ಏನಾಶ್ಚರ್ಯ!! 11 ವರ್ಷಗಳ ನಂತರ 5 ಗ್ರಹಗಳು ಒಟ್ಟಿಗೆ ಆಕಾಶದಲ್ಲಿ

By Suneel
|

ಆಕಾಶದಲ್ಲಿ ಕೇವಲ ನಕ್ಷತ್ರ, ಚಂದ್ರ, ಸೂರ್ಯನನ್ನು ಬಿಟ್ಟು ಬೇರೆ ಯಾವ ಗ್ರಹಗಳನ್ನು ನೋಡಲೇ ಆಗಲಿಲ್ಲ ಎಂಬ ಕೊರಗು ಹಲವು ಆಕಾಶ ನೋಡುವ ಪ್ರಿಯಿರಿಗೆ ಇರುತ್ತದೆ. ಅಂತಹವರಿಗೆ ಒಂದು ಸಂತೋಷದ ಸುದ್ದಿ. 11 ವರ್ಷಗಳ ನಂತರ ಇದೇ ಮೊದಲ ಭಾರಿಗೆ ಆಕಾಶದಲ್ಲಿ 5 ಗ್ರಹಗಳು ಒಮ್ಮೆಯೇ ಕಾಣಿಸಿಕೊಳ್ಳುತ್ತಿವೆ.

ಓದಿರಿ:ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ

ಅಂದಹಾಗೆ ಬೆಳಗಿನ ಮುಂಜಾನೆಯ ಆಕಾಶದಲ್ಲಿ ಒಮ್ಮೆಯೇ ಒಟ್ಟಿಗೆ ಕಾಣಿಸಿಕೊಳ್ಳುವ ಗ್ರಹಗಳು ಮರ್ಕ್ಯೂರಿ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳು. ಈ ಗ್ರಹಗಳನ್ನು ನೀವು ನೋಡಬೇಕೇ? ಹಾಗಾದರೆ ನೋಡುವ ಮೊದಲು ಈ ಲೇಖನ ಓದಿರಿ.

ಕ್ರಾಂತಿವೃತ್ತಾಕಾರದಲ್ಲಿ ಗ್ರಹಗಳು

ಕ್ರಾಂತಿವೃತ್ತಾಕಾರದಲ್ಲಿ ಗ್ರಹಗಳು

11 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆಕಾಶದಲ್ಲಿ ಒಮ್ಮೆಲೆ 5 ಗ್ರಹಗಳು ಒಟ್ಟಿಗೆ ಕ್ರಾಂತಿವೃತ್ತಾಕಾರದಲ್ಲಿ (Ecliptic) ಕಾಣಿಸಿಕೊಳ್ಳಲಿವೆ.
ಮುಂಜಾನೆಯ ಆಕಾಶದಲ್ಲಿ ಎಲ್ಲರೂ ನೋಡಬಹುದಾಗಿದೆ. ಆದರೆ ನೆನಪಿಡಿ ಆ 5 ಗ್ರಹಗಳನ್ನು ನೋಡುವ ಅವಕಾಶ ಕೇವಲ 3 ವಾರಗಳು ಮಾತ್ರ.

 ಒಟ್ಟಿಗೆ ಕಾಣಿಸಲಿರುವ ಗ್ರಹಗಳು

ಒಟ್ಟಿಗೆ ಕಾಣಿಸಲಿರುವ ಗ್ರಹಗಳು

ಶುಕ್ರ, ಮಂಗಳ, ಮರ್ಕ್ಯೂರಿ, ಗುರು, ಶನಿ ಗ್ರಹಗಳು ಒಟ್ಟಿಗೆ ಸೇರಲಿರುವ ಗ್ರಹಗಳು. ಸಾಮಾನ್ಯವಾಗಿ ಕೆಲವೇ ಕೆಲವು ಗ್ರಹಗಳು ಮಾತ್ರ ಒಟ್ಟಿಗೆ ಈ ರೀತಿ ಆಕಾಶದಲ್ಲಿ ಕಾಣಿಸಿಕೊಳ್ಳುತ್ತವೆ.

ಈ ಗ್ರಹಗಳು ಒಟ್ಟಿಗೆ ಕಾಣಿಸಲು ಕಾರಣ ಏನು ?

ಈ ಗ್ರಹಗಳು ಒಟ್ಟಿಗೆ ಕಾಣಿಸಲು ಕಾರಣ ಏನು ?

"ಸೂರ್ಯನ ಒಂದೆಡೆ ದಿಕ್ಕಿನಲ್ಲಿ 5 ಗ್ರಹಗಳು ಪ್ರಸ್ತುತದಲ್ಲಿ ಇರುವುದರಿಂದ ರಾತ್ರಿಯ ನಿರ್ಧಿಷ್ಟ ವೇಳೆಯಲ್ಲಿ ಇವು ಒಟ್ಟಿಗೆ ಸೇರುತ್ತವೆ" ಎಂದು ದೆಹಲಿ ನೆಹರು ಪ್ಲಾನಿಟೋರಿಯಂ ನಿರ್ದೇಶಕರಾದ 'ಎನ್‌ ರತ್ನಶ್ರೀ' ರವರು ಹೇಳಿದ್ದಾರೆ.

ಮುಂಜಾನೆ ನೋಡುವ ಅವಕಾಶ

ಮುಂಜಾನೆ ನೋಡುವ ಅವಕಾಶ

"5 ಗ್ರಹಗಳು ಮುಂಜಾನೆ ವೇಳೆಯಲ್ಲಿ ಆಕಾಶದಲ್ಲಿ ಜನವರಿ 20 ರಿಂದ ಫೆಬ್ರವರಿ 20 ವರೆಗೆ ಕಾಣಿಸಿಕೊಳ್ಳಲಿವೆ. ಆದರೆ ಎಲ್ಲಾ 5 ಗ್ರಹಗಳು ಸಂಪೂರ್ಣವಾಗಿ ಜನವರಿ 28 ರಿಂದ ಫೆಬ್ರವರಿ 10 ರ ನಡುವೆ ಸರಿಯಾಗಿ ಕಾಣಿಸಿಕೊಳ್ಳಲಿವೆ. ಎಲ್ಲಾ ಗ್ರಹಗಳನ್ನು ನೋಡಲು ಫೆಬ್ರವರಿ ಮೊದಲನೇ ವಾರ ಉತ್ತಮ ದಿನಗಳು", ಎಂದು NGO, SPACE ಸಂಸ್ಥಾಪಕ ಸದಸ್ಯರಾದ C B ದೇವ್‌ಗನ್‌ ಹೇಳಿದ್ದಾರೆ.

ಮರ್ಕ್ಯೂರಿ

ಮರ್ಕ್ಯೂರಿ

ಮರ್ಕ್ಯೂರಿ ಗ್ರಹಗಳಲ್ಲೇ ಅತಿ ಚಿಕ್ಕ ಗ್ರಹವಾಗಿದ್ದು, ಅದು ಸೂರ್ಯನಿಗೆ ತುಂಬ ಸನಿಹದಲ್ಲಿದೆ. ಅದು ದೆಹಲಿಯಂತ ದೊಡ್ಡ ಕ್ಚಿತಿಜ ನಗರಗಳಿಗೆ ಸಂಪೂರ್ಣವಾಗಿ ಕಾಣುತ್ತದೆ.

ಮರ್ಕ್ಯೂರಿ

ಮರ್ಕ್ಯೂರಿ

ಫೆಬ್ರವರಿ ಮೊದಲ ವಾರದಲ್ಲಿ ಕ್ಷಿತಿಜದಲ್ಲಿ ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಎಲ್ಲಾ ಗ್ರಹಗಳು ಬೆಳಗಿನ 6 ಗಂಟೆಯಲ್ಲಿ ಸೂರ್ಯ ಉದಯಿಸುವ ಮೊದಲು ಪ್ರದರ್ಶಿತವಾಗಲಿವೆ ಎಂದು ದೇವ್‌ಗನ್‌ ಹೇಳಿದ್ದಾರೆ.

ಕ್ರಾಂತಿವೃತ್ತ

ಕ್ರಾಂತಿವೃತ್ತ

ಈ ಮೊದಲು ಆಕಾಶದಲ್ಲಿಯ ಈ ಸಂದರ್ಭ 2014-2015 ರ ನಡುವಿನ ಡಿಸೆಂಬರ್ 15 ರಿಂದ ಜನವರಿ 15 ನಡುವೆ ಏರ್ಪಟಿತ್ತು.

ಗ್ರಹಗಳ ಉದಯ

ಗ್ರಹಗಳ ಉದಯ

ಸೂರ್ಯ ಮತ್ತು ಚಂದ್ರ ಗ್ರಹಗಳಂತೆ ಎಲ್ಲಾ ಗ್ರಹಗಳು ಮೊದಲು ಉದಯಿಸಿ ನಂತರ ಅವುಗಳ ಮಾರ್ಗದಲ್ಲಿ ಮುಂದುವರಿಯುತ್ತವೆ. ಅಂತೆಯೆ ಗುರು ಗ್ರಹ, ಮಂಗಳ ಗ್ರಹಕ್ಕಿಂತ ಮೊದಲು ಉದಯಿಸಿ ಮಧ್ಯರಾತ್ರಿಯಲ್ಲಿ ಶನಿ, ಶುಕ್ರ ಮತ್ತು ಮರ್ಕ್ಯೂರಿ ಗ್ರಹಗಳು ಉದಯಿಸುತ್ತವೆ.

ಗ್ರಹಗಳನ್ನು ನೋಡಿ

ಗ್ರಹಗಳನ್ನು ನೋಡಿ

ಈ ಗ್ರಹಗಳನ್ನು ನೋಡಲು ಪಶ್ಚಿಮಕ್ಕೆ ತಿರುಗಿ ಸ್ವಲ್ಪ ದಕ್ಷಿಣ ಭಾಗಕ್ಕೆ ಕಣ್ಣಾಯಿಸಿದರೆ ಅಲ್ಲಿ ಶುಕ್ರಗ್ರಹ ಅಧಿಕವಾಗಿ ಹೊಳೆಯುತ್ತಿರುತ್ತದೆ. ಶುಕ್ರ ಗ್ರಹ ಗುರು, ಮಂಗಳ ಗ್ರಹಗಳಿಗಿಂತ ಹೆಚ್ಚು ಕೆಂಪುಬಣ್ಣದಿಂದ ಹೊಳೆಯುತ್ತದೆ.

Best Mobiles in India

English summary
After 11 years, 5 planets together in sky. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X