ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ

By Suneel
|

ಪ್ರಪಂಚದ ಎಲ್ಲಾ ಜನತೆಯಲ್ಲಿ ದಶಕ ವರ್ಷಗಳಿಂದ ಕಾಡುತ್ತಿರುವ 2 ಪ್ರಶ್ನೆಗಳೆಂದರೆ 1 "ಪ್ರಳಯ ಆಗುತ್ತೋ ? ಆಗಲ್ವೋ ? 2 ಏಲಿಯನ್‌ಗಳು ಇನ್ನು ಇವೆಯೇ ಅಥವಾ ಇಲ್ಲವೇ?. ಬಹುಶಃ ಈ ಎರಡು ಪ್ರಶ್ನೆಗಳು ಭಯವನ್ನು ಹುಟ್ಟಿಸುವಂತಹವು ಹೌದು. ಹಾಗೆ ಮಾನವರ ಕುತೂಹಲವನ್ನು ಮತ್ತೆ ಮತ್ತೆ ಕೆದಕುವ ಪ್ರಶ್ನೆಗಳು ಹೌದು.

ಓದಿರಿ:ಬಾನಂಗಳದ ಹೊಳೆಯುತ್ತಿರುವ ವಜ್ರ ಸೆರೆಹಿಡಿದ ನಾಸಾ ಹಬಲ್‌

ಪ್ರಳಯ ವಿಷಯ ಪಕ್ಕಕ್ಕೆ ಸರಿಸೋಣ. ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಖಗೋಳಜೀವಶಾಸ್ತ್ರಜ್ಞರು ಸಂಶೋಧನೆಯಂದನ್ನು ಕೈಗೊಂಡು ಏಲಿಯನ್‌ಗಳು ಶಾಂತವಾಗಿರುವ ಬಗ್ಗೆ ಅಧ್ಯಯನ ಮಾಡಿ ಅವು ಮತ್ತೆ ಎಲ್ಲೂ ಪತ್ತೆಯಾಗದ ಕಾರಣ ಹಾಗೂ ವಾಸಯೋಗ್ಯ ಗ್ರಹಗಳ ಬಗ್ಗೆ ಸಂಶೋಧನೆ ಮಾಡಿ ಏಲಿಯನ್‌ಗಳು ಮರಣ ಹೊಂದಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಎಲ್ಲರೂ ಸಹ ಗಮನವಿಟ್ಟು ಓದಲೇ ಬೇಕಿದೆ. ಕಾರಣ ಸಂಶೋಧಕರು ನೀಡಿರುವ ಹೇಳಿಕೆಗಳು ಏಲಿಯನ್‌ಗಳು ಮರಣ ಹೊಂದಿರುವ ಬಗ್ಗೆ ಸತ್ಯವನ್ನು ಬಿಚ್ಚಿಡುವ ಹಾಗಿದೆ.

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯ

ಭೂಮಿಯನ್ನು ಹೊರತು ಪಡಿಸಿ ಇತರೆ ಗ್ರಹಗಳು ಬಹಶಃ ಬೇಗ ನಶಿಸುತ್ತವೆ ಎಂಬುದನ್ನು ಶೀಘ್ರದಲ್ಲೇ ಸಂಕ್ಷಿಪ್ತವಾಗಿ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಖಗೋಳಜೀವಶಾಸ್ತ್ರಜ್ಞರು ಹೇಳಲಿದ್ದಾರೆ. ಅದರ ಜೊತೆಗೆ ಪ್ರಸ್ತುತ ಅಧ್ಯಯನ ಪೇಪರ್‌ನಲ್ಲಿ ಏಲಿಯನ್‌ ಜೀವನದ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹೇಳಿದ್ದಾರೆ.

ಸಂಶೋಧಕರ ಹೇಳಿಕೆ

ಸಂಶೋಧಕರ ಹೇಳಿಕೆ

ಸಂಶೋಧಕರು ಜೀವನ ಹೇಗೆ ಅಭಿವೃದ್ದಿಗೊಳ್ಳುತ್ತದೆ ಎಂದು ಅರ್ಥಮಾಡಿಕೊಳ್ಳುವ ಉದ್ದೇಶ ಹೊಂದಿ ನಡೆಸಿದ ಅಧ್ಯಯನದಲ್ಲಿ "ಹೊಸ ಜೀವನವು ಸಾಮಾನ್ಯವಾಗಿ ಬೇಗ ನಶಿಸಲಿದ್ದು, ಹೆಚ್ಚು ತಾಪಮಾನಕ್ಕೆ ಅಥವಾ ತಂಪಿಗೆ ಕಾರಣವಾಗಿ ಇತರೆ ಗ್ರಹಗಳ ಮೇಲೆ ಪರಿಣಾಮ ಬೀರಲಿದೆ" ಎಂದಿದ್ದಾರೆ.

ಡಾ|| ಆದಿತ್ಯ ಛೋಪ್ರಾ

ಡಾ|| ಆದಿತ್ಯ ಛೋಪ್ರಾ

"ಬ್ರಹ್ಮಾಂಡವು ಬಹುಶಃ ವಾಸಯೋಗ್ಯ ಗ್ರಹಗಳಿಂದ ಕೂಡಿದೆ. ಹಲವು ವಿಜ್ಞಾನಿಗಳು ಏಲಿಯನ್‌ಗಳು ಇರುವ ಬಗ್ಗೆ ಹೇಳಿದ್ದಾರೆ" ಎಂದು ANU ಅರ್ಥ್‌ ಸೈನ್ಸ್ ಸಂಶೋಧನಾ ಶಾಲೆಯ ಡಾ|| ಆದಿತ್ಯ ಛೋಪ್ರಾ ಹೇಳಿದ್ದಾರೆ. ಇವರು ಈ ಬಗ್ಗೆ ಹೇಳಿರುವ ಸಂಶೋಧನಾ ಪತ್ರಿಕೆ Asrobiology ಯಲ್ಲಿ ಪ್ರಕಟಗೊಂಡಿದೆ.

ಸಂಶೋಧನಾ ಪೇಪರ್‌

ಸಂಶೋಧನಾ ಪೇಪರ್‌

"ಇತ್ತೀಚಿನ ಜೀವನ ಹೆಚ್ಚು ದುರ್ಬಲವಾಗಿದೆ. ಅಲ್ಲದೇ ಪರಿಸರ ವ್ಯವಸ್ಥೆ ಹೆಚ್ಚು ವಿಕಸತವಾಗಿ ಬದುಕಲು ಯೋಗ್ಯವಾಗಿಲ್ಲ. ವಾಸಯೋಗ್ಯ ಗ್ರಹ ಏನಿಸಿಕೊಳ್ಳಲು ಸ್ಥಿರ ಉಷ್ಣತೆಯ್ನು ಇರಿಸಿಕೊಳ್ಳಲು ನೀರು ಮತ್ತು ಇಂಗಾಲದ ಡೈಆಕ್ಸೈಡ್‌ ನಂತಹ ಹಸಿರು ಮನೆ ಅನಿಲಗಳನ್ನು ನಿಯಂತ್ರಿಸಬೇಕಿದೆ" ಎಂದು ಸಂಶೋಧನಾ ಪೇಪರ್‌ನಲ್ಲಿ ಹೇಳಲಾಗಿದೆ.

 'ಚಾರ್ಲಿ ಲಿನೆವೀವರ್‌'

'ಚಾರ್ಲಿ ಲಿನೆವೀವರ್‌'

"ನಾಲ್ಕು ಶತಕೋಟಿ ವರ್ಷಗಳ ಹಿಂದೆ ಶುಕ್ರ ಮತ್ತು ಮಂಗಳ, ಭೂಮಿ ಗ್ರಹಗಳು ವಾಸಿಸಲು ಯೋಗ್ಯವಾಗಿದ್ದವು. ಆದರೆ ನಂತರದ ಒಂದು ಶತಕೋಟಿ ವರ್ಷಗಳ ನಂತರ ಶುಕ್ರ ಗ್ರಹ ಹೆಚ್ಚು ಉಷ್ಟಾಂಶ ಹೊಂದಿದೆ, ಮಂಗಳ ಗ್ರಹ ಹಿಮಗೆಡ್ಡೆಯಿಂದ ಆವೃತ್ತವಾಗಿದೆ. ಆದ್ದರಿಂದ ಮಂಗಳ ಮತ್ತು ಶುಕ್ರ ಗ್ರಹದಲ್ಲಿ ವಾಸಯೋಗ್ಯ ವ್ಯವಸ್ಥೆ ಹದಗೆಟ್ಟಿದೆ" ಎಂದು ANU ಪ್ಲಾನೆಟರಿ ವಿಜ್ಞಾನದ ಸಹ-ಲೇಖಕ ಅಸೋಸಿಯೇಟ್ ಪ್ರೊಫೆಸರ್ 'ಚಾರ್ಲಿ ಲಿನೆವೀವರ್‌' ಹೇಳಿದ್ದಾರೆ.

 'ಚಾರ್ಲಿ ಲಿನೆವೀವರ್‌' ಮಹತ್ತರ ಹೇಳಿಕೆ

'ಚಾರ್ಲಿ ಲಿನೆವೀವರ್‌' ಮಹತ್ತರ ಹೇಳಿಕೆ

ಬದುಕಲು ಯೋಗ್ಯವಾಗಿರುವ ಗ್ರಹಗಳಲ್ಲಿ ಭೂಮಿ ಪ್ರಧಾನವಾಗಿದ್ದು, ಉತ್ತಮ ವಾತಾವರಣ ಹೊಂದಿದೆ ಎಂದು ಚಾರ್ಲಿ ಲಿನೇವೀವರ್ ಹೇಳಿದ್ದಾರೆ.

ಡಾ|| ಆದಿತ್ಯ ಛೋಪ್ರಾ ರವರು ಬಿಡಿಸಿದ ಒಗಟು

ಡಾ|| ಆದಿತ್ಯ ಛೋಪ್ರಾ ರವರು ಬಿಡಿಸಿದ ಒಗಟು

ಡಾ|| ಆದಿತ್ಯ ಛೋಪ್ರಾ ಮತ್ತು ಚಾರ್ಲಿ ಲಿನೇವೀವರ್‌ ರವರ ಸಂಶೋಧನಾ ಸಾರಾಂಶದ ಪ್ರಕಾರ ಒಂದು ಒಗಟು ಹೊರಬಿದ್ದಿದೆ. ಅವರ ಪ್ರಕಾರ ಇದುವರೆಗೆ ನಾವು ಏಲಿಯನ್‌ಗಳ ನಿಗೂಢ ಜೀವನ, ಬುದ್ಧಿವಂತಿಕೆ, ಜೈವಿಕ ಆವರ್ತನಗಳ ಬಗ್ಗೆಯೂ ಸಹ ಗ್ರಹಗಳಲ್ಲಿ ಪತ್ತೆ ಮಾಡಲು ಆಗಿಲ್ಲ, ಆದ್ದರಿಂದ ಬಹುಶಃ ಏಲಿಯನ್‌ಗಳ ಜೀವನ ಅಂತ್ಯಗೊಂಡಿದೆ. ಅವುಗಳು ಮರಣಹೊಂದಿರಬಹುದು ಎಂದು ಹೇಳಿದ್ದಾರೆ.

 'ಎನ್ರಿಕೊ ಫೇರ್ಮಿ'

'ಎನ್ರಿಕೊ ಫೇರ್ಮಿ'

ಬ್ರಹ್ಮಾಂಡದ ಇತ್ತೀಚಿನ ವಿವರ ಆರ್ದ್ರ ಮತ್ತು ಬಂಡೆಗಲ್ಲುಗಳಿರುವ ಗ್ರಹಗಳಲ್ಲಿ ಜೀವನ ಏಕೆ ಸಾಧ್ಯವಿಲ್ಲ ಎಂದು ವಿವರ ನೀಡಿದೆ. ಅಲ್ಲದೇ ಭೌತವಿಜ್ಞಾನಿ 'ಎನ್ರಿಕೊ ಫೇರ್ಮಿ' 1950 ರಲ್ಲೇ ಭೂಮಿಯನ್ನು ಹೊರತುಪಡಿಸಿ ಇತರೆ ಯಾವ ಗ್ರಹಗಳಲ್ಲಿಯೂ ಜೀವಿಗಳು ಬದುಕುವ ಬಗ್ಗೆ ಸೂಚನೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

"Gaian Bottleneck"

ಫರ್ಮಿ ಪ್ಯಾರಾಡಾಕ್ಸ್‌ ತೋರಿಕೆಗೆ ಪರಿಹಾರವಾಗಿ ಸಂಶೋಧಕರು ಬ್ರಹ್ಮಾಂಡದ ವಿಕಸಿತಕ್ಕೆ "Gaian Bottleneck" ಎಂದು ಹೆಸರಿಸಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
New study says aliens are silent because they are dead. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X