Home
ಸುದ್ದಿಜಾಲ

ಇನ್ವರ್ಟರ್ ಬ್ಯಾಟರಿಗೆ ಎಷ್ಟು ದಿನಗಳ ನಂತರ ನೀರು ಹಾಕಬೇಕು? ಇಲ್ಲಿದೆ ಮಾಹಿತಿ!

ಭಾರತದಲ್ಲಿ ಅದರಲ್ಲೂ ಗುಡ್ಡ ಗಾಡು ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಇಂದಿಗೂ ವಿವಿಧ ರೀತಿಯಲ್ಲಿ ವಿದ್ಯುತ್‌ ಸಮಸ್ಯೆ ತಲೆದೂರುತ್ತವೆ. ಈ ನಡುವೆ ಜನರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಪರ್ಯಾಯ ಮಾರ್ಗ ಹುಡುಕುವುದು ಉಂಟು. ಅದರಲ್ಲಿ ಪ್ರಮುಖವಾದುದು ಇನ್ವರ್ಟರ್ ಬ್ಯಾಟರಿ.

ಹೌದು, ಇಂದು ಹಲವಾರು ಮನೆಗಳಲ್ಲಿ ಹಾಗೂ ಸಣ್ಣ ಪುಟ್ಟ ಕಚೇರಿಗಳಲ್ಲಿ ನೀವು ಇನ್ವರ್ಟರ್ ಬ್ಯಾಟರಿ ಗಮನಿಸಿರಬಹುದು. ಈ ಇನ್ವರ್ಟರ್ ಬ್ಯಾಟರಿಗಳು ಇಂದು ವಿವಿಧ ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಕೈಗೆಟಕುವ ಬೆಲೆಗೆ ಇವುಗಳನ್ನು ನೀವು ಖರೀದಿ ಮಾಡಬಹುದು. ಆದರೆ, ಇವುಗಳು ದೀರ್ಘಕಾಲಿಕ ಬಾಳಿಕೆ ಬರಬೇಕು ಎಂದರೆ ಏನು ಮಾಡಬೇಕು?, ಯಾವಾಗ ನೀರನ್ನು ಹಾಕಬೇಕು ಎಂಬಿತ್ಯಾದಿ ಮಾಹಿತಿ ನಿಮಗೆ ಗೊತ್ತಾ?. ತಿಳಿದಿಲ್ಲದಿದ್ರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಇನ್ವರ್ಟರ್ ಬ್ಯಾಟರಿಗೆ ಎಷ್ಟು ದಿನಗಳ ನಂತರ ನೀರು ಹಾಕಬೇಕು? ಇಲ್ಲಿದೆ ಮಾಹಿತಿ!

ಇನ್ವರ್ಟರ್ ಬ್ಯಾಟರಿ ವಾಟರ್ ರೀಫಿಲಿಂಗ್: ಇನ್ವರ್ಟರ್ ಬ್ಯಾಟರಿ ಎಂದಾಕ್ಷಣ ಅದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ವಾಟರ್ ರೀಫಿಲಿಂಗ್. ಉತ್ತಮವಾಗಿ ಕಾರ್ಯನಿರ್ವಹಿಸಲು ಬ್ಯಾಟರಿಯು ಸರಿಯಾದ ಮಟ್ಟಕ್ಕೆ ನೀರನ್ನು ಹೊಂದಿರುವುದು ಅವಶ್ಯಕ. ನೀರು ಕಡಿಮೆಯಾದರೆ ಇನ್ವರ್ಟರ್ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಂದರೆ ಸಾಮಾನ್ಯ ಬ್ಯಾಕಪ್‌ಗಿಂತ ಕಡಿಮೆ ರನ್ ಆಗುತ್ತದೆ. ಆದ್ದರಿಂದ ಯಾವುದೇ ಸಂಭವನೀಯ ಸಮಸ್ಯೆ ತಪ್ಪಿಸಲು, ಇನ್ವರ್ಟರ್ ಬ್ಯಾಟರಿಗೆ ಎಷ್ಟು ದಿನಗಳ ನಂತರ ನೀರನ್ನು ಸೇರಿಸಬೇಕು ಎಂದು ತಿಳಿಯಿರಿ.

ಅದರಲ್ಲೂ ಇಂದಿನ ದಿನಗಳಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾದ ವಿಷಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಅಥವಾ ಮಳೆಗಾಲದಲ್ಲಿ ವಿದ್ಯುತ್‌ ಲೋಡ್‌ ಹೆಚ್ಚಾದಾಗ ಈ ವಿದ್ಯುತ್‌ ಸಮಸ್ಯೆ ನಿರ್ಮಾಣ ಆಗುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್‌ ಇಲ್ಲ ಎಂದರೆ ಏನನ್ನೂ ಮಾಡಲು ಸಹ ಆಗುವುದಿಲ್ಲ. ಆ ವೇಳೆ ಸಹಾಯಕ್ಕೆ ಬರುವುದೇ ಇನ್ವರ್ಟರ್. ಈ ಇನ್ವರ್ಟರ್ ಅನ್ನು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕಿದೆ.

ಇತರೆ ಎಲೆಕ್ಟ್ರಾನಿಕ್ ಡಿವೈಸ್‌ಗಳಂತೆ ಇನ್ವರ್ಟರ್ ಅನ್ನೂ ಕೂಡ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕಿದ್ದು, ಅದನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅದರ ಜೀವಿತಾವಧಿ ಕಡಿಮೆಯಾಗುತ್ತದೆ. ಈ ಕಾರಣಕ್ಕೆ ಬಟ್ಟಿ ಇಳಿಸಿದ ನೀರನ್ನು ಅದರಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ, ಬಳಕೆ ಮಾಡಿದಂತೆ ಈ ನೀರಿನ ಪ್ರಮಾಣ ಕಡಿಮೆ ಆಗುತ್ತಾ ಬರಲಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಈ ನೀರನ್ನು ಮತ್ತೆ ಪುನರ್ಭರ್ತಿ ಮಾಡಬೇಕು.

ನೀರನ್ನು ಯಾವಾಗ ಹಾಕಬೇಕು? : ಕಾಲಕಾಲಕ್ಕೆ ಬ್ಯಾಟರಿಯ ನೀರಿನ ಮಟ್ಟವನ್ನು ಪರಿಶೀಲನೆ ಮಾಡುವುದು ಅಗತ್ಯವಾದ ಕೆಲಸವಾಗಿದೆ. ಅದರಲ್ಲೂ 45 ದಿನಗಳಿಗೊಮ್ಮೆ ಇನ್ವರ್ಟರ್ ಬ್ಯಾಟರಿಯ ನೀರಿನ ಮಟ್ಟವನ್ನು ಪರೀಕ್ಷಿಸಬಹುದು. ಈ ವೇಳೆ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕಿಂತ ಕಡಿಮೆಯಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕಡಿಮೆ ಇದ್ದರೆ ತಕ್ಷಣವೇ ಪುನರ್ಭರ್ತಿ ಮಾಡಿ. ಆಗಾಗ್ಗೆ ಇನ್ವರ್ಟರ್ಇದನ್ನು ಬಳಕೆ ಮಾಡಿದ್ದೇ ಆದರೆ 4-5 ತಿಂಗಳುಗಳಲ್ಲಿ ಕಡಿಮೆಯಾಗುತ್ತದೆ.

ಇದರ ಹೊರತಾಗಿ ಪ್ರತಿ ಬ್ಯಾಟರಿಯ ಮೇಲೆ ಇನ್ವರ್ಟರ್ ಬ್ಯಾಟರಿ ವಾಟರ್ ಫಿಲ್ಲರ್ ಮಟ್ಟದ ಸೂಚಕ ಇರುತ್ತದೆ. ಸೂಚಕವು ಹಸಿರು ಮಾರ್ಕ್‌ನಲ್ಲಿದ್ದರೆ, ನಿಮ್ಮ ಇನ್ವರ್ಟರ್‌ನಲ್ಲಿ ಸಾಕಷ್ಟು ನೀರು ಇದೆ ಎಂದು ಅರ್ಥ. ಆದರೆ, ಅದು ಕೆಂಪು ಬಣ್ಣ ತೋರಿಸಿದರೆ ನೀರು ನೀವು ಅದರಲ್ಲಿ ಕಡ್ಡಾಯವಾಗಿ ಈ ನೀರು ಹಾಕಬೇಕಿದೆ. ಪ್ರಮುಖ ವಿಷಯ ಏನೆಂದರೆ ನೀರನ್ನು ಹಾಕುವ ಮುನ್ನ ಇನ್ವರ್ಟರ್ ಮತ್ತು ಪವರ್ ಸಾಕೆಟ್ ಸ್ವಿಚ್ ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

ಇನ್ವರ್ಟರ್ ಬ್ಯಾಟರಿಗೆ ಎಷ್ಟು ದಿನಗಳ ನಂತರ ನೀರು ಹಾಕಬೇಕು? ಇಲ್ಲಿದೆ ಮಾಹಿತಿ!

ಇನ್ನು ಮಾರುಕಟ್ಟೆಯಲ್ಲಿ ಅದರಲ್ಲೂ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಈ ಇನ್ವರ್ಟರ್ ಗಳಿಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಲುಮಿನಸ್ LPTT12150H 150Ah ಬ್ಯಾಟರಿಯನ್ನು ನೀವು 6,500ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 11,700ರೂ.ಗಳಾಗಿದೆ. ಹಾಗೂ ಎಕ್ಸೈಡ್‌ನ ಇನ್ವರ್ಟರ್ 9,800ರೂ.ಗಳಿಗೆ ಲಭ್ಯ ಇದ್ದರೆ ಲುಮಿನಸ್ ಇನ್ವರ್ ಲಾಸ್ಟ್ ILTT28060 ಇನ್ವರ್ಟರ್ ಅನ್ನು ನೀವು 23,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
You may have noticed inverter batteries in many homes and small offices today. These inverter batteries are available in the market today with various options. You can buy these at affordable prices especially on e-commerce sites
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+