ಪ್ರಿಯ ಗ್ರಾಹಕರೇ.. ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, ಸಿಗುತ್ತೆ ಉಚಿತ ನೆಟ್‌ಫ್ಲಿಕ್ಸ್!
ಭಾರತೀಯ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವಿ ಟೆಲಿಕಾಂಗಳು ನೇರ ಪೈಪೋಟಿಯೊಂದಿಗೆ ಮುನ್ನಡೆದಿವೆ. ಈ ಸಂಸ್ಥೆಗಳು ಅಧಿಕ ಪ್ರಯೋಜನಗಳ ಕೆಲವು ಬೆಸ್ಟ್ ಪ್ಲ್ಯಾನ್ ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ. ಅವುಗಳಲ್ಲಿ ಪೈಕಿ ಬಹುತೇಕ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ, ಬಿಗ್ ವ್ಯಾಲಿಡಿಟಿ ಪ್ರಯೋಜನಗಳನ್ನು ನೀಡಿವೆ. ಅದಾಗ್ಯೂ, ಮತ್ತೆ ಕೆಲವು ಪ್ಲ್ಯಾನ್‌ಗಳಲ್ಲಿ ಓಟಿಟಿ ( OTT ) ಚಂದಾದಾರಿಕೆಯ ಪ್ರಯೋಜನ ಸಹ ಒದಗಿಸಿವೆ. ಈ ಮೂರು ಟೆಲಿಕಾಂ ಸಂಸ್ಥೆಗಳು ಕೂಡಾ ಕೆಲವು ಓಟಿಟಿ ಸದಸ್ಯತ್ವದ ಯೋಜನೆಗಳ ಆಯ್ಕೆ ಗ್ರಾಹಕರಿಗೆ ನೀಡಿವೆ.
ಹೌದು, ಜಿಯೋ, ವಿ ಹಾಗೂ ಏರ್‌ಟೆಲ್ ಟೆಲಿಕಾಂಗಳು ಭಿನ್ನ ಡೇಟಾ ಸೌಲಭ್ಯದ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಹೊಂದಿದ್ದು, ಆ ಪೈಕಿ ಕೆಲವು ಪ್ಲ್ಯಾನ್‌ಗಳು ಓಟಿಟಿ ಪ್ರಯೋಜನ ಪಡೆದಿವೆ. ಸದ್ಯ ಟ್ರೆಂಡ್‌ನಲ್ಲಿ ಇರುವ ನೆಟ್‌ಫ್ಲಿಕ್ಸ್ ( Netflix Subscription ) ಚಂದಾದಾರಿಕೆಯನ್ನು ಸಹ ಒದಗಿಸಿವೆ.

ಓಟಿಟಿ ಜೊತೆಗೆ ವಾಯಿಸ್ ಕರೆಯ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ, ಆಕರ್ಷಕ ವ್ಯಾಲಿಡಿಟಿ ಹಾಗೂ ದೈನಂದಿನ ಡೇಟಾ ಸಹ ಪಡೆದಿವೆ. ಹಾಗಾದರೇ ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂನ ನೆಟ್‌ಫ್ಲಿಕ್ಸ್ ಸೌಲಭ್ಯ ರೀಚಾರ್ಜ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋದ 1099ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ ಸಂಸ್ಥೆಯ 1099 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಈ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದೆ. ಇನ್ನು ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಓಟಿಟಿ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರ ಜೊತೆಗೆ ಜಿಯೋ ಆಪ್ಸ್ ಸಹ ಲಭ್ಯ. ಇನ್ನು ಪೂರ್ಣ ಅವಧಿಗೆ ಒಟ್ಟು 168 GB ಡೇಟಾ ಲಭ್ಯವಾಗಲಿದೆ.
ಏರ್‌ಟೆಲ್‌ನ 1499ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಸಂಸ್ಥೆಯ 1499 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದ್ದು, ಗ್ರಾಹಕರಿಗೆ ನಿತ್ಯ 3 GB ಡೇಟಾ ಸೌಲಭ್ಯ ನೀಡುತ್ತದೆ. ಅಲ್ಲದೇ ಈ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದೆ. ಇನ್ನು ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಓಟಿಟಿ ಸದಸ್ಯತ್ವ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರ ಜೊತೆಗೆ ಏರ್‌ಟೆಲ್ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಹಾಗೂ ಇತರೆ ಆಪ್ಸ್ ಸಹ ಲಭ್ಯ.
ವಿ ಟೆಲಿಕಾಂನ 998ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ 998 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 70 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದ್ದು, ಚಂದಾದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಓಟಿಟಿ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರ ಜೊತೆಗೆ ವಿ ಟೆಲಿಕಾಂನ ಆಪ್ಸ್ ಸಹ ಲಭ್ಯ.


Click it and Unblock the Notifications








