Home
ಸುದ್ದಿಜಾಲ

BMTC ಬಸ್‌ಗಳಲ್ಲಿ ಅಡಾಸ್‌ ಅಳವಡಿಕೆ! ಬೆಂಗಳೂರಲ್ಲಿ ಇನ್ಮುಂದೆ ಅಪಘಾತಗಳಿಗೆ ಬ್ರೇಕ್‌...

ಬಿಎಮ್‌ಟಿಸಿ (BMTC) ಎಂದಾಕ್ಷಣ ಬಹುಪಾಲು ಜನರಿಗೆ ಭಯ ಉಂಟಾಗುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಮ್‌ಟಿಸಿ ಯನ್ನು ಕಿಲ್ಲರ್ ಬಿಎಮ್‌ಟಿಸಿ ಎಂದು ಸಂಬೋಧಿಸಲಾಗುತ್ತಿದೆ. ಇದಕ್ಕೆ ಕಾರಣ ಈ ಬಸ್‌ಗಳಿಗೆ ಸಿಲುಕಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೆಲ್ಲಾ ಮನಗಂಡ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಈಗ ಮಹತ್ವದ ಕೆಲಸಕ್ಕೆ ಮುಂದಾಗಿದೆ.

ಹೌದು, ಬೆಂಗಳೂರಲ್ಲಿ ಬಿಎಮ್‌ಟಿಸಿ ಬಸ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಈ ಬಸ್‌ಗಳಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಲೇ ಇದೆ. ಹಾಗೆಯೇ ಇತರೆ ವಾಹನಗಳ ಸಂಖ್ಯೆಯೂ ಸಹ ಹೆಚ್ಚಾಗಿದ್ದು ಸಂಚಾರ ದಟ್ಟಣೆ ಸಮಸ್ಯೆ ಆಗಾಧವಾಗಿದೆ. ಪರಿಣಾಮವಾಗಿ ನಿತ್ಯವೂ ಅಪಘಾತಗಳು ಜರುಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (Advanced Driver Assistance System) ಪರಿಚಯಿಸಲಾಗುತ್ತಿದೆ. ಹಾಗಿದ್ರೆ, ಏನಿದು ಹೊಸ ಸಿಸ್ಟಮ್?. ಇದರಿಂದ ಬೆಂಗಳೂರಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸುವುದು ಹೇಗೆ ಸಾಧ್ಯ? ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

BMTC ಬಸ್‌ಗಳಲ್ಲಿ ಅಡಾಸ್‌ ಅಳವಡಿಕೆ! ಬೆಂಗಳೂರಲ್ಲಿ ಇನ್ಮುಂದೆ ಅಪಘಾತಗಳಿಗೆ ಬ್ರೇಕ್

ಬಿಎಮ್‌ಟಿಸಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಅವರು ಬೆಂಗಳೂರಿನಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗೆ ಚಾಲನೆ ನೀಡಿದ್ದಾರೆ. ಅದರಂತೆ ಸುರಕ್ಷತೆ ಹೆಚ್ಚು ಮಾಡಲು ಮತ್ತು ಅಪಘಾತಗಳನ್ನು ತಡೆಗಟ್ಟಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಾಯೋಗಿಕವಾಗಿ 10 ಬಸ್‌ಗಳಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇನ್ನು ಬಸ್‌ಗಳಲ್ಲಿ 'ಮೊಬೈಲ್ 8 ಕನೆಕ್ಟ್' (Mobile 8 Connect) ಎಂಬ ಡಿವೈಸ್‌ ಅಳವಡಿಸಲಾಗಿದೆ. ಇದು ವಿಷನ್ ಸೆನ್ಸರ್ ಕ್ಯಾಮೆರಾ, ಡಿಎಮ್‌ಎಸ್‌ (Driver Monitoring System) ಕ್ಯಾಮೆರಾ, ಜಿಪಿಎಸ್‌ ಘಟಕ ಮತ್ತು ಐ ವಾಚ್ ಅನ್ನು ಹೊಂದಿರಲಿದ್ದು, ಇವೆಲ್ಲವೂ ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಜೋಡಿಸಲ್ಪಟ್ಟಿರುತ್ತವೆ. ಎಲ್ಲವೂ ಪರಸ್ಪರ ಸಂಪರ್ಕ ಹೊಂದಿದ್ದು, ಚಾಲಕರಿಗೆ ನೈಜ-ಸಮಯದ ಎಚ್ಚರಿಕೆಗಳನ್ನು ನೀಡಲಿದ್ದು, ಬಸ್‌ಗಳ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.

BMTC ಬಸ್‌ಗಳಲ್ಲಿ ಅಡಾಸ್‌ ಅಳವಡಿಕೆ! ಬೆಂಗಳೂರಲ್ಲಿ ಇನ್ಮುಂದೆ ಅಪಘಾತಗಳಿಗೆ ಬ್ರೇಕ್

ವಿಷನ್ ಸೆನ್ಸರ್ ಕ್ಯಾಮೆರಾ ಮೂಲಕ ಬಸ್‌ಗಳ ಮುಂದೆ ಚಲಿಸುವ ವಾಹನಗಳನ್ನು ಗುರುತಿಸಲಾಗುತ್ತದೆ ಮತ್ತು ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಮತ್ತು ವಾಹನಗಳು ಅಥವಾ ಪಾದಚಾರಿಗಳಿಗೆ ಆಗುವ ಅಪಘಾತವನ್ನು ತಪ್ಪಿಸಲು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು 'ಐ ವಾಚ್' ನಲ್ಲಿ ಪ್ರದರ್ಶಿಸುವ ಮೂಲಕ ಚಾಲಕರು ಜಾಗೃತವಾಗುವಂತೆ ಮಾಡಲಾಗುತ್ತದೆ. ಈ ಐ ವಾಚ್ ಅನ್ನು ಚಾಲಕನ ಮುಂದೆ ಬಲಭಾಗದಲ್ಲಿ ಅಳವಡಿಸಲಾಗಿದ್ದು, ಸೂಕ್ತ ದೂರದಲ್ಲಿ ಅವರು ದೃಶ್ಯ ಎಚ್ಚರಿಕೆಯನ್ನು ಸಹ ನೋಡಬಹುದು ಮತ್ತು ಆಡಿಯೊವನ್ನು ಆಲಿಸಬಹುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ತಿಳಿಸಿದ್ದಾರೆ.

ಹಾಗೆಯೇ 10 ಬಸ್‌ಗಳಲ್ಲಿ ಈ ಸಿಸ್ಟಮ್‌ ಅಳವಡಿಸಲಾಗಿದ್ದು, ಇವು ಚಾಲಕನ ಚಲನವಲನವನ್ನು ನಿರಂತರವಾಗಿ ವೀಕ್ಷಿಸುವ ಮತ್ತು ಚಾಲಕನ ಅಸಹಜ ಚಲನವಲನಗಳು ಗಮನಕ್ಕೆ ಬಂದಾಗಲೆಲ್ಲ ಅವನನ್ನು ಎಚ್ಚರಿಸುವ ಕೆಲಸ ಮಾಡಲಿವೆ. ಜೊತೆಗೆ 10 ಬಸ್‌ಗಳು ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಗೆ ಡಿವೈಸ್‌ ಅನ್ನು ಹೊಂದಿರಲಿದ್ದು, ಡಿಪೋ ಸಂಖ್ಯೆ 10, ಈಶಾನ್ಯ ವಲಯ, ಮತ್ತು ಡಿಪೋ ನಂ. 26, ಉತ್ತರ ವಲಯ, 500 ಡಿ ಮಾರ್ಗಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

BMTC ಬಸ್‌ಗಳಲ್ಲಿ ಅಡಾಸ್‌ ಅಳವಡಿಕೆ! ಬೆಂಗಳೂರಲ್ಲಿ ಇನ್ಮುಂದೆ ಅಪಘಾತಗಳಿಗೆ ಬ್ರೇಕ್

ಆಟೋಮ್ಯಾಟಿಕ್ ವೆಹಿಕಲ್ ಲೊಕೇಟಿಂಗ್ ಸಿಸ್ಟಮ್: ಇನ್ನು ಬಿಎಮ್‌ಟಿಸಿಯು ನಿರ್ಭಯ ಯೋಜನೆಯಡಿ ಮಹಿಳೆಯರ ಸುರಕ್ಷತೆಗಾಗಿ 5,000 ಬಸ್‌ಗಳಲ್ಲಿ ಆಟೋಮ್ಯಾಟಿಕ್ ವೆಹಿಕಲ್ ಲೊಕೇಟಿಂಗ್ ಸಿಸ್ಟಮ್ ಅಳವಡಿಸುವ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ದೊರಕಿದೆ. ಇದು ಮಹಿಳೆಯರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಕೆಲಸ ಮಾಡಲಿದ್ದು, ಬಸ್‌ನ ಒಳಭಾಗದಲ್ಲಿ ಕಣ್ಗಾವಲು ಇಡಲು ಮತ್ತು ಪ್ರಯಾಣಿಕರ ಮಾಹಿತಿಯನ್ನು ಈ ಮೂಲಕ ಟ್ರ್ಯಾಕ್‌ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನವನ್ನೂ ಸಹ ಪಡೆಯಲಾಗಿದೆ.

Best Mobiles in India

English summary
Advanced Driver Assistance System is being introduced to prevent accidents in BMTC buses in Bangalore. It has been practically installed in ten buses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+