬೀಳುವ ಅದೆಷ್ಟೋ ಮಂದಿ ಇದ್ದಾರೆ. ಆದರೆ, ನಿಮಗೆ ಪ್ರೇಮ ಪತ್ರ ಬರೆಯಲು ಬರುವುದಿಲ್ಲ ಎಂದರೂ ಚಿಂತೆ ಮಾಡಬೇಡಿ. ಯಾಕೆಂದರೆ ನಿಮ್ಮ ಭಾವನೆಗಳಿಗೆ ಎಐ ಸಹ ಸ್ವಂಧಿಸಲಿದೆ. ಈ ಮೂಲಕ ಎಐ (AI) ನಿಮ್ಮ ಸಂಗಾತಿಯನ್ನು ನಿಮ್ಮ ಜೊತೆ ಸೇರಿಸುವ ಕೆಲಸ ಮಾಡುತ್ತದೆ. ಈ ನಡುವೆ, ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಮ್ಯಾಕ್‌ಅಫೀ ಅಧ್ಯಯನವೊಂದನ್ನು ಮಾಡಿದ್ದು, ಅಲ್ಲಿ ತಿಳಿದುಬಂದ ವಿಚಾರ ಏನು ಅನ್ನೋದನ್ನು ನೋಡೋಣ ಬನ್ನಿ.

Valentine's Day: ಪ್ರೇಮ ಪತ್ರ ಬರೆಯಲು AI ಬಳಕೆಗೆ ಮುಂದಾದ ವಯಸ್ಕರು: ಅಧ್ಯಯನ

ಎಐ ಪ್ರೇಮ ಪತ್ರ: ಇತ್ತೀಚಿನ ದಿನಗಳಲ್ಲಿ ಎಐ ಎಲ್ಲಾ ಕಡೆ ತನ್ನ ಪ್ರಾಬಲ್ಯ ತೋರುತ್ತಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಎಐ ಬಳಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಈಗ ವ್ಯಾಲೆಂಟೈನ್ಸ್ ಡೇ ದಿನದ ಹಿನ್ನೆಲೆಯಲ್ಲಿ ಎಐ ಮುನ್ನೆಲೆಗೆ ಬಂದಿದೆ. ಈ ಕಾರಣಕ್ಕೆ ನಾಲ್ಕು ವಯಸ್ಕರಲ್ಲಿ ಒಬ್ಬರು ವ್ಯಾಲೆಂಟೈನ್ಸ್ ಡೇ ಪ್ರೇಮ ಪತ್ರಗಳನ್ನು ಬರೆಯಲು ಎಐ ಬಳಸಲು ಯೋಜಿಸಿದ್ದಾರಂತೆ.

ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನದಂದು ಕೃತಕ ಬುದ್ಧಿಮತ್ತೆ (AI) ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಭದ್ರತಾ ಸಾಫ್ಟ್‌ವೇರ್ ಸಂಸ್ಥೆ ಮ್ಯಾಕ್‌ಅಫೀ (McAfee) ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಸಂಸ್ಥೆಯು ಸಮೀಕ್ಷೆ ನಡೆಸಿದ್ದು, ಇದು ನಾಲ್ಕು ವಯಸ್ಕ ಪ್ರತಿಕ್ರಿಯಿಸಿದವರಲ್ಲಿ ಒಬ್ಬರು (26 ಪ್ರತಿಶತ) ಪ್ರೇಮ ಪತ್ರವನ್ನು ಬರೆಯಲು ಎಐ ಬಳಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆಂತೆ.

Valentine's Day: ಪ್ರೇಮ ಪತ್ರ ಬರೆಯಲು AI ಬಳಕೆಗೆ ಮುಂದಾದ ವಯಸ್ಕರು: ಅಧ್ಯಯನ

ಅದರಲ್ಲೂ ಕುತೂಹಲಕಾರಿಯಾಗಿ, ವಯಸ್ಕರಲ್ಲಿ ಮೂರನೇ ಎರಡರಷ್ಟು (67 ಪ್ರತಿಶತ) ಎಐ ಬರೆದ ಪ್ರೇಮ ಪತ್ರ ಮತ್ತು ಮನುಷ್ಯ ಬರೆದ ಪತ್ರದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ವಿಫಲರಾಗಿದ್ದಾರಂತೆ. ಈ ಸಂಶೋಧನೆಗೆ ಮ್ಯಾಕ್‌ಅಫೀ ಮಾಡರ್ನ್ ಲವ್ (Modern Love) ಎಂಬ ಹೆಸರನ್ನು ಇಟ್ಟಿತ್ತು. ಅಂದರೆ ಇದು ಆಧುನಿಕ ಯುಗದ ಪ್ರೀತಿ ಮತ್ತು ಸಂಬಂಧಗಳನ್ನು ಪರಿವರ್ತಿಸುವಲ್ಲಿ ಎಐ ಮತ್ತು ಇಂಟರ್ನೆಟ್‌ನ ಪಾತ್ರವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿತ್ತು.

ಈ ಸಂಬಂಧ ಅಂಕಿಅಂಶಗಳನ್ನು ಸಂಗ್ರಹಿಸಲು ಒಂಬತ್ತು ದೇಶಗಳಲ್ಲಿ 5,000 ಜನರನ್ನು ಅಧ್ಯಯನ ಮಾಡಲಾಗಿದ್ದು, ಪ್ರತಿಕ್ರಿಯಿಸಿದವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಈಗಾಗಲೇ ಸಂಗಾತಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಸಹಾಯವಾಗುವಂತೆ ಓಪನ್‌ ಎಐನ ಚಾಟ್‌ಜಿಪಿಟಿ , ಗೂಗಲ್‌ ಜೆಮಿನಿ ಮತ್ತು ಮೈಕ್ರೋಸಾಫ್ಟ್‌ ಕಾಪಿಲೋಟ್ (OpenAI's ChatGPT, Google Gemini and Microsoft Copilot) ನಂತಹ ಟೂಲ್ಸ್‌ಗಳನ್ನು ಕಂಟ್ರೋಲ್‌ ಮಾಡಲು ಮುಂದಾಗಿದ್ದಾರಂತೆ.

ಎಐ ಬಳಕೆ ಮಾಡಲು ಕಾರಣ ಏನು?: ಈ ಅಧ್ಯಯನದಲ್ಲಿ ಕಂಡು ಬಂದ ವಿಷಯ ಏನೆಂದರೆ ಯಾರೆಲ್ಲಾ ಈ ಎಐ ಬರೆದ ಲೆಟರ್‌ ಅನ್ನು ತಮ್ಮ ಸಂಗಾತಿಗೆ ಕಳುಹಿಸುತ್ತಾರೋ ಅವರು ಹೆಚ್ಚು ಆತ್ಮವಿಶ್ವಾಸದಿಂದ (27 ಪ್ರತಿಶತ) ಇರುವಂತೆ ಮಾಡುತ್ತದಂತೆ. ಇದರ ಜೊತೆಗೆ ಈ ಪತ್ರವನ್ನು ವೈಯಕ್ತಿಕವಾಗಿ ಬರೆಯಲು ಸಮಯದ ಅಭಾವ ಸಹ ಕಾರಣವಾಗಿದೆ. ಹಾಗೆಯೇ ಸ್ಫೂರ್ತಿಯ ಕೊರತೆಯು ಸಹ ಕಾಡಿದೆಯಂತೆ. ಉಳಿದ 10 ಪ್ರತಿಶತದಷ್ಟು ಜನರು ಎಐ ಅನ್ನು ಬಳಸುವುದರಿಂದ ತ್ವರಿತವಾಗಿ ಲೆಟರ್‌ ಬರೆದು ಕೊಡಬಹುದು ಎಂದು ಉತ್ತರ ನೀಡಿದ್ದಾರೆ.

ಪ್ರತಿಕ್ರಿಯಿಸಿದವರಲ್ಲಿ ಹಲವರು ತಾವು ಸಿಕ್ಕಿಬೀಳಬಹುದೆಂದು ಸಹ ಭಾವಿಸಿದ್ದಾರೆ. ಸಮೀಕ್ಷೆಯ ಅರ್ಧದಷ್ಟು ವಯಸ್ಕರು (49 ಪ್ರತಿಶತ) ಜನರೇಟಿವ್ ಎಐ- ಚಾಲಿತ ಡಿವೈಸ್‌ನಿಂದ ಬರೆದ ಪ್ರೇಮ ಪತ್ರವನ್ನು ಸ್ವೀಕರಿಸಿದ್ರೆ ಅವರು ಮನನೊಂದಿದ್ದಾರೆ ಎಂದರ್ಥ ಎಂದು ತಿಳಿಸಿದ್ದಾರೆ. ಅದಾಗ್ಯೂ ಪ್ರೇಮ ಪತ್ರವನ್ನು ಪ್ರಸ್ತುತಪಡಿಸಿದಾಗ, 67 ಪ್ರತಿಶತದಷ್ಟು ಜನರು ಅದನ್ನು ಬರೆದದ್ದು ಮನುಷ್ಯರೇ ಅಥವಾ ಯಂತ್ರದ ಸಹಾಯದಿಂದ ಬರೆದುದ್ದೇ ಎಂದು ಗುರುತಿಸಲು ವಿಫಲರಾಗಿದ್ದಾರಂತೆ.

Valentine's Day: ಪ್ರೇಮ ಪತ್ರ ಬರೆಯಲು AI ಬಳಕೆಗೆ ಮುಂದಾದ ವಯಸ್ಕರು: ಅಧ್ಯಯನ

ಲವ್‌ ಲೆಟರ್‌ ಬರೆಯಲು ಎಐ ಸಮರ್ಥವೇ?: ದೊಡ್ಡ ಭಾಷಾ ಮಾದರಿಗಳ (LLM) ಆಧಾರಿತ ಜನರೇಟಿವ್ ಎಐ ಟೂಲ್ಸ್‌ ಮಾನವನಿಂದ ಬರೆಯಲ್ಪಟ್ಟ ಟೆಕ್ಸ್ಟ್‌ಗಳನ್ನು ಬರೆಯಲು ಸಮರ್ಥವಾಗಿವೆ ಎಂದು ತಿಳಿದುಬಂದಿದೆ. ಅಂತಹ ಹೆಚ್ಚಿನ ಟೂಲ್ಸ್‌ಗಳು ಬಳಕೆದಾರರಿಗೆ ಬರವಣಿಗೆಯ ಎಲ್ಲಾ ಹಂತಗಳನ್ನು ಕಂಟ್ರೋಲ್‌ ಮಾಡಲು ಮತ್ತು ಕಸ್ಟಮೈಸ್ ಮಾಡಲು ಪ್ರಾಂಪ್ಟ್‌ಗಳನ್ನು ಸೇರಿಸಲು ಅನುಮತಿಸುತ್ತದೆ.

ಇದರೊಂದಿಗೆ ಚಾಟ್‌ಜಿಪಿಟಿ ಪ್ಲಸ್, ಕಾಪಿಲೋಟ್ ಪ್ರೊ ಮತ್ತು ಇತರ ಉನ್ನತ-ಮಟ್ಟದ ಎಐ ಅಸಿಸ್ಟೆಂಟ್‌ ಬಳಕೆದಾರರಿಗೆ ಚಾಟ್‌ಬಾಟ್‌ಗಳನ್ನು ಕ್ರಿಯೇಟ್‌ ಮಾಡಲು ಅವಕಾಶ ಮಾಡಿಕೊಡುತ್ತದೆ. ಅದು ಅವರ ಬರವಣಿಗೆಯ ಕಂಟೆಂಟ್‌ ಮೇಲೆ ತರಬೇತಿ ನೀಡಬಹುದು ಮತ್ತು ಪ್ರತಿಕ್ರಿಯೆಗಳನ್ನು ಬರೆಯುವಾಗ ಅವುಗಳಿಗೆ ಹೆಚ್ಚಿನ ಹೋಲಿಕೆಯನ್ನು ಮಾಡುವ ಕೆಲಸ ಮಾಡುತ್ತದೆ.

ಜಾಗರೂಕರಾಗಿರಿ: ಮ್ಯಾಕ್‌ಅಫೀ ಅಧ್ಯಯನವು ಇದೇ ವೇಳೇ ಎಚ್ಚರಿಕೆಯೊಂದನ್ನು ಸಹ ನೀಡಿದೆ. ಮಾನವರ ಬರವಣಿಗೆಯ ಶೈಲಿಯೊಂದಿಗೆ ಹೊಂದಿಕೆಯಾಗುವ ಈ ಲೆಟರ್‌ಮ ನಿಕಟ ಹೋಲಿಕೆಯನ್ನು ಸೈಬರ್ ಅಪರಾಧಿಗಳು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಹಗರಣಗಳು ಯೋಜಿತ ಅಪರಾಧಗಳಾಗಿರಲಿದ್ದು, ವಂಚಕರು ಪ್ರೀತಿ ಮತ್ತು ಸಂಬಂಧಗಳ ಸುಳ್ಳು ಭರವಸೆಗಳ ಮೂಲಕ ದುರ್ಬಲ ಜನರನ್ನು ಬಲಿಪಶುಗಳನ್ನಾಗಿ ಮಾಡಬಹುದು ಎಂದು ತಿಳಿಸಲಾಗಿದೆ.

ಸಮೀಕ್ಷೆಗೆ ಒಳಗಾದ 51 ಪ್ರತಿಶತ ವ್ಯಕ್ತಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಅಂದರೆ ಅಪರಿಚಿತರನ್ನು ಈ ಮೂಲಕ ಮರಳು ಮಾಡಬಹುದು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಪರಿಣಾಮ ಹೆಚ್ಚು ಜಾಗರೂಕರಾಗಿರಲು ಮತ್ತು ಆನ್‌ಲೈನ್‌ನಲ್ಲಿ ಹಣ ಅಥವಾ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಕಳುಹಿಸಲು ಕೇಳುವ ಅಪರಿಚಿತರ ವಿನಂತಿಯನ್ನು ತಿರಸ್ಕರಿಸಲು ಸೂಚಿಸಲಾಗಿದೆ.

Best Mobiles in India

English summary
A lot of adults have come forward to use AI for Valentine's Day. They will write a love letter using this AI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+